Paaru: ಪಾರುಗೆ ಕೆಲಸ ಕೊಟ್ಟ ಸಂಗೀತಾ: ಪಾರು ಮಾಡುತ್ತಿರುವ ಕೆಲಸ ಆದಿಗೆ ತಿಳಿಯುತ್ತಾ?
ಪಾರು ಕೆಲಸ ಪಡೆಯಲು ಏನು ಬೇಕಾದರೂ ಮಾಡಲು ರೆಡಿ ಆಗುತ್ತಾಳೆ. ಆದರೆ ಇದಕ್ಕೆಲ್ಲ ಮನೆಯ ಒಡತಿ ಏನು ಹೇಳುತ್ತಾರೆ ಎಂಬುವುದನ್ನು ನೋಡೋಣ. ಸಂಗೀತಾಗೆ ಮನೆಯ ಕೆಲಸದವರು ಬೇಕು, ಅದು ಕೂಡ ನಂಬಿಕಸ್ಥರು ಆಗಿರಬೇಕು, ಯಾಕೆಂದರೆ ಸಂಗೀತಾ ಗರ್ಭಿಣಿ ಆಗಿರುವ ಕಾರಣ ಆಕೆಗೆ ಒಬ್ಬರ ಆಸರೆ ಬೇಕಿತ್ತು. ಗಂಡ ಆಫೀಸ್‌ಗೆ ಹೋದ ಬಳಿಕ ಮನೆಯಲ್ಲಿ ಒಬ್ಬೊಂಟಿ ಇರುತ್ತಾಳೆ.
ಇನ್ನು ಪಾರು ಮಾತ್ರ ತನ್ನ ಗಂಡ ಹಾಗೂ ಅಪ್ಪನಿಗೆ ಸಹಾಯ ಆಗಲಿ ಎಂದು ಸಂಗೀತಾ ಬಳಿ ಕೆಲಸ ಕೇಳಲು ಹೋಗಿದ್ದಾರೆ. ಇನ್ನು ಸಂಗೀತಾ, ಪಾರು ಬಳಿ ಇವತ್ತು ಅಡುಗೆ ಮಾಡಿ ತೋರಿಸಿ. ನನಗೆ ನಿಮ್ಮ ಅಡುಗೆ ಇಷ್ಟ ಆದರೆ ನಾಳೆಯಿಂದ ನೀವು ಕೆಲಸಕ್ಕೆ ಬರಬಹುದು. ಇಲ್ಲ ಆದರೆ ನಿಮಗೆ ಬೇರೆ ಎಲ್ಲಾದರೂ ಕೆಲಸ ತೆಗೆದುಕೊಂಡು ಕೊಡುತ್ತೇನೆ. ಆದರೆ ಇಲ್ಲಿ ಕೆಲಸ ಇರುವುದು ಇಲ್ಲ ಎಂದು ಹೇಳಿದಾಗ ಪಾರು ಮುಖ ಸಪ್ಪಗೆ ಆಗುತ್ತದೆ.

ಸಂಗೀತ ಮಾತಿಗೆ ಸಪ್ಪಗೆ ಆದ ಪಾರು
ಪಾರು ಮೆತ್ತಗೆ ಸರಿ ಎಂದು ಹೇಳಿ ಅಡುಗೆ ಮಾಡಲು ಹೋಗುತ್ತಾಳೆ. ಪಾರುವಿಗೇ ಅಡುಗೆ ಮಾಡುವ ವೇಳೆ ಸ್ಮೆಲ್ ಆಗದೇ ವಾಂತಿ ಮಾಡುತ್ತಾಳೆ. ಇದನ್ನು ಕೇಳಿದ ಸಂಗೀತಾ ಏನಾಯಿತು ಯಾಕೆ ವಾಂತಿ ಮಾಡಿದೆ ಎಂದು ಕೇಳಿದಾಗ ನನಗೆ ಪಿತ್ತ ಎಂದು ಸುಳ್ಳು ಹೇಳುತ್ತಾಳೆ.
ಪಿತ್ತದ ವಾಂತಿ ಎಂದ ಪಾರು
ಆಗ ನಗುತ್ತಾ ಹೇಳುತ್ತಾಳೆ. ಸಂಗೀತಾ ನಾನು ನೀವು ಗರ್ಭಿಣಿ ಎಂದುಕೊಂಡೆ ಎಂದು ಹೇಳಿ ಆಕೆ ಮದುವೆ ಯಾವಾಗ ಅದೆಲ್ಲ ಪ್ರಶ್ನೆಗಳನ್ನು ಕೇಳುತ್ತಾಳೆ. ಇನ್ನು ಸಂಗೀತಾಗೆ ಊಟ ಮಾಡಲು ಬರಲು ಹೇಳುತ್ತಾಳೆ ಪಾರು. ಸಂಗೀತಾ ಬಂದು ಊಟ ಮಾಡಿದಾಗ ಆಕೆಗೆ ಬಹಳ ಇಷ್ಟ ಆಗಿ ಎರಡೆರಡು ಬಾರಿ ಹಾಕಿಸಿಕೊಳ್ಳುತ್ತ ತಿನ್ನುತ್ತಾಳೆ.

ಅಡುಗೆ ಮೆಚ್ಚಿದ ಸಂಗೀತಾ
ಇದನ್ನು ನೋಡಿದ ಪಾರು ಮಾತ್ರ ದೇವರಲ್ಲಿ ಬೇಡಿಕೊಳ್ಳುತ್ತ ಇರುತ್ತಾಳೆ. ದಯವಿಟ್ಟು ದೇವರೇ ನನಗೆ ಕೆಲಸದ ಅನಿವಾರ್ಯತೆ ಬಹಳ ಇದೆ. ದಯಮಾಡಿ ನೀವು ನನ್ನ ಮೇಲೆ ದಯೆ ತೋರಿ ಎಂದು ಹೇಳುತ್ತಾಳೆ. ಇನ್ನು ಊಟ ಆದ ಬಳಿಕ ಸಂಗೀತಾ ಮೇಲಿನ ಮಹಡಿಯಲ್ಲಿ ಓದುತ್ತಾ ಇರುವಾಗ ಅಲ್ಲಿಗೆ ಹಣ್ಣುಗಳನ್ನು ಹಿಡಿದುಕೊಂಡು ಪಾರು ಬರುತ್ತಾಳೆ.
ಮನೆಯೊಡತಿ ಮಾತು ಕೇಳಿ ಸಂತಸಪಟ್ಟ ಪಾರು
ಆ ಬಳಿಕ ತನ್ನ ಕೆಲಸದ ಬಗ್ಗೆ ಕೇಳಿದಾಗ ನಾಳೆಯಿಂದ ನನ್ನ ಮನೆಗೆ ಕೆಲಸಕ್ಕೆ ಬಾ ಪಾರು ಎಂದು ಹೇಳುತ್ತಾಳೆ. ಇನ್ನೂ ಪಾರುಗೆ ಮಾತ್ರ ಬಹಳ ಖುಷಿ ಆಗುತ್ತದೆ. ಪಾರು ಮನದಲ್ಲಿ ಯೋಚನೆ ಮಾಡುತ್ತಾ ಇರುತ್ತಾಳೆ. ನಾನು ಕೆಲಸಕ್ಕೆ ಹೋದರೆ ಎಲ್ಲದಕ್ಕೂ ಸಹಾಯ ಆಗುತ್ತದೆ ಎಂದು ಯೋಚನೆ ಮಾಡಿದಾಗ ಸಂಗೀತ ಅಡ್ವಾನ್ಸ್ ಹಣವನ್ನು ಆಕೆಗೆ ಕೊಡುತ್ತಾಳೆ. ಅದನ್ನು ಹಿಡಿದುಕೊಂಡು ಪಾರು ಮನೆಗೆ ಹೋಗುತ್ತಾಳೆ.
ಆದಿ ನೋಡಿ ಪಾರು ಶಾಕ್
ಪಾರು ಮನೆಯಲ್ಲಿ ಕುಳಿತಿರುವಾಗ ಆದಿ ಬರುತ್ತಾನೆ. ಆದಿ ಮನೆಗೆ ಬರುವ ವೇಳೆ ಪಾರು ಮನೆಯಲ್ಲಿ ಇರುತ್ತಾಳೆ. ಇದಕ್ಕಿಂತ ಮೊದಲು ಆದಿ ಹಲವು ಬಾರಿ ಪಾರುಗೆ ಕರೆ ಮಾಡಿದ್ದರು ಪಾರು ರಿಸೀವ್ ಮಾಡಿ ಮಾತನಾಡಿರುವುದು ಇಲ್ಲ. ಇನ್ನು ಪಾರುಗೆ ಬಹಳ ಭಯ ಆಗುತ್ತದೆ. ಇನ್ನೂ ಜಯನ ಅಕ್ಕನನ್ನು ಅಖಿಲ ಮನೆಗೆ ಬರ ಹೇಳಿ ಔತಣವನ್ನು ಉಣ ಬಡಿಸುತ್ತಾರೆ. ಆಕೆಗೆ ಬಹಳ ಖುಷಿ ಆಗುತ್ತದೆ. ಹಾಗೆಯೇ ಜಯಗೆ 10000 ರೂ. ಹೆಚ್ಚು ಮಾಡುತ್ತಾರೆ.
ಅಖಿಲ ಮನದಲ್ಲಿ ಪಾರುದ್ದೇ ಯೋಚನೆ
ಇನ್ನು ಅಖಿಲ ಮನಸ್ಸಿನಲ್ಲಿ ನನ್ನ ಪಾರುಗೆ ಯಾರು ಇಲ್ಲ. ಆಕೆಯನ್ನು ನೋಡಿಕೊಳ್ಳುವವರು ಇಲ್ಲ. ಎಂದೆಲ್ಲ ಯೋಚನೆ ಮಾಡಿ ಮರುಗುತ್ತ ಇರುತ್ತಾಳೆ. ಮುಂದೇನು ಕಾದು ನೋಡಬೇಕಿದೆ.
.


Click it and Unblock the Notifications











