ಬಂದೂಕು ಹಿಡಿದು ಕೊಲೆ ಮಾಡಲು ಹೊರಟ ಪ್ರೀತು!
ಅಖಿಲಾಂಡೇಶ್ವರಿ ಹಾಗೂ ರಘು ಮಾತನಾಡುತ್ತಾ, ಮಗ ಸೊಸೆಯನ್ನು ಒಂದು ಮಾಡಿದೆ ಅನ್ನುವ ಸಂತೃಪ್ತಿ ಭಾವದಲ್ಲಿರುತ್ತಾರೆ. ಜೊತೆಗೆ ಪಾರೂ ಅನ್ನು ಅರಸನ ಕೋಟೆಯ ಹಿರಿ ಸೊಸೆ ಎಂದು ಒಪ್ಪಿಕೊಂಡಿರುವ ಖುಷಿಯನ್ನು ಹಂಚಿಕೊಳ್ಳುತ್ತಾ ಇರುವ ಸಂದರ್ಭದಲ್ಲಿ ಅಲ್ಲಿಗೆ ಯಾಮಿನಿ ಬರುತ್ತಾಳೆ. ಅಕ್ಕ ಬಾವ ಖುಷಿಯಿಂದ ಕುಶಲೋಪರಿ ಮಾತನಾಡುತ್ತಾ ಇರುವುದನ್ನು ಇಣುಕಿ ನೋಡುತ್ತಾಳೆ. ಆಕೆ ಬಂದಿರುವ ಉದ್ದೇಶ ಮಾತ್ರ ಬೇರೆಯದ್ದೆ. ಪ್ರೀತು ಮಾಡುತ್ತಿರುವ ಘನಕಾರ್ಯವನ್ನು ಹೇಳಲು ಬಂದಿರುತ್ತಾಳೆ ಆಕೆ. ಆದರೆ ಅಖಿಲ ಹಾಗೂ ರಘು ಮಾತನಾಡುತ್ತಿರುವುದು ಕೇಳಿ ಸ್ವಲ್ಪ ಹಿಂದೆ ಸರಿಯುತ್ತಾಳೆ.
ಯಾಮಿನಿ ಜೊತೆ ಸ್ವಲ್ಪ ಹುಷಾರಾಗಿ ನಡೆದುಕೊಳ್ಳಬೇಕು ನಾವು. ಎಂದು ಹೇಳಿದಾಗ ಅಖಿಲ, ''ಯಾಮಿನಿ ಬಹಳ ಒಳ್ಳೆಯವಳು ಆದರೆ ಆಕೆಗೆ ತಂದಿಡುವ ಬುದ್ದಿ ಇದೆ ಯಾಕೆ ಹಾಗೆ ಮಾಡುತ್ತಾಳೆ ಎನ್ನುವುದು ನನಗೆ ಅರ್ಥ ಆಗುತ್ತಿಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಯಾಮಿನಿ, ಪ್ರೀತು ಬಗ್ಗೆ ಹೇಳುವುದನ್ನು ಬಿಟ್ಟು ತನ್ನನ್ನು ತಾನು ಹೇಗೆ ರಕ್ಷಣೆ ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇದನ್ನೆಲ್ಲ ನೋಡಿದ ರಾಣಾ ಅರುಂಧತಿ ಬಳಿ ಹೇಳುತ್ತಿರುತ್ತಾನೆ. ಲೆ ಯಾಮಿನಿ ಹೋಗೆ ಎಲ್ಲಾ ವಿಚಾರ ಹೇಳೆ ನನ್ನ ಜೀವ ಉಳಿಸೇ ಎಂದು ಹೇಳುತ್ತಿರುತ್ತಾನೆ.

ಪ್ರೀತು ಕೋಪಕ್ಕೆ ಬೆದರಿದ ರಾಣಾ
ಈ ವೇಳೆ ಅಲ್ಲಿಂದ ಯಾಮಿನಿ ಹೋಗುತ್ತಿರುವುದನ್ನು ನೋಡಿ ಇವತ್ತು ಪಕ್ಕಾ ನನ್ನ ಜೀವ ಸಂಚಕಾರದಲ್ಲಿ ಇದೆ ಎಂದು ಹೇಳುತ್ತಾನೆ. ಪಾರು ಹಾಗೂ ಆದಿ ರೊಮ್ಯಾಂಟಿಕ್ ಮೂಡ್ ನಲ್ಲಿದ್ದಾರೆ ಪಾರು, ಆದಿಗೆ ಕಾಫಿ ತೆಗೆದುಕೊಂಡು ಬರುತ್ತಾಳೆ. ಬಳಿಕ ಎಲ್ಲರಿಗೂ ಕಾಫಿ ಕೊಡಲು ಇದೆ ಎಂದು ಹೇಳಿ ತರಾ ತುರಿಯಲ್ಲಿ ಹೋಗುತ್ತಾಳೆ. ಇದನ್ನು ನೋಡಿದ ಆದಿ ಆಕೆಯ ಸೀರೆಯ ಸೆರಗನ್ನು ಮೆತ್ತಗೆ ಎಳೆಯುತ್ತಾನೆ. ಆ ವೇಳೆ ಪಾರು ನಾಚುತ್ತಾ ಏನು ಯಜಮಾನರೆ ಎಂದು ಕೇಳಿದಾಗ ಕಾಫಿಯನ್ನೂ ನೀನೇ ಕುಡಿಸು ಪಾರು ಎಂದು ಹೇಳುತ್ತಾನೆ ಇದನ್ನು ಕೇಳಿದ ಪಾರು ಬಳಿಕ ರೊಮ್ಯಾಂಟಿಕ್ ಆಗಿ ಕಾಫಿ ಕುಡಿಸುತ್ತಾಳೆ.

ಕೆಲಸ ಮಾಡಬೇಡ ಎಂದ ಆದಿ
ನಂತರ ಆದಿ, ಇನ್ನೂ ಮೇಲೆ ನೀನು ಇಂಥ ಕೆಲಸ ಮಾಡಬೇಡ ಕೆಲಸದವರು ಮಾಡುತ್ತಾರೆ ಎಂದು ಹೇಳುತ್ತಾನೆ ಅದಕ್ಕೆ ಪಾರು, ಬಂದ ಹಾದಿಯನ್ನು ಮರೆಯಬಾರದು ಎನ್ನುತ್ತಾಳೆ. ಬಳಿಕ ಮೈದುನನಿಗೆ ಕಾಫಿ ಕೊಡಲು ಇದೆ ಎಂದು ಹೇಳಿ ಅಲ್ಲಿಂದ ತರಾತುರಿಯಲ್ಲಿ ಹೋಗುತ್ತಾಳೆ. ಆ ವೇಳೆ ಯಾಮಿನಿ ಪಾರುಗೆ ಸಿಗುತ್ತಾಳೆ. ಆ ವೇಳೆ ಪ್ರೀತು ಎಲ್ಲಿ ಎಂದು ಕೇಳುತ್ತಾಳೆ. ಅದಕ್ಕೆ ಯಾಮಿನಿ ನನಗೆ ಯಾಕೆ ಬೇಕು ಒಂದು ಹೇಳಿದರೆ ಇನ್ನೊಂದು ಆಗುತ್ತದೆ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ.

ಪ್ರೀತುವನ್ನು ಹುಡುಕುತ್ತ ಹೊರಟ ಪಾರು
ಬಳಿಕ ಯಾಮಿನಿ ಹೇಳುತ್ತಾಳೆ, ಪಾರು ಮೇಲೆ ಇದ್ದಾನೆ ಅನ್ನಿಸುತ್ತದೆ ಹೋಗಿ ನೋಡು ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಇನ್ನೂ ಪ್ರೀತು ಕುಡಿದ ಮತ್ತಿನಲ್ಲಿ ಟಿ ವಿ ನೋಡುತ್ತಾ ಇರುತ್ತಾನೆ. ಕೊಲೆ ದೃಶ್ಯವೊಂದನ್ನು ನೋಡಿ, ನಾನು ರಾಣಾ ನನ್ನು ಈ ರೀತಿಯೇ ಕೊಲೆ ಮಾಡಬೇಕು. ರಾಣಾ ಸತ್ತ ಭಯಕ್ಕೆ ಅರುಂಧತಿ ಊರು ಬಿಟ್ಟು ಎಸ್ಕೇಪ್ ಆಗುತ್ತಾಳೆ. ಹೇಗೂ ಅಮ್ಮನ ಬಳಿ ಲೈಸೆನ್ಸ್ ಗನ್ ಇದೆ ಅದರಲ್ಲಿಯೇ ಹೊಡೆಯುತ್ತೇನೆ. ಎಂದು ಹೇಳಿ ಬಳಿಕ ಸೋಫಾದ ಹಿಂದೆ ಹೋಗಿ ಕುಳಿತುಕೊಳ್ಳುತ್ತಾನೆ.

ಅಮ್ಮನ ಕೈಗೆ ಸಿಕ್ಕಿಬಿದ್ದ ಪ್ರೀತು
ಆ ವೇಳೆ ಅಲ್ಲಿಗೆ ಪಾರು ಬಂದು ನೋಡುತ್ತಾಳೆ ಆದರೆ ಅಲ್ಲಿ ಯಾರೂ ಇಲ್ಲವೆಂದುಕೊಂಡು ವಾಪಸ್ ಹೋಗುತ್ತಾಳೆ. ಬಳಿಕ ಪ್ರೀತು ಕುಡಿದ ಮತ್ತಿನಲ್ಲಿ ತೂರಾಡಿಕೊಂಡು ಅಮ್ಮನ ರೂಮ್ ಬಳಿ ಹೋಗುತ್ತಾನೆ. ಆ ವೇಳೆ ಅಖಿಲಾ ಕೆಲಸದವರ ಬಳಿ ಮಾತನಾಡುತ್ತಾ ಇರುತ್ತಾಳೆ. ಇದನ್ನು ನೋಡಿದ ಪ್ರೀತು ಮೆತ್ತಗೆ ಅಮ್ಮನ ರೂಮ್ ಬಳಿ ಹೋಗಿ ಗನ್ ಎಲ್ಲಿದೆ ಎಂದು ನೋಡುತ್ತಾ ಇರುತ್ತಾನೆ. ಈ ವೇಳೆ ಗನ್ ಸಿಗುತ್ತದೆ. ರಾಣಾನನ್ನು ಎತ್ತಿ ಬಿಡುತ್ತೇನೆ ಎಂದು ಹೇಳಿ ಹಿಂದೆ ತಿರುಗುವಷ್ಟರಲ್ಲಿ ಅಖಿಲ ಬರುತ್ತಾಳೆ. ಅಮ್ಮನನ್ನು ಕಂಡ ಪ್ರೀತುಗೆ ಎನು ಮಾಡಬೇಕು ಎಂದು ತೋಚದಾಗುತ್ತದೆ ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











