ಮೋನಿಕಾ ಕಪಾಳಕ್ಕೆ ಭಾರಿಸಿದ ಪ್ರೀತೂ, ಅಖಿಲಾಗೂ ಅನುಮಾನ
ಇದೀಗ ಪಾರು ಧಾರವಾಹಿಯಲ್ಲಿ ಅಖಿಲಾಂಡೆಶ್ವರಿ, ದಾಮಿನಿ ಮಾತು ಕೇಳಿ ಮನೆ ಮಂದಿಯನ್ನು ಜೋರಾಗಿ ಕರೆಯುತ್ತಾಳೆ. ಮನೆ ಮಂದಿ ಎಲ್ಲಾ ಅಖಿಲಾ ಕರೆಯುತ್ತಿರುವುದರಿಂದ ಬೇಗ ಬರುತ್ತಾರೆ. ಬಳಿಕ ಪಾರು ಬಳಿ ಕೊಂಚ ಜೋರಾಗಿ ಮಾತನಾಡಿದ ಅಖಿಲಾಂಡೆಶ್ವರಿ, ಮೋನಿಕಾ ಯಾರು? ಎಂಬ ಪ್ರಶ್ನೆ ಹಾಕುತ್ತಾರೆ ಬಳಿಕ ಹೇಳುತ್ತಾರೆ ಇದು ನನ್ನ ಪ್ರಶ್ನೆ ಅಲ್ಲ ದಾಮಿನಿ ಪ್ರಶ್ನೆ ಈ ಪ್ರಶ್ನೆಗೆ ಉತ್ತರ ಬೇಕಿದೆ ಎಂದು ಹೇಳಿದಾಗ ಪಾರುಗೆ ಏನು ಹೇಳಬೇಕು ಎಂದು ತಿಳಿಯದೇ ಬಹಳ ಭಯ ಆಗುತ್ತದೆ.
ಬಳಿಕ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ ಅಖಿಲಾ ಇನ್ನೊಂದೆರಡು ಪ್ರಶ್ನೆಯನ್ನು ಪಾರು ಮುಂದೆ ಇಡುತ್ತಾರೆ. ಮೋನಿಕಾ, ಜನನಿ ರೂಮ್‌ನಲ್ಲಿ ಏನು ಮಾಡುತ್ತಾ ಇದ್ದಾಳೆ ಹಾಗೆಯೇ ಮೋನಿಕಾ, ಪಾರು ಉತ್ತಮ ಗೆಳತಿಯರು ಆಗಿದ್ದರೆ ಮೋನಿಕಾ ನನ್ನ ಮೊಬೈಲ್‌ನಿಂದಾ ಬೇರೆಯವರಿಗೆ ಯಾಕೇ ಕಾಲ್ ಮಾಡುತ್ತಾ ಇದ್ದಳು ಎಂದೆಲ್ಲ ಕೇಳುತ್ತಾರೆ. ಆ ವೇಳೆ ರಘು, ಅಖಿಲ ಬಳಿ 'ಜನನಿ ಆಕೆಯ ರೂಮ್ ಅನ್ನು ಬಿಟ್ಟುಕೊಟ್ಟಿದ್ದು ಎಂದಾಗ ಜನನಿ ಹೌದು ಎಂದು ತಲೆ ಆಡಿಸುತ್ತಾಳೆ. ಇದನ್ನು ನೋಡಿದ ಅಖಿಲಾ ಧಾಮಿನಿಯನ್ನು ನೋಡುತ್ತಾರೆ.

ದಾಮಿನಿ ವಿರುದ್ಧ ಅಖಿಲಾ ಅಸಮಾಧಾನ
ಇನ್ನು ಮೋನಿಕಾ ಒಳ್ಳೆಯವಳಲ್ಲ ಎಂದು ದಾಮಿನಿ ಹೇಳುತ್ತಿದ್ದಾಳೆ. ಏನೋ ಒಳಗೊಳಗೇ ಸಂಚು ಮಾಡುತ್ತಿದ್ದಾಳೆ ಎಂದು ದಾಮಿನಿಗೆ ಅನ್ನಿಸುತ್ತಿದೆ ಎಂದೆಲ್ಲ ಹೇಳುವಾಗ ಮನೆ ಮಂದಿಗೆ ಕೊಂಚ ಶಾಕ್ ಆದರೂ ಸಾವರಿಸಿಕೊಳ್ಳುತ್ತಾರೆ. ಬಳಿಕ ಅಖಿಲಾ, ದಾಮಿನಿ ಏನೆಲ್ಲಾ ಹೇಳಿದಳು ಅದೆಲ್ಲವನ್ನು ಬೇರೆಯವರ ಬಳಿಯೂ ಹೇಳಲು ಹೇಳುತ್ತಾಳೆ. ಪಾರು ಮೇಲೆ ದಾಮಿನಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಇರುತ್ತಾಳೆ ದಾಮಿನಿ ಇದೆಲ್ಲವನ್ನೂ ಕಂಡ ಮನೆ ಮಂದಿ ಮಾತ್ರ ದಾಮಿನಿ ವಿರುದ್ದ ತಿರುಗಿ ಬಿದ್ದಿದ್ದಾರೆ.

ದಾಮಿನಿ ವಿರುದ್ದ ತಿರುಗಿ ಬಿದ್ದ ಮನೆ ಮಂದಿ
ಕೊನೆಗೆ ಮೊಬೈಲ್ ಚೆಕ್ ಮಾಡಿದರು ಕೊನೆಗೆ ಸಿಕ್ಕಿ ಹಾಕಿಕೊಂಡಿದ್ದು ಮಾತ್ರ ದಾಮಿನಿ ಇದನ್ನೆಲ್ಲ ನೋಡಿದ ದಾಮಿನಿ, ಗಂಡ ಮೋಹನ ಏನಿದೆಲ್ಲ ದಾಮಿನಿ ನೀನು ಮರ್ಯಾದೆ ಕಳೆದುಕೊಳ್ಳುವುದು ಅಲ್ಲದೆ ನನ್ನ ಮರ್ಯಾದೆ ಹಾಳು ಮಾಡುತ್ತಾ ಇದ್ದಿ ಹೀಗೆ ಯಾಕೆ ಮಾಡುತ್ತಾ ಇದ್ದಿ ಎಂದು ದಾಮಿನಿಯನ್ನು ರೂಮಿನ ಒಳಗೆ ಕರೆದುಕೊಂಡು ಹೋಗುತ್ತಾನೆ. ಇನ್ನು ಮೋನಿಕಾ ಮಾತ್ರ ಪ್ರೀತೂವನ್ನು ಸನ್ನೆ ಮೂಲಕ ಕರೆಯುತ್ತಾಳೆ. ಪ್ರೀತೂ ಮೋನಿಕಾ ಬಳಿ ಮಾತನಾಡಲು ಹೋಗುವುದನ್ನು ಜನನಿ ನೋಡುತ್ತಾಳೆ.

ಪ್ರೀತಮ್ ಬಳಿ ಮೋನಿಕಾ ಮಾತು
ಇನ್ನು ರಘು, ಪಾರು ನನ್ನ ಬಳಿ ಕೆಲವು ವಿಚಾರವನ್ನು ಹೇಳಿಯೇ ಹೇಳುತ್ತಾರೆ ಎಂಬ ಕಾನ್ಫಿಡೆನ್ಸ್‌ನಲ್ಲಿ ಇದ್ದಾನೆ. ಇನ್ನು ಮೋನಿಕಾ, ಪ್ರೀತಮ್ ಬಳಿ 'ನನ್ನ ಫೋನ್ ಈಗಾಗಲೇ ಕಳವು ಆಗಿದೆ ಯಾರು ಕಳ್ಳತನ ಮಾಡಿದ್ದಾರೆ ಎಂದು ತಿಳಿಯುತ್ತಿಲ್ಲ. ರಾಣಾ ಸರ್‌ಗೆ ಕೂಡ ಕರೆ ಮಾಡಲು ಸಾಧ್ಯ ಆಗುತ್ತಿಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪ್ರೀತಮ್ 'ನಾನು ದಾಮಿನಿ ಚಿಕ್ಕಮ್ಮನ ಮೊಬೈಲ್ ತೆಗೆದುಕೊಂಡು ನಂಬರ್ ಡಿಲಿಟ್ ಮಾಡದೇ ಹೋಗಿದ್ದರೆ ನಿನ್ನ ಗತಿ ಏನಾಗುತ್ತಿತ್ತು ಗೊತ್ತಾ ನಿನಗೆ' ಎನ್ನುತ್ತಾನೆ. ಇದನ್ನು ಕೇಳಿದ ಮೋನಿಕಾ ಹೌದು ಬಹಳ ಕಷ್ಟ ಆಯಿತು ಎನ್ನುತ್ತಾಳೆ.

ಮೋನಿಕಾ ಕಪಾಳಕ್ಕೆ ಹೊಡೆದ ಪ್ರೀತು
ಬಳಿಕ ಪ್ರೀತೂ ಬಳಿ ನನ್ನ ಫೋನ್ ಕಳವು ಆಗಿದೆ ಎಂದು ಹೇಳುತ್ತಾಳೆ ಇದನ್ನು ಕೇಳಿದ ಪ್ರೀತಮ್ ಏನು ಫೋನ್ ಕಳವು ಆಗೋದಾ ಖಂಡಿತ ಸಾಧ್ಯ ಇಲ್ಲ ಎಂದು ಹೇಳಿದಾಗ ಮೋನಿಕಾ ಹೇಳುತ್ತಾಳೆ ನಿನ್ನ ಅಕ್ಕ ಬಾವ ನನ್ನ ಫೋನ್ ಕದ್ದಿದ್ದಾರೆ ಎಂದು ಹೇಳಿದಾಗ ಮೋನಿಕಾ ಕೆನ್ನೆಗೆ ಬಲವಾಗಿ ಹೊಡೆಯುತ್ತಾನೆ ಪ್ರೀತಮ್ ಇದರಿಂದ ಮೋನಿಕಾ ಗೆ ಸಿಟ್ಟು ಬಂದರು ಸಮಾಧಾನ ಮಾಡಿಕೊಂಡು ಇದರಿಂದ ಹೇಗಪ್ಪಾ ಪಾರಾಗುವುದು ಎಂದುಕೊಂಡು ನಾನು ಸುಳ್ಳು ಹೇಳಿದ್ದು ಪ್ರೀತಮ್ ನಿನ್ನ ಬಳಿ ಎಂದು ಹೇಳಿ ಕೆನ್ನೆಯನ್ನು ಮುಟ್ಟಲು ಬರುತ್ತಾಳೆ ಇದನ್ನು ನೋಡಿದ ಜನನಿ ಬಂದು ಮೋನಿಕಾ ಕೈ ಹಿಡಿಯುತ್ತಾಳೆ. ಇದನ್ನು ನೋಡಿದ ಮೋನಿಕಾ ಹೆದರಿಕೊಳ್ಳುತ್ತಾಳೆ. ಇನ್ನು ಮುಂದೆ ಮೋನಿಕಾ ಬೇಳೆ ಬೇಯಿಸಿಕೊಳ್ಳಲು ಆಗುವುದು ಇಲ್ಲ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications











