Paaru: ಆದಿಗೆ ಸುಳ್ಳು ಹೇಳಿದ ಪಾರು: ಆಕೆಯ ಮುಂದಿನ ನಡೆ ಏನು?
ಪಾರು ಮನೆ ಕೆಲಸ ಮಾಡಿ ಬಹಳ ಸುಸ್ತಾಗಿ ಮನೆಗೆ ಬರುತ್ತಾ ಇರುವಾಗ ಆದಿ ಅದೇ ದಾರಿಯಲ್ಲಿ ಆಟೋದಲ್ಲಿ ತನ್ನ ಕರ್ತವ್ಯದ ನಿಮಿತ್ತ ಹೋಗುತ್ತಾ ಇರುತ್ತಾನೆ. ಆದರೆ ದಾರಿಯಲ್ಲಿ ನಡೆದು ಸಾಗುತ್ತಾ ಇದ್ದ ಪಾರು ಮಾತ್ರ ಆದಿ ಕಣ್ಣಿಗೆ ಕಾಣಿಸುವುದಿಲ್ಲ. ಪಾರು ಬೇಗ ಮನೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಾ ಇರುತ್ತಾಳೆ. ಮಗುವಿನ ಬಳಿ ಮಾತನಾಡುತ್ತಾ ಇರುತ್ತಾಳೆ ಪಾರು.
ಹೊಟ್ಟೆ ಮುಟ್ಟಿ ನಿನಗೆ ನಾನು ತುಂಬಾ ಕಷ್ಟ ಕೊಟ್ಟು ಬಿಟ್ಟೆ.. ಸಹಿಸಿಕೊ ಮಗು ನಮ್ಮ ಈ ಕಷ್ಟ ಇನ್ನೂ ಸ್ವಲ್ಪ ದಿನಗಳವರೆಗೆ ಮಾತ್ರ ಇರುತ್ತದೆ ಆ ಬಳಿಕ ನಮ್ಮ ಕಷ್ಟ ನಿವಾರಣೆ ಆಗುತ್ತದೆ ಎಂದು ಹೇಳುತ್ತಾಳೆ. ಆ ವೇಳೆ ಆದಿ ಮನೆಗೆ ಬರುತ್ತಾನೆ ಮನೆಗೆ ಬಂದ ಆದಿಯನ್ನು ಕಿಟಕಿಯಲ್ಲಿ ನೋಡಿ ಶಾಕ್ ಆಗುತ್ತಾಳೆ. ಯಾಕೆಂದರೆ ತಾನು ಹಾಕಿರುವ ಬಟ್ಟೆ ನೋಡಿದರೆ ಆದಿಗೆ ಅನುಮಾನ ಬರಬಹುದು ಎಂದು ಬೇಗ ಸೀರೆ ಉಟ್ಟು ಮನೆಯ ಬಾಗಿಲು ತೆಗೆಯುತ್ತಾಳೆ.

ಆದಿಯನ್ನು ನೋಡಿ ಪಾರು ಶಾಕ್
ಇಷ್ಟು ಬೇಗ ಬಂದ ಆದಿಯನ್ನೂ ನೋಡಿದ ಪಾರು ಮಾತ್ರ ಕೊಂಚ ಶಾಕ್ ಆಗಿದ್ದಾಳೆ. ಆದಿ ಮಾತ್ರ ಯಾಕೆ ಇವತ್ತು ಫೋನ್ ತೆಗೆಯಲೇ ಇಲ್ಲ. ಅದಕ್ಕೆ ನಾನು ನಿನ್ನ ಬಳಿ ಬೇಗ ಬಂದೆ ಇವತ್ತು. ನಾನು ಊಟ ಮಾಡಬೇಕು ಎನ್ನುವ ವೇಳೆ ನೀನು ಕಾಲ್ ರಿಸೀವ್ ಮಾಡಲಿಲ್ಲ. ಆ ಕಾರಣಕ್ಕೆ ನಾನು ಊಟ ಮಾಡಲಿಲ್ಲ ಎಂದು ಪಾರು ಕಟ್ಟಿ ಕೊಟ್ಟ ಬುತ್ತಿಯನ್ನು ಹಾಗೆಯೇ ವಾಪಸ್ ತರುತ್ತಾನೆ.
ಊಟ ಮಾಡಿಲ್ಲ ಎಂದು ಪಾರು ಬೇಸರ
ಇದನ್ನು ನೋಡಿದ ಪಾರು ಮಾತ್ರ ಅಯ್ಯೋ ನನ್ನಿಂದಾಗಿ ಯಜಮಾನರು ಊಟ ಕೂಡ ಮಾಡಲಿಲ್ಲ ಅಲ್ಲ ಎಂದು ಬೇಸರ ಪಟ್ಟುಕೊಂಡಿದ್ದಾಳೆ. ಇದೇ ವೇಳೆ ಪ್ರೀತಮ್ ಬರುತ್ತಾನೆ. ಪ್ರೀತಮ್ನ ನೋಡಿ ಮನೆ ಮಂದಿ ಖುಷಿ ಪಡುತ್ತಾರೆ. ಬಳಿಕ ಆದಿ, ಪಾರು ಮಾತನಾಡುತ್ತಾ ಇರುವ ವಿಚಾರ ಅರ್ಧಕ್ಕೆ ನಿಂತು ಹೋಯಿತು. ಇನ್ನು ಪ್ರೀತಮ್ ಕೈಯಲ್ಲಿ ಎಳ ನೀರು ಇದ್ದಿದ್ದನ್ನು ಕಂಡು ಬಹಳ ಖುಷಿ ಆಗುತ್ತದೆ. ಆದರೆ ಪಾರು ಕೂಡ ಊಟ ಮಾಡದೇ ಇರುವುದನ್ನು ಆದಿ ತಿಳಿದು ಪಾರು ಮುಖ ನೋಡುತ್ತಾನೆ. ಪ್ರೀತಮ್ ಅತ್ತಿಗೆಯ ಬಳಿ ಕೇಳುತ್ತಾನೆ.
ಅಣ್ಣನ ಮನೆಗೆ ಬಂದ ಪ್ರೀತಮ್
ಏನು ಅತ್ತಿಗೆ ಆಗ ಅಪ್ಪ ಬಂದಿದ್ದರು. ಆಗ ನೀವು ಮನೆಯಲ್ಲಿ ಇರಲಿಲ್ಲವಂತೆ ಎಂದು ಹೇಳಿದಾಗ ಆದಿಗೆ ಶಾಕ್ ಆಗುತ್ತದೆ. ಆತ ಪಾರು ಮುಖ ನೋಡಿದಾಗ ಆಕೆಗೆ ಏನು ಹೇಳಬೇಕು ಎಂದು ತಿಳಿಯದೇ ಆಗುತ್ತದೆ. ಇನ್ನು ಪ್ರೀತಮ್ ಮಾತು ಮುಂದುವರೆಸುತ್ತಾನೆ. ಅತ್ತಿಗೆ ಎಲ್ಲಿಗೆ ಹೋಗಿದ್ದರು ಎಂದರೆ ಅನಾಥ ಆಶ್ರಮಕ್ಕೆ ಹೀಗಿದ್ದರೂ ಎಂದು ಹೇಳಿದಾಗ ಆದಿ ಸಮಾಧಾನಗೊಳ್ತಾನೆ.

ಪಾರುಗೆ ತಾಕೀತು ಮಾಡಿದ ಆದಿ
ಅತ್ತಿಗೆಯ ಬಳಿ ಇನ್ನೂ ಮೇಲೆ ನೀವು ಒಬ್ಬರೆ ಎಲ್ಲಿಯೂ ಹೋಗ ಕೂಡದು ಎಂದು ಹೇಳುತ್ತಾನೆ. ಪಾರು ಮರೆತು ಹೀಗೆ ಆಯಿತು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆದಿ ಕೂಡ ಅದನ್ನೇ ಹೇಳುತ್ತಾನೆ. ಇನ್ನು ಇಬ್ಬರಿಗೂ ಊಟವನ್ನು ಕೊಡುತ್ತಾನೆ ಪ್ರೀತಮ್. ಇನ್ನೂ ಅಖಿಲ ಕಣ್ಣು ತಪ್ಪಿಸಿ ರತ್ನವೇಣಿ ದೇವಾಲಯಕ್ಕೆ ಹೋಗಿರುತ್ತಾರೆ. ದೇವಾಲಯದಿಂದ ಬಂದ ರತ್ನವೇಣಿ, ಜನನಿ ಬಳಿ ಬಂದು ಜೋರಾಗಿ ಹೇಳುತ್ತಾಳೆ
ರತ್ನವೇಣಿ ಮಾತಿಗೆ ಬೇಸರಗೊಂಡ ಜನನಿ
ನಾನು ಇವತ್ತು ದೇವಸ್ಥಾನಕ್ಕೆ ಯಾಕೆ ಹೋಗಿದ್ದು ಎಂದರೆ ನಿನ್ನ ಸೀಮಂತ ಶಾಸ್ತ್ರ ಯಾವತ್ತೂ ಮಾಡೋಣ ಎಂದು ಕೇಳಲು ಹೋಗಿದ್ದೆ. ನಾಳೆ ಅಲ್ಲ ನಾಡಿದ್ದು ಸೀಮಂತ ಶಾಸ್ತ್ರ ಮಾಡಬಹುದು ಎಂದಾಗ ಅಖಿಲಗೆ ಜನನಿಗೆ ಶಾಕ್ ಆಗುತ್ತದೆ. ಜನನೀ ಮೆತ್ತಗೆ ಅತ್ತೆ ಬಳಿ ಒಂದು ಮಾತು ಹೇಳಬಾರದಿತ್ತಾ ಎಂದು ಕೇಳಿದಾಗ ದೊಡ್ಡ ರಾದ್ಧಾಂತ ಮಾಡುತ್ತಾಳೆ. ಅಖಿಲ ಮಾತ್ರ ರತ್ನವೇಣಿ ತಾಳಕ್ಕೆ ತಕ್ಕ ಹಾಗೆ ಕುಣಿಯದೇ ನನಗೆ ಇದಕ್ಕೆ ಒಬ್ಬಳು ಒಂದು ದಿನ ಟೈಮ್ ಬೇಕು ಎಂದು ಕೇಳಿದಾಗ ರತ್ನವೇಣಿಗೆ ಬಹಳ ಕೋಪ ಬಂದ್ರು ತಡೆದುಕೊಂಡು ಇರುತ್ತಾಳೆ.


Click it and Unblock the Notifications











