ಪಾರುವನ್ನು ಹೇಗೆ ಉಳಿಸಿಕೊಳ್ಳುತ್ತಾಳೆ ಅಖಿಲಾಂಡೇಶ್ವರಿ?

By ಪೂರ್ವ

ಪಾರು ಧಾರವಾಹಿಯಲ್ಲಿ ಆದಿಗೆ ಎರಡನೇ ಮದುವೆಯ ಯೋಗ ಇದೆ ಎಂದು ಕಿರಿಯ ಸ್ವಾಮಿಗಳು ಅಖಿಲಾಂಡೇಶ್ವರಿ ಬಳಿ ಹೇಳಿದಾಗಿನಿಂದ ಅಖಿಲಾಂಡೇಶ್ವರಿಗೆ ನೆಮ್ಮದಿ ಇಲ್ಲದಾಗಿದೆ.

ಆದಿ ಪಾರು ಸದಾಕಾಲ ಒಂದಾಗಿರಬೇಕು ಅವರಿಬ್ಬರ ಜೀವನದಲ್ಲೂ ಯಾವುದೇ ಅಡೆ ತಡೆಗಳು ಆಗಬಾರದು ಎಂದು ಅಖಿಲಾಂಡೇಶ್ವರಿ ಬಯಕೆ. ಆದರೆ ಆದಿಗೆ ಎರಡನೇ ಮದುವೆಯ ಯೋಗ ಇದೆ ಎಂದು ತಿಳಿದು ಪ್ರತಿ ದಿನ ಕೊರಗುವಂತಾಗಿದೆ. ತಾನು ಹುಡುಕಿದರೂ ಪಾರುವಂತ ಸೊಸೆ ನನಗೆ ಸಿಗುತ್ತಿರಲಿಲ್ಲ. ಸದಾ ಕಾಲ ನನ್ನ ಜೊತೆಗೆ, ನಮ್ಮ ಮನೆಯವರ ಒಳಿತಿಗಾಗಿ ಅದೆಷ್ಟೆಲ್ಲ ಕಷ್ಟಗಳನ್ನು ಅನುಭವಿಸಿದಳು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ ಅಖಿಲಾ.

ಇನ್ನು ಮಕ್ಕಳಿಬ್ಬರ ಬಳಿಯೂ ಸ್ವಾಮೀಜಿ ಹೇಳಿರುವ ವಿಚಾರ ಹೇಳಿಕೊಳ್ಳಲು ಯತ್ನಿಸಿ ಸಾಧ್ಯವಾಗದೆ ಆಲೋಚಿಸುತ್ತಾ ಕುಳಿತಿಕೊಂಡಿರುವ ವೇಳೆ ಅಖಿಲಂಡೇಶ್ವರಿಗೆ ಆಲೋಚನೆಯೊಂದು ಬರುತ್ತದೆ. ಪಾರು ಬಳಿ ಈ ಆಲೋಚನೆಗಳನ್ನು ಹೇಳಿಕೊಂಡರೆ ಹೇಗೆ ಆಕೆ ಬಳಿ ನನ್ನ ಸಂಕಟ ತೋಡಿಕೊಂಡರೆ ಮನಸ್ಸು ಸ್ವಲ್ಪ ಮಟ್ಟಿಗೆ ಹಗುರ ಆಗುತ್ತದೆ ಎಂದೆಲ್ಲಾ ಯೋಚಿಸಿ ಪಾರುವನ್ನು ಕರೆಯುತ್ತಾಳೆ.

ಅತ್ತೆಯಮ್ಮ ಎಂದು ಕರೆಯಲು ಸೂಚನೆ ಕೊಟ್ಟ ಅಖಿಲ

ಅತ್ತೆಯಮ್ಮ ಎಂದು ಕರೆಯಲು ಸೂಚನೆ ಕೊಟ್ಟ ಅಖಿಲ

ಅಖಿಲಾಂಡೇಶ್ವರಿ ಬಳಿ ಪಾರು ಬರುತ್ತಾಳೆ ಆಕೆಗೆ ಅತ್ತೆ ಬಳಿ ಮಾತನಾಡಲು ಅದೇಕೋ ಹಿಂಜರಿಕೆ. ಅತ್ತೆಯಮ್ಮ ಎಂದು ಹೇಳಲು ಹಿಂಜರಿಕೆ. ಈ ಕಾರಣಕ್ಕೆ ಮೆತ್ತಗೆ ಆತ್ತೆಮ್ಮ ಎಂದು ಕರೆಯುತ್ತಾಳೆ. ಇದನ್ನು ಕೇಳಿದ ಅಖಿಲಾಂಡೇಶ್ವರಿ ಹೇಳುತ್ತಾರೆ. ಯಾಕಮ್ಮ ಮೆತ್ತಗೆ ಕರೆಯುತ್ತಿದ್ದಿಯಾ ಜೋರಾಗಿಯೇ ಕರಿ ಎಂದು ಹೇಳುತ್ತಾಳೆ. ಅದನ್ನು ಕೇಳಿದ ಪಾರು ಬಹಳ ಸಂತಸ ಪಡುತ್ತಾಳೆ. ನೀನು ಇವತ್ತಿನಿಂದ ನಮ್ಮ ಮನೆ ಸೊಸೆ. ನಿನ್ನನ್ನು ನಾನು ಸೊಸೆ ಎಂದು ಸ್ವೀಕಾರ ಮಾಡಿದ್ದೇನೆ ಎನ್ನುತ್ತಾಳೆ ಅಖಿಲಾಂಡೇಶ್ವರಿ.

ಖುಷಿಯಲ್ಲಿ ತೇಲಾಡಿದ ಪಾರು

ಖುಷಿಯಲ್ಲಿ ತೇಲಾಡಿದ ಪಾರು

ಅದನ್ನು ಕೇಳಿದ ಪಾರು ಮಾತ್ರ ಖುಷಿಯಲ್ಲಿ ಮಾತೆ ಬಾರದೆ ಮೂಕಿಯಂತಾಗುತ್ತಾಳೆ. ಅರಸನ ಕೋಟೆಯ ಸೊಸೆಯಾಗಿ ಸ್ವೀಕಾರ ಆದ ಸಂತಸದ ವಿಚಾರವನ್ನು ಅತ್ತೆಮ್ಮನ ಬಾಯಿಯಿಂದ ಕೇಳುವುದೇ ಒಂದು ಸಂತಸದ ವಿಚಾರ ಎಂದು ಹೆಮ್ಮೆ ಪಡುತ್ತಾಳೆ. ಆಕೆಯ ಖುಷಿಗೆ ಪಾರವೇ ಇರಲ್ಲ. ಇದನ್ನು ಕಂಡ ಅಖಿಲ ಹೇಳುತ್ತಾರೆ ಜಾಸ್ತಿ ಖುಷಿ ಪಡಬೇಡ ಒಂದು ನೋವಿನ ವಿಚಾರವೂ ಇದೆ ಎಂದಾಗ, ಪಾರು ಹೇಳುತ್ತಾಳೆ ನನಗೆ ಬಹಳ ಖುಷಿ ಆಗಿದೆ. ಈ ಖುಷಿ ಮುಂದೆ ಆ ನೋವು ಏನೇನೂ ಇಲ್ಲ ಎಂದು ಹೇಳುತ್ತಾಳೆ.

ಅಖಿಲಮ್ಮನ ಕಾಲಿಗೆ ಬಿದ್ದ ಪಾರು

ಅಖಿಲಮ್ಮನ ಕಾಲಿಗೆ ಬಿದ್ದ ಪಾರು

ಪಾರು ನಾನು ಆದಿಯ ಜಾತಕ ಸ್ವಾಮೀಜಿ ಗೆ ತೋರಿಸಿದ್ದೆ ಆದರೆ ಅವರು ಹೇಳಿದ ಪ್ರಕಾರ ಆದಿಗೆ ಎರಡನೇ ಮದುವೆ ಯೋಗ ಇದೆಯಂತೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪಾರೂಗೆ ಬರ ಸಿಡಿಲು ಬಂದು ಏರಗಿದಂತೆ ಭಾಸ ಆಗುತ್ತದೆ. ಯಾರೇ ಆದರೂ ತನ್ನ ಗಂಡನಿಗೆ ಇನ್ನೊಂದು ಮದುವೆ ಎಂದರೆ ಒಪ್ಪುವುದಿಲ್ಲ. ಪಾರು ಅಖಿಲಾಂಡೇಶ್ವರಿ ಬಳಿ ಹೇಳುತ್ತಾಳೆ. ನಮ್ಮಿಬ್ಬರನ್ನೂ ದೂರ ಮಾಡಲು ಈ ರೀತಿ ಹೇಳುತ್ತಿದ್ದೀರ, ನನ್ನನ್ನು ನನ್ನ ಯಜಮಾನರಿಂದ ದೂರ ಮಾಡಬೇಡಿ ಎಂದು ಜೋರಾಗಿ ಅಳುತ್ತಾಳೆ. ಅಖಿಲಾಂಡೇಶ್ವರಿಯ ಕಾಲಿಗೆ ಬೀಳುತ್ತಾಳೆ. ಈ ವೇಳೆ ಅಖಿಲಾಂಡೇಶ್ವರಿ ಕನಸಿನಲ್ಲಿ ಬೆಚ್ಚಿ ಬಿದ್ದು ಏಳುತ್ತಾಳೆ.

ಅರಸನ ಕೋಟೆಯ ಸೊಸೆ ಆಗುತ್ತಾಳ ಪಾರು

ಅರಸನ ಕೋಟೆಯ ಸೊಸೆ ಆಗುತ್ತಾಳ ಪಾರು

ಇದೆಲ್ಲ ಕನಸು ಎಂದು ತಿಳಿದು ಸಾವರಿಸಿಕೊಳ್ಳುತ್ತಾಳೆ ಅಖಿಲಾಂಡೇಶ್ವರಿ. ಪಾರುವನ್ನು ಅರಸನಕೋಟೆಯ ಹಿರಿ ಸೊಸೆ ಎಂದು ಘೋಷಣೆ ಮಾಡುವ ಕಾಲ ಮಾತ್ರ ಸನ್ನಿಹಿತದಲ್ಲಿದೆ. ಗಣೇಶನ ಹಬ್ಬ ಮಾಡುವ ವೇಳೆ ಎಲ್ಲರಿಗೂ ತಿಳಿಸುವುದಾಗಿ ಸ್ವತಃ ಇದನ್ನು ಹೇಳಬೇಕು ಎಂದು ಸಾವಿತ್ರಿ ಬಳಿ ಹೇಳಿಕೊಂಡಿದ್ದಾರೆ ಕೂಡ. ಆದಿಗೆ ಕೂಡ ಎರಡನೇ ಮದುವೆ ಯೋಗ ದ ಬಗ್ಗೆ ಚಿಂತೆಯಲ್ಲಿ ಇದ್ದಾನೆ. ಇದಾವುದೂ ಗೊತ್ತಿಲ್ಲದೆ ಪಾರು ಖುಷಿಯಲ್ಲಿ ಇದ್ದಾಳೆ. ಪಾರುಗೆ ಸೀರೆ ಒಡವೆ ತೆಗೆದುಕೊಟ್ಟರು ಜನನಿ ಮಾತ್ರ ಬಹಳ ಖುಷಿ ಪಡುತ್ತಾಳೆ. ಆದರೆ ಯಾಮಿನಿ ಮಾತ್ರ ಹಾತೊರೆಯುತ್ತಿದ್ದಾಳೆ.

More from Filmibeat

English summary
Kannada serial Paaru written updated on 12th September. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X