Don't Miss!
- News
ರಾಯಚೂರು: ಶಿವರಾಜ್ ಪಾಟೀಲ್ ಪ್ರಾಬಲ್ಯ ಕೊನೆಗೊಳಿಸಲು ವಿಪಕ್ಷಗಳ ತಂತ್ರ
- Automobiles
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- Sports
ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
- Technology
ಹರಾಜಿನಲ್ಲಿರುವ ಈ ಹಳೆಯ ಐಫೋನ್ ಬೆಲೆ ಅರ್ಧಕೋಟಿ ದಾಟಿದ್ರೂ ಅಚ್ಚರಿಯಿಲ್ಲ!
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೋನಿಕಾ ಮೊಬೈಲ್ ಪಾಸ್ವರ್ಡ್ ಆದಿಗೆ ಸಿಕ್ಕಿಯೇ ಬಿಟ್ಟಿತಾ? ಇನ್ನೂ ಪ್ರೀತಮ್ ಗತಿ ಏನು?
ಪಾರು ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಪಾರು ಮೇಲೆ ಆರೋಪ ಹೊರಿಸಿದ ದಾಮಿನಿಗೆ ಇದೀಗ ಸಖತ್ ಕ್ಲಾಸ್ ನೀಡುತ್ತಿದ್ದಾನೆ ಮೋಹನ್. ಪತಿಯ ಬೈಗುಳ ಕೇಳಲು ಆಗದೆ ದಾಮಿನಿ ಕಿವಿ ಮುಚ್ಚಿಕೊಳ್ಳುತ್ತಾಳೆ. ಬಳಿಕ ಮೋಹನ್ ಇನ್ನೂ ಹೀಗೆ ಮಾಡಿದರೆ ಮನೆಯಿಂದ ಹೊರಗೆ ಹಾಕುತ್ತೇನೆ ಎಂದು ಎಚ್ಚರಿಸುತ್ತಾನೆ. ಇದನ್ನು ಕೇಳಿದ ದಾಮಿನಿ, ನಿಮಗೆ ನನ್ನನ್ನು ಮನೆಯ ಹೊರಗೆ ಹಾಕುವಷ್ಟು ತಾಕತ್ ಇದೆಯಾ ಎಂದು ಪ್ರಶ್ನೆ ಮಾಡುತ್ತಾಳೆ?
ಇದನ್ನು ಕೇಳಿದ ಮೋಹನ್ ಕೊಪಿಸಿಕೋಳ್ಳುತ್ತಾನೆ. ಬಳಿಕ ದಾಮಿನಿ, ಇನ್ನೂ ಮೇಲೆ ನೀವು ನಿಮ್ಮ ಪಾಡಿಗೆ ಇರಿ ನಾನು ನನ್ನ ಪಾಡಿಗೆ ಇರುತ್ತೇನೆ. ಒಂದು ವೇಳೆ ಮನೆ ಮೈನ್ ಸ್ವಿಚ್ ಆಫ್ ಮಾಡಿ ಧಾಮೂ ಎಂದು ಕರೆದರೆ ಚೆನ್ನಾಗಿ ಇರೋದಿಲ್ಲ ಎಂದು ಖಡಕ್ ಆಗಿ ಹೇಳಿದಾಗ ಮೋಹನ್ ಕರಗಿ ಹೇಳುತ್ತಾನೆ ದಾಮಿನಿ ನಾನು ಹೇಳುತ್ತಿರುವುದನ್ನು ನೀನು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲ. ದಾಮಿನಿ ಪಾರು ಮೇಲೆ ಸುಮ್ಮನೆ ಆರೋಪ ಮಾಡಬೇಡ ಎಂದೇ ಎಂದು ಮಗೂಗೆ ಬುದ್ಧಿ ಹೇಳಿದ ಹಾಗೆ ಹೇಳುತ್ತಾನೆ. ಇದನ್ನು ಕೇಳಿದ ದಾಮಿನಿ ಮಾತ್ರ ಇನ್ನು ಮೇಲೆ ನಮ್ಮಿಬ್ಬರ ನಡುವೆ ಏನಿಲ್ಲ ಎಂದು ಹೇಳಿದಾಗ ಮೋಹನ್ ಅಳಲು ಆರಂಭಿಸುತ್ತಾನೆ.
ಇದನ್ನು ನೋಡಿದ ದಾಮಿನಿ ನಗುತ್ತಾ ಮನೆ ಒಳಗೆ ಹೋಗುತ್ತಾಳೆ. ಇನ್ನು ಪಾರು ಬಳಿ ಆದಿ, ಮೋನಿಕಾ ಮೊಬೈಲ್ ಅನ್ನು ಕೇಳುತ್ತಾನೆ. ಈ ವೇಳೆ ಪಾರು ಯಾಕೆ ಎಂದು ಕೇಳಿದಾಗ ಆದಿ ಹೇಳುತ್ತಾನೆ, ದಾಮಿನಿ ಚಿಕ್ಕಮ್ಮ ಮೋನಿಕಾ ಮೇಲೆ ಅನುಮಾನ ಪಟ್ಟು ಒಂದು ಬಾರಿ ಮೋನಿಕಾ ಮೊಬೈಲ್‌ನಿಂದ ಯಾರಿಗೆ ಕರೆ ಮಾಡಿದ್ದಾರೆ ಎಂದು ತೋರಿಸಲು ಬಂದಿದ್ದಾರೆ ಇದನ್ನೆಲ್ಲ ನೋಡಿದರೆ ನಮ್ಮ ಜೊತೆ ಮೋನಿಕಾ ಮೊಬೈಲ್ ಇದೆ. ಅದರಲ್ಲಿ ಕಾಂಟ್ಯಾಕ್ಟ್ ನಂಬರ್ ಇದೆ. ಅದರಲ್ಲಿ ನಾವು ಚೆಕ್ ಮಾಡಿದರೆ ಅವಳು ಯಾಕೆ ನಮ್ಮ ಮನೆಗೆ ಬಂದಿದ್ದಾಳೆ ಅವಳ ಹಿಂದೆ ಇರೋ ವ್ಯಕ್ತಿ ಯಾರು ಎನ್ನುವುದನ್ನು ತಿಳಿಯಬಹುದು ಅಲ್ವಾ? ಎಂದು ಹೇಳುತ್ತಾನೆ.

ಆದಿ ಉಪಾಯಕ್ಕೆ ಭೇಷ್ ಎಂದ ಪಾರು
ಇದನ್ನು ಕೇಳಿದ ಪಾರು ಈ ಉಪಾಯ ನನಗೆ ಯಾಕೆ ಇದಕ್ಕೂ ಮುಂಚೆ ಹೊಳೆಯಲಿಲ್ಲ ಎಂದು ಮೊಬೈಲ್ ಹುಡುಕಲು ಹೋಗುತ್ತಾಳೆ. ಬಳಿಕ ಮೊಬೈಲ್ ಸಿಕ್ಕಿತು ಆದರೆ ಆ ಮೊಬೈಲ್‌ಗೆ ಪಾಸ್ವರ್ಡ್ ಅನ್ನು ಹಾಕಲಾಗಿರುತ್ತದೆ. ಇದನ್ನು ನೋಡಿದ ಆದಿಗೆ ಟೆನ್ಶನ್ ಆಗುತ್ತದೆ. ಇನ್ನು ಮೋನಿಕಾ ಮೊಬೈಲ್ ಪಾಸ್ವರ್ಡ್ ಪ್ರೀತಮ್‌ಗೆ ತಿಳಿದಿರುತ್ತದೆ ಎಂದು ಯೋಚನೆ ಮಾಡುತ್ತಾ ಪ್ರೀತಮ್‌ನನ್ನು ಮೀಟ್ ಮಾಡಲು ಹೋಗುತ್ತಾರೆ.

ಮೋನಿಕಾ ತಲೆಗೆ ಹುಳ ಬಿಟ್ಟ ಜನನಿ
ಇತ್ತ ಜನನಿ, ಮೋನಿಕಾ ಬಲೆಯಿಂದ ಪ್ರೀತಮ್ ಅನ್ನು ಬಿಡಿಸುವ ಎಲ್ಲಾ ಪ್ರಯತ್ನ ಮಾಡುತ್ತಾ ಇದ್ದಾಳೆ. ಪ್ರೀತಮ್ ಹಾಗೂ ಮೋನಿಕಾ ಬಳಿಗೆ ಬಂದ ಜನನಿ ಮಾತ್ರ ಪಾಯಸ ಹಿಡಿದು ನಿಂತಿರುತ್ತಾಳೆ. ಜನನಿಯ ನೋಡಿದ ಮೋನಿಕಾ ಗರ ಬಡಿದ ಹಾಗೆ ನಿಲ್ಲುತ್ತಾಳೆ. ಇದನ್ನು ನೋಡಿದ ಜನನಿ, ಪ್ರೀತಮ್‌ಗೆ ಪಾಯಸ ತಿನ್ನಿಸುತ್ತಾಳೆ. ಜನನಿ ಬಳಿ ಪಾಯಸ ಬೇಕೆ? ಎಂದು ಕೇಳಿದಾಗ ಮೋನಿಕಾ ನನಗೆ ಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಜನನಿ ಕೆಲವೊಂದು ಕೆಲವರಿಗೆ ಮಾತ್ರ ಸಿಗುತ್ತದೆ ಎಲ್ಲರಿಗೂ ಸಿಗುವುದಿಲ್ಲ ಎಂದು ಹೇಳುತ್ತಾಳೆ.

ಮೊಬೈಲ್ ನಮ್ಮ ಬಳಿ ಇದೆ ಎಂದ ಆದಿ
ಇದನ್ನು ಕೇಳಿದ ಮೋನಿಕಾ ಕೋಪ ಮಾಡಿಕೊಳ್ಳುತ್ತಾಳೆ. ಇದನ್ನು ನೋಡಿದ ಜನನಿ ಒಳಗೊಳಗೇ ನಗುತ್ತಾಳೆ. ಇತ್ತ ಅರುಂಧತಿ ಹಾಗೂ ರಾಣಾ ಮೋನಿಕಾ ಫೋನ್ ಮಾಡದೇ ಇರುವುದನ್ನು ಕಂಡು ಟೆನ್ಷನ್ ಮಾಡಿಕೊಳ್ಳುತ್ತಾಳೆ. ಇದನ್ನು ನೋಡಿದ ರಾಣಾ ಪ್ರೀತಮ್‌ಗೆ ಕರೆ ಮಾಡುತ್ತಾನೆ. ಪ್ರೀತಮ್ ಕರೆ ಸ್ವೀಕರಿಸುವುದಿಲ್ಲ. ಇನ್ನು ಪಾರು ಹಾಗೂ ಆದಿ ಪ್ರೀತಮ್ ಕರೆದು ಹೇಳುತ್ತಾರೆ ಮೋನಿಕಾ ಮೊಬೈಲ್ ಅನ್ನು ನಾವು ತೆಗೆದುಕೊಂಡಿದ್ದೇವೆ ಇದರಿಂದಾಗಿ ಅವಳ ಪಾಸ್ವರ್ಡ್ ನಮಗೆ ತಿಳಿಯುತ್ತಿಲ್ಲ. ನಿನಗೆ ಏನಾದರು ಗೊತ್ತಾ ಎಂದು ಕೇಳುತ್ತಾನೆ.

ಓಪನ್ ಆಯ್ತಾ ಮೊಬೈಲ್
ಇದನ್ನು ಕೇಳಿದ ಪ್ರೀತಮ್ ಮಾತ್ರ ಮನದಲ್ಲಿ ಯೋಚನೆ ಮಾಡುತ್ತಾನೆ ಮೋನಿಕಾ ಅದೆಷ್ಟು ಬಾರಿ ನನ್ನ ಬಳಿ ಹೇಳಿದಳು ಆದರೆ ನಾನು ಮಾತ್ರ ಅದನ್ನು ನಂಬದಾದೆ ಎಂದು ಮನದಲ್ಲಿ ಹೇಳುತ್ತಾ ಇರುತ್ತಾನೆ. ಇನ್ನು ಆದಿ ಬಳಿ ನನಗೆ ಆಕೆಯ ಪಾಸ್ವರ್ಡ್ ಗೊತ್ತಿಲ್ಲ ಎಂದು ಹೇಳಿದಾಗ ಆದಿ ಪ್ರೀತಮ್ ಬಳಿ ಅವಳು ಹುಟ್ಟಿದ ದಿನವನ್ನು ಕೇಳುತ್ತಾನೆ. ಪ್ರೀತಮ್ ಭಯ ಪಟ್ಟುಕೊಂಡು ಅದನ್ನು ಹೇಳುತ್ತಾನೆ. ಇದನ್ನು ಪಾಸ್ವರ್ಡ್ ಆಗಿ ಬಳಸಿದ ಆದಿಗೆ ಮೋನಿಕಾ ಮೊಬೈಲ್ ಲಾಕ್ ಓಪನ್ ಆಗುತ್ತಾ ಎಂಬುವುದನ್ನು ಕಾದು ನೋಡಬೇಕಿದೆ.