ರಾಣಾಗೆ ಶೂಟ್ ಮಾಡಿ ಕೊಲೆಗಾರನಾದ ಪ್ರೀತು!

By ಪೂರ್ವ

ಅಖಿಲಾಂಡೇಶ್ವರಿ ಆದಿ ಬಳಿ ಬಂದು ತನ್ನ ಮನದ ದುಃಖವನ್ನು ಹೇಳುತ್ತಾಳೆ. ಅದಕ್ಕೆ ಸ್ಪಂದಿಸಿದ ಆದಿ, ಅಮ್ಮ ನೀನು ಏನು ಚಿಂತೆ ಮಾಡಬೇಡ ಪ್ರೀತು ಇನ್ನೂ ಮೇಲೆ ನನ್ನ ಜವಾಬ್ದಾರಿ. ನೀನೇನು ಭಯ ಪಡಬೇಡ ಎಂದು ಹೇಳುತ್ತಾನೆ ಈ ವೇಳೆ ಅಲ್ಲಿಯೇ ಇದ್ದ ಪಾರು ಕೂಡ ಹೇಳುತ್ತಾಳೆ. ಇನ್ನು ಮೇಲೆ ಪ್ರೀತು ನನ್ನ ಜವಾಬ್ದಾರಿ ಅವರ ಬಳಿ ಮನೆಯಲ್ಲಿ ಮಾತನಾಡುವುದಕ್ಕಿಂತ ಮನೆಯಿಂದ ಹೊರ ಹೋಗಿ ಮಾತನಾಡುವುದೇ ಬೆಟರ್ ಎಂದು ಹೇಳುತ್ತಾಳೆ.

ಮನೆಯಿಂದ ಹೊರಗಡೆ ಹೋಗಿ ಮಾತನಾಡಿದರೆ ಪ್ರೀತು ಎಲ್ಲಾ ವಿಚಾರವನ್ನು ಬಾಯಿಬಿಡುವ ಸಾಧ್ಯತೆ ಇದೆ ಎಂದು ಯೋಚನೆ ಮಾಡಿ ಈ ವಿಚಾರವನ್ನು ಪಾರು ಹೇಳಿದಾಗ, ಅಖಿಲಾಂಡೇಶ್ವರಿ ಪಾರುಗೆ ಧನ್ಯವಾದ ಹೇಳುತ್ತಾಳೆ. 'ನನ್ನ ಜವಾಬ್ದಾರಿಯನ್ನು ನೀವು ವಹಿಸಿಕೊಂಡಿದ್ದು ಖುಷಿ ಆಯಿತು ಹಾಗೆಯೇ ನನಗೆ ನಿರಾಳ ಆಯಿತು. ತಾಯಿ ಮನಸನ್ನು ಅರ್ಥ ಮಾಡಿಕೊಂಡ ಪಾರ್ವತಿಗೆ ಧನ್ಯವಾದ ಹೇಳುತ್ತಾಳೆ ಅಖಿಲಾಂಡೇಶ್ವರಿ.

ಪ್ರೀತು ಪುನಃ ತಾಯಿಯ ರೂಮ್ ಬಳಿ ಬಂದು ಕಬೋರ್ಡ್ ಅಲ್ಲಿ ಗನ್ ಹುಡುಕುತ್ತಾನೆ. ಗನ್ ಸಿಕ್ಕಿದ ಒಡನೆಯೇ ಅದನ್ನು ತೆಗೆದುಕೊಂಡು ರಾಣಾನನ್ನು ಹೇಗಾದರೂ ಕೊಲ್ಲಲೇಬೇಕು ಇಲ್ಲವಾದರೆ ನನಗೆ ಮುಕ್ತಿ ಇಲ್ಲ ಎಂದು ಹೇಳುತ್ತ ಹೋಗುತ್ತಾನೆ. ಇನ್ನು ಪ್ರೀತು ಹೊರ ಹೋಗುತ್ತಿರುವುದನ್ನು ನೋಡಿದ ಆದಿ ಪ್ರೀತುವನ್ನು ಜೋರಾಗಿ ಕರೆದರೂ ಪ್ರೀತು ಮಾತ್ರ ಕ್ಯಾರೇ ಎನ್ನದೆ ಅಲ್ಲಿಂದ ಹೋಗುತ್ತಾನೆ.

ರಾಣಾನನ್ನು ಕೊಂದರೆ ಅರುಂಧತಿ ಸುಮ್ಮನಾಗುತ್ತಾಳೆ ಇಲ್ಲವಾದರೆ ಅರುಂಧತಿ ಆಟ ಇನ್ನೂ ಹೆಚ್ಚಾಗುತ್ತದೆ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನು ಆದಿ, ಪ್ರೀತುವನ್ನು ಹಿಂಬಾಲಿಸಿಕೊಂಡು ಬರುತ್ತಾನೆ. ಇದು ಪ್ರೀತುಗೆ ತಿಳಿದಿರುವುದಿಲ್ಲ. ಇನ್ನೂ ಜನನಿ ಕೂಡ ಪ್ರೀತು ನಡವಳಿಕೆಯಿಂದ ಭಯ ಪಟ್ಟುಕೊಳ್ಳುತ್ತಾಳೆ. ಯಾಕೆ ಹೀಗೆ ಆದ ಪ್ರೀತು ಮುಂಚೆ ಈ ರೀತಿ ಇರಲಿಲ್ಲ ಆತ ಇದೀಗ ಆತನ ವರ್ತನೆ ಬದಲಾಗಿ ಹೋಗಿದೆ. ಎನು ಮಾಡುವುದು ಎಂದು ಪಾರು ಬಳಿ ಸಲಹೆ ಕೇಳುತ್ತಾಳೆ.

ಜನನಿಯನ್ನೂ ಸಮಾಧಾನಿಸಿದ ಪಾರು

ಜನನಿಯನ್ನೂ ಸಮಾಧಾನಿಸಿದ ಪಾರು

ಅತ್ತೆಮ್ಮ ಎಲ್ಲ ಹೇಳಿದರು ಇನ್ನೂ ಮೇಲೆ ಪ್ರೀತು ನಮ್ಮ ಜವಬ್ದಾರಿ ಆತನಿಗೆ ಏನು ಆಗುವುದಿಲ್ಲ. ಯಾವುದೇ ತೊಂದರೆಯಲ್ಲಿ ಸಿಲುಕಿದ್ದರು ಯಜಮಾನರು ಅವರನ್ನು ಕಾಪಾಡುತ್ತಾರೆ. ಅವರನ್ನು ಮೀಟ್ ಮಾಡಲೆಂದು ಅವರು ಹೋಗಿದ್ದಾರೆ ಖಂಡಿತವಾಗಿಯು ಅವರು ಇಬ್ಬರು ಒಟ್ಟಾಗಿ ಬರುತ್ತಾರೆ ನೋಡುತ್ತೀರಿ ಎಂದು ಸಮಾಧಾನ ಮಾಡುತ್ತಾಳೆ ಇದರಿಂದ ಖುಷಿಯಾಗಿ ಪಾರುವನ್ನು ತಬ್ಬಿಕೊಳ್ಳುತ್ತಾಳೆ ಜನನಿ. ಇದನ್ನೆಲ್ಲಾ ಯಾಮಿನಿ ನೋಡುತ್ತಾ ಇರುತ್ತಾಳೆ.

ಅರುಂಧತಿ ಬಳಿ ಖುಷಿ ಹಂಚಿಕೊಂಡ ರಾಣಾ

ಅರುಂಧತಿ ಬಳಿ ಖುಷಿ ಹಂಚಿಕೊಂಡ ರಾಣಾ

ಇನ್ನು ರಾಣಾ, ಅರುಂಧತಿ ಬಳಿ ಖುಷಿಯಿಂದ ಹೇಳುತ್ತಾ ಇರುತ್ತಾನೆ ಅಬ್ಬಾ ನಾನು ಜೀವ ಅಪಾಯದಿಂದ ಪಾರಾಗಿದ್ದೇನೆ ಇನ್ನೇನು ತೊಂದರೆ ಇಲ್ಲ. ಎಲ್ಲಾ ಆರಾಮವಾಗಿ ಆಗುತ್ತಿದೆ. ಆ ಪ್ರೀತು ಹೇಗೆಲ್ಲಾ ಆಟ ಆಡಿಸುತ್ತೇನೆ ನೋಡುತ್ತಿರು ಎಂದು ಹೇಳುತ್ತಾರೆ. ಇದನ್ನು ಕೇಳಿದ ಅರುಂಧತಿ ಜಾಸ್ತಿ ಖುಷಿ ಪಡಬೇಡ ಜಾಗೃತೆ ಎಂದು ಹೇಳುತ್ತಾಳೆ. ಬಳಿಕ ರಾಣಾ ಸ್ವಲ್ಪ ಕೆಲಸ ಇದೆ ಎಂದು ಮನೆಯಿಂದ ತೆರಳುತ್ತಾನೆ.

ರಾಣಾನನ್ನು ಹಿಂಬಾಲಿಸಿದ ಪ್ರೀತು

ರಾಣಾನನ್ನು ಹಿಂಬಾಲಿಸಿದ ಪ್ರೀತು

ಇನ್ನು ದಾರಿ ಮಧ್ಯೆ ಪ್ರೀತು, ರಾಣಾನನ್ನು ನೋಡುತ್ತಾನೆ. ಆತನ ಕಥೆಯನ್ನು ಮುಗಿಸಬೇಕು ಎಂದು ತರಾತುರಿಯಲ್ಲಿ ಹೋಗುತ್ತಿರುತ್ತಾನೆ ಪ್ರೀತು. ಇದನ್ನೆಲ್ಲ ನೋಡಿದ ಆದಿ, ಪ್ರೀತು ಯಾರನ್ನು ಹಿಂಬಾಲಿಸುತ್ತಾ ಇದ್ದಾನೆ. ಎಂದು ಹೇಳುತ್ತ ಆತ ಹೋದ ಕಡೆಗೆ ಹೋಗುತ್ತಾನೆ ಪ್ರೀತು. ಆ ವೇಳೆ ಆದಿ ಕಾರಿಗೆ ಸ್ಕೂಟರ್ ಅಡ್ಡ ಬರುತ್ತದೆ. ಪ್ರೀತು ಅಲ್ಲಿಂದ ಆದಿಗೆ ಕಾಣಿಸಲಿಲ್ಲ. ಇತ್ತ ಅಖಿಲಾ, ಆದಿಗೆ ಕರೆ ಮಾಡಿ ಏನಪ್ಪ ಮಾತನಾಡಿಸಿದೆಯ ಎಂದು ಕೇಳಿದಾಗ ಇಲ್ಲ ಅಮ್ಮ ಮಾತನಾಡಿಸಬೇಕಷ್ಟೆ ಇನ್ನೂ ಪ್ರೀತು ಯಾರನ್ನೋ ಹುಡುಕುತ್ತಾ ಬಂದಿದ್ದಾನೆ. ಅವನನ್ನು ನಾನು ಫಾಲೋ ಮಾಡುತ್ತಾ ಹೋಗುತ್ತಿದ್ದೇನೆ ಎಂದು ಹೇಳುತ್ತಾನೆ.

ಶೂಟ್ ಮಾಡಿದ ಪ್ರೀತು

ಶೂಟ್ ಮಾಡಿದ ಪ್ರೀತು

ಪ್ರೀತು ಆದಿ ಮುಂದೇನೆ ಪಾಸ್ ಆಗುತ್ತಾನೆ. ಆಗ ಆದಿ ಅಮ್ಮ ಮತ್ತೆ ಎಲ್ಲಾ ವಿಚಾರ ಹೇಳುತ್ತೇನೆ ಪ್ರೀತು ಈಗ ತಾನೇ ಹೋದ ಎಂದಾಗ ಅಖಿಲಾ ಜಾಗೃತೆ ಎಂದು ಕಿವಿ ಮಾತು ಹೇಳುತ್ತಾರೆ ಬಳಿಕ ಆದಿ ಅಲ್ಲಿಂದ ಹೊರಟು ಬಿಡುತ್ತಾನೆ. ಇನ್ನು ರಾಣಾ ಎಲ್ಲಿಗೆ ಹೋದ ಅಲ್ಲಿಗೆ ಹಿಂಬಾಲಿಸಿಕೊಂಡು ಹೋಗುತ್ತಾನೆ ಪ್ರೀತು ರಾಣಾನಿಗೆ ಮಾತ್ರ ಇದರ ಅರಿವೇ ಇರಲಿಲ್ಲ. ರಾಣಾ ಅರುಂಧತಿ ಬಳಿ ಮಾತನಾಡುತ್ತಿರುವ ವೇಳೆ ಪ್ರೀತುವನ್ನು ನೋಡುತ್ತಾನೆ ಆತನ ಕೈಯಲ್ಲಿ ಗನ್ ಇರುತ್ತದೆ ಆಗ ಪ್ರೀತು ಎಂದು ಹೇಳುತ್ತಾನೆ ರಾಣಾ. ಆ ವೇಳೆ ಪ್ರೀತು ಗನ್ ನಿಂದಾ ರಾಣಾಗೆ ಶೂಟ್ ಮಾಡುತ್ತಾನೆ ಮುಂದೆ ಏನಾಗುತ್ತದೆ ಕಾದು ನೋಡಬೇಕಿದೆ.

English summary
Kannada serial Paaru written updated on 13th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X