ಅಪ್ಪ ಅಮ್ಮ ಮಾತನಾಡುವುದನ್ನು ಕದ್ದು ಕೇಳಿಸಿಕೊಂಡ ಆದಿ! ಮುಂದೇನು ಮಾಡುತ್ತಾನೆ?
ಆದಿ ಗೆ ಎರಡನೇ ಮದುವೆ ಆಗುವ ಯೋಗ ಇದೆ ಎಂದು ಸ್ವಾಮೀಜಿ ಹೇಳಿದ ಮೇಲಂತೂ 'ಪಾರು' ಧಾರಾವಾಹಿ ವೀಕ್ಷಕರಿಗೆ ಕಾತರತೆ ಹೆಚ್ಚಾಗಿದೆ ಅಂತೆಯೇ ಅಖಿಲಾಂಡೇಶ್ವರಿಗೆ ಆತಂಕ ಶುರು ಆಗಿದೆ, ನನ್ನ ಮುತ್ತಿನಂತಹ ಸೊಸೆಯನ್ನು ಕಳೆದುಕೊಳ್ಳುವ ಸಂದರ್ಭ ಬರುತ್ತದೆ ಎಂದು ಆತಂಕಿತಳಾಗಿದ್ದಾಳೆ.
ಅಖಿಲಾಂಡೇಶ್ವರಿ ಆತಂಕದಲ್ಲಿರುವಾಗ ರಘು ಬಂದು ಏನಾಯ್ತು ಯಾಕೆ ಈ ರೀತಿ ವರ್ತಿಸುತ್ತಿದ್ದೀಯ? ಎಂದು ಕೇಳುತ್ತಾನೆ. ಆದರೆ ಇದಕ್ಕೆ ಏನು ಹೇಳಬೇಕು ಎಂದು ತಿಳಿಯದೇ ಅಖಿಲಾಂಡೇಶ್ವರಿ ಸುಮ್ಮನಾಗುತ್ತಾರೆ. ಏನೋ ಒಂದು ಸಬೂಬು ಹೇಳಿ ಅಲ್ಲಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಇದನ್ನು ಕೇಳಿದ ರಘು ಗೆ ಅಖಿಲಾಂಡೇಶ್ವರಿ ಮೇಲೆ ಸಂಶಯ ಬರುತ್ತದೆ. ಇತ್ತ ಆದಿ, ಪ್ರೀತೂ, ಜನನಿ ಮಾತನಾಡುತ್ತಾ ಕುಳಿತಿರುತ್ತಾರೆ. ನಾಳೆ ಡಾಕ್ಟರ್ ಬರುತ್ತಿದ್ದಾರೆ ಪಾರುಗೆ ಈ ವಿಚಾರ ತಿಳಿಸಬೇಡಿ ಎಂದೆಲ್ಲ ಹೇಳುತ್ತಾನೆ. ಅದಕ್ಕೆ ಪ್ರೀತೂ ಜನನಿ ಇಬ್ಬರು ಸಾಥ್ ನೀಡುತ್ತಾರೆ.
ಇತ್ತ ಅಖಿಲಾಂಡೇಶ್ವರಿ ಎಲ್ಲರ ಹೆಲ್ತ್ ಚೆಕಪ್ ಮಾಡಲು ನಿರ್ಧಾರ ಮಾಡುತ್ತಾಳೆ. ಬಳಿಕ ಎಲ್ಲರನ್ನೂ ಕರೆದು ಹೇಳುತ್ತಾಳೆ. ಇವತ್ತು ಯಾರು ಎಲ್ಲಿಗೂ ಹೋಗುವ ಹಾಗೆ ಇಲ್ಲ. ಎಲ್ಲರ ಹೆಲ್ತ್ ಚೆಕಪ್ ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಮನೆ ಮಂದಿ ಎಲ್ಲಿಯೂ ಹೋಗುವುದಿಲ್ಲ. ಬಳಿಕ ಡಾಕ್ಟರ್ ಹಾಗೂ ಒಬ್ಬ ದಾದಿ ಬರುತ್ತಾರೆ. ಇದನ್ನು ಕಂಡು ಪಾರು ಗೆ ಬಹಳ ಭಯ ಆಗುತ್ತದೆ. ಎಲ್ಲಾದರೂ ಹೋಗಿ ಬಿಡೋಣ ಅಂದರೆ ಅಖಿಲಮ್ಮ ಎಲ್ಲೂ ಹೋಗ ಬಾರದು ಎಂದು ಹೇಳಿದ್ದಾರೆ ಇನ್ನೂ ಎಲ್ಲಿಗೆ ಹೋಗುವುದು ಎಂದು ಹೇಳುತ್ತಾಳೆ. ಪಾರು ಜೊತೆ ಜನನಿ ಇದ್ದು ಎಷ್ಟೇ ಸಮಾಧಾನದ ಮಾತುಗಳನ್ನು ಹೇಳಿದರು ಆಕೆ ಮಾತ್ರ ಅದನ್ನಾವುದನ್ನು ಕೇಳದೆ ಬಹಳ ಭಯ ಪಟ್ಟುಕೊಳ್ಳುತ್ತಾಳೆ.

ಸಮಾಧಾನ ಮಾಡಿದ ಜನನಿ
ಪಾರುವನ್ನು ನೋಡಿ ಎಲ್ಲರೂ ನಗುತ್ತಾರೆ. ಎಲ್ಲರ ಹೆಲ್ತ್ ಚೆಕಪ್ ನಿಧಾನವಾಗಿ ನಡೆಯುತ್ತಿತ್ತು. ಈ ವೇಳೆಯಂತು ಪಾರುವನ್ನು ಜನನಿ ಹಾಗೂ ಆದಿ ಇಬ್ಬರು ಆಕೆಯ ಕೈ ಯನ್ನು ಭಿಗಿಯಾಗಿ ಹಿಡಿಯುತ್ತಾರೆ. ಇದನ್ನು ನೋಡಿದ ಅಖಿಲಾಂಡೇಶ್ವರಿ ಸಮಾಧಾನ ಪಡಿಸುತ್ತಾರೆ. ಕೊನೆಗೆ ಜನನಿ ಹಾಗೂ ಆದಿಯ ಟೆಸ್ಟ್ ಕೂಡ ನಡೆಯುತ್ತೆ. ಬ್ಲಡ್ ಸ್ಯಾಂಪಲ್ ಅನ್ನು ತೆಗೆದುಕೊಳ್ಳುತ್ತಾರೆ. ಬಳಿಕ ಪಾರುವಿನ ಸರದಿ. ಪಾರೂವನ್ನು ಅಖಿಲಾಂಡೇಶ್ವರಿ ಕರೆಯುತ್ತಾರೆ. ಆಕೆಗೆ ಎಲ್ಲಾ ತರದ ಟೆಸ್ಟ್ ಗಳನ್ನು ಮಾಡಿಸುತ್ತಾರೆ. ಬಳಿಕ ಅಖಿಲಾಂಡೇಶ್ವರಿ ಹೇಳುತ್ತಾರೆ. ಧೈರ್ಯವಾಗಿ ಇರು ನನ್ನ ತಬ್ಬಿ ಹಿಡಿದುಕೊ ಎಂದು ಹೇಳುತ್ತಾಳೆ. ಪಾರು ಗಟ್ಟಿಯಾಗಿ ಅಖೀಲಾಂಡೇಶ್ವರಿಯನ್ನು ತಬ್ಬಿ ಹಿಡಿದುಕೊಳ್ಳುತ್ತಾಳೆ. ಬಳಿಕ ಡಾಕ್ಟರ್ ತಮ್ಮ ಕೆಲಸವನ್ನು ಮುಂದುವರೆಸುತ್ತಾರೆ.

ಅಖಿಲಾಂಡೇಶ್ವರಿಯನ್ನು ತಬ್ಬಿ ಹಿಡಿದುಕೊಂಡ ಪಾರು
ಬಳಿಕ ಪಾರು ನಸುನಗುತ್ತಾ ಇರುತ್ತಾಳೆ. ಇಷ್ಟಕ್ಕೆ ನಾನು ಭಯ ಪಟ್ಟೂಕೊಂಡೆನಾ ಎಂದು ಮನದಲ್ಲಿ ನಾಚಿಕೆ ಪಟ್ಟುಕೊಳ್ಳುತ್ತಾಳೆ. ಬಳಿಕ ಡಾಕ್ಟರ್ ಅಲ್ಲಿಂದ ತೆರಳುತ್ತಿರುವ ವೇಳೆ ಡಾಕ್ಟರ್ ಬಳಿ ಬಂದ ಅಖಿಲಾ, ಪಾರುವಿನ ಬ್ಲಡ್ ರಿಪೋರ್ಟ್ ವಿಸ್ತಾರವಾಗಿ ನನಗೆ ಬೇಕು ಏನೆಲ್ಲಾ ಟೆಸ್ಟ್ ಮಾಡಿಸಬೇಕು ಅದನ್ನೆಲ್ಲ ಮಾಡಿ. ನಿಮ್ಮ ಲ್ಯಾಬ್ ನಲ್ಲಿ ಆ ವ್ಯವಸ್ಥೆ ಇಲ್ಲ ಎಂದರೆ ಬೇರೆ ಆಸ್ಪತ್ರೆಯಲ್ಲಿ ತೋರಿಸಿ ಎಂದೆಲ್ಲಾ ಹೇಳುತ್ತಾಳೆ. ಆಗ ಡಾಕ್ಟರ್ ಸರಿ ನಾನು ಆದಷ್ಟು ಬೇಗ ರಿಪೋರ್ಟ್ ಕೊಡುತ್ತೇನೆ ಎಂದು ಹೇಳಿ ಅಲ್ಲಿಂದ ತೆರಳುತ್ತಾರೆ. ಇದನ್ನು ಕಂಡ ರಘು ಗೆ ಶಾಕ್ ಆಗುತ್ತದೆ.

ಅಖಿಲ ಮಾತಿಗೆ ಶಾಕ್ ಆದ ರಘು
ಅಖೀಲಾಂಡೇಶ್ವರಿಯನ್ನು ಕರೆದು ಏನಿದೆಲ್ಲ ಎಂದು ಕೇಳುತ್ತಾನೆ. ರಘುವನ್ನು ನೋಡಿ ಅಖೀಲಾಂಡೇಶ್ವರಿಗೆ ಶಾಕ್ ಆಗುತ್ತದೆ. ಬಳಿಕ ಅಲ್ಲಿಂದ ರಘುವನ್ನು ಒಳಗೆ ಕರೆದುಕೊಂಡು ಹೋಗುತ್ತಾಳೆ. ಇದನ್ನೆಲ್ಲ ಕದ್ದು ಆದಿ ನೋಡಿ ಶಾಕ್ ಆಗುತ್ತಾನೆ. ಏನು ಅರ್ಥ ಆಗದೆ ಅಮ್ಮ ಅಪ್ಪ ಮಾತನಾಡುವುದನ್ನು ಕದ್ದು ಕೇಳಿಸಿಕೊಳ್ಳುತ್ತಾನೆ. ಅಖಿಲ ಏನಿದೆಲ್ಲ ಎಂದು ಕೇಳುತ್ತಾರೆ ರಘು. ಅದಕ್ಕೆ ಅಳುತ್ತಾ ನಾನು ಈ ರೀತಿ ಮಾಡಲು ಕಾರಣ ಇದೆ ಆದಿಗೆ ಎರಡನೇ ಮದುವೆ ಯೋಗ ಇದೆಯಂತೆ ಸ್ವಾಮೀಜಿ ಹೇಳಿದರು ಎಂದು ಹೇಳುತ್ತಾಳೆ. ಇದನ್ನು ಕೇಳಿ ರಘು ಗೆ ಶಾಕ್ ಆಗುತ್ತದೆ. ಬಳಿಕ ಹೇಳುತ್ತಾ ಇದೆ ಕಾರಣಕ್ಕೆ ಪಾರುವಿನ ಹೆಲ್ತ್ ಚೆಕಪ್ ಮಾಡಿಸಿದ್ದು ಅದಕ್ಕಾಗಿ ಈ ನಾಟಕ ಎಂದೆಲ್ಲ ಹೇಳುತ್ತಾಳೆ. ಇದನ್ನೆಲ್ಲ ಕೇಳಿ ಆದಿಗೆ ಶಾಕ್ ಆಗುತ್ತದೆ


Click it and Unblock the Notifications











