For Quick Alerts
  ALLOW NOTIFICATIONS  
  For Daily Alerts

  ಅಮ್ಮ ಅಖಿಲಾಂಡೇಶ್ವರಿಯ ಬಗ್ಗೆ ಆದಿಗೆ ಅನುಮಾನ!

  By ಪೂರ್ವ
  |

  'ಪಾರು' ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದೆ. ಅತ್ತಿಗೆ ಮೈದುನರಾದ ಪಾರು, ಪ್ರೀತೂ ಜಗಳ ಮರೆತು ಮತ್ತೆ ಮೊದಲಿನಂತಾಗಿದ್ದಾರೆ. ಆದರೆ ಅಖಿಲಾಂಡೇಶ್ವರಿ ಮಾತ್ರ ಮಗನ ಜಾತಕದ ವಿಷಯವಾಗಿ ಬಹಳ ತಲೆ ಕೆಡಿಸಿಕೊಂಡಿದ್ದಾರೆ.

  ಅಖಿಲಾಂಡೇಶ್ವರಿಗೆ ಸಮಾಧಾನ ಹೇಳುವ ಕಾರ್ಯವನ್ನು ರಘು ಮಾಡುತ್ತಿದ್ದಾರೆ. ಎಲ್ಲಾ ವಿಚಾರಗಳಲ್ಲೂ ರಘು ಅಖಿಲಾಂಡೇಶ್ವರಿಗೆ ಸಾಂತ್ವನ ಹೇಳುತ್ತಲೆ ಬಂದಿದ್ದಾರೆ. ಅಖಿಲಾಂಡೇಶ್ವರಿಯ ಎಲ್ಲಾ ಏಳು ಬೀಳುಗಳಲ್ಲಿ ರಘು ಸಾಥ್ ನೀಡುತ್ತಾ ಬಂದಿದ್ದಾರೆ. ರಘು, ಅಖಿಲಾಂಡೇಶ್ವರಿ ಬಳಿ ಆಣೆ ಪ್ರಮಾಣ ಹಾಕಿಸಿಕೊಂಡ ಬಳಿಕ ಎಲ್ಲಾ ವಿಚಾರವನ್ನು ಹೇಳುತ್ತಾಳೆ. ಸ್ವಾಮೀಜಿ ಬಂದಿದ್ದು ಜಾತಕದ ಬಗ್ಗೆ ಹೇಳಿದ್ದು ಎಲ್ಲವೂ ಹೇಳುತ್ತಾಳೆ.

  ಇದನ್ನು ಕೇಳಿಸಿಕೊಂಡ ಆದಿ ಮಾತ್ರ ಅಮ್ಮ, ಪಾರುವನ್ನು ಸೊಸೆ ಎಂದು ಒಪ್ಪಿಕೊಳ್ಳೋದಿಲ್ಲ. ಅದಕ್ಕೆ ಇದೀಗ ಜಾತಕದ ಹೆಸರು ಹೇಳಿ ನಂಬಿಸಿ ನನಗೆ ಇನ್ನೊಂದು ಮದುವೆ ಮಾಡುವ ಪ್ಲಾನ್ ಇದೆ ಅನ್ನಿಸುತ್ತದೆ ಎಂದುಕೊಂಡು ಆಲೋಚನೆ ಮಾಡಿ ಅಲ್ಲಿಂದ ಹೋಗುತ್ತಾನೆ. ಮಗನ ಜಾತಕದ ವಿಷಯ ಕೇಳಿ ರಘುಗೆ ಸ್ವಲ್ಪ ತಲೆಬಿಸಿ ಆಗುತ್ತದೆ. ಅಖಿಲ ಬಳಿ ನೀನು ಯಾಕೆ ಪಾರ್ವತಿಯ ಬಗ್ಗೆ ಇಷ್ಟು ತಲೆಕೆಡಿಸಿಕೊಂಡಿದ್ದಿಯಾ ಎಂದೆಲ್ಲ ಕೇಳುತ್ತಾನೆ. ಇದನ್ನು ಕೇಳಿ ಅಖಿಲಾಂಡೇಶ್ವರಿ ಹೇಳುತ್ತಾಳೆ ಆಕೆ ನನ್ನ ಸೊಸೆ ಅದಕ್ಕಾಗಿ ಅಷ್ಟೆಲ್ಲ ತಲೆಕೆಡಿಸಿಕೊಳ್ಳೋ ಪರಿಸ್ಥಿತಿ ಬಂದಿದೆ ಎನ್ನುತ್ತಾಳೆ. ಆಕೆಗೆ ಏನಾದರು ಆರೋಗ್ಯದ ಸಮಸ್ಯೆ ಬರಬಹುದೇ ಎಂದುಕೊಂಡು ಪರೀಕ್ಷೆ ಮಾಡಿಸಿದೆ ಯಾರಿಗೂ ಅನುಮಾನ ಬರಬಾರದೆಂದು ಆಕೆಯೊಟ್ಟಿಗೆ ಎಲ್ಲರಿಗೂ ಪರೀಕ್ಷೆ ಮಾಡಿಸಿದೆ ಎಂದು ಅಳುತ್ತಾಳೆ.

  ರಘು ಮುಂದೆ ಪಾರ್ವತಿಯನ್ನು ಸೊಸೆ ಎಂದು ಒಪ್ಪಿಕೊಂಡ ಅಖಿಲ

  ರಘು ಮುಂದೆ ಪಾರ್ವತಿಯನ್ನು ಸೊಸೆ ಎಂದು ಒಪ್ಪಿಕೊಂಡ ಅಖಿಲ

  ಇದನ್ನು ಕೇಳಿದ ರಘು ಬಹಳ ಸಂತಸ ಆಗುತ್ತದೆ. ಕೊನೆಗೂ ಅಖಿಲ, ಪಾರುವನ್ನು ಸೊಸೆ ಎಂದು ಒಪ್ಪಿಕೊಂಡಳು ಎಂದು ಖುಷಿ ಪಡುತ್ತಾನೆ. ಇತ್ತ ಆದಿಗೆ ಡಾಕ್ಟರ್ ಕರೆ ಮಾಡಿ ನಿಮ್ಮೆಲ್ಲರ ರಕ್ತ ಪರೀಕ್ಷೆ ಮಾಡಿದೆ ಭಯ ಪಡುವ ಅಗತ್ಯ ಇಲ್ಲ. ಹಾಗೆಯೇ ಪಾರ್ವತಿ ಅವರ ರಕ್ತ ಪರೀಕ್ಷೆ ಮಾಡಲು ಹೇಳಿದ್ದಾರೆ ಅದನ್ನು ಮಾಡಿದ್ದೇನೆ. ಆಕೆ ಬಹಳ ಆರೋಗ್ಯವಾಗಿದ್ದಾರೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಆದಿಗೆ ಬಹಳ ಖುಷಿ ಆಗುತ್ತದೆ. ಡಾಕ್ಟರ್ ಹೇಳುತ್ತಾರೆ ಪರೀಕ್ಷೆ ಮಾಡಿದ ಎಲ್ಲ ರಿಪೋರ್ಟ್ ಅನ್ನು ನಿಮಗೆ ಆದಷ್ಟು ಬೇಗ ಕಳುಹಿಸುತ್ತೇನೆ ಅಮ್ಮನಿಗೆ ನೀವೇ ತಿಳಿಸಿ ಬಿಡಿ ಎಂದು ಹೇಳುತ್ತಾರೆ.

  ಪಾರು ಆರೋಗ್ಯದಲ್ಲಿ ಸಮಸ್ಯೆ ಇಲ್ಲ

  ಪಾರು ಆರೋಗ್ಯದಲ್ಲಿ ಸಮಸ್ಯೆ ಇಲ್ಲ

  ಬಳಿಕ ಅಮ್ಮನ ಬಳಿಗೆ ಹೋಗಿ, ಅಮ್ಮ ಅಪ್ಪ ಇನ್ನೂ ಮಾತನಾಡುವುದರಲ್ಲಿ ನಿರತನಾಗುತ್ತಾರೆ. ಇದನ್ನು ಕಂಡು ಆದಿ ಅಖಿಲಾಂಡೇಶ್ವರಿ ಬಳಿ ಬರುತ್ತಾನೆ ಆದಿಯನ್ನು ಕಂಡು ಅಖಿಲ ಏನೆಂದು ಕೇಳುತ್ತಾಳೆ. ಅದಕ್ಕೆ ಆದಿ ಹೇಳುತ್ತಾನೆ ಡಾಕ್ಟರ್ ಕರೆ ಮಾಡಿ ಇದ್ದರೂ ಅದಕ್ಕಾಗಿ ನಿಮ್ಮ ಬಳಿ ಬಂದೆ ಎಂದು ಹೇಳುತ್ತಾನೆ ಆದಕ್ಕೆ ಅಖಿಲಾಂಡೇಶ್ವರಿ ಕೇಳುತ್ತಾರೆ ಎನು ಹೇಳಿದರು ಡಾಕ್ಟರ್ ಪಾರು ಆರೋಗ್ಯದ ವಿಚಾರವಾಗಿ ಏನಾದರು ಹೇಳಿದರಾ ಎಂದೆಲ್ಲ ಹೇಳುತ್ತಾರೆ.

  ಪಾರು ಆರೋಗ್ಯ ವಿಚಾರಿಸಿದ ಅಖಿಲ

  ಪಾರು ಆರೋಗ್ಯ ವಿಚಾರಿಸಿದ ಅಖಿಲ

  ಇದನ್ನು ಕೇಳಿದ ಆದಿ ಹೇಳುತ್ತಾನೆ ಪಾರು ಆರೋಗ್ಯವಾಗಿದ್ದಾಳೆ ಎಂದು ಡಾಕ್ಟರ್ ಹೇಳಿದರು. ಅಮ್ಮ ನನ್ನೊಂದಿಗೆ ಪಾರು ಯಾವತ್ತೂ ಇರುತ್ತಾರೆ ಅಲ್ವಾ ಎಂದು ಕೇಳುತ್ತಾಳೆ. ಇದನ್ನು ಕೇಳಿ ಅಖಿಲಾಂಡೇಶ್ವರಿಗೆ ಅನುಮಾನ ಮೂಡುತ್ತದೆ. ಯಾಕೆ ಹೀಗೆ ಹೇಳುತ್ತಿರಬಹುದು ಎಂದೆಲ್ಲ ಯೋಚನೆ ಮೂಡುತ್ತದೆ. ಬಳಿಕ ಅಲ್ಲಿಂದ ತೆರಳಿದ ಆದಿಯನ್ನು ಜನನಿ ಬಹಳ ಉತ್ಸಾಹದಿಂದ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ನಡೆಯುತ್ತಿದ್ದ ದೃಶ್ಯವನ್ನೂ ನೋಡಿ ಜನನಿ ಆದಿ ಬಹಳ ಖುಷಿ ಪಡುತ್ತಾರೆ.

  ಪಾರು ಪ್ರೀತೂವನ್ನು ಒಟ್ಟಿಗೆ ನೋಡಿ ಖುಷಿ ಪಟ್ಟ ಜನನಿ

  ಪಾರು ಪ್ರೀತೂವನ್ನು ಒಟ್ಟಿಗೆ ನೋಡಿ ಖುಷಿ ಪಟ್ಟ ಜನನಿ

  ಪ್ರೀತೂ ಹಾಗೂ ಪಾರು ಖುಷಿಯಿಂದ ಮಾತನಾಡುತ್ತಾ ಸ್ವೀಟ್ ತಿನ್ನುತ್ತಾ ಇರುತ್ತಾರೆ ಇದನ್ನು ನೋಡಿ ಎಲ್ಲರೂ ಖುಷಿ ಪಡುತ್ತಾರೆ. ಅರುಂಧತಿ ಪ್ರೀತೂಗೆ ಕರೆ ಮಾಡುತ್ತಾಳೆ. ಆದರೆ ಪ್ರೀತೂ ಮಾತ್ರ ಅವರ ಕರೆ ಸ್ವೀಕರಿಸದೆ ಸುಮ್ಮನಾಗುತ್ತಾರೆ. ಪ್ರೀತೂಗೆ ಇನ್ನಷ್ಟು ಮಾನಸಿಕ ಮಾಡುವ ಎಲ್ಲಾ ಹುನ್ನಾರ ನಡೆಯುತ್ತಿದೆ. ಅರುಂಧತಿ ಉದ್ದೇಶ ಇಷ್ಟೇ ಅಖಿಲಾಂಡೇಶ್ವರಿ ಮನೆಯನ್ನು ನುಚ್ಚು ನೂರು ಮಾಡಬೇಕು ಎಂದೆಲ್ಲ ಯೋಚನೆಗಳು ಆಕೆಯ ಬಳಿ ಮೂಡಿ ಬರುವುದಂತು ಸತ್ಯ.

  English summary
  Kannada serial Paaru written updated on 13th September Episode. Know more about it.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X