Don't Miss!
- Sports
IND vs NZ: ಮುಂದಿನ 2 ಪಂದ್ಯಗಳು ಈತನಿಗೆ ನಿರ್ಣಾಯಕ; ದಿನೇಶ್ ಕಾರ್ತಿಕ್ ಎಚ್ಚರಿಕೆ
- News
Breaking; ನಂದಿ ಹಿಲ್ಸ್ನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ 112 ತಂಡ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Finance
7th Pay Commission update news: ಕೇಂದ್ರ ಬಜೆಟ್ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೋನಿಕಾಗೆ ಮತ್ತೆ ಶಾಕ್ ಕೊಟ್ಟ ಜನನಿ, ಎಲ್ಲ ಪ್ಲ್ಯಾನ್ ಪಾರುಳದ್ದೇ!
ಮೋನಿಕಾ ಮೊಬೈಲ್ ಪಾಸ್‌ವರ್ಡ್ ಕಂಡುಹಿಡಿಯಲಾಗದೆ ಆದಿ, ಪಾರು ಆಗದೆ ತಲೆ ಕೆಡಿಸಿಕೊಳ್ಳುತ್ತಾರೆ. ಆದಿಗೆ ತನ್ನ ತಮ್ಮನ ಮನದಲ್ಲಿ ಏನು ಓಡುತ್ತಿದೆ ಎಂದು ಯೋಚನೆ ಮಾಡುವ ವೇಳೆ ಪ್ರೀತಮ್ ಅಲ್ಲೇ ಇರುತ್ತಾನೆ ಆತನ ಬಳಿಯೇ ಏನಾಯಿತು ಪ್ರೀತಮ್ ಎನು ಯೋಚನೆ ಮಾಡುತ್ತಾ ಇದ್ದೀಯಾ? ನಿನ್ನ ಮನದಲ್ಲಿ ಏನು ನಡೆಯುತ್ತಿದೆ ಎಂಬ ವಿಚಾರ ನನ್ನ ಬಳಿ ದಯಮಾಡಿ ಹೇಳಿ ಬಿಡು ಎಂದು ಹೇಳುತ್ತಾನೆ ಇದನ್ನು ಕೇಳಿದ ಪ್ರೀತಮ್ ಮನದಲ್ಲಿ ಯೋಚನೆಗೆ ತೊಡಗುತ್ತಾನೆ.
'ಹೌದು, ನಾನು ಯಾಕೆ ಸುಮ್ಮನೆ ಇದ್ದೇನೆ. ಮನದಲ್ಲಿ ಎಷ್ಟೆಲ್ಲ ಕಷ್ಟ ಅನುಭವಿಸುವುದಕ್ಕಿಂತ ಇದನ್ನು ಹೇಳಿ ಬಿಡುವುದು ಉತ್ತಮ ಎಂದು ಕೊಂಡು ಅಣ್ಣನನ್ನು ತಬ್ಬಿಕೊಳ್ಳುತ್ತಾನೆ. ಇತ್ತ ಪ್ರೀತಮ್ ಹಾಗೂ ಜನನಿ ಇಬ್ಬರು ನಡೆದುಕೊಂಡು ಬರಬೇಕಾದರೆ ಪ್ರೀತಮ್ ಮೊಬೈಲ್‌ಗೆ ಕರೆ ಬರುತ್ತದೆ ಇದನ್ನು ನೋಡಿದ ಪ್ರೀತಮ್, ಭಾಗ್ಯ ಯಾಕೆ ಕಾಲ್ ಮಾಡಿದಳು ಎಂದುಕೊಂಡು ಹಲೋ ಭಾಗ್ಯ ಎಂದಾಗ ಅತ್ತ ಕಡೆಯಿಂದ ಮೋನಿಕಾ ಧ್ವನಿ ಕೇಳಿಸುತ್ತದೆ.
ಅತ್ತಕಡೆಯಿಂದ ಮೋನಿಕಾ, ಇದು ಭಾಗ್ಯ ಅಲ್ಲ, ನಿನ್ನ ಮೋನಿಕಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪ್ರೀತಮ್ ಕೊಂಚ ಶಾಕ್ ಆಗುತ್ತಾನೆ. ಬಳಿಕ ಮಾತು ಮುಂದುವರಿಸಿದ ಮೋನಿಕಾ, 'ಈಗ ಏನು ಮಾಡು ಎಂದರೆ ನನ್ನ ರೂಮಿಗೆ ಊಟ ತೆಗೆದುಕೊಂಡು ಬರುತ್ತೀಯಾ, ಇಲ್ಲ ಅಂದರೆ ಗೊತ್ತಲ್ವಾ. ಬೇಗ ಬಾ ಕಾಯುತ್ತಾ ಇರುತ್ತೇನೆ ಎಂದು ಹೇಳಿ ಫೋನ್ ಇಡುತ್ತಾಳೆ. ಇನ್ನು ಮೋನಿಕಾ ಬಳಿಗೆ ಪ್ರೀತಮ್ ಊಟ ತೆಗೆದುಕೊಂಡು ಬರುತ್ತಾನೆ.

ಮೋನಿಕಾಗೆ ಊಟ ತಂದುಕೊಟ್ಟ ಪ್ರೀತಮ್
ಇದನ್ನು ನೋಡಿದ ಮೋನಿಕಾ, ನೀನಾಗಿ ನೀನು ಈ ಮನೆಯ ಹೊರಗಡೆ ಕಳುಹಿಸುವವರೆಗೂ ನಾನು ಹೀಗೆಯೇ ಆಡುತ್ತಾ ಇರುತ್ತೇನೆ. ಯಾವ ಕ್ಷಣದಲ್ಲಿ ಹೆಂಡತಿಗೆ ಈ ವಿಚಾರ ಗೊತ್ತಾಗುತ್ತೋ ಎಂದು ಭಯದಲ್ಲಿ ಇರಬೇಕು ಎಂದು ಹೇಳಿ ಹಲ್ಲು ಮಸೆಯುತ್ತಾಳೆ. ಬಳಿಕ, ನೀನು ಊಟ ತಂದುಕೊಟ್ಟಿರುವ ವಿಚಾರ ನಿನ್ನ ಹೆಂಡತಿಗೆ ಗೊತ್ತಾದರೆ ಏನು ಮಾಡುತ್ತೀಯಾ? ಎಂದಾಗ ಅಲ್ಲಿಗೆ ಬಂದ ಜನನಿ ಕುಡಿಯಲು ನೀರು ತರುತ್ತಾಳೆ. ಇದನ್ನು ನೋಡಿದ ಮೋನಿಕಾಗೆ ಕೊಂಚ ಶಾಕ್ ಆಗುತ್ತದೆ. ಇದನ್ನು ಪಾರು-ಆದಿ ಇಬ್ಬರು ನೋಡುತ್ತಾ ಇರುತ್ತಾರೆ.

ಮೋನಿಕಾಗೆ ಮತ್ತೆ ಶಾಕ್ ನೀಡಿದ ಜನನಿ
ಮೋನಿಕಾ ಮಿಕ-ಮಿಕ ಎಂದು ಜನನಿ ಮುಖ ನೋಡುತ್ತಾ ಇರಬೇಕಾದರೆ ಯಾಕೆ ಮೋನಿಕಾ ಆಶ್ಚರ್ಯ ಪಡುತ್ತಾ ಇದ್ದೀರಾ ನಾನು ಬಂದೆ ಅಂತನಾ? ಪ್ರೀತಮ್ ನಿಮಗೆ ಊಟ ತಂದ ಆದರೆ ನೀರು ತರೋದೆ ಮರೆತು ಬಿಟ್ಟ ಅದಕ್ಕೆ ನಾನೇ ನೀರು ತಂದೆ ನಿಮಗೆ ಏನು ಬೇಕು ಬೇಡಗಳನ್ನು ನಿಸ್ಸಂಕೋಚವಾಗಿ ಕೇಳಿ ಬೇಸರ ಪಟ್ಟುಕೊಳ್ಳಬೇಡಿ. ನಿಮಗೆ ಏನು ಬೇಕಾದರೂ ಪ್ರೀತಮ್ ಮೊಬೈಲ್‌ಗೆ ಕರೆ ಮಾಡಿ ಎಂದು ಹೇಳಿದಾಗ ಮೋನಿಕಾ ಹೇಳುತ್ತಾಳೆ. ನಾನು ಹೀಗೆಲ್ಲ ಮಾಡಿದರೆ ನಿಮಗೆ ಬೇಸರ ಆಗುವುದು ಇಲ್ವಾ ಎಂದಾಗ ಜನನಿ ಹೇಳುತ್ತಾಳೆ ಬೇಸರ ಯಾಕೆ ಮಾಡಿಕೊಳ್ಳಬೇಕು. ಏನು ಬೇಸರ ನನಗೆ ಇಲ್ಲ ಎಂದು ಹೇಳುತ್ತಾಳೆ ಇದನ್ನು ಕೇಳಿದ ಮೋನಿಕಾ ಬೆರಗಾಗುತ್ತಾಳೆ. ಇನ್ನು ಅಖೀಲಾಂಡೇಶ್ವರಿ ಮಾತ್ರ ತನ್ನ ಮಗ ಆದಿ ಹಾಗೂ ಪಾರು ಖುಷಿ ನೋಡಿ ತಾನು ಖುಷಿ ಪಡುತ್ತಾಳೆ.

ಆದಿ-ಪಾರುವಿನ ಮದುವೆ ಚಿತ್ರ ವೀಕ್ಷಿಸುತ್ತಿರುವ ಅಖಿಲಾ
ಪಾರು-ಆದಿ ಮದುವೆ ವೇಳೆ ಎಷ್ಟೆಲ್ಲ ವಿಘ್ನಗಳು ಬಂದು ಹೋದವು ಆದರೆ ಅವರ ಮುಖದಲ್ಲಿ ಇರುವ ಮಂದ ಹಾಸ ನೋಡಿದಾಗ ಬಹಳ ಖುಷಿ ಆಗುತ್ತದೆ ಅಖಿಲಾಗೆ. ಅಲ್ಲಿಗೆ ಬಂದ ರಘು, ಅಖಿಲಾ ಖುಷಿಗೆ ಕಾರಣ ಎನು? ಜೊತೆಗೆ ಆದಿ-ಪಾರು ಮದುವೆ ಫೋಟೋ ಯಾಕೆ ನೋಡುತ್ತಿರುವುದು ಎಂದು ಪ್ರಶ್ನಿಸುತ್ತಾನೆ. ಇದನ್ನು ಕೇಳಿದ ಅಖಿಲಾ, ಈವರೆಗೂ ಇವರಿಬ್ಬರ ಮದುವೆ ಫೋಟೋ ನನಗೆ ನೋಡಬೇಕು ಎಂದು ಅನ್ನಿಸಲಿಲ್ಲ ಆದರೆ ಇದೀಗ ನೋಡೋಣ ಅನ್ನಿಸುತ್ತಿದೆ ಎನ್ನುತ್ತಾಳೆ.

ಹಳೆ ನೆನಪಿಗೆ ಜಾರಿದ ಅಖಿಲಾ
ಆ ವೇಳೆ ರಘು ಹೇಳುತ್ತಾರೆ ಅದೆಲ್ಲ ಸರಿ ಆದರೆ ಫೋಟೋದಲ್ಲಿ ಮಾತ್ರ ನೀನು ಇಲ್ಲ ಅದೇ ಬೇಸರ ಎಂದಾಗ ಅಖಿಲಾ, ಫೋಟೋದಲ್ಲಿ ಇಲ್ಲವಾದರೆ ಏನು ಅವರ ಮನದಲ್ಲಿ ಹೃದಯದಲ್ಲಿ ನಾನು ಶಾಶ್ವತವಾಗಿ ಭದ್ರ ಆಗಿರುತ್ತೇನೆ ಎಂದು ಹೇಳುತ್ತಾರೆ. ಮನೆಯಲ್ಲಿ ಏನೇ ಆದರೂ ಅದನ್ನು ಆದಿ-ಪಾರು ಯಾರಿಗೂ ತಿಳಿಸದೆ ಹಿಡಿದ ಕೆಲಸವನ್ನು ಮಾಡಿಯೇ ಮಾಡುತ್ತಾರೆ. ಆದ ಕಾರಣ ಅಖಿಲಾಗೆ ತನ್ನ ಮಗ ಸೊಸೆ ಅಂದರೆ ನಂಬಿಕೆ. ಇನ್ನು ಮೋನಿಕಾ ಕುತಂತ್ರ ಅಖಿಲಾಗೆ ಗೊತ್ತಾದರೆ ಸುಮ್ಮನೆ ಇರುತ್ತಾಳ ಮುಂದೇನು ಮಾಡುತ್ತಾಳೆ ಅಖಿಲ ಎಂಬುವುದನ್ನು ಕಾದು ನೋಡಬೇಕಿದೆ.