Paaru Serial: ಅರಸನ ಕೋಟೆ ಭದ್ರವಾಗಿದೆ; ಅರುಂಧತಿ ಕೋಟೆ ಛಿದ್ರ!
ಪಾರು ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಸೆಳೆಯುವ ಹಾಗೆ ಮಾಡುತ್ತಾ ಇದೆ. ಹನುಮಂತು ರಘು ಬಳಿ ನಿಜ ವಿಚಾರ ಹೇಳಿದ್ದನ್ನು ತಿಳಿದ ಆದಿ ಪಾರು ಹನುಮಂತು ಬಳಿ ಮಾತನಾಡಲೇ ಇಲ್ಲ. ಇತ್ತ ಹನುಮಂತು ತನ್ನ ಮಗನ ಜೊತೆ ಹರಟೆ ಹೊಡೆಯುತ್ತಾ ಇರುತ್ತಾನೆ. ಇದನ್ನು ನೋಡಿದ ಪಾರು ಹಾಗೂ ಆದಿ ಅಲ್ಲಿಗೆ ಬರುತ್ತಾರೆ. ಆ ವೇಳೆ ಪಾರು ಹಾಗೂ ಆದಿ ಬಳಿ ಕ್ಷಮೆ ಕೇಳಿದ ಹನುಮಂತು ಅಲ್ಲಿ ನಡೆದ ವಿಚಾರವನ್ನು ಆದಿ ಪಾರು ಬಳಿ ವಿವರವಾಗಿ ಹೇಳುತ್ತಾನೆ. ಇದನ್ನು ಕೇಳಿದ ಪಾರು ಆದಿ ಜೋರಾಗಿ ನಗುತ್ತಾರೆ.
ಮಾವ ನೀವೇನು ತಪ್ಪು ಮಾಡಿಲ್ಲ ಆದರೂ ನೀವು ಯಾಕೆ ಕ್ಷಮೆ ಕೇಳುತ್ತೀರಾ ಸತ್ಯಕ್ಕೆ ಒಂದೇ ಹೆಸರು ಅದು ಸಾರಥಿ ಮಾತ್ರ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸಾರಥಿ ಬಹಳ ಖುಷಿ ಪಡುತ್ತಾನೆ. ಅಳಿಯನನ್ನು ಬಾಚಿ ತಬ್ಬಿಕೊಂಡು ಅಳುತ್ತಾನೆ. ಇನ್ನು ಅನುಷ್ಕಾ ಬಹಳ ಕುಪಿತಗೊಂಡು ರೌದ್ರ ರೂಪ ತಾಳಿರುತ್ತಾಳೆ. ಅರುಂಧತಿ ಹಾಗೂ ರಾಣಾ ಆಕೆಯನ್ನು ಎಷ್ಟೇ ಸಮಾಧಾನ ಮಾಡಲು ಬಂದರೂ ಆಕೆ ಮಾತ್ರ ಮುನಿಸು ಬಿಡದೆ ಅಮ್ಮನನ್ನು ಕೆಂಗಣ್ಣಿನಿಂದ ನೋಡುತ್ತಾಳೆ. ನನ್ನನ್ನು ಕತ್ತಲೆ ಕೋಣೆಯಲ್ಲಿ ಇಟ್ಟು ಅರಸನ ಕೋಟೆಯನ್ನು ನಾವು ಧೂಳಿಪಟ ಮಾಡುತ್ತೇನೆ ಎಂದೆಲ್ಲ ದೊಡ್ಡ ದೊಡ್ಡದಾಗಿ ಹೇಳಿದಿರಿ ಅಲ್ವ ಆದರೆ ಈಗ ಅದೇನಾಯಿತು ಅರಸನ ಕೋಟೆಯ ಜನರನ್ನು ನೋಡಿ ಅಲ್ಲಿ ಇರುವ ಖುಷಿ ಇನ್ನೂ ಹೆಚ್ಚಾಗಿದೆ ಅಲ್ವಾ ಎಂದೆಲ್ಲ ಅಮ್ಮನನ್ನು ಪ್ರಶ್ನೆ ಮಾಡುತ್ತಾಳೆ.
ಆದರೆ ಆಕೆ ಹೇಳುವುದು ಮಾತ್ರ ಒಂದೇ. ಅರಸನ ಕೋಟೆ ಛಿದ್ರವಾಗಲೇ ಬೇಕು ಎಂದೆಲ್ಲ ಹೇಳಿದಾಗ ಅರುಂಧತಿ ಸಮಾಧಾನ ಮಾಡಲು ಹೋಗುತ್ತಾಳೆ. ಆದರೆ ಅದು ಸಾಧ್ಯ ಆಗದೆ ಅರುಂಧತಿ ಅಲ್ಲಿಂದ ರಾಣಾನನ್ನು ಹೋಗಲು ಹೇಳುತ್ತಾಳೆ. ಅರುಂಧತಿಗೆ ಇಬ್ಬರು ಮಕ್ಕಳ ಜೊತೆ ವಿದೇಶದಲ್ಲಿ ಸೆಟಲ್ ಆಗಬೇಕು ಎಂಬ ಉದ್ದೇಶ. ಆಕೆ ಮಕ್ಕಳ ಮುಂದೆ ವಿಷ ಬೀಜ ಬಿತ್ತುತ್ತಾ ಇದ್ದಳು. ಆದ ಕಾರಣ ಮಕ್ಕಳು ಕೂಡ ಅದನ್ನು ಮುಂದುವರಿಸಲು ಸಾಧ್ಯ ಆಗುವುದಿಲ್ಲ. ಮಕ್ಕಳು ಕೂಡ ಅದನ್ನು ಮುಂದುವರಿಸಿಕೊಂಡು ಹೋಗಲು ಸಾಜ್ಜಾಗುತ್ತ ಇದ್ದಾರೆ.

ಅರುಂಧತಿ ಕುತ್ತಿಗೆ ಹಿಡಿದ ಅನುಷ್ಕಾ
ಇನ್ನೂ ರಾಣಾ ಹೊರಗೆ ಹೋದ ಬಳಿಕ ಅರುಂಧತಿ ಅನುಷ್ಕಾಗೆ ಬುದ್ದಿ ಹೇಳಿದಾಗ ಕೋಪಗೊಂಡ ಅನುಷ್ಕಾ ಅರುಂಧತಿಯ ಕುತ್ತಿಗೆಯನ್ನು ಹಿಡಿಯುತ್ತಾಳೆ. ಉಸಿರಾಡಲು ಕಷ್ಟ ಪಡುತ್ತಾ ನರಳುತ್ತಾ ಇರುವಾಗ ಅಲ್ಲಿಗೆ ರಾಣಾ ಬರುತ್ತಾನೆ. ರಾಣಾ ಅನುಷ್ಕಾಳನ್ನು ತಡೆಯಲು ಬಂದಾಗ ಆಕೆಯ ನೋಟ ನೋಡಿ ಹಿಂದೆ ಸರಿಯುತ್ತಾನೆ.

ಭಯಗೊಂಡ ರಾಣಾ
ಅರುಂಧತಿ ಉಸಿರು ಗಟ್ಟಿ ಸಾಯುತ್ತಾಳೆ. ಇದನ್ನು ನೋಡಿದ ರಾಣಾಗೆ ಭಯ ಆಗುತ್ತದೆ. ಅರುಂಧತಿ ಅರುಂಧತಿ ಎಂದು ಕರೆಯುತ್ತಾನೆ ಆದರೆ ಅರುಂಧತಿ ಮಾತ್ರ ಎನು ಮಾತನಾಡದೇ ಮಲಗಿರುತ್ತಾಳೆ. ಈ ವೇಳೆ ಅನುಷ್ಕಾ ಅರುಂಧತಿಗೆ ಉಸಿರು ಇದೆಯಾ ಎಂದು ಚೆಕ್ ಮಾಡಿದಾಗ ಅರುಂಧತಿ ಸತ್ತಳು ಎಂದು ಅನುಷ್ಕಾಗೆ ತಿಳಿಯುತ್ತದೆ. ಆಕೆ ರಾಣನ ಎದುರು ಅರುಂಧತಿ ಹಾರ್ಟ್ ಅಟ್ಟ್ಯಾಕ್ ಆಗಿ ಸತ್ತಳು ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ರಾಣಾ ಹೂ ಎಂದು ತಲೆ ಅಲ್ಲಾಡಿಸುತ್ತಾನೆ.

ವ್ಯಾಲೆಂಟೈನ್ಸ್ ಡೇಗೆ ಪಾರುಗೆ ಗಿಫ್ಟ್ ನೀಡಿದ ಆದಿ
ಇನ್ನು ವ್ಯಾಲೆಂಟೈನ್ಸ್ ಡೇ ಬಂದೇಬಿಟ್ಟಿತು. ಆದಿ ಪಾರುಗೆ ಸರ್ಪ್ರೈಸ್ ನೀಡುತ್ತಾನೆ. ಇದನ್ನೆಲ್ಲ ನೋಡಿದ ಪಾರುಗೆ ಬಹಳ ಖುಷಿ ಆಗುತ್ತದೆ. ಹನುಮಂತು ಕೆಲಸದ ನಿಮಿತ್ತ ಬೇರೆ ಎಲ್ಲಿಯೋ ಹೋಗಿರುತ್ತಾನೆ. ಗಣಿ ಕಾಲೇಜಿಗೆ ಹೋಗಿದ್ದಾನೆ. ಇನ್ನು ಮನೆಯಲ್ಲಿ ಯಾರೂ ಇಲ್ಲದೆ ಇರುವುದರಿಂದ ಪ್ರೇಮಿಗಳು ಬಹಳ ಖುಷಿಯಲ್ಲಿ ಇರುತ್ತಾರೆ. ಜನನಿ ಕೂಡ ಫೋನ್ ಮೂಲಕ ತನ್ನ ಗಂಡನಿಗೆ ವಿಶ್ ಮಾಡುತ್ತಾಳೆ. ಇದನ್ನು ಕೇಳಿದ ಪ್ರೀತಮ್ ಕೂಡ ಬಹಳ ಖುಷಿ ಪಡುತ್ತಾನೆ. ಒಟ್ಟಾರೆಯಾಗಿ ಅರಸನ ಕೋಟೆ ಭದ್ರವಾಗಿದ್ದು, ಅರುಂಧತಿ ಕೋಟೆ ಛಿದ್ರವಾಗಿದೆ.


Click it and Unblock the Notifications











