ಪಾರು ವಿರುದ್ಧ ಹರಿಹಾಯ್ದ ಜನನಿ: ಪಾರು ಮುಂದಿನ ನಡೆ ಏನು?
ಪಾರು ಧಾರವಾಹಿ ದಿನದಿಂದ ದಿನಕ್ಕೆ ರೋಚಕವಾಗಿ ಮೂಡಿಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಾರುವಿನ ಮೇಲೆ ಜನನಿ ಒಳಗೊಳಗೇ ಹಲ್ಲು ಮಸೆಯುತ್ತಿದ್ದಳು. ಆದರೆ ಇದೀಗ ಸ್ವೀಟ್ ಕೊಡೋ ನೆಪದಲ್ಲಿ ಬಂದು ಪಾರುಗೆ ಇನ್ನಷ್ಟು ನೋವು ಕೊಟ್ಟಿದ್ದಾಳೆ. ಪ್ರೀತು ಸಿಇಓ ಪಟ್ಟ ಅಲಂಕರಿಸಿದ ಖುಷಿಯಲ್ಲಿ ಜನನಿ ಸ್ವೀಟ್ ನೀಡುತ್ತಿದ್ದರೆ ಇತ್ತ ಪಾರು ತನ್ನ ಗಂಡನಿಗೆ ಎಲ್ಲರ ಮುಂದು ಅವಮಾನ ವಾಯಿತು ಎಂದು ಬೇಸರದಲ್ಲಿದ್ದಾಳೆ.
'ನನ್ನಿಂದ ನನ್ನ ಗಂಡ ಆಫೀಸಿನಲ್ಲಿ ತನ್ನ ಸ್ಥಾನ ಕಳೆದುಕೊಂಡರು' ಎಂದು ಬೇಸರ ಪತ್ತುಕೊಳ್ಳುತ್ತಿದ್ದಾಳೆ ಪಾರಿ. ಈ ಸಂದರ್ಭದಲ್ಲಿ ಜನನಿ ಪಾರು ರೂಮಿಗೆ ಬಂದು ಸ್ವೀಟ್ ನೀಡಿದಾಗ ಪಾರು ಗೆ ಕೊಂಚ ಕೋಪ ಬರುತ್ತದೆ. ನಾನು ನೋವಲ್ಲಿದ್ದರು ನೀವು ಖುಷಿಯನ್ನು ಸಂಭ್ರಮಿಸಲು ಇಲ್ಲಿತನಕ ಸ್ವೀಟ್ ತೆಗೆದುಕೊಂಡು ಬಂದಿದ್ದೀರಾ ಇದು ನಿಮಗೆ ಸರಿ ಎನಿಸುತ್ತಾ ಎಂದು ಕೇಳಿದಾಗ ಜನನಿ ಹೇಳುತ್ತಾಳೆ 'ನನ್ನ ಗಂಡನಿಗೆ ಸಿ ಇ ಒ ಸ್ಥಾನದಲ್ಲಿ ಕುಳಿತುಕೊಳ್ಳಲು ಯೋಗ್ಯತೆ ಇಲ್ಲ ಅಂತಾನ?' ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪಾರು ಹಾಗಲ್ಲ ಎಂದು ವಿವರಣೆ ಕೊಡಲು ಮುಂದಾಗುತ್ತಾಳೆ.

ನಿಮ್ಮಿಂದ ಸಾಧ್ಯವಾಗಲಿಲ್ಲ: ಜನನಿ
ಅದಕ್ಕೆ ಜನನಿ, 'ನಿಮ್ಮ ಗಂಡ ಮಾತ್ರ ಆ ಸ್ಥಾನದಲ್ಲಿ ಕೂರಬೇಕಾ, ಆಫೀಸ್ ನಲ್ಲಿ ಕೂಡ ನನ್ನ ಗಂಡನನ್ನು ಯಾಕೆ ಆ ಸ್ಥಾನದಿಂದ ತೆಗೆಯುತ್ತಿದಿರಾ ಎಂದು ಕೇಳಿದ್ದೀರಿ ಅಂದು ನೀವು ಆ ಪೋಸ್ಟ್ನಲ್ಲಿ ಕುಳಿತುಕೊಳ್ಳಲು ಅತ್ತೆ ಚಾನ್ಸ್ ನೀಡಿದ್ದರು ಆದರೆ ಅದು ನಿಮ್ಮಿಂದ ಸಾಧ್ಯವಾಗಿಲ್ಲ. ಆಗ ನಿಮಗೆ ಗೊತ್ತಿರಲಿಲ್ವಾ ನಿಮ್ಮ ಗಂಡ ಕುಳಿತುಕೊಳ್ಳುವ ಚೇರ್ ಅದು ಎಂದು. ಇದೀಗ ನನ್ನ ಗಂಡ ಆ ಸ್ಥಾನವನ್ನು ಸ್ವೀಕರಿಸಿದರೆ ನಿಮಗೆ ಬೇಸರ ತರಿಸುತ್ತದೆ' ಎಂದು ಪ್ರಶ್ನೆ ಮಾಡುತ್ತಾಳೆ.

ಪಾರು ಮೇಲೆ ಜನನಿ ವಾಗ್ದಾಳಿ
ಅದಕ್ಕೆ ಪಾರು ಹಾಗಲ್ಲ ಜನನಿಯವರೆ ಅಂದಾಗ ಜನನಿ ಹೇಳುತ್ತಾಳೆ 'ನಾವು ಯಾವತ್ತೂ ನಿಮ್ಮ ಅಡಿಯಾಳಾಗಿ ಇರಬೇಕೆಂದು ನೀವು ಬಯಸಿದರೆ ಆದನ್ನು ಬಿಟ್ಟು ಬಿಡಿ' ಎಂದು ಹೇಳುತ್ತಾಳೆ ಪಾರು ನೋವಿನಿಂದ ಹೇಳುತ್ತಾಳೆ 'ನಾನು ಆ ರೀತಿ ಹೇಳಿಲ್ಲ ಅರ್ಥಮಾಡಿಕೊಳ್ಳಿ ಯಾಕೆ ಅಪಾರ್ಥ ಮಾಡಿಕೊಳ್ಳುತ್ತಾ ಇದ್ದೀರಾ' ಎಂದು ಕೇಳಿದಾಗ 'ಇದೆಲ್ಲ ಆಗಿದ್ದು ನಿಮ್ಮಿಂದಲೇ ' ಎಂದು ಹೇಳಿ ಹೋಗುತ್ತಾಳೆ ಜನನಿ. ಇನ್ನೂ ಅಮ್ಮನ ನಿರ್ಧಾರಕ್ಕೆ ಚಕಾರ ಎತ್ತದೆ ಆದಿ ತಲೆಬಾಗಿ ನಡೆಯುತ್ತಿದ್ದಾರೆ. ಆದರೆ ಪ್ರೀತುಗೆ ಮಾತ್ರ ಇದು ಧರ್ಮ ಸಂಕಟವಾಗುತ್ತದೆ ಹೆಂಡತಿ ಬಳಿ ಎಲ್ಲಾ ವಿಚಾರ ಹೇಳಿಕೊಳ್ಳೋಣ ಎಂದುಕೊಂಡರೆ ಹೆಂಡತಿಯ ವರ್ತನೆಯೂ ಪ್ರೀತುಗೆ ಬೇಸರ ಮೂಡಿಸಿದೆ.

ಜನನಿ ಮೇಲೆ ಪ್ರೀತುಗೆ ಬೇಸರ
ಜನನಿಗೆ ಅರ್ಥ ಮಾಡಿಸುವಲ್ಲಿ ಪ್ರೀತು ಎಡವಿದ್ದಾನೆ. ಪ್ರೀತು ರೂಮಿಗೆ ಬರುತ್ತಲೆ ಜನನಿಯ ಮುಖ ನೋಡಿ ಏನು ಜನನಿ ಮುಖ ಗಂಟು ಹಾಕಿಕೊಂಡು ಇದ್ದೀಯಾ ಎಂದಾಗ ಜನನಿ ಕೋಪದಿಂದ ಮುಖ ಗಂಟು ಹಾಕಿಕೊಂಡಿರುವುದು ನಿಮ್ಮ ಅಣ್ಣ ನ ಹೆಂಡತಿ ಎಂದು ಜೋರಾಗಿ ಹೇಳುತ್ತಾಳೆ. ಅದಕ್ಕೆ ಪ್ರೀತು ಏನಾಯ್ತು ಎಂದು ಕೇಳಿದಾಗ ಜನನಿ ಹೇಳುತ್ತಾಳೆ ನೀವು ಸಿ ಇ ಓ ಆಗಿರುವುದನ್ನು ಸಹಿಸದೆ ಉರಿದುಕೊಂಡಿದ್ದಾರೆ. ಎಂದಾಗ ಜೋರಾಗಿ ಪ್ರೀತು ಜನನಿ ಎಂದು ಕರೆಯುತ್ತಾನೆ. ಬಳಿಕ ಹೇಳುತ್ತಾನೆ ಅವರ ಗಂಡನ ವಿಚಾರದಲ್ಲಿ ಅವರಿಗೆ ಅನ್ಯಾಯ ಆಗಿದೆ ಎಂದು ಅವರಿಗೆ ಎನಿಸಿದೆ ಅದಿಕ್ಕೆ ಹಾಗೆ ಮಾತನಾಡಿದ್ದಾರೆ. ಎಲ್ಲಾ ತಿಳಿದ ನೀನು ಈ ರೀತಿ ಮಾತನಾಡುವುದೂ ನನಗೆ ಸರಿ ಕಾಣಿಸುತ್ತಿಲ್ಲ. ಎಂದೆಲ್ಲ ಹೇಳಿ ಅಲ್ಲಿಂದ ತೆರಳುತ್ತಾನೆ. ಇತ್ತ ಆದಿಗೆ ಪಾರುವನ್ನು ಸಮಾಧಾನಿಸಲು ಸಾಧ್ಯವಾಗದೆ ಸುಮ್ಮನೆ ಇದ್ದಾನೆ.

ತಪ್ಪು ತಿಳಿದುಕೊಂಡಿರುವ ಅಖಿಲಾಂಡೇಶ್ವರಿ
ಇತ್ತ ಆದಿ ಯಾವ ಕೆಲಸವನ್ನೂ ಸರಿಯಾಗಿ ಮಾಡುತ್ತಿಲ್ಲ ಎಂದು ಅಖಿಲ ಅಂದುಕೊಂಡಿದ್ದಾರೆ ಅರಂಧತಿಯ ಕುತಂತ್ರದಿಂದ ಆದಿ ಮತ್ತು ಆತನ ತಾಯಿ ಬೇರೆ ಬೇರೆಯಾಗುತ್ತಿರುವುದಂತು ಸತ್ಯ. ಆದಿ ಬೋರ್ಡ್ ಮೆಂಬರಲ್ಲಿ ಒಬ್ಬರಾಗಿರುತ್ತಾರೆ ಎಂದು ಅಖಿಲಾಂಡೆಶ್ವರಿ ಹೇಳುತ್ತಾರೆ ಆದರೆ ಆದಿ ತಪ್ಪಿ ತನ್ನ ಮುಂಚೆ ಇದ್ದ ಕ್ಯಾಬಿನ್ ಗೆ ಹೋಗುತ್ತಾನೆ. ಇದನ್ನು ಕಂಡ ಪ್ರೀತು ಬಾ ಅಣ್ಣ ಎಂದು ಹೇಳುತ್ತಾನೆ ಆದರೆ ಆದಿ ಮನದಲ್ಲಿ ಹೋ ಪ್ರೀತು ಬಂದಿದ್ದಾನೆ ನಾನು ಬೇರೆ ಕ್ಯಾಬಿನ್ ಗೆ ಹೋಗಬೇಕಿತ್ತು ಇಲ್ಲಿಗೆ ಬಂದೆನಲ್ಲ ಎಂದು ಚಡಪಡಿಸುತ್ತಾನೆ. ಮುಂದೇನಾಗುತ್ತದೆ ನೋಡಬೇಕು.


Click it and Unblock the Notifications











