ಪ್ರೀತಿಯ ಅಣ್ಣನ ಮೇಲೆ ಗುಂಡು ಹಾರಿಸಿದ ಪ್ರೀತು!
ಪ್ರೀತು, ರಾಣಾನ ಕಥೆ ಮುಗಿಸಿದೆ ಎಂದು ಸಂತೋಷ ಪಡುತ್ತಿರುವ ವೇಳೆ ಬರ ಸಿಡಿಲು ಎರಗಿದಂತೆ ನಿಜ ವಿಚಾರ ಪ್ರೀತುಗೆ ಅರಿವಾಗುತ್ತದೆ. ನಾನು ಹೊಡೆದ ಗುಂಡಿಗೆ ಬಲಿಯಾಗಿದ್ದು ರಾಣಾ ಅಲ್ಲ ಅಣ್ಣ ಎಂದು. ರಾಣಾ ಪ್ರೀತು ಗುಂಡು ಹಾರಿಸುವ ವೇಳೆ ಕೆಳಗೆ ಬಗ್ಗುತ್ತಾನೆ ಆದರೆ ಆ ವೇಳೆ ಇದನ್ನು ತಡೆಯಲು ಬಂದ ಆದಿಗೆ ಆ ಗುಂಡು ತಗುಲುತ್ತದೆ.
ಪ್ರೀತು, ರಾಣಾ ಸತ್ತ ಎಂದುಕೊಂಡು ನಿರ್ಲಿಪ್ತವಾಗಿ ಮನೆಗೆ ಬಂದು ಕುಳಿತುಕೊಳ್ಳುತ್ತಾನೆ. ಇನ್ನು ಅಲ್ಲಿಗೆ ಬಂದ ಪಾರು, ಪ್ರೀತು ದಣಿದು ಬಂದಿರುವುದನ್ನು ಕಂಡು ಇವತ್ತು ಎಲ್ಲ ವಿಚಾರವನ್ನು ಆದಿ ಬಳಿ ಹೇಳಿಕೊಂಡು ಇರುತ್ತಾರೆ ಅದಕ್ಕೆ ಇಷ್ಟು ಖುಷಿಯಾಗಿದ್ದಾರೆ ಎಂದು ಕೊಂಡು ಬಿಸಿ ಬಿಸಿ ಕಾಫಿ ಕೊಡುತ್ತಾಳೆ. ಪ್ರೀತು ಕಾಫಿ ಹೀರುತ್ತಾ ಇರಬೇಕಾದರೆ ಪಾರು ಕೇಳುತ್ತಾಳೆ. ಯಜಮಾನರು ಬರಲಿಲ್ಲ ಯಾಕೆ. ನೀವಿಬ್ಬರೂ ಒಟ್ಟಿಗೆ ಇದ್ದಿರಿ ಅಲ್ವಾ. ನೀವು ಬಂದಿದ್ದೀರಿ ಆದರೆ ಅವರು ಬರಲಿಲ್ಲ ಯಾಕೆ? ಎಂದು ಕೇಳಿದಾಗ ಪ್ರೀತುಗೆ ಅರ್ಥ ಆಗದೆ ಏನು ಅಣ್ಣ ನನ್ನ ಜೊತೆ ಇದ್ದನಾ ಇಲ್ಲ ಅಲ್ವಾ ಅವ ನನ್ನ ಜೊತೆ ಬರಲಿಲ್ಲ ನನಗೆ ಸಿಗಲು ಇಲ್ಲ ಎಂದು ಹೇಳುತ್ತಾನೆ.
ಇದನ್ನು ಕೇಳಿದ ಪಾರು ಎತ್ತ ಹೋಗಿರಬಹುದು ಎಂದು ಯೋಚನೆ ಮಾಡುತ್ತಾ ಇರುವ ವೇಳೆ ಅಖೀಲಾಂಡೇಶ್ವರಿ ಓಡುತ್ತಾ ಬರುತ್ತಾಳೆ. ಅಯ್ಯೋ ಎಂಥ ಅನಾಹುತ ಆಯ್ತು ಎಂದು ಫೋನಲ್ಲಿ ರಘು ಬಳಿ ಮಾತನಾಡುತ್ತಾ ಟಿವಿ ಇಡುತ್ತಾಳೆ. ಅಯ್ಯೋ ಹೇಗಾಯಿತು ಇದೆಲ್ಲ ಎಂದು ಹೇಳುತ್ತಿರುವ ವೇಳೆ ಟಿವಿ ಯಲ್ಲಿ ಬರುತ್ತಿರುವ ಬ್ರೇಕಿಂಗ್ ನ್ಯೂಸ್ ನೋಡಿ ಪ್ರೀತು ಶಾಕ್ ಆದರೆ ಪಾರು ಮಾತ್ರ ತನ್ನ ಗಂಡನ ಜೀವಕ್ಕೆ ಕುತ್ತು ಬಂದು ಬಿಟ್ಟಿದ್ದು ಕಂಡು ತಲೆ ತಿರುಗಿ ಬೀಳುತ್ತಾಳೆ.

ಹೇಳತೀರದು ಅಖಿಲಾಂಡೇಶ್ವರಿ ಗೋಳು
ಇದನ್ನು ಕಂಡ ಅಖಿಲಾ, ಆದಿ ಎಂದು ಜೋರಾಗಿ ಕಿರುಚುತ್ತಾಳೆ. ಆ ವೇಳೆ ಪ್ರೀತುಗೆ ಅರುಂಧತಿ ಹೇಳಿದ ಮಾತು ನೆನಪಾಗುತ್ತದೆ. ನಿನ್ನನ್ನು ಮಾತ್ರ ಸುಮ್ಮನೆ ಬಿಡಲ್ಲ. ಅರಸನ ಕೋಟೆಯನ್ನು ನಾಶ ಮಾಡಿ ಬಿಡುತ್ತೇನೆ. ನಿಮ್ಮ ಅಣ್ಣನನ್ನು ಸಾಯಿಸ್ತಿನಿ ಎಂದು ಹೇಳಿದ ಮಾತು ನೆನಪಾಗುತ್ತದೆ. ಬಳಿಕ ರಘು ಬಳಿ ಹೇಳುತ್ತಾಳೆ ಅಖಿಲಾ ನಾವೆಲ್ಲ ಆಸ್ಪತ್ರೆಗೆ ಬರುತ್ತೇವೆ ನೀವು ಬಂದು ಬಿಡಿ ಎಂದು ಹೇಳುತ್ತಾಳೆ ಬಳಿಕ ಪ್ರೀತು ಬಳಿ ಕಾರ್ ತೆಗಿಯಪ್ಪ ಎಂದು ಹೇಳುತ್ತಾಳೆ.

ಅರುಂಧತಿಯನ್ನು ಕೊಲ್ಲಲು ಹೋದ ಪ್ರೀತು
ಆದರೆ ಪ್ರೀತು ಮಾತ್ರ ಅಲ್ಲಿಯೇ ನಿಂತಿರುವುದನ್ನು ಕಂಡ ಅಖಿಲ ಕೋಪ ಗೊಂಡು ಇಂತಹ ಸ್ಥಿತಿಯಲ್ಲಿ ನೀನು ಕೋಪ ಬಿಡುತ್ತಿಲ್ಲ ಅಲ್ಲ ಎಂದು ಹೇಳಿ ಎಲ್ಲರೂ ಹಾಸ್ಪಿಟಲ್ ಹತ್ರ ತೆರಳುತ್ತಾರೆ. ಆದರೆ ಪ್ರೀತು ಮಾತ್ರ ಒಬ್ಬನೇ ನನ್ನ ಅಣ್ಣನನ್ನು ಕೊಲ್ಲಲು ಯತ್ನಿಸಿದ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅಳುತ್ತಾ ಹೇಳುತ್ತಾನೆ. ನಿನ್ನನ್ನು ಇವತ್ತು ಸಾಯಿಸಿ ಬಿಡುತ್ತೇನೆ ಎಂದು ಹೇಳುತ್ತ ಅರುಂಧತಿ ಇರುವ ಜಾಗಕ್ಕೆ ಹೋಗುತ್ತಾನೆ.

ಖುಷಿಯಲ್ಲಿರುವ ಅರುಂಧತಿ-ರಾಣಾ
ಅಖಿಲ ಹಾಗೂ ಪಾರು ಜನನಿ ಆಸ್ಪತ್ರೆಯ ಬಳಿ ಆದಿ ಗೆ ಏನಾಗಿದೆಯೋ ಹುಷಾರ್ ಆಗಿ ಬಂದರೆ ಸಾಕು ಎಂದು ಅತ್ತಿಂದ ಇತ್ತ, ಇತ್ತಿಂದ ಅತ್ತ ಹೋಗುತ್ತಾ ಇರುತ್ತಾರೆ. ಇನ್ನು ಪ್ರೀತು ಮಾತ್ರ ಬಹಳ ಸಿಟ್ಟುಗೊಂಡಿದ್ದಾನೆ. ಇತ್ತ ಅರುಂಧತಿ ತನ್ನ ತಮ್ಮ ರಾಣನ ಜೊತೆ ನಗುತ್ತಾ ಇರುತ್ತಾಳೆ ಇದನ್ನು ನೋಡಿದ ಪ್ರೀತುಗೆ ಶಾಕ್ ಆಗುತ್ತದೆ. ರಾಣಾ ಹೇಳುತ್ತಾನೆ ಏನು ಪ್ರೀತು ಶಾಕ್ ಆಯಿತಾ? ನೀನು ನನ್ನನ್ನು ಕೊಲ್ಲಲು ಬಂದು ನೀನು ನಿನ್ನ ಅಣ್ಣನನ್ನು ಕೊಂದು ಬಿಟ್ಯಲ್ಲ ಎಂದು ಹೇಳಿದಾಗಲೇ ಗೊತ್ತಾಗಿದ್ದು ಪ್ರೀತು ಗೆ ತಾನು ನನ್ನ ಅಣ್ಣನಿಗೆ ಶೂಟ್ ಮಾಡಿದ್ದು ಎಂದು.

ಸತ್ಯ ತಿಳಿದುಕೊಂಡ ಪ್ರೀತು
ಆ ವೇಳೆ ರಾಣಾ ಪ್ರೀತುಗೆ ಎಲ್ಲಾ ವಿವರಿಸಿ ಹೇಳುತ್ತಾನೆ. ಪ್ರೀತು ನಿನ್ನ ಅಣ್ಣ ನಿನ್ನನ್ನು ಹಿಂಬಾಲಿಸಿ ಕೊಂಡು ಬಂದಿದ್ದ. ಆ ವೇಳೆ ನೀನು ನನ್ನ ಸಾಯಿಸಲು ಗನ್ ಹಿಡಿದುಕೊಂಡಿದ್ದೆ ಆದರೆ ಅರುಂಧತಿ ನಿನ್ನ ಬಳಿ ಮಾತನಾಡುವಂತೆ ಹೇಳುತ್ತಿದ್ದಳು. ನಾನು ನಿನ್ನ ಬಳಿ ನನ್ನ ಬಿಟ್ಟು ಬಿಡು ಎಂದು ಎಷ್ಟು ಗೋಗರೆದೆ ಆದರೆ ನೀನು ಮಾತ್ರ ಇದನ್ನೆಲ್ಲ ಕೇಳಲೇ ಇಲ್ಲ. ಆ ವೇಳೆ ನೀನು ತನ್ನನ್ನು ಎಷ್ಟೆಲ್ಲ ನರಕ ಯಾತನೆ ತೋರಿಸಿ ಬಿಟ್ಟಿದ್ದೀರಿ ನಾನು ಸುಮ್ಮನೆ ನಿಮ್ಮನ್ನು ಬಿಡುವುದಿಲ್ಲ. ನಿವೆಲ್ಲಲ್ಲ ಇರುತ್ತೀರಿ ಅಲ್ಲಿ ಯಾವತ್ತೂ ಯಾರಿಗೂ ನೆಮ್ಮದಿ ಇರುವುದಿಲ್ಲ ಎಂದು ಸಿಟ್ಟಿನಿಂದ ಹೇಳುತ್ತಿದ್ದೆ. ರಾಣಾಗೆ ಪ್ರೀತು ಗುರಿ ಇಟ್ಟಿರುವುದು ನೋಡಿದ ಆದಿ ಅದನ್ನು ತಡೆಯಲು ಓಡಿಕೊಂಡು ಬರುತ್ತಾನೆ. ಗುಂಡು ಪೈಯರ್ ಆಗುತ್ತದೆ ಆದರೆ ಆ ಗುಂಡು ತಗುಲಿದ್ದು ರಾಣಾಗೆ ಅಲ್ಲ. ಬದಲಾಗಿ ನಿನ್ನ ಅಣ್ಣ ಆದಿ ಗೆ ಎಂದು ಹೇಳುತ್ತಾ ನಗುತ್ತಾಳೆ ಅರುಂಧತಿ. ಮುಂದೆ ಪ್ರೀತು ಏನು ಮಾಡುತ್ತಾನೆ ಕಾದುನೋಡಬೇಕಿದೆ?


Click it and Unblock the Notifications











