ಪಾರು ಜಾಗಕ್ಕೆ ಜನನಿ! ಮಕ್ಕಳ ಬಳಿಕ ಸೊಸೆಯರನ್ನೂ ಬೇರೆ ಮಾಡಿದ ಅಖಿಲಾಂಡೇಶ್ವರಿ
'ಪಾರು' ಧಾರಾವಾಹಿಯು ತನ್ನ ಕತೆಯಲ್ಲಿನ ಟ್ವಿಸ್ಟ್‌ಗಳಿಂದ ಜನರನ್ನು ಸೆಳೆಯುತ್ತಿದೆ. ಇತ್ತ ಒಂದು ಪ್ರಾಜೆಕ್ಟ್ ಗೆ ಪಾರುವೆ ಬ್ರಾಂಡ್ ಅಂಬಾಸಿಡರ್ ಆಗಬೇಕಾಗಿದೆ ಎಂದು ಪ್ರೀತಮ್ ಅಮ್ಮನ ಬಳಿ ಹೇಳಿದಾಗ ಅಖಿಲಾ, ಇದಕ್ಕೆ ನನಗೆ ಒಪ್ಪಿಗೆ ಇಲ್ಲ. ಹೊಸ ಪ್ರಾಡಕ್ಟ್ ಗೆ ಹೊಸ ಫೇಸ್ ನನ್ನ ಗಮನಕ್ಕೆ ಬಂದಿದೆ. ಆಕೆ ನನ್ನ ಕುಟುಂಬದವರೇ, ಎಂದು ಹೇಳುತ್ತಾರೆ.
ಇನ್ನು ಜನನಿಯ ವರ್ತನೆ ದಿನದಿಂದ ದಿನಕ್ಕೆ ಬದಲಾಗುತ್ತಿರುವುದನ್ನು ನೋಡಿ ಪ್ರೀತಮ್ ಗೆ ಸಹಿಸಲು ಅಸಾಧ್ಯವಾಗಿದೆ. ಇತ್ತ ಅಖಿಲಾಂಡೆಶ್ವರಿ ಎಲ್ಲರನ್ನೂ ಕರೆದು ಹೊಸ ಬ್ರಾಂಡ್ ಅಂಬಾಸಿಡರ್ ಬಗ್ಗೆ ಪರಿಚಯ ಮಾಡುತ್ತಿರುತ್ತಾರೆ. ಈ ಸಲ ಹೊಸ ಬ್ರಾಂಡ್ ಅಂಬಾಸಿಡರ್ ಅನ್ನು ಹುಡುಕುವ ಅಗತ್ಯ ಇಲ್ಲ ನಮ್ಮ ಬಳಿಯೇ ಇದ್ದಾರೆ ಎಂದಾಗ ಪ್ರೀತೂ, ಯಾರು ಅತ್ತಿಗೆ ನಾ ಎಂದು ಕೇಳಿದಾಗ ಅಖಿಲ ಅಲ್ಲ ಎನ್ನುತ್ತಾರೆ.

ಜನನಿನಯನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡುವ ಅಖಿಲಾ
ಯಾರು ಹೊಸ ಬ್ರಾಂಡ್ ಅಂಬಾಸಿಡರ್ ಎಂದಾಗ, 'ಈ ಬಾರಿ ಬ್ರಾಂಡ್ ಅಂಬಾಸಿಡರ್ ಆಗಿ ಜನನಿ ಆಯ್ಕೆ ಮಾಡಿದ್ದೀನಿ' ಎನ್ನುತ್ತಾರೆ ಅಖಿಲಾಂಡೇಶ್ವರಿ, ಇದರಿಂದ ಜನನಿ ಖುಷಿಯಾಗುತ್ತಾಳೆ. ಆದರೆ ಆಕೆಯ ಪತಿ ಪ್ರೀತಮ್ ಗೆ ಇದು ಇಷ್ಟವಾಗುವುದಿಲ್ಲ. ಅಖಿಲಾಂಡೇಶ್ವರಿಯ ನಿರ್ಣಯ ಕೇಳಿ ಆದಿ ಪಾರುಗು ಬಹಳ ಖುಷಿಯಾಗುತ್ತದೆ. ಆದರೆ ಪ್ರೀತಮ್ ಮಾತ್ರ ಮುಖ ಸಪ್ಪೆ ಮಾಡುತ್ತಾನೆ. ಇತ್ತ ಯಾಮಿನಿ ಖುಷಿಯಲ್ಲಿ ವೈದ್ಯೆ ಕೇಳಿದ್ದು ಹಾಲು ಅನ್ನ ರೋಗಿ ಬಯಸಿದ್ದೂ ಹಾಲು ಅನ್ನ ಎಂದೆಲ್ಲ ಹೇಳಿದಾಗ ಎಲ್ಲರೂ ಖುಷಿಯಾಗುತ್ತಾರೆ.

ಪ್ರೀತಮ್‌ಗೆ ಬೇಸರವಾಗಿದೆ
ಆದರೆ ಪ್ರೀತಮ್ ಹೇಳುತ್ತಾನೆ ನನಗೆ ಇದೆಲ್ಲಾ ಇಷ್ಟ ಆಗುವುದಿಲ್ಲ ಎಂದು ಆದರೆ ಜನನಿ ನಿರ್ಧಾರ ಎನು ಎಂಬುವುದು ಇನ್ನಷ್ಟೇ ತಿಳಿದುಕೊಳ್ಳಬೇಕಿದೆ. ಇನ್ನೂ ಪ್ರೀತಮ್ ಬಳಿ ಯಾಮಿನಿ ಹೇಳುತ್ತಾಳೆ ಪ್ರೀತಮ್ ನಿನ್ನ ಹೆಂಡತಿಗೆ ವಿಶ್ ಮಾಡಪ್ಪ ಎಂದಾಗ ಅಖಿಲಾಂಡೆಶ್ವರಿ ಯಾಕಪ್ಪ ಪ್ರೀತಮ್ ನಿನ್ನ ಹೆಂಡತಿ ಬ್ರಾಂಡ್ ಅಂಬಾಸಿಡರ್ ಆಗೋದಕ್ಕೆ ನಿನಗೆ ಯಾವುದೇ ಸಂಬಂಧ ಇಲ್ಲ ಅನ್ನೋ ತರ ನಿಂತಿದ್ದಿಯಲ್ಲ ಯಾಕೆ ವಿಶ್ ಮಾಡಿ ಎನ್ನುತ್ತಾರೆ.

ಪತ್ನಿಯನ್ನು ರಾಯಭಾರಿ ಮಾಡಲು ಒಪ್ಪದ ಪ್ರೀತಮ್
ಅದಕ್ಕೆ ಪ್ರೀತಮ್, 'ಜನನಿ ಬ್ರಾಂಡ್ ಅಂಬಾಸಿಡರ್ ಆಗೋದು ಬೇಡ ಅನ್ನಿಸುತ್ತಿದೆ ಅಮ್ಮಾ' ಎಂದು ಹೇಳಿದಾಗ ಜನನಿಗೆ ಶಾಕ್ ಆಗುತ್ತದೆ. ಆದರೆ ಜನನಿಯನ್ನು ಅಂಬಾಸಿಡರ್ ಮಾಡಿರುವ ಹಿಂದೆ ಕಾರಣವಿದೆ. ಹಿಂದೊಮ್ಮೆ ಜನನಿ, ಯಾರ್ಯಾರೋ ಬ್ರಾಂಡ್ ಅಂಬಾಸಿಡರ್ ಆಗುತ್ತಾರೆ ಆದರೆ ನಾನು ಯಾಕೆ ಆಗಬಾರದು ನನಗೆನಾಗಿದೆ. ಸುಂದರವಾಗಿಲ್ಲ ವೇ ನಾನು ಎಂದು ಹೇಳಿಕೊಳ್ಳುತ್ತಿರುವುದನ್ನು ಅಖಿಲ ಕೇಳಿಸಿಕೊಳ್ಳುತ್ತಾರೆ ಅದಕ್ಕೆ ಜನನಿಯನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಿರುತ್ತಾರೆ.

ಪ್ರೀತಮ್‌ಗೆ ಜನನಿ ಮೇಲೆ ಅಸಮಾಧಾನ
ಬಳಿಕ, ಪ್ರೀತಮ್ ಆಫೀಸಿಗೆ ತೆರಳಬೇಕಾದರೆ ಜನನಿ ಕಾಫಿ ತೆಗೆದುಕೊಂಡು ಹೋಗಿ ಕೊಡುತ್ತಾಳೆ. ಇದನ್ನು ನೋಡಿದ ಪ್ರೀತಮ್, 'ಏನಿದು ಜನನಿ' ಎಂದು ಕೇಳುತ್ತಾನೆ. ಅದಕ್ಕೆ ಜನನಿ ಕಾಫಿ ಪ್ರೀತಮ್, ಕಾಫಿ ಕುಡಿದು ಹೋಗು ಆಫೀಸ್ ಗೆ ಎಂದು ಉಪಚರಿಸುತ್ತಾಳೆ. ಇದನ್ನು ನೋಡಿದ ಪ್ರೀತಮ್ 'ಏನಿದು ಯಾವತ್ತೂ ಇಲ್ಲದ ಈ ಪ್ರೀತಿ ಆಗತ್ಯ ಇದೆಯಾ' ಎಂದು ಕೇಳುತ್ತಾನೆ. 'ಕೆಲವು ಕೆಲಸಗಳನ್ನೂ ಅವರವರೇ ಮಾಡಿದರೆ ಚಂದ' ಎಂದು ಹೇಳುತ್ತಾನೆ ಇದನ್ನು ಕೇಳಿಸಿಕೊಂಡ ಜನನಿಗೆ ಕೊಂಚ ಬೇಸರವಾದರೂ ತೋರಿಸಿಕೊಳ್ಳುವುದಿಲ್ಲ. ಬಳಿಕ 'ಕಾಫಿ ನನಗೆ ಬೇಡ' ಎಂದು ಪ್ರೀತಮ್ ಹೇಳಿ ಅಲ್ಲಿಂದ ಹೋಗುತ್ತಾನೆ. ಮುಂದೇನು ಆಗುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











