Paaru: ಪಾರು ವಿರುದ್ದ ರತ್ನವೇಣಿ ಮಾಸ್ಟರ್ ಪ್ಲಾನ್ ? ಏಟಿಗೆ ಎದಿರೇಟು ನೀಡಿದ ಅಖಿಲಾಂಡೇಶ್ವರಿ
ಜೀ ಕನ್ನಡದಲ್ಲಿ 'ಪಾರು' ಧಾರಾವಾಹಿ ವೀಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ. ಒಮ್ಮೆ ಎಮೋಷನಲ್, ಮತ್ತೊಮ್ಮೆ ಸೀರಿಯಸ್ ಹೀಗೆ ವೀಕ್ಷಕರ ಭಾವನೆಗಳನ್ನು ಕೆರಳಿಸುವಲ್ಲಿ ಸಫಲವಾಗಿದೆ. ಇದೀಗ ಪಾರು ಕಷ್ಟ ಪಡುತ್ತಿರುವುದನ್ನು ನೋಡಿ ಆದಿಗೆ ಬಹಳ ನೋವಾಗುತ್ತದೆ. ಆದಿ ತನ್ನ ಪ್ರೀತಿಯನ್ನು ಯಾರ ಬಳಿಯೂ ಅಷ್ಟಾಗಿ ತೋರಿಸುವುದು ಇಲ್ಲ. ಆದರೆ ತನ್ನ ಹೆಂಡತಿಯನ್ನು ಹಾಗೆಯೇ ಅಮ್ಮನನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಾ ಇರುತ್ತಾನೆ .
ಆದಿ ತನ್ನ ಹೆಂಡತಿ ಅನಾಥ ಆಶ್ರಮಕ್ಕೆ ಹೋಗಿದ್ದಾಳೆ ಎಂದು ಅಂದುಕೊಂಡಿರುತ್ತಾರೆ. ಪಾರು ಆಶ್ರಮಕ್ಕೆ ನಡೆದುಕೊಂಡು ಹೋಗಿದ್ದಾಳೆ ಎಂದು ನಿಧಾನವಾಗಿ ತಿಳಿಯುತ್ತದೆ. ಆದರೂ, ಪಾರುಗೆ ಏನು ಕೇಳುವುದು ಇಲ್ಲ. ಮನೆಯ ಎಲ್ಲಾ ಕೆಲಸ ಮುಗಿಸಿ ಪುನಃ ಆಟೋಗೆ ಹೋಗಬೇಕು ಎಂದು ಹೊರಟು ನಿಂತ ಆದಿ, ಪಾರು ಬಳಿ ಮಾತಿಗಿಳಿಯುತ್ತಾನೆ.

ಪಾರು ಸ್ಥಿತಿ ಕಂಡು ಕಂಗಾಲಾದ ಆದಿ
"ಪಾರು ನಾನು ಕೆಲಸಕ್ಕೆ ಹೋಗಿ ಬರುತ್ತೇನೆ" ಎಂದು ಆದಿ ಹೇಳಿದಾಗ ಪಾರುಗೆ ಆ ಮಾತು ಕೇಳುವುದೇ ಇಲ್ಲ. ಆಕೆಗೆ ಸಿಕ್ಕಾಪಟ್ಟೆ ಸುಸ್ತು ಆಗಿರುತ್ತದೆ. ಆಕೆ ಬಾರಿಗಾಲಿನಲ್ಲಿ ನಡೆದು ಬಹಳ ಆಯಾಸಗೊಂಡು ಮಲಗಿ ಇರುತ್ತಾಳೆ. ಆದಿ ಮೆತ್ತಗೆ ಆಕೆಯ ಬಳಿ ಬಂದು ಜೋರಾಗಿ ಕರೆಯುತ್ತಾರೆ. ಆ ಬಳಿಕ ಮೆತ್ತಗೆ ಎಚ್ಚರಗೊಳ್ಳುತ್ತ ಆದಿಯತ್ತ ನೋಡುತ್ತಾಳೆ.
"ಪಾರು ಅನಾಥ ಆಶ್ರಮಕ್ಕೆ ಹೇಗೆ ಹೋಗಿದ್ದು ನೀನು ?" ಎಂದಾಗ ಪಾರುಗೆ ಏನು ಹೇಳಬೇಕೋ ತಿಳಿಯದಾಗುತ್ತೆ. ಪಾರು ಮೆತ್ತಗೆ "ನಾನು ಬಸ್‌ನಲ್ಲಿ ಹೋಗಿದ್ದು" ಎಂದಾಗ ಆದಿ "ಬಸ್ ನಿಲ್ದಾಣದವರೆಗೂ ಮನೆಯಿಂದ ಹೇಗೆ ಹೋದೆ?" ಎಂದಾಗ ಆಟೋದಲ್ಲಿ ಎಂದು ಪಾರು ಸುಳ್ಳು ಮೇಲೆ ಸುಳ್ಳು ಹೇಳುತ್ತಾಳೆ.

ಪಾರು ಬಳಿ ವಿಚಾರಣೆ ಮಾಡುತ್ತಿರುವ ಆದಿ
ಇದನ್ನು ಕೇಳಿದ ಆದಿ ಮಾತ್ರ ಪಾರುಗೆ ಕೇಳುತ್ತಾನೆ "ಆಟೋದಲ್ಲಿ ಎಷ್ಟು ದುಡ್ಡು ತೆಗೆದುಕೊಂಡರು" ಎಂದು ಕೇಳಿದಾಗ ಪಾರುಗೆ ಏನು ಹೇಳಬೇಕು ತಿಳಿಯದಾಗುತ್ತೆ. ಅದರಲ್ಲಿಯೇ ಆದಿಗೆ ಪಾರು ಸುಳ್ಳು ಹೇಳುತ್ತಿದ್ದಾಳೆ ಎಂಬುವುದು ತಿಳಿಯುತ್ತದೆ. ಇನ್ನು ರತ್ನವೇಣಿ ಮಾತಿಗೆ ತಲೆ ಕೆಡಿಸಿಕೊಂಡ ಅಖಿಲಾಂಡೇಶ್ವರಿ ಮಾತ್ರ ಗುರುಗಳ ಮೊರೆ ಹೋಗಿದ್ದಾಳೆ.
ಗುರುಗಳು ಏನು ಹೇಳುತ್ತಾರೋ ಹಾಗೆಯೇ ನಡೆದುಕೊಳ್ಳಬೇಕು. ಹಾಗೆಯೇ ತನ್ನ ಇಬ್ಬರು ಸೊಸೆಯಂದಿರು ಗರ್ಭಿಣಿಯರು. ಅವರಿಬ್ಬರ ಸೀಮಂತ ಕಾರ್ಯಕ್ರಮ ಒಟ್ಟಿಗೆ ನೆರವೇರಬೇಕು ಎಂಬುವುದು ಅಖಿಲ ಆಸೆ. ಆದರೆ, ರತ್ನವೇಣಿ ಬಹಳ ಸ್ವಾರ್ಥಿ. ತನ್ನಕ್ಕನ ಮಗಳು ರಾಣಿಯ ಹಾಗೆ ಮೆರೆಯಬೇಕು ಬೇರೆಯವರು ಏನೇ ಆದರೂ ತೊಂದರೆ ಇಲ್ಲ ಎನ್ನುವ ಜನ.
ಅಖಿಲ ಮಾತನ್ನು ಕದ್ದು ಕೇಳಿಸಿಕೊಂಡ ಅಖಿಲ
ಅಖಿಲ ರೂಮಿನ ಬಳಿ ಬಂದ ಧಾಮಿನಿ ಹಾಗೂ ರತ್ನವೇಣಿ ಗಂಡ ಹೆಂಡತಿ ಮಾತನಾಡುತ್ತಾ ಇರುವುದನ್ನು ಕದ್ದು ಕೇಳಿಸಿಕೊಳ್ಳುತ್ತಾ ಇರುತ್ತಾರೆ. ಆ ವೇಳೆ ಅಖಿಲಗೆ ಗುರುಗಳು ಕರೆ ಮಾಡಿ, ಈ ದಿನ ತುಂಬಾ ಒಳ್ಳೆಯದು ಇದೆ ಎಂದು ಹೇಳುತ್ತಾರೆ. ಇದನ್ನೆಲ್ಲ ಕೇಳಿದ ಅಖಿಲಗೆ ಬಹಳ ಖುಷಿ ಆಗುತ್ತದೆ. ಆದರೆ, ಅಖಿಲ ಗುರುಗಳ ಬಳಿ ಕೇಳಿರುವ ವಿಚಾರವೆಲ್ಲಾ, ರತ್ನವೇಣಿಗೆ ತಿಳಿದು ಎಲ್ಲಾ ತಲೆಕೆಳಗೆ ಆಗಿ ಹೋಗುತ್ತದೆ. ಮುಂದೇನು ಪಾರು ಧಾರಾವಾಹಿಯಲ್ಲಿ ಏನಾಗುತ್ತೆ ಅನ್ನೋದು ಕುತೂಹಲ.


Click it and Unblock the Notifications











