ಆದಿಗೆ ಹೆಚ್ಚಾಗುತ್ತಿದೆ ಅಮ್ಮ ಅಖಿಲಾಂಡೇಶ್ವರಿ ಮೇಲೆ ಅನುಮಾನ

By ಪೂರ್ವ

ಪಾರುವನ್ನು ತನ್ನ ಸೊಸೆ ಎಂದು ಒಪ್ಪಿಕೊಂಡ ಖುಷಿಯಲ್ಲಿರಬೇಕಾದರೆ ಅಖಿಲಾಂಡೇಶ್ವರಿ ಗೆಳತಿ ಬರುತ್ತಾಳೆ ಆಕೆ ಬಂದಿರುವುದನ್ನು ಕಂಡ ಅಖಿಲಾಂಡೇಶ್ವರಿ ಬಹಳ ಖುಷಿ ಪಡುತ್ತಾರೆ. ಅಖಿಲಾಂಡೇಶ್ವರಿ ಪ್ರೀತಿಯಿಂದ ತನ್ನ ಗೆಳತಿಯನ್ನು ಹಾಗೂ ಆಕೆಯ ಮಗಳನ್ನು ಭರ ಮಾಡಿಕೊಳ್ಳುತ್ತಾಳೆ. ಅಖಿಲಾಂಡೇಶ್ವರಿ ಆಕೆಯ ಮಗಳ ಹಾಗೂ ಗೆಳತಿಯ ಕ್ಷೇಮ ಸಮಾಚಾರವನ್ನು ವಿಚಾರಿಸುತ್ತಾರೆ. ಬಳಿಕ ಮಗಳಿಗೆ ಮದುವೆ ಆಗಿಲ್ವಾ? ಮಾಡುವ ಯೋಚನೆ ಇಲ್ವಾ ನಿನಗೆ ಎಂದು ವಿಚಾರಿಸುತ್ತಾರೆ.

ಮದುವೆ ಮಾಡುವ ಯೋಚನೆ ಇತ್ತು ನಿನ್ನ ಮಗನಿಗೆ ಕೊಡುವ ಎಂದುಕೊಂಡಿದ್ದೆ ಆದರೆ ನಿನ್ನ ಮದುವೆ ಆಗಲೇ ಮದುವೆ ಆಗಿ ಹೋಗಿತ್ತು ಎಂದು ತಮಾಷೆ ಮಾಡುತ್ತಾಳೆ ಇದನ್ನೆಲ್ಲ ನೋಡುತ್ತಿದ್ದ ಆದಿಗೆ ಅಮ್ಮ ನನ್ನಿಂದ ಪಾರುವನ್ನೂ ದೂರ ಮಾಡಲು ಈ ರೀತಿಯ ತಂತ್ರಗಳನ್ನು ಮಾಡಿ ಇರಬಹುದಾ ಎಂದು ಯೋಚನೆ ಮೂಡುತ್ತದೆ. ಬಳಿಕ ಅಲ್ಲಿಗೆ ಬಂದ ಯಾಮಿನಿ ಕೂಡ ಹೇಳುತ್ತಾಳೆ ಹುಡುಗಿ ಚಂದ ಇದಾಳೆ ಅಲ್ವಾ ಆದಿ ನಿನಗೆ ಆಗಬಹುದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆದಿಗೆ ಬಹಳ ಕೋಪ ಬರುತ್ತದೆ. ಆದಿ ಅಮ್ಮನ ಬಳಿ ಇದನ್ನೆಲ್ಲ ಕೇಳಬೇಕು. ಪಾರುವನ್ನು ಎಂದಿಗೂ ನಮ್ಮಿಂದ ದೂರ ಮಾಡಲು ಆಗುವುದಿಲ್ಲ ಎಂದು ಹೇಳಬೇಕು ಎಂದು ಅಂದುಕೊಳ್ಳುತ್ತಾನೆ.

ನಂದಿನಿಗೆ ಮನೆ ತೋರಿಸುವಂತೆ ಹೇಳಿದ ಆದಿ

ನಂದಿನಿಗೆ ಮನೆ ತೋರಿಸುವಂತೆ ಹೇಳಿದ ಆದಿ

ಆಗ ಅಖಿಲಾಂಡೇಶ್ವರಿ ಮಗನನ್ನು ಕರೆದು ನಂದಿನಿಗೆ ಮನೆಯೆಲ್ಲಾ ತೋರಿಸು ಎಂದು ಹೇಳುತ್ತಾರೆ. ಇದನ್ನು ಕೇಳಿದ ಆದಿ ಬನ್ನಿ ಎಂದು ಹೇಳುತ್ತಾನೆ. ಅದಕ್ಕೆ ನಂದಿನಿ ಹೇಳುತ್ತಾಳೆ ಬನ್ನಿ ಅಲ್ಲಾ ಬಾ ಎನ್ನಿ ಎಂದು ಹೇಳುತ್ತಾಳೆ. ನಂದಿನಿಯನ್ನು ಮನೆಯೆಲ್ಲಾ ತೋರಿಸುತ್ತಿರುವಾಗ ಪಾರು ಬಳಿ ಬರುತ್ತಾರೆ. ಪಾರುವಿಗೆ ಆದಿ ನಂದಿನಿಯನ್ನು ತೋರಿಸಿ ಈಕೆ ನನ್ನ ಗೆಳತಿ ಎಂದು ಹೇಳುತ್ತಾರೆ. ಅದಕ್ಕೆ ನಂದಿನಿ ಹೇಳುತ್ತಾಳೆ ಬಾರಿ ಗೆಳತಿ ಅಲ್ಲ ಈಗ ಬಹಳ ಉತ್ತಮ ಕಾಲ ಬಂದಿದೆ ಎಂದು ಹೇಳುತ್ತಾ ಆದಿಯ ಕೈ ಹಿಡಿದುಕೊಳ್ಳುತ್ತಾಳೆ. ಇದನ್ನು ಕಂಡರೂ ಪಾರು ಸುಮ್ಮನಿರುತ್ತಾಳೆ.

ಪಾರುವನ್ನೂ ಮನೆ ಕೆಲಸದಾಕೆ ಗೆ ಹೋಲಿಸಿದ ನಂದಿನಿ

ಪಾರುವನ್ನೂ ಮನೆ ಕೆಲಸದಾಕೆ ಗೆ ಹೋಲಿಸಿದ ನಂದಿನಿ

ನಂದಿನಿ ಪಾರುವಿನತ್ತ ನೋಡಿ ಈಕೆ ನಿಮ್ಮ ಕೆಲಸದಾಕೆಯ ಎಂದು ಕೇಳುತ್ತಾಳೆ. ಇದನ್ನು ಕೇಳಿದಾಗ ಆದಿಗೆ ಬಹಳ ಕೋಪ ಬರುತ್ತದೆ. ಇದನ್ನು ಕೇಳಿದರು ಪಾರು ಮಾತ್ರ ಸುಮ್ಮನಾಗುತ್ತಾಳೆ. ಬಳಿಕ ಆದಿ ಇಲ್ಲ ಆಕೆ ನನ್ನ ಹೆಂಡತಿ ಎಂದು ಹೇಳಿ ಪಾರುವನ್ನು ತಬ್ಬಿಕೊಳ್ಳುತ್ತಾರೆ. ನಾನೇ ಪ್ರೀತಿಸಿ ಮದುವೆಯಾದ ಹುಡುಗಿ ಈಕೆ. ಬಹಳ ಇಷ್ಟ ಪಡುತ್ತಿದ್ದೇನೆ ಇವಳನ್ನು. ಏಳೇಳು ಜನ್ಮಕ್ಕು ಆಕೆ ನನ್ನ ಹೆಂಡತಿ ಎಂದು ಹೇಳುತ್ತಾನೆ. ಇದನ್ನು ಕೇಳಿ ನಂದಿನಿ ಬಹಳ ಖುಷಿ ಪಡುತ್ತಾಳೆ.

ಹೆಂಡತಿ ಮುಂದೆ ಆದಿ ಕಾಲೆಳೆದ ನಂದಿನಿ

ಹೆಂಡತಿ ಮುಂದೆ ಆದಿ ಕಾಲೆಳೆದ ನಂದಿನಿ

ಬಳಿಕ ಆಕೆಗೆ ನಮಸ್ಕಾರ ಮಾಡುತ್ತಾಳೆ ಪಾರು. ಪಾರುವನ್ನು ನೋಡಿ ಬಹಳ ಖುಷಿ ಪಡುತ್ತಾಳೆ ನಂದಿನಿ. ಬಳಿಕ ನಂದಿನಿ ಆದಿಯ ಕಾಲು ಏಳೆಯುತ್ತಾಳೆ. ಆಗ ಆದಿ ನನ್ನ ಸಂಸ್ಕೃತಿಯನ್ನು ನಾವು ಮರೆಯಬಾರದು. ನನಗೆ ಅದಕ್ಕೆ ಈಕೆ ಬಹಳ ಇಷ್ಟ ಎಂದು ಹೇಳುತ್ತಾನೆ. ಬಳಿಕ ಪಾರು, ನಂದಿನಿಗೆ ಜ್ಯೂಸ್ ನೀಡುತ್ತಾಳೆ. ಮನೆಯನ್ನೆಲ್ಲ ಆಕೆಗೆ ತೋರಿಸುತ್ತಾಳೆ. ಇದನ್ನೇ ನೋಡುತ್ತಿದ್ದ ಆದಿ ಯೋಚನೆ ಮಾಡುತ್ತಾನೆ. ಅಮ್ಮ ನನಗೆ ಯಾಕೆ ಎರಡನೇ ಮದುವೆ ಮಾಡುವ ಯೋಚನೆ ಮಾಡುತ್ತಿದ್ದಾರೆ ಎಂದುಕೊಳ್ಳುತ್ತಾನೆ. ಬಳಿಕ ಹೇಗಾದರೂ ಈ ಬಗ್ಗೆ ಅಮ್ಮನ ಬಳಿ ಮಾತನಾಡಬೇಕು ಎಂದು ನಿಶ್ಚಯಿಸುತ್ತಾನೆ.

ಊಟಕ್ಕೆ ಒಟ್ಟಾಗಿ ಕುಳಿತ ಮನೆ ಮಂದಿ

ಊಟಕ್ಕೆ ಒಟ್ಟಾಗಿ ಕುಳಿತ ಮನೆ ಮಂದಿ

ಅರಸನ ಕೋಟೆಯಲ್ಲಿ ಎಲ್ಲರೂ ಒಟ್ಟಾಗಿ ಊಟಕ್ಕೆ ಕುಳಿತುಕೊಳ್ಳುತ್ತಾರೆ ಜನನಿ ಇದ್ದ ಪದಾರ್ಥಗಳನ್ನು ತೆಗೆದುಕೊಂಡು ಬಂದು ಆಕೆಯು ಊಟಕ್ಕೆ ಕುಳಿತುಕೊಳ್ಳುತ್ತಾರೆ. ಇನ್ನೂ ಉಳಿದಿರುವುದು ಪಾರು ಒಬ್ಬಳೇ ಆಕೆಯು ಊಟದ ಬಾಕ್ಸ್ ಅನ್ನು ತೆಗೆದುಕೊಂಡು ಬಂದು ಊಟ ಬಡಿಸಲು ಮುಂದಾದಾಗ ಅಖಿಲಾಂಡೇಶ್ವರಿ ಪಾರುವನ್ನು ಕರೆದು ಬಾ ಒಟ್ಟಿಗೆ ಊಟವನ್ನು ಮಾಡೋಣ ಎಂದು ಹೇಳುತ್ತಾರೆ. ಮುಂದೇನು ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Paaru written updated on 15th September. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X