Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪಾರು ಕೈಯಿಂದ ತಪ್ಪಿಸಿಕೊಂಡ ಮೋನಿಕಾ! ಶಾಕ್ ಆದ ಪಾರು?
ಮೋನಿಕಾ ಕಾಲೇಜಿಗೆ ಹೋಗಬೇಕು ಎಂದು ಅಖಿಲಾ ಮುಂದೆ ಸುಳ್ಳು ಹೇಳುತ್ತಾಳೆ. ಇದನ್ನು ನೋಡಿದ ಪಾರು ಮಾತ್ರ ಅತ್ತೆಯ ಮುಂದೆ ಏನೂ ಮಾತನಾಡದೆ ಸುಮ್ಮನಾಗುತ್ತಾಳೆ. ಈ ವೇಳೆ ಮನೆ ಹೊರಗೆ ಬಂದ ಮೋನಿಕಾ ಡ್ರೈವರ್ ಕಾರು ತೆಗೆಯಿರಿ ಎಂದಾಗ ಡ್ರೈವರ್, ಅಮ್ಮನವರು ಬರುವವರೆಗೆ ಕಾರು ತೆಗೆಯೋ ಹಾಗೆಯೇ ಇಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ಮೋನಿಕಾ ಅಮ್ಮವರಾ? ಯಾರು ಅದು ಎಂದು ಕೇಳಿದಾಗ ಮರೆಯಲ್ಲಿ ನಿಂತಿದ್ದ ಪಾರು ನಾನೇ ಎಂದು ಹೇಳುತ್ತಾಳೆ.
ಪಾರು ಧ್ವನಿ ಕೇಳುತ್ತಾ ಇದ್ದ ಹಾಗೆಯೇ ಮೋನಿಕಾ ಶಾಕ್ ಆಗುತ್ತಾಳೆ. ಬಳಿಕ ಮೋನಿಕಾ ಹತ್ತಿರ ಬಂದ ಪಾರು ಹೇಳುತ್ತಾಳೆ ನಾನು ಮಾರ್ಕೆಟ್‌ಗೆ ತೆರಳಬೇಕಾಗಿದೆ ಹಾಗೆಯೇ ನಿಮ್ಮ ಕಾಲೇಜಿಗೂ ಬಂದ ಹಾಗೆ ಆಗುತ್ತದೆ ಅಂತ ಬಂದೆ ಎಂದು ಹೇಳುತ್ತಾಳೆ. ಮೋನಿಕಾ ಮಾತ್ರ ಏನು ಹೇಳಲು ಆಗದೆ ಸುಮ್ಮನಿರುತ್ತಾರೆ. ಈ ವೇಳೆ ಪಾರು ಹೇಳುತ್ತಾಳೆ ಯಾವತ್ತೂ ಸತ್ಯಕ್ಕೆ ಜಯ ಸುಳ್ಳಿಗೆ ಸೋಲು ಎಂದಾಗ ಮೋನಿಕಾಗೆ ಶಾಕ್ ಆಗುತ್ತದೆ.
ಆದರೆ ಸಾವರಿಸಿಕೊಂಡು ಈ ಮಾತು ನನಗೆ ಯಾಕೆ ಹೇಳುತ್ತಾ ಇದ್ದೀರಾ? ನಾನು ಯಾರಿಗೆ ಮೋಸ ಮಾಡಿದ್ದೀನಿ ಎಂದು ಕೇಳಿದಾಗ ಪಾರು, 'ನೀನು ಮೋಸ ಮಾಡಿದೆ ಎಂದು ಹೇಳುತ್ತಿಲ್ಲ. ವಾಸ್ತವ ಹೇಳಿದೆ ಅಷ್ಟೇ ಎಂದು ನಗುತ್ತಾ ಹೇಳುತ್ತಾಳೆ. ಬಳಿಕ ಇಬ್ಬರೂ ಕಾರು ಹತ್ತುತ್ತಾರೆ. ಇನ್ನು ಪ್ರೀತಮ್, ರಾಣಾನಿಗೆ ಕರೆ ಮಾಡಿ ಸಖತ್ ಕ್ಲಾಸ್ ತೆಗೆದುಕೊಳ್ಳುತ್ತಾ ಇರುತ್ತಾನೆ. ನೀವು ನನ್ನ ಮೋಸದಿಂದ ಈ ರೀತಿ ಮಾಡುತ್ತಾ ಇದ್ದೀರಾ ಎಂದು ತಿಳಿಯಿತು ನನಗೆ ಮೋನಿಕಾ ಎಲ್ಲ ಹೇಳಿದಳು. ಆಕೆ ಹೇಳಿದ ವಿಡಿಯೋ ನನ್ನ ಬಳಿ ಇದೆ. ಎಲ್ಲಾ ರೆಕಾರ್ಡ್ ಮಾಡಿಕೊಂಡು ಇದ್ದೇನೆ ಎಂದು ಹೇಳುತ್ತಾನೆ.

ಪ್ರೀತಮ್ ಮಾತಿಗೆ ನಡುಗಿದ ಅರುಂಧತಿ
ಇದನ್ನು ಕೇಳಿದ ಅರುಂಧತಿ ಮನದಲ್ಲಿ ನಡುಕ ಉಂಟಾಗುತ್ತದೆ. ಈ ವೇಳೆ ರಾಣಾ, 'ಪ್ರೀತೂ ಏನೇ ಇದ್ದರೂ ಅದನ್ನು ನಾವು ನಾವೇ ಬಗೆ ಹರಿಸಿಕೊಳ್ಳೋಣ. ನಿನ್ನ ರಾಸಲೀಲೆ ವಿಡಿಯೋನಾ ನಿನಗೆ ಕೊಡುತ್ತೇನೆ ಮೋನಿಕಾ ನಮ್ಮ ಬಗ್ಗೆ ಹೇಳಿದ ವಿಡಿಯೋ ನನಗೆ ಕೊಟ್ಟು ಬಿಡು ಎಂದು ಹೇಳಿದಾಗ ಪ್ರೀತಮ್, ಇದಕ್ಕಿಂತ ಮುಂಚೆ ಹಲವು ಬಾರಿ ನನಗೆ ಇದನ್ನೇ ನೀವು ಹೇಳಿ ಮೋಸ ಮಾಡುತ್ತಾ ಬಂದಿದ್ದೀರಿ ಇದನ್ನು ನಾನು ನಂಬಬೇಕಾ? ಎಂದು ನಗುತ್ತಾ ಹೇಳುತ್ತಾನೆ.

ಪ್ರೀತಮ್ ಮಾತಿಗೆ ಎದುರಾಡದ ರಾಣಾ
ಬಳಿಕ ಅರುಂಧತಿ ಬಳಿ, ಅರುಂಧತಿ ನೀನು ನಮ್ಮ ಮನೆಗೆ ಬರಬೇಕು ಬಂದು ನನ್ನ ಅಮ್ಮನ ಕಾಲಿಗೆ ಬೀಳಬೇಕು. ಇಲ್ಲವಾದರೆ ಮತ್ತೆ ಇದೆ ನಿಮಗೆ ಎಂದು ಹೇಳುತ್ತಾನೆ ಬಳಿಕ ಕರೆ ಕಟ್ ಮಾಡುತ್ತಾನೆ. ಇದನ್ನು ಕೇಳಿದ ಅರುಂಧತಿ ಬಹಳ ಶಾಕ್ ಆಗುತ್ತದೆ. ಇನ್ನು ಪಾರು ಮಾರ್ಕೆಟ್‌ಗೆ ತೆರಳುತ್ತಾಳೆ. ಈ ವೇಳೆ ಮೋನಿಕಾ, ಪಾರು ಬಳಿ, ಅಲ್ಲ ಅರಸನ ಕೋಟೆಯಂತ ಮನೆತನದವರು ನೀವು, ನೀವೇ ಇಂತಹ ಮಾರ್ಕೆಟ್‌ನಲ್ಲಿ ತರಕಾರಿ ತಗೋಳೋದ ಎಂದು ಕೇಳಿದಾಗ ಪಾರು ಮಾತ್ರ ಇದಾವುದನ್ನೂ ಲೆಕ್ಕಿಸದೆ ಮೋನಿಕಾಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾಳೆ. ಮೋನಿಕಾ ಎಲ್ಲಾದರೂ ತಪ್ಪಿಸಿಕೊಂಡು ಹೋಗಬೇಕು ಎಂದು ಯೋಜನೆ ಬೇರೆ ಹಾಕಿಕೊಳ್ಳುತ್ತಾ ಇರುತ್ತಾಳೆ.

ಪಾರುಯಿಂದ ತಪ್ಪಿಸಿಕೊಂಡ ಮೋನಿಕಾ
ತರಕಾರಿ ತೆಗೆದುಕೊಳ್ಳಬೇಕಾದರೆ ಪಾರುಗೆ ಅಖಿಲಾ ಕರೆ ಮಾಡುತ್ತಾರೆ ಕೆಸುವಿನ ಸೊಪ್ಪು ತೆಗೆದುಕೋ ಪತ್ರೊಡೆ ಮಾಡೋಣ ಬೇರೆ ಏನೆಲ್ಲಾ ಫ್ರೆಶ್ ತರಕಾರಿ ಇದೆಯೋ ಅದನ್ನೆಲ್ಲ ತೆಗೆದುಕೋ ಎಂದು ಹೇಳಿ ಕರೆ ಕಟ್ ಮಾಡಿ ಹಿಂದೆ ತಿರುಗಿ ನೋಡಿದಾಗ ಮೋನಿಕಾ ಇರುವುದಿಲ್ಲ. ಇದನ್ನು ನೋಡಿದ ಮೋನಿಕಾ ಎಲ್ಲೆಡೆ ಹುಡುಕುತ್ತ ಇರುತ್ತಾಳೆ. ಮೋನಿಕಾ ಮಾತ್ರ ಪಾರು ಕೈಗೆ ಸಿಗಬಾರದು ಎಂದು ಒಂದೇ ಸಮನೆ ಓಡುತ್ತ ಇರುತ್ತಾಳೆ. ಇತ್ತ ಪಾರು-ಆದಿಗೆ ಕರೆ ಮಾಡುತ್ತಾಳೆ. ಮೋನಿಕಾ ಕಾಣಿಸದೆ ಇರುವ ವಿಚಾರ ತಿಳಿದು ಆದಿ ಕಂಗಾಲಾಗಿದ್ದಾನೆ ಮುಂದೇನು ಕಾದು ನೋಡಬೇಕಿದೆ.