Paaru: ಮಗ-ಸೊಸೆಯನ್ನು ಮನೆಗೆ ಕರೆಯಲು ಮುಂದಾದ ಅಖಿಲ.. ತಾಯಿಯ ಮಾತಿನಂತೆ ನಡೆದುಕೊಳ್ಳುತ್ತಾನಾ ಆದಿ?

By ಪೂರ್ವ

ಪಾರ್ವತಿ ಕೆಲಸಕ್ಕೆ ಹೋಗುತ್ತಿರುವ ವಿಚಾರ ಇದೀಗ ಮನೆಯವರಿಗೆ ತಿಳಿದಿಲ್ಲ. ಪಾರುವಿನ ಪ್ರತಿ ಹೆಜ್ಜೆಯನ್ನೂ ಕಂಡು ಹಿಡಿಯುತ್ತಿದ್ದ ಆದಿಗೆ ಈ ಬಾರಿ ಮಾತ್ರ ಏನೂ ತಿಳಿದೇ ಇಲ್ಲ. ಇತ್ತ ಕಂಠಿಗೆ ತಿಂಗಳ ಹಣವನ್ನು ಕೊಡಬೇಕಿತ್ತು. ಆದಿ ಹಾಗೂ ಮನೆಯವರು ಆ ಹಣವನ್ನು ಲೆಕ್ಕ ಹಾಕುತ್ತಾ ಇರುವಾಗ 5000 ಕಡಿಮೆ ಬಂದಿದೆ.

ಇದನ್ನು ನೋಡಿದ ಪಾರು ಐದು ಸಾವಿರ ತಂದು ಕೊಡುತ್ತಾಳೆ. ಇದನ್ನು ಕಂಡ ಆದಿಗೆ ಶಾಕ್ ಆಗಿದೆ. ಪಾರು ಮನೆಯಲ್ಲೇ ಇರುತ್ತಾಳೆ. ಆಕೆಯ ಬಳಿ ಇಷ್ಟೊಂದು ಹಣ ಎಲ್ಲಿಂದ ಬಂತು? ಎಂದು ಯೋಚನೆ ಮಾಡುತ್ತಿರುತ್ತಾರೆ.

Kannada serial Paaru written updated on 16th May

ಆ ಬಳಿಕ ಪಾರು ಏನೇನೋ ಸಬೂಬು ಹೇಳಿ ಸುಮ್ಮನೆ ಆಗುತ್ತಾಳೆ. ಆ ಬಳಿಕ ಪ್ರೀತಮ್ ಅಣ್ಣನ ಬಳಿಗೆ ಬರುತ್ತಾನೆ. ಪ್ರೀತಮ್‌ನ ಕಂಡು ತಗೋ ಪ್ರೀತಮ್ ಹಣ ಎಂದಾಗ ಪ್ರೀತಮ್‌ ಹಾಗೂ ಮನೆಯವರಿಗೆ ಶಾಕ್ ಆಗುತ್ತೆ.

ಅಣ್ಣನ ಮಾತಿಗೆ ಪ್ರೀತಮ್ ಶಾಕ್

"ಅಣ್ಣ ನಾನು ಹಣ ಕೊಟ್ಟಿರುವುದು ನಿನಗೆ ಬೇಸರ ತಂದಿದೆ ಅನ್ನೋದು ನಿಜ . ಆದರೆ, ನಾನು ನಿನ್ನ ಘನತೆ ಕಡಿಮೆ ಆಗಬಾರದು ಎಂದು ಹಣ ಕೊಟ್ಟಿದ್ದೆ. ಅದು ಬಿಟ್ಟು ಬೇರೆ ಏನು ಇಲ್ಲ" ಎಂದಾಗ ಆದಿ ಮಾತ್ರ ತಮ್ಮನ ಬಗ್ಗೆ ಹೆಮ್ಮೆ ಪಡುತ್ತಾನೆ. ಹಾಗೆಯೇ ಕೈಯಲ್ಲಿ ಇದ್ದ ಹಣವನ್ನು ಕೊಡುತ್ತಾನೆ. ಇನ್ನು ಅಖಿಲಾಂಡೆಶ್ವರಿ ಮಾತ್ರ ತನ್ನ ಮಗ ಸೊಸೆಯನ್ನು ಹೇಗಾದರೂ ಮಾಡಿ ಮನೆಗೆ ಕರೆದುಕೊಂಡು ಬರಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

ಆಗ ಅಖಿಲ ತನ್ನ ಗಂಡನ ಬಳಿ ಹೇಳುತ್ತಾಳೆ. "ರಘು.. ರಾಣಾ ನಮ್ಮ ಕೈಗೆ ಸಿಗುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ. ಆತನ ಬೈಕ್ ನಂಬರ್ ಪ್ಲೇಟ್‌ನ ಫೋಟೋ ತೆಗೆದುಕೊಂಡು ಬಂದಿದ್ದಾರೆ ಪೊಲೀಸರು. ಆತನನ್ನು ಹುಡುಕುವ ಎಲ್ಲಾ ಪ್ಲಾನ್ ಮಾಡುತ್ತಾ ಇದ್ದಾರೆ" ಎಂದು ಹೇಳಿದಾಗ ರಘುಗೆ ಖುಷಿ ಆಗುತ್ತೆ. ಆದರೆ ಅಖಿಲ ಖುಷಿ ಪಡುವುದು ತನ್ನ ಮಕ್ಕಳು ಮನೆ ಸೇರಲು ಇನ್ಯಾರ ಅಡ್ಡಿ ಆತಂಕ ಇಲ್ಲ ಎಂಬ ಕಾರಣಕ್ಕೆ.

Kannada serial Paaru written updated on 16th May

ಸೀಮಂತ ಖುಷಿಯಲ್ಲಿ ಜನನಿ

ಇನ್ನೂ ಪಾರ್ವತಿ ಹಾಗೂ ಜನನಿ ಸೀಮಂತವನ್ನು ಒಟ್ಟಾಗಿ ಮಾಡಬೇಕು ಎಂದು ರಘು ಬಳಿ ಹೇಳುತ್ತಾರೆ. ರಘು ಮಾತ್ರ ಅಖಿಲ ಮಾತಿನಿಂದ ಬಹಳ ಖುಷಿ ಪಡುತ್ತಾನೆ. ಇನ್ನು ಜನನಿ ತನ್ನ ಚಿಕ್ಕಮ್ಮನ ಬಳಿ ಬಂದು ಬುದ್ದಿ ಮಾತನ್ನು ಹೇಳುತ್ತಾಳೆ. ಹಾಗೆಯೇ ದಾಮಿನಿ ಜೊತೆ ಸೇರಿಕೊಳ್ಳಬೇಡಿ ಎಂದು ಜನನಿ ತನ್ನ ಚಿಕ್ಕಮ್ಮನ ಬಳಿ ಕೇಳಿಕೊಂಡು ಇರುತ್ತಾಳೆ.

ಇದನ್ನು ನೋಡಿದ ರತ್ನವೇಣಿ ನಾನು ಏನು ತಪ್ಪು ಮಾಡಿಲ್ಲ ಅನ್ನುವ ಹಾಗೆಯೇ ಇದ್ದಳು. ಆದರೆ ಜನನಿ ಹೇಳಿದ ಮಾತುಗಳನ್ನು ಕೇಳಿ ಏನು ಮಾಡಬೇಕು ಎಂದು ತಿಳಿಯದೇ ಆಗಿ ಹೋಗುತ್ತದೆ . ಇನ್ನೂ ಜನನಿ ಹಾಗೂ ಆಕೆಯ ಚಿಕ್ಕಮ್ಮ ಊಟ ಮಾಡಿದ ಬಳಿಕ ವಾಕಿಂಗ್ ಮಾಡುತ್ತಾ ಇರುತ್ತಾರೆ.

ಅಖಿಲ ಮಾತಿಗೆ ಬೇಸರಗೊಂಡ ರತ್ನವೇಣಿ

ಅಖಿಲ ಬಂದು ರತ್ನವೇಣಿ ಬಳಿ ಹೇಳುತ್ತಾರೆ. ರತ್ನವೇಣಿ ಅವರೇ ನೀವು ಹೇಳಿದ ದಿನಾಂಕ ತುಂಬಾ ಪ್ರಶಸ್ತ ವಾಗಿದೆ ಅವತ್ತೇ ಸೀಮಂತ ಶಾಸ್ತ್ರ ಇಟ್ಟುಕೊಂಡು ಬಿಡೋಣ ಎಂದು ಹೇಳುತ್ತಾರೆ. ಇದನ್ನು ಕೇಳಿದ ರತ್ನವೇಣಿಗೆ ಎನು ಮಾಡಬೇಕೋ ತಿಳಿಯದೇ ಸುಮ್ಮನೆ ಆಗುತ್ತಾರೆ. ಜನನಿ ಬಳಿ ಪ್ರೀತಮ್ ಬಗ್ಗೆ ಕೇಳುತ್ತಾರೆ. ಅಖಿಲ ಆಗ ನಾಳೆ ನೀವು ಇಬ್ಬರೂ ನನ್ನ ಬಳಿ ಮಾತನಾಡಲು ಬರಬೇಕು ಎಂದು ಹೇಳುತ್ತಾರೆ. ಇದನ್ನು ಕೇಳಿದ ಜನನಿ ಆ ಬಳಿಕ ಮೆತ್ತಗೆ ರೂಮ್ ಕಡೆ ಮುಖ ಮಾಡುತ್ತಾಳೆ. ಇತ್ತ ರತ್ನ ವೇಣಿ ಗೆ ಮಾತ್ರ ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾಳೆ.

More from Filmibeat

English summary
Kannada serial Paaru written updated on 16th May, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X