ಅಣ್ಣನಿಗೆ ಶೂಟ್ ಮಾಡಿದ್ದು ನಾನೇ ಎಂದ ಪ್ರೀತು: ಅಖಿಲಾಗೆ ಶಾಕ್
ಅಖಿಲಾ ತನ್ನ ಮಗನಿಗೆ ಏನಾಯ್ತೋ? ಯಾರು ಶೂಟ್ ಮಾಡಿದ್ದಾರೋ? ಎಂದು ಗೋಳಾಡುತ್ತ ಆಸ್ಪತ್ರೆಯತ್ತ ಬರುತ್ತಾರೆ. ಅಲ್ಲಿ ರಘುವನ್ನು ಕಂಡ ಅಖಿಲಾ ಏನಾಯ್ತು ರಘು ನನ್ನ ಮಗನಿಗೆ ಯಾರು ಶೂಟ್ ಮಾಡಿರುವುದು, ಎಂದು ಜೋರಾಗಿ ಅಳುತ್ತಾಳೆ. ಅಖಿಲಾ ಆಳುತ್ತಿರುವುದನ್ನು ಕಂಡ ಪಾರು ಕೂಡ ಜೋರಾಗಿ ಅಳುತ್ತಾಳೆ. ಹೇಗಿದ್ದಾನೆ ಆದಿ? ಡಾಕ್ಟರ್ ಬಳಿ ವಿಚಾರ ಮಾಡಿದ್ರಾ ಹೇಗಿದೆ ಆದಿ ಕಂಡೀಷನ್ ಎಂದು ಅಳುತ್ತಾ ಒಂದೇ ಸಮ ಕೇಳುತ್ತಾಳೆ ಅಖಿಲಾಂಡೇಶ್ವರಿ.
ಆ ವೇಳೆ ರಘು ಹೇಳುತ್ತಾನೆ, ಹಾರ್ಟ್ ಪಕ್ಕದಿಂದ ಬುಲೆಟ್ ಪಾಸಾಗಿದೆ. ಆಪರೇಶನ್ ಮಾಡುತ್ತಾ ಇದ್ದಾರೆ. ಎಂದಾಗ ಎಲ್ಲರೂ ಶಾಕ್ ಆಗುತ್ತಾರೆ. ಆ ವೇಳೆ ಅಖಿಲಾಂಡೇಶ್ವರಿ ಅಳುತ್ತಾ ಯಾರಂತೆ ಶೂಟ್ ಮಾಡಿದ್ದು? ಯಾಕೆ ಶೂಟ್ ಮಾಡಿದರು ರಘು? ನನ್ನ ಮಗನ ಮೇಲೆ ಯಾರಿಗೆ ಏಷ್ಟು ದ್ವೇಷ? ಎಂದು ಅಳುತ್ತಾ ರಘು ಬಳಿ ಕೇಳುತ್ತಾರೆ ಅಖಿಲಾ. ಆಗ ರಘು ಯಾರು ಗೊತ್ತಿಲ್ಲ ಅಖಿಲಾ ಅಲ್ಲೇ ಇದ್ದವರು ಆದಿತ್ಯನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಹೇಳುತ್ತಾನೆ.
ಆದಿ ಅಜಾತಶತ್ರು ಆತನ ಮೇಲೆ ಅಟ್ಯಾಕ್ ಆಗಿದೆ ಎಂದರೆ ನಂಬಲು ಅಸಾಧ್ಯ. ಎಂದಾಗ ಪಾರು ಜೋರಾಗಿ ಅಳುತ್ತಾಳೆ. ಆ ವೇಳೆ ಅಖಿಲಾ ಪಾರುಗೆ ಸಮಾಧಾನ ಹೇಳುತ್ತಾಳೆ. ಇನ್ನು ಆಸ್ಪತ್ರೆಗೆ ತರಾತುರಿಯಲ್ಲಿ ಆಗಮಿಸಿದ ಯಾಮಿನಿ ಹಾಗೂ ಆಕೆಯ ಗಂಡ ರಘು ಬಳಿ ಬಂದು ಏನು ಅಣ್ಣ ಆದಿಗೆ ಇನ್ನೂ ಪ್ರಜ್ಞೆ ಬರಲಿಲ್ವಾ, ಟಿವಿಯಲ್ಲಿ ಅದನ್ನೇ ತೋರಿಸುತ್ತಾ ಇದ್ದರೂ ಎಂದು ಹೇಳುತ್ತಾರೆ.

ಅರಸನ ಕೋಟೆಗೆ ಆಗಮಿಸಿದ ಪೊಲೀಸರು
ಬಳಿಕ ಯಾಮಿನಿ ಹೇಳುತ್ತಾಳೆ. ಮನೆಗೆ ಪೊಲೀಸ್ ಬಂದು ಅಕ್ಕನ ರೂಮ್ ಎಲ್ಲಾ ಸರ್ಚ್ ಮಾಡಿ ಅಕ್ಕನ ಗನ್ ತೆಗೆದುಕೊಂಡು ಹೋದರು. ಎಂದು ಹೇಳಿದಾಗ ರಘುಗೆ ಇನ್ನಷ್ಟು ಟೆನ್ಶನ್ ಆಗುತ್ತದೆ. ಬಳಿಕ ಸಾವಾರಿಸಿಕೊಂಡು ಗನ್ ತೆಗೆದುಕೊಂಡು ಹೋದ್ರಾ ಯಾಕೆ? ರಾತ್ರಿನೇ ಈ ವಿಚಾರ ನನ್ನ ಬಳಿ ಯಾಕೆ ಹೇಳಲಿಲ್ಲ ಎಂದಾಗ ಯಾಮಿನಿ ತೊದಲುತ್ತಾ ನೀವೆಲ್ಲ ಇನ್ನೂ ಟೆನ್ಶನ್ ಆಗುತ್ತಿರ ಎಂದು ಹೇಳಲಿಲ್ಲ ಎಂದು ಹೇಳುತ್ತಾಳೆ ಯಾಮಿನಿ.

ಯಾಮಿನಿಯನ್ನು ಗದರಿಸಿದ ರಘು
ಈ ವೇಳೆ ಕೋಪಗೊಂಡ ರಘು ಯಾವ ವಿಷಯ ಹೇಳಬೇಕು ಯಾವ ವಿಷಯ ಹೇಳಬಾರದು ಎಂಬ ವಿಚಾರ ನಿನಗೆ ಗೊತ್ತಿಲ್ವಾ? ಎಂದು ರೇಗುತ್ತಾರೆ. ಇನ್ನು ಆದಿಯನ್ನೂ ನೋಡಲು ಡಾಕ್ಟರ್ ಪರ್ಮಿಷನ್ ನೀಡುತ್ತಾರೆ. ಈ ವೇಳೆ ಅಖಿಲಾ ಆದಿಯನ್ನು ನೋಡಲು ಹೋಗುತ್ತಾಳೆ. ಆದಿ ಎಂದು ಎಷ್ಟೇ ಕರೆದರೂ ಆದಿಗೆ ಇದ್ಯಾವುದೂ ತಿಳಿಯದೇ ಮಲಗಿದ್ದ. ಆದಿ ನಿನ್ನ ಅಮ್ಮ ಬಂದಿದ್ದೀನಿ ಕಣೋ ಒಮ್ಮೆ ನೋಡೋ ನನ್ನ. ಒಂದು ಸಲ ಬಾಯಿ ತುಂಬಾ ಅಮ್ಮ ಅನ್ನೋ ಮಗನೇ ಎಂದು ಅಳುತ್ತಾ ಹೇಳುತ್ತಾರೆ.

ನಾನೇ ಶೂಟ್ ಮಾಡಿದ್ದು ಎಂದ ಪ್ರೀತು
ಆದಿ ಸ್ಥಿತಿ ಕಂಡು ಜೋರಾಗಿ ಅತ್ತು ಬಿಡುತ್ತಾರೆ ಅಖಿಲಾ. ಆದಿಯನ್ನೂ ನೋಡಲು ಹೋದ ಅಖಿಲಾ ವಾಪಸ್ ಬರುವ ವೇಳೆ ಪ್ರೀತು ಅಲ್ಲಿಗೆ ಬರುತ್ತಾನೆ. ಆ ವೇಳೆ ಅಖಿಲಾಂಡೇಶ್ವರಿ ಪ್ರೀತು ಬಳಿ ಕೇಳುತ್ತಾಳೆ. ಆದಿಗೆ ಶೂಟ್ ಮಾಡಿದ್ದರ ಬಗ್ಗೆ ನಿನಗೆ ಏನಾದರು ಗೊತ್ತಾ ಎಂದು ಕೇಳುತ್ತಾಳೆ. ಆಗ ಪ್ರೀತು, ಅಖಿಲಾ ಬಳಿ ಹೇಳುತ್ತಾನೆ ಅಮ್ಮ ಅಣ್ಣನಿಗೆ ಶೂಟ್ ಮಾಡಿದ್ದು ನಾನೇ ಅಮ್ಮ ಎಂದು ಅಳುತ್ತಾ ಹೇಳುತ್ತಾನೆ. ಇದನ್ನು ಕೇಳಿದ ಅಖಿಲಾಗೆ ಶಾಕ್ ಆಗುತ್ತದೆ.

ಪ್ರೀತು ಕಪಾಳಕ್ಕೆ ಹೊಡೆದ ಅಖಿಲಾ
ಆ ವೇಳೆ ಅಖಿಲಾ, ಪ್ರೀತು ಮುಖ ನೋಡಿ ಏನು ಹೆಳುತ್ತಿದ್ದಿಯಾ? ಎಂದು ಕೇಳಿದಾಗ ಪ್ರೀತು ಹೇಳುತ್ತಾನೆ ನಿಜ ಅಮ್ಮ ನಾನೇ ಶೂಟ್ ಮಾಡಿದ್ದು ಎಂದು ಹೇಳುತ್ತಾನೆ. ಇದನ್ನು ಕೇಳಿದ ಅಖಿಲಾ, ಪ್ರೀತು ಕಪಾಳಕ್ಕೆ ಬಾರಿಸುತ್ತಾಳೆ. ಅಣ್ಣನ ಶೂಟ್ ಮಾಡಿದ್ಯಲ್ಲ ನೀನು ಎಂದು ಜೋರಾಗಿ ಅಳುತ್ತಾಳೆ. ನಿನ್ನ ಮೇಲಿನ ಪ್ರೀತಿಯಿಂದ ನನ್ನ ಮಾತಿಗೆ ಬೆಲೆ ಕೊಟ್ಟು ನನ್ನ ತಮ್ಮನನ್ನು ತಿದ್ದುತ್ತೇನೆ ಎಂದು ಹೇಳುತ್ತಿದ್ದ ಆದಿ ಅಂತ ಅಣ್ಣನನ್ನೆ ನೀನು ಕೊಲೆ ಮಾಡುವ ಮಟ್ಟಕ್ಕೆ ಬಂದು ನಿಂತೆ ಅಲ್ಲ ಎಂದು ಹೇಳಿದಾಗ ಪ್ರೀತು ಅಮ್ಮನ ಬಳಿ ಅಮ್ಮ ಯಾರಿಗೋ ಗುರಿ ಇಟ್ಟು ಬಿಟ್ಟಿದ್ದೆ ಆದರೆ ಅದು ಬಂದು ಅಣ್ಣನಿಗೆ ತಾಗಿತು ಎಂದು ಹೇಳುತ್ತಾನೆ. ಇದನ್ನು ಕೇಳಿದ ಅಖಿಲಾಗೆ ಶಾಕ್ ಆಗುತ್ತದೆ ಮುಂದೇನಾಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications











