ಪಾರುಗೆ ಗದರಿದ ಅಖಿಲಾಂಡೇಶ್ವರಿ! ಅಮ್ಮನ ಮೇಲೆ ಮುನಿಸಿಕೊಂಡ ಆದಿ
'ಪಾರು' ಧಾರವಾಹಿಯಲ್ಲಿ ಅಖಿಲಾಂಡೇಶ್ವರಿ ಇದೀಗ ಬಹಳ ಯೋಚನೆಯಲ್ಲಿ ಮಗ್ನಳಾಗಿದ್ದಾಳೆ ಅಲ್ಲಿಗೆ ಬಂದ ರಘು ಜೊತೆ ತನ್ನ ಮನದ ದುಃಖವನ್ನು ಹೇಳುತ್ತಿದ್ದಾಳೆ. ಇದನ್ನು ಕೇಳಿದ ರಘು, ಅಖಿಲಾಂಡೇಶ್ವರಿಗೆ ಸಮಾಧಾನ ಹೇಳುತ್ತಾನೆ ತಾನು ಹೇಗೆಲ್ಲಾ ನನ್ನ ಸೊಸೆಗೆ ಹಿಂಸೆ ನೀಡಿದ್ದೇನೆ ಕೇವಲ ನನ್ನ ಆಸೆ ತೀರಿದರೆ ಸಾಕು ಎನ್ನುವಷ್ಟರ ಮಟ್ಟಿಗೆ ಕಿರುಕುಳ ನೀಡಿದ್ದೇನೆ. ಆದರೆ ಪಾರು ಮಾತ್ರ ಅದು ಯಾವುದನ್ನು ತಲೆಗೆ ಹಾಕಿಕೊಂಡಿಲ್ಲ. ಆಕೆ ಕಾಮಧೇನು ಇದ್ದ ಹಾಗೆಯೇ ಅಂತ ಸೊಸೆಯನ್ನು ದೂರ ತಳ್ಳಲು ಹೋಗಿದ್ದೆನಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾಳೆ.
ಬಳಿಕ, ಆಕೆಗೆ ಮಕ್ಕಳಾಗದೇ ಇರುವ ಸಂದರ್ಭ ಬರಬಹುದಾ. ಅದು ಇಲ್ಲ ಏಕೆಂದರೆ ಆದಿ ಪಾರು ಮದುವೆ ಆಗಿ ಒಂದು ವರುಷ ಕೂಡ ಆಗಿಲ್ಲ. ಇನ್ನೂ ಅವರಿಬ್ಬರೂ ಅನ್ಯೋನ್ಯವಾಗಿ ಇದ್ದಾರಾ ಅಥವಾ ಇಲ್ಲವೋ ಎನ್ನುವ ಗೊಂದಲ ಇದೆ ಈ ಬಗ್ಗೆ ಸಾವಿತ್ರಿ ಬಳಿ ಕೇಳಿದಾಗ ಆಕೆ ಅಖಿಲಾಂಡೇಶ್ವರಿ ಗೊಂದಲಕ್ಕೆ ತಕ್ಕ ಮಟ್ಟಿಗೆ ತೆರೆ ಎಳೆದಿದ್ದಾರೆ ಆದರೆ ಸಂಪೂರ್ಣವಾಗಿ ಅವರಿಗೆ ಅನುಮಾನ ಹೋಗಿಲ್ಲ. ಇದಕ್ಕೂ ಕಾರಣ ಇದೆ ಏನೆಂದರೆ ಅಖಿಲಾಂಡೇಶ್ವರಿ ಆದಿ ಪಾರು ಇರುವ ಕೋಣೆ ಬಳಿ ಹೋದಾಗ ಇಬ್ಬರು ಜೋರಾಗಿ ಮಾತನಾಡಿಕೊಳ್ಳುತ್ತಿರುತ್ತಾರೆ. ಇದನ್ನು ಕೇಳಿಸಿಕೊಂಡ ಅಖಿಲಾಂಡೇಶ್ವರಿಗೆ ಅನುಮಾನ ಮೂಡಿದೆ.

ಮಾರ್ಕೆಟ್ ಹೋಗಲು ಮುಂದಾದ ಪಾರು
ಇನ್ನು ಮನೆಯ ಕೆಲಸದಾಕೆ ತರಕಾರಿ ತರಲೆಂದು ಮಾರ್ಕೆಟ್ ಕಡೆ ಹೊರಟಿದ್ದರು. ಇದನ್ನು ನೋಡಿದ ಪಾರು ನಾನು ಮಾರ್ಕೆಟ್‌ಗೆ ಹೋಗುತ್ತೇನೆ ಮನೆಯಲ್ಲಿ ಇದ್ದು ಇದ್ದು ಬಹಳ ಬೋರ್ ಆಗಿದೆ ಆದುದರಿಂದ ನಾನು ಮಾರ್ಕೆಟ್ ಗೆ ಹೋಗಿ ಬರುತ್ತೇನೆ ಎಂದು ಹೇಳಿ ಆಕೆಯ ಕೈಯಲ್ಲಿದ್ದ ಚೀಲವನ್ನು ಪಾರು ತೆಗೆದುಕೊಳ್ಳುತ್ತಾಳೆ. ಪಾರು ಮನೆಯಿಂದ ಹೊರಗೆ ಹೋಗುವುದನ್ನು ನೋಡಿದ ಅಖಿಲಾಂಡೇಶ್ವರಿ ಎಲ್ಲಿಗೆ ಪಾರು ಹೋಗುತ್ತಿದ್ದೀ ಎಂದು ಕೇಳಿದಾಗ ಮಾರ್ಕೆಟ್ ಗೆ ತರಕಾರಿ ತರಲು ಮನೆಯಲ್ಲಿ ಇದ್ದು ಇದ್ದು ಬೋರ್ ಆಗಿದೆ ಹಾಗೆ ಹೋಗಿ ಬರುತ್ತೇನೆ ಎಂದಾಗ ಅಖಿಲಾಂಡೇಶ್ವರಿ ಮನದಲ್ಲಿ ಈಕೆಗೆ ಮೆತ್ತಗೆ ಹೇಳಿದರೆ ಅರ್ಥ ಆಗುವುದಿಲ್ಲ ಕೊಂಚ ಜೋರಾಗಿ ಹೇಳಿದರೆ ಇವಳಿಗೆ ಅರ್ಥ ಆಗುತ್ತದೆ ಎಂದು ಕೊಂಚ ಜೋರಾಗಿ ಹೇಳುತ್ತಾಳೆ.

ಅಮ್ಮನ ವಿರುದ್ಧವಾಗಿ ನಿಲ್ಲುತ್ತಾನ ಆದಿ
ಎಲ್ಲಿಗೂ ಹೋಗುವುದು ಬೇಡ. ನೀನು ಯಾವ ಕೆಲಸವನ್ನು ಮಾಡುವ ಅಗತ್ಯ ಇಲ್ಲ. ಅದನ್ನು ನಾನು ಕೇಳುವುದು ಇಲ್ಲ. ನೀನು ಈ ಮನೆಯ ಸೊಸೆ. ಇನ್ನೂ ಮೇಲೆ ಇಂತಹ ಕೆಲಸ ಮಾಡ ಬೇಡ ಎಂದು ಖಡಾ ಖಂಡಿತವಾಗಿ ಹೇಳುತ್ತಾಳೆ. ಇದನ್ನು ಕೇಳಿದ ಪಾರು ಭಯವಾಗುತ್ತದೆ. ಅಮ್ಮನ ಮಾತು ಕೇಳಿ ಆದಿಗೆ ಕೋಪ ಬರುತ್ತದೆ. ಯಾಕೆ ಅಮ್ಮ ಈ ರೀತಿ ಹೇಳುತ್ತಿದ್ದಾರೆ. ಎನ್ನುತ್ತಾ ಆತನೂ ಅಲ್ಲಿಗೆ ಬಂದು, ಪಾರ್ವತಿಯನ್ನು ಕರೆದು ಪಾರು ನೀನು ಈ ಮನೆಯ ಸೊಸೆ. ತರಕಾರಿ ತರಲು ಕೆಲಸದವರು ಇದ್ದಾರೆ ನೀನು ಮಾಡಬೇಡ. ನೀನು ಈ ಮನೆಯಲ್ಲಿ ರಾಣಿ ಥರ ಇರಬೇಕು ಎಂದು ಹೇಳಿ ಅಲ್ಲಿಂದ ಕರೆದುಕೊಂಡು ಹೋಗುತ್ತಾನೆ. ಇದನ್ನು ನೋಡಿದ ಅಖಿಲಾಂಡೇಶ್ವರಿ ಸುಮ್ಮನಿರುತ್ತಾರೆ.

ರಘುಗೆ ಆದಿ ಮೇಲೆ ಅನುಮಾನ
ರಘು ಮಾತ್ರ ಈ ವಿಚಾರವನ್ನು ಗಂಭೀರ ಆಗಿ ಪರಿಗಣಿಸಿ ಅಖಿಲಾಂಡೇಶ್ವರಿ ಬಳಿ ಬಂದು ಮಾತನಾಡುತ್ತಾನೆ. ಅಖಿಲ ನನಗೆ ಯಾಕೋ ಆದಿಗೆ ಎರಡನೇ ಮದುವೆ ವಿಚಾರ ಗೊತ್ತಾಗಿದೆ ಎಂದು ಅನ್ನಿಸುತ್ತದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಅಖಿಲಾ ಶಾಕ್ ಆಗುತ್ತಾಳೆ ಮುಂದೇನು ಎಂಬುವುದನ್ನು ನೋಡಬೇಕಿದೆ. ಇನ್ನೂ ಪ್ರೀತೂ ಕರೆ ಸ್ವೀಕರಿಸಲಿಲ್ಲ ಎಂದು ಅರುಂಧತಿ ಜನನಿ ನಂಬರ್ ತೆಗೆದುಕೊಂಡು ಆಕೆಗೆ ಕಾಲ್ ಮಾಡುತ್ತಾರೆ.

ಜನನಿಗೆ ಕರೆ ಮಾಡಿದ ರಾಣಾ
ಜನನಿ ಕಾಲ್ ಪಿಕ್ ಮಾಡಿದಾಗ ಅರುಂಧತಿ ಅಣ್ಣ ಮಾತನಾಡುತ್ತಾನೆ. ಜನನಿ ಕರೆ ಸ್ವೀಕರಿಸಿದ ವೇಳೆ ಯಾರೆಂದು ಕೇಳುವ ನಾನು ಶತ್ರು, ಪ್ರೀತೂ ಗೆಳೆಯ ಮಾತನಾಡುವುದು ಎಂದಾಗ ಹೌದಾ ಎಂದು ಹೇಳಿ ಮಾತನಾಡಬೇಕು ಎನ್ನುವಷ್ಟರಲ್ಲಿ ಪ್ರೀತು ಅಲ್ಲಿಗೆ ಬರುತ್ತಾನೆ. ಜನನಿ ಕೈಯಿಂದ ಫೋನ್ ತೆಗೆದುಕೊಂಡ ಪ್ರೀತು ಬಳಿಕ ಮಾತನಾಡುತ್ತಾನೆ. ಆ ವೇಳೆ ಪ್ರೀತು ಗೆ ಬ್ಲಾಕ್ ಮೇಲ್ ಮಾಡುತ್ತಾಳೆ ಅರುಂಧತಿ. ಫೋನ್ ಲೋಡ್ ಸ್ಪೀಕರ್ ಗೆ ಇಡುವಂತೆ ಸೂಚನೆ ನೀಡುತ್ತಾಳೆ ಆ ಪ್ರಕಾರವಾಗಿ ಲೌಡ್ ಸ್ಪೀಕರ್ ಆನ್ ಮಾಡುತ್ತಾನೆ. ಜನನಿ ಬಳಿ ಪ್ರೀತು ನನ್ನ ಬಳಿ ಜಗಳ ಮಾಡಿದ್ದಾನೆ. ದಯಮಾಡಿ ಅವನು ನನ್ನ ಬಳಿ ಮಾತನಾಡುತ್ತಾ ಇಲ್ಲ ಎಂದು ಹೇಳುತ್ತಾನೆ. ಬಳಿಕ ಅರುಂಧತಿ ಅಣ್ಣ ಹೇಳುತ್ತಾನೆ ನಾಳೆ ನನ್ನನ್ನು ಮೀಟ್ ಆಗಲು ಹೇಳಿ ಜನನಿ ಅವರೆ ಎಂದಾಗ ಪ್ರೀತು ಹೇಳುತ್ತಾನೆ ಸರಿ ಮೀಟ್ ಆಗುತ್ತೇನೆ ಎಂದು ಹೇಳಿ ಕಾಲ್ ಇಡುತ್ತಾನೆ. ಇನ್ನೂ ಜನನಿ ಬಳಿ ಹೇಳುತ್ತಾನೆ ಆತ ಸರಿ ಇಲ್ಲ ಎಂದು ಮುಂದೆ ಎನು ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











