Paaru: ಅರಸನ ಕೋಟೆಗೆ ಬರಲು ಒಪ್ಪದ ಪಾರು: ಆಕೆಯನ್ನು ಹೇಗೆ ಒಪ್ಪಿಸುತ್ತಾನೆ ಆದಿ?
ಪಾರು ಧಾರಾವಾಹಿ ಕಥೆ ನೀರಸವಾಗಿ ಸಾಗುತ್ತಿದೆ. ಈಗ ಪಾರು ತಮ್ಮ ಹನುಮಂತು ಕ್ಷಮೆ ಕೇಳುತ್ತಾನೆ. ಯಾಕೆಂದರೆ ಆತ ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ದುಡಿಯಲು ಹೋಗುತ್ತಿದ್ದ. ಈ ವಿಚಾರ ತಿಳಿದು ಹನುಮಂತು ತಂದೆ ಬಹಳ ಬೇಸರ ಪಟ್ಟುಕೊಂಡಿದ್ದ. ಮಗ ಕ್ಷಮೆ ಕೇಳಿದ್ದನ್ನು ನೋಡಿ ಆ ಬಳಿಕ ಸುಮ್ಮನೆ ಆಗುತ್ತಾನೆ. ಮಗನನ್ನು ತಬ್ಬಿಕೊಂಡು ಅಳುತ್ತಾನೆ.
ಆ ಬಳಿಕ ಅಲ್ಲಿಂದ ಪಾರೂ ತನ್ನ ತಂದೆಯನ್ನು ಮೊದಲಿಗೆ ಕೆಲಸಕ್ಕೆ ಕಳುಹಿಸಿ ತಮ್ಮನನ್ನು ಕಾಲೇಜಿ ಗೆ ಕಳುಹಿಸುತ್ತಾಳೆ. ಆದಿ ಮಾತ್ರ ಇವತ್ತು ಒಂದು ದಿನ ನಿನ್ನ ಜೊತೆ ಇರುತ್ತೇನೆ ಪಾರು ಎಂದು ಹೇಳಿದಾಗ ಪಾರು ಬೇಡವೇ ಬೇಡ ಎನ್ನುವಂತೆ ಮಾತನಾಡುತ್ತಾಳೆ. ಆದಿ ಬೇರೆ ವಿಧಿ ಇಲ್ಲದೇ ಕೆಲಸಕ್ಕೆ ಹೊರಡುತ್ತಾನೆ. ಪಾರು ಹಣೆಗೆ ಮುತ್ತಿಟ್ಟು ಅಲ್ಲಿಂದ ಆದಿ ಹೊರಟು ಹೋಗುತ್ತಾನೆ.

ಇನ್ನು ಪಾರು ಬಟ್ಟೆ ಬದಲಿಸಿಕೊಂಡು ಕೆಲಸಕ್ಕೆ ಹೋಗುತ್ತಾಳೆ. ಸಂಗೀತಳಿಗೆ ಆಕೆ ಬಗೆ ಬಗೆ ತಿಂಡಿಗಳನ್ನು ಮಾಡಿ ಬಡಿಸಿಸುತ್ತಾಳೆ. ಆಕೆಗೆ ಬಹಳ ಖುಷಿ ಆಗಿ ಪಾರು ಕೈ ರುಚಿಯನ್ನು ಸವಿಯುತ್ತಾಳೆ. ಇನ್ನು ರತ್ನವೇಣಿ ಮಾತ್ರ ಬಹಳ ಕೋಪಗೊಂಡು ಇರುತ್ತಾಳೆ. ಪಾರು ಹಾಗೂ ಜನನಿಗೆ ಸೀಮಂತ ಶಾಸ್ತ್ರ ಒಂದೇ ದಿನ ಮಾಡಬೇಕು ಎಂದು ಅಖಿಲ ಹೇಳಿದ ಬಳಿಕ ಬಹಳ ಅಸಮಾಧಾನಗೊಂಡು ಇರುತ್ತಾರೆ.
ಅಖಿಲ ಮಾತಿನಿಂದ ರತ್ನವೇಣಿ ಅಸಮಾಧಾನ
ಇತ್ತ ದಾಮಿನಿ ಮಾತ್ರ ಏನು ಮಾಡುವ ಸ್ಥಿತಿಯಲ್ಲಿ ಇಲ್ಲ. ಆಕೆಯ ಬಳಿ ತಾವಿಬ್ಬರೂ ಅಡಗಿ ಕುಳಿತು ಅಖಿಲ- ರಘು ಮಾತನಾಡುತ್ತಾ ಇರುವುದನ್ನು ಕದ್ದು ಕೇಳಿಸಿಕೊಂಡಿದನ್ನು ಜನನಿ ನೋಡಿರುತ್ತಾಳೆ. ಇದನ್ನು ದಾಮಿನಿ ಬಳಿ ರತ್ನವೇಣಿ ಹೇಳಿದಾಗ ಆಕೆಗೆ ಬಹಳ ಭಯ ಆಗುತ್ತದೆ. ಇನ್ನು ಅಖಿಲಾಂಡೇಶ್ವರಿ, ಪ್ರೀತಮ್ ಬಳಿ ಮಾತನಾಡುತ್ತಾ ಇರುತ್ತಾರೆ.

ಪ್ರೀತಮ್‌ಗೆ ಹೊಸ ಜವಾಬ್ದಾರಿ
ಪ್ರೀತಮ್ ನಿನಗೆ ಒಂದು ನಾನು ಜವಾಬ್ದಾರಿ ವಹಿಸಿ ಬಿಡುತ್ತೇನೆ ಎಂದು ಅಖಿಲಾಂಡೇಶ್ವರಿ ಹೇಳಲು ಮುಂದಾಗುತ್ತಾಳೆ. ಅಷ್ಟರಲ್ಲೇ ಪ್ರೀತಮ್ ನನಗೆ ಆಫೀಸ್‌ನಲ್ಲಿ ತುಂಬಾ ಕೆಲಸ ಇದೆ ಅಮ್ಮ, ಅಣ್ಣ ಇಲ್ಲದೇ ಎಲ್ಲಾ ಕೆಲಸ ಪೆಂಡಿಂಗ್ ಇದೆ. ಇದೀಗ ಇನ್ನೊಂದು ಕೆಲಸ ಎಂದರೆ ಹೇಗೆ ಮಾಡುವುದು ಎಂದು ಹೇಳುತ್ತಾನೆ.
ಅರಸನಕೋಟೆಯಲ್ಲಿ ಹಬ್ಬದ ವಾತಾವರಣ
ಏನಪ್ಪಾ ನಿನ್ನ ಅಣ್ಣ ಹಾಗೂ ಅತ್ತಿಗೆಯನ್ನು ಮನೆಗೆ ಕರೆದುಕೊಂಡು ಬರುವ ಜವಾಬ್ದಾರಿ ಕೂಡ ಬೇಡವಾ ಎನ್ನುತ್ತಾಳೆ. ಇದನ್ನು ಕೇಳಿ ಮನೆ ಮಂದಿಗೆ ಬಹಳ ಖುಷಿ ಆಗುತ್ತದೆ. ಜನನಿಗೆ ಕೂಡ ಬಹಳ ಖುಷಿಪಡುತ್ತಾಳೆ. ಇನ್ನು ಪಾರು ಹಾಗೂ ಸಂಗೀತ ಮಾತನಾಡುತ್ತಾ ಇರುತ್ತಾರೆ. ಆಗ ಸಂಗೀತ ಊಟ ಮುಗಿಸಿ ಕೈ ತೊಳೆದು ಬಂದು ಪಾರುವನ್ನು ತಬ್ಬಿಕೊಂಡು ಹೇಳುತ್ತಾಳೆ. ಇವತ್ತು ಅಡುಗೆ ಮಾಡಿದ್ದು ನನ್ನ ತಾಯಿ ನನಗೆ ಅಡುಗೆ ಮಾಡಿ ಬಡಿಸಿದ ಹಾಗೆಯೇ ಇತ್ತು. ಎಂದು ಹೇಳಿ ತಬ್ಬಿಕೊಂಡ ವೇಳೆ ಪಾರು ಹೊಟ್ಟೆ ಸಂಗೀತ ಹೊಟ್ಟೆಗೆ ತಾಗಿದಾಗ ಸಂಗೀತಗೆ ಅನುಮಾನ ಬರುತ್ತದೆ

ಪಾರು ಕೈರುಚಿ ಸವಿದು ಖುಷಿ ಪಟ್ಟ ಸಂಗೀತ
ಆಕೆ ಪಾರು ಹೊಟ್ಟೆಯನ್ನು ಮುಟ್ಟಲು ಕೈ ಮುಂದೆ ಮಾಡಿದಾಗ ಪಾರು ಹಿಂದೆ ಸರಿದು ನಿಲ್ಲುತ್ತಾಳೆ. ಇನ್ನು ಜನನಿ ಹಾಗೂ ಪ್ರೀತಮ್ ಅಣ್ಣ ಅತ್ತಿಗೆಯನ್ನು ಕರೆದುಕೊಂಡು ಹೋಗಲು ಬರುತ್ತಾರೆ. ಆದರೆ ಎಲ್ಲಾ ವಿಚಾರವನ್ನು ಆದಿ ಬಳಿ ಹೇಳುತ್ತಾರೆ. ಅಮ್ಮ ಬಹಳ ನೊಂದಿದ್ದಾರೆ, ಆಕೆಗೆ ಎಲ್ಲರೂ ಒಂದಾಗಿ ಇರಬೇಕು ಎಂಬ ಆಸೆ. ಆಸ್ತಿಯಲ್ಲಿ ಪಾಲು ಬೇಕು ಎಂದು ಕೇಳಿದಾಗ ಆಕೆಗೆ ಬಹಳ ನೋವು ಆಗಿತ್ತು. ಆದಕ್ಕೆ ಅಷ್ಟು ಕಠೋರವಾಗಿ ನಡೆದುಕೊಂಡರು. ಆದರೆ ಇದೀಗ ಅಮ್ಮ ನನ್ನನ್ನು ಕರೆದು ಹೇಳಿದ್ದಾರೆ.
ಅಣ್ಣ ಅತ್ತಿಗೆಯನ್ನು ಮನೆಗೆ ಕರೆದುಕೊಂಡು ಬಾ ಎಂದು ತಿಳಿಸಿದ್ದಾರೆ. ಅದಕ್ಕೆ ನಿನ್ನನ್ನು ಆದಷ್ಟು ಬೇಗ ಬರಲು ಹೇಳಿದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಆದಿಗೆ ಸಂತಸ ಆದ್ರು ಪಾರು ಹಿಂದೇಟು ಹಾಕುತ್ತಾ ಇದ್ದಾಳೆ.


Click it and Unblock the Notifications











