Paaru: ಅಖಿಲಾಂಡೇಶ್ವರಿ ಕರೆದರೂ ಪಾರು-ಆದಿ ಮನೆಗೆ ಬರಲಿಲ್ಲ.. ಮುಂದೆನಾಗುತ್ತೆ?
'ಪಾರು' ಧಾರಾವಾಹಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಪಾರು ಇದೀಗ ಸಂಗೀತಾಗೆ ಅಕ್ಕಿ ರೊಟ್ಟಿ ಮಾಡಿ ಕೊಡುತ್ತಾ ಇದ್ದಾಳೆ. ಅಕ್ಕಿ ರೊಟ್ಟಿಯನ್ನು ತಿಂದ ಸಂಗೀತಗೆ ಒಂದು ಸಲ ಆಕೆಯ ತಾಯಿ ಅಡುಗೆ ಮಾಡಿ ಬಡಿಸಿದ ಹಾಗೆ ಅನ್ನಿಸುತ್ತಿತ್ತು. ಈ ವಿಚಾರವನ್ನು ಪಾರು ಬಳಿ ಹೇಳಿ ಬಹಳ ಖುಷಿ ಪಡುತ್ತಾ ಇದ್ದಳು ಸಂಗೀತಾ.
ಆ ಬಳಿಕ ಅಡುಗೆ ಮನೆಗೆ ಹೋಗಿ ಅಡುಗೆ ಮಾಡಲು ತೊಡಗುತ್ತಾಳೆ. ಅಡುಗೆ ಮಾಡುವಲ್ಲಿಗೆ ಸಂಗೀತ ಬಂದು ಮಾತನಾಡುತ್ತಾ ಇರುವಾಗ ಗ್ಯಾಸ್ ಖಾಲಿ ಆಗಿ ಹೋಗಿ ಇರುತ್ತದೆ. ಇನ್ನು ಸಂಗೀತಾ, ಪಾರು ಬಳಿ ಸಿಲಿಂಡರ್ ಚೇಂಜ್ ಮಾಡಲು ಹೇಳಿದಾಗ ಪಾರುಗೆ ದಿಕ್ಕೇ ತೋಚದ ಹಾಗೆ ಆಗುತ್ತದೆ.

ಗ್ಯಾಸ್ ಚೇಂಜ್ ಮಾಡಿ ಅಡುಗೆ ಮಾಡಿದ ಪಾರು
ಕೊನೆಗೆ ಆಕೆ ಹೇಗಾದರೂ ಮಾಡಿ ಸಿಲಿಂಡರ್ ಬದಲಾಯಿಸಿ ಅಡುಗೆ ಮಾಡಿ ಬಡಿಸುತ್ತಾಳೆ. ಇದನ್ನು ನೋಡಿದ ಸಂಗೀತಾಗೆ ಬಹಳ ಖುಷಿ ಆಗುತ್ತದೆ. ಇನ್ನು ಅಖಿಲಾಂಡೇಶ್ವರಿ ಮಾತ್ರ ಪ್ರೀತಮ್‌ನನ್ನು ಕರೆದು, ಆದಿ-ಪಾರುವನ್ನು ಮನೆಗೆ ಕರೆದುಕೊಂಡು ಬರುವಂತೆ ಹೇಳುತ್ತಾಳೆ. ಅಮ್ಮನ ಮಾತಿನ ಹಾಗೆಯೇ ಆದಿಗೆ ಪ್ರೀತಮ್ ಕರೆ ಮಾಡಿ ಮನೆಯ ಬಳಿ ಕರೆಸಿಕೊಳ್ಳುತ್ತಿತ್ತಾರೆ.
ಆದಿಗೆ ಕರೆ ಮಾಡಿದ ಪ್ರೀತಮ್
ಇನ್ನು ಆದಿ ಮನೆಗೆ ಬರುವ ವೇಳೆ ಅಲ್ಲಿ ಜನನಿ ಹಾಗೂ ಪ್ರೀತಮ್ ನಿಂತು ಕಾಯುತ್ತಿರುತ್ತಾರೆ. ಮನೆಗೆ ಬೀಗ ಹಾಕಿರುವುದನ್ನು ಕಂಡ ಆದಿಗೆ ಪಾರು ಎಲ್ಲಿಗೆ ಹೋಗಿದ್ದಾಳೆ ಎಂಬುವುದೇ ದೊಡ್ಡ ಚಿಂತೆ ಆಗಿ ಬಿಟ್ಟಿತು. ಪಾರುಗೆ ಕರೆ ಮಾಡಿದಾಗ ಆಕೆ ಮನೆಯ ಎದುರು ನಿಂತುಕೊಂಡಿದ್ದಳು. ಪಾರು ಬಳಿ ಆದಿ ಎಲ್ಲಿಗೆ ಹೋಗಿದ್ದೆ ಎಂದೆಲ್ಲ ವಿಚಾರಣೆ ಮಾಡುತ್ತಾನೆ. ಹಾಗೆಯೇ ಪಾರು ಚೂಡಿದಾರ ಧರಿಸುವುದನ್ನು ನೋಡಿದ ಆದಿಗೆ ಶಾಕ್ ಆಗುತ್ತದೆ.

ಸ್ನಾನ ಮಾತು ಕೇಳಿ ಶಾಕ್ ಆದ ಪ್ರೀತಮ್
ಇನ್ನು ಜನನಿ ಹಾಗೂ ಪ್ರೀತಮ್‌ಗೂ ಶಾಕ್ ಆಗುತ್ತದೆ. ಅನಾಥ ಆಶ್ರಮಕ್ಕೆ ಬಟ್ಟೆ ಕೊಡುತ್ತೇನೆ ಎಂದು ಬಟ್ಟೆ ತೆಗೆದುಕೊಂಡು ಹೋಗಿದ್ದರು. ಇದೀಗ ಅವರೇ ಬಟ್ಟೆ ಹಾಕುತ್ತ ಇದ್ದಾರೆ ಅಲ್ವಾ ಎಂದು ಶಾಕ್ ಆಗುತ್ತಾರೆ. ಇನ್ನು ಅಖಿಲಾಂಡೇಶ್ವರಿ ಹೇಳಿದ ಹಾಗೆಯೇ ಪ್ರೀತಮ್ ಹಾಗೂ ಜನನಿ ನಡೆದುಕೊಂಡು ಇರುತ್ತಾರೆ. ಆದರೆ ಪಾರು ಮಾತ್ರ ಅರಸನ ಕೋಟೆಗೆ ಬರಲು ಹಿಂದೇಟು ಹಾಕುತ್ತಾರೆ .
ನಾಳೆ ಸೀಮಂತ ಶಾಸ್ತ್ರ ಮಾಡಲು ಇದೆ ಎಂದು ಹೇಳಿದರು ಆದಿ ಅದಕ್ಕೂ ಒಪ್ಪಲೇ ಇಲ್ಲ. ಅಮ್ಮ ಆಡಿದ ಮಾತುಗಳು ನನ್ನ ಕಣ್ಣ ಮುಂದೆ ಹಾಗೆಯೇ ಇದೆ. ಆಕೆಗೆ ಏನು ತೊಂದರೆ ಆಗಬಾರದು ಎಂದು ಹೇಳಿ ಮನೆಗೆ ಬರಲು ಒಪ್ಪಲೇ ಇಲ್ಲ. ಆದರೆ, ಪಾರು ಸಂಗೀತ ಮನೆಗೆ ಹೋಗಲು ಆಗುವುದು ಇಲ್ಲ ಎಂಬ ಕಾರಣಕ್ಕೆ ಪಾರು ಸುಮ್ಮನೆ ಇರುತ್ತಾಳೆ.
ಮನದಲ್ಲಿ ಖುಷಿ ಪಡುತ್ತಾ ಇರುವ ಅಖಿಲ
ಅಖಿಲಾಂಡೇಶ್ವರಿ ಮಾತ್ರ ಆದಿ ಪಾರು ರೂಮ್ ಅನ್ನು ಅಚ್ಚು ಕಟ್ಟಾಗಿ ಇಡಲು ಸಾವಿತ್ರಿ ಬಳಿ ಹೇಳುತ್ತಾಳೆ. ಇದೆಲ್ಲವನ್ನೂ ಕೇಳಿದ ಸಾವಿತ್ರಿಗೆ ಬಹಳ ಖುಷಿಯಾಗುತ್ತದೆ. ಪಾರು ಹಾಗೂ ಆದಿ ಮನೆಗೆ ಬರುತ್ತಾ ಇದ್ದಾರೆ ಎನ್ನುವುದು ಅಖಿಲಾಗೆ ಬಹಳ ಖುಷಿ ಸುದ್ದಿಯಾಗಿದೆ. ಸಾವಿತ್ರಿ ಮಾತ್ರ ಈ ಖುಷಿಯನ್ನು ಸಂಭ್ರಮಿಸುತ್ತಿದ್ದರು. ಇನ್ನು ಪ್ರೀತಮ್ ಹಾಗೂ ಜನನಿ ಮುಖ ಸಪ್ಪಗೆ ಮಾಡಿಕೊಂಡು ಮನೆಗೆ ಬರುತ್ತಾರೆ.
ಮನೆಗೆ ಬಂದ ಜನನಿ ಬಳಿ ಅಖಿಲ, ಏನು ಪಾರು ಹಾಗೂ ಆದಿ ಬಂದೆ ಇಲ್ಲ ಎಂದು ಕೇಳುತ್ತಾರೆ. ಇದನ್ನು ಕೇಳಿದಾಗ ಪ್ರೀತಮ್ ಹೇಳುತ್ತಾನೆ. "ಅಮ್ಮ ನೀವು ಅಂದು ಆಡಿದ ಮಾತಿಗೆ ಅವರು ಇನ್ನೂ ಬೇಸರ ಮಾಡಿಕೊಂಡಿದ್ದಾರೆ. ಆ ಕಾರಣದಿಂದ ಅವರು ಮಾತ್ರ ಬರಲು ಒಪ್ಪುತ್ತಿಲ್ಲ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಅಖಿಲಾಗೆ ಬಹಳ ಬೇಸರ ಆಗಿದೆ. ಮುಂದೆ ಪಾರು, ಆದಿ ಮನೆ ಹಿಂತಿರುಗುತ್ತಾರಾ? ಇಲ್ವಾ? ಅನ್ನೋದು ಕುತೂಹಲಘಟ್ಟ ತಲುಪಿದೆ.


Click it and Unblock the Notifications











