ಮಗನ ಕೊಲೆ ಆರೋಪ ಹೊತ್ತು ಜೈಲು ಪಾಲಾದ ಅಖಿಲಾಂಡೇಶ್ವರಿ!
ಅಖಿಲಾಂಡೇಶ್ವರಿ ತನ್ನ ಮಕ್ಕಳಿಗೋಸ್ಕರ ಅದೆಷ್ಟೆ ಕಷ್ಟ ಬಂದರು ಅದನ್ನೆಲ್ಲ ಸ್ವೀಕಾರ ಮಾಡುತ್ತಾ ತನ್ನ ಮಕ್ಕಳಿಗೆ ಏನೂ ಆಗಬಾರದು ಎಂಬ ಉದ್ದೇಶ ಇಟ್ಟುಕೊಂಡು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಹೊರಟಿದ್ದಾಳೆ. ಆದರೆ ಪ್ರೀತು ಮಾತ್ರ ಅಮ್ಮನ ತಪ್ಪು ಏನು ಇಲ್ಲ. ಎಲ್ಲಾ ತಪ್ಪನ್ನು ನಾನೇ ಮಾಡಿರುವುದು ಎಂದು ಅಳುತ್ತಾ ಮನದಲ್ಲೇ ನೋವುಣ್ಣುತ್ತಿದ್ದಾನೆ.
ಆದರೆ ಅಖಿಲಾಂಡೇಶ್ವರಿ ಮಾತ್ರ ತನ್ನ ಮಗ ಯಾರದ್ದೊ ಒತ್ತಡಕ್ಕೆ ಸಿಲುಕಿದ್ದಾನೆ, ಈಗ ಅವನು ಜೈಲು ಪಾಲಾದರೆ ಆತನ ಜೀವನ ಹಾಳಾಗಿ ಹೋಗುತ್ತದೆ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ಬಳಿಕ ಕಂಪ್ಲೇಂಟ್ ಕೊಟ್ಟವರು ಯಾರು? ಎಂದು ಪೊಲೀಸರ ಬಳಿ ಕೇಳಿದಾಗ ಅದು ಬೇರೆ ಯಾರು ಅಲ್ಲ ಅದು ನಿಮ್ಮ ಎರಡನೇ ಮಗ ಪ್ರೀತಮ್ ಎಂದು ಪೊಲೀಸರು ಹೇಳಿದಾಗ ಪ್ರೀತಮ್‌ಗೆ ಶಾಕ್ ಆಗುತ್ತದೆ ಹಾಗೆಯೇ ಮನೆ ಮಂದಿಗೆ ಬರ ಸಿಡಿಲು ಬಂದು ಬಡಿದಂತೆ ಭಾಸವಾಗುತ್ತದೆ. ಕಂಪ್ಲೇಂಟ್ ಲೆಟರ್ ಅನ್ನು ಪ್ರೀತಮ್ ಬಳಿ ಓದಿಸುತ್ತಾರೆ. ಆದರೆ ಅದರಲ್ಲಿ ಬರೆದಿರುವ ಅಕ್ಷರ ಕೂಡ ಆತನದ್ದು ಆಗಿರುವುದಿಲ್ಲ.
ಆದರೆ ಆ ಲೆಟರ್ ಓದುತ್ತಾ ಇರುವಾಗ ಅಖಿಲಾಂಡೇಶ್ವರಿಗೆ ಆಗುತ್ತಿದ್ದ ನೋವು ಮಾತ್ರ ಆಗಾದ. ತಾನು ಹೆತ್ತ ಮಗ ನನ್ನ ವಿರುದ್ದ ಕಂಪ್ಲೇಂಟ್ ಕೊಡುತ್ತಾನ? ಎಂದು ಬೇಸರ ಮೂಡುತ್ತದೆ ಆದರೆ ರಘು ಮಾತ್ರ ಪ್ರೀತು ಕೆನ್ನೆಗೆ ಹೊಡೆಯುತ್ತಾನೆ. ಆದರೆ ಅಖಿಲಾಂಡೇಶ್ವರಿ ಮಾತ್ರ ನಾನೇ ಶೂಟ್ ಮಾಡಿದ್ದು ಬೇರೆ ಯಾರು ಅಲ್ಲ ಎಂದು ಹೇಳುತ್ತಾಳೆ. ಇನ್ನು ಆ ಕಂಪ್ಲೇಂಟ್ ಪ್ರತಿ ಓದಿದ ಬಳಿಕ ಪ್ರೀತು ಅರುಂಧತಿಗೆ ಕರೆ ಮಾಡಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ.

ಅರುಂಧತಿಗೆ ಎದುರಾಡಿದ ಪ್ರೀತಮ್
ಕೊನೆಗೆ ನಾನು ನಿಮ್ಮ ವಿಚಾರವನ್ನು ನೀವು ನನಗೆ ಮಾಡಿರುವ ದ್ರೋಹವನ್ನು ಎಲ್ಲರ ಮುಂದೆ ಹೇಳುತ್ತೇನೆ. ಎಂದು ಹೇಳಿದಾಗ ಅರುಂಧತಿ ಹೇಳುತ್ತಾಳೆ. ನಾನು ನಿನ್ನ ರಾಸ ಲೀಲೆಯ ಕಾಪಿಯನ್ನು ಇಟ್ಟುಕೊಂಡು ಇದ್ದೇನೆ ಎಲ್ಲಾ ಡಿಲಿಟ್ ಮಾಡಲು ನಮಗೆ ಹುಚ್ಚು ಹಿದಿದೆಯ ಎಂದು ನಗುತ್ತಾ ಹೇಳುತ್ತಾಳೆ ಇದನ್ನು ಕೇಳಿದ ಪ್ರೀತಮ್ ಗೆ ನೆಲ ಕುಸಿದ ಹಾಗೆ ಹಾಗೆ ಆಗುತ್ತದೆ.

ಅಖಿಲಾಳನ್ನು ಅರೆಸ್ಟ್ ಮಾಡಿದ ಪೊಲೀಸರು
ಇತ್ತ ಕಡೆ ಅಮ್ಮನನ್ನು ಪೊಲೀಸರು ಅರೆಸ್ಟ್ ಮಾಡಿ ಕರೆದುಕೊಂಡು ಹೋಗುತ್ತಿದ್ದಾರೆ. ಇನ್ನೊಂದು ಕಡೆ ಅರುಂಧತಿ ಟಾರ್ಚರ್ ಕೊಡಲು ಶುರು ಮಾಡಿದ್ದಾಳೆ. ಆದರೆ ಆಕೆಯನ್ನು ಕೊಂದು ಬಿಡುವಷ್ಟು ಕೋಪ ಪ್ರೀತಮ್‌ಗೆ. ಇನ್ನು ಅರುಂಧತಿಯನ್ನು ಪೊಲೀಸರು ಕೈ ಗೆ ಕೋಳ ಹಾಕಿ ಎಳೆದುಕೊಂಡು ಹೋಗುತ್ತಾ ಇರುತ್ತಾರೆ. ಇದನ್ನು ನೋಡಿದ ಮನೆ ಮಂದಿ ಆಕೆಯ ಹಿಂದೆ ಒಡುತ್ತಾರೆ ಆದರೆ ಪೊಲೀಸ್ ಮಾತ್ರ ಯಾರ ಮಾತೂ ಕೇಳದೆ ಆಕೆಯನ್ನು ಕರೆದುಕೊಂಡು ಹೋಗುತ್ತಾರೆ ಆದರೆ ಪಾರು ಮಾತ್ರ ತನ್ನ ಗಂಡನ ಬಳಿ ಓಡಿ ಬರುತ್ತಾಳೆ.

ಪಾರು ಮಾತು ಕೇಳಿ ಆದಿಗೆ ಪ್ರಜ್ಞೆ ಮರಳಿತಾ?
ಯಜಮಾನರೇ ಎದ್ದೇಳಿ ಅತ್ತೆಯಮ್ಮನನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿದ್ದಾರೆ. ಪ್ಲೀಸ್ ಎದ್ದೇಳಿ ಎಂದು ಹೇಳುತ್ತ ಅಳುತ್ತಾ ಇರುತ್ತಾಳೆ ಈ ವೇಳೆ ಆದಿ ಕೈ ಗಳನ್ನಾ ಕೊಂಚ ಮಟ್ಟಿಗೆ ಅಲ್ಲಾಡಿಸುತ್ತಾನೆ. ಇದನ್ನು ಕಂಡ ಪಾರು ಅಖಿಲಾಳನ್ನು ಕರೆಯಲು ಹೋಗುತ್ತಾಳೆ. ಪಾರು ತರಾ ತುರಿಯಲ್ಲಿ ಹೋಗುವುದನ್ನು ನೋಡಿದ ಪ್ರೀತು, ಗಾಬರಿಯಾಗುತ್ತಾನೆ. ಪೊಲೀಸರನ್ನು ತಡೆದ ಪಾರು ಅತ್ತೆಯಮ್ಮಾ ಯಜಮಾನರಿಗೆ ಪ್ರಜ್ಞೆ ಬಂತು ಎಂದು ಹೇಳುತ್ತಾಳೆ.

ಮಗನಿಗೆ ಪ್ರಜ್ಞೆ ಬಂದಿದ್ದನ್ನು ಕೇಳಿ ಖುಷಿಯಾದ ಅಖಿಲಾ
ಇದನ್ನು ಕೇಳಿದ ಅಖಿಲಾಗೆ ಬಹಳ ಖುಷಿ ಆಗುತ್ತದೆ. ಆದಿಗೆ ಪ್ರಜ್ಞೆ ಬಂತಾ ಎಂದು ಅಳುತ್ತಾ ಖುಷಿಯಿಂದ ಹೇಳುತ್ತಾಳೆ. ಆತನನ್ನು ನೋಡಲು ಹೋಗಬೇಕು ಎಂದರೆ ಪೊಲೀಸ್ ಹಿಡಿದುಕೊಂಡು ಇದ್ದರೂ ಈ ವೇಳೆ ಅಖಿಲಾ ಪೊಲೀಸರ ಬಳಿ ಕೇಳಿ ಕೊಳ್ಳುತ್ತಾರೆ ಇನ್ಸ್ಪೆಕ್ಟರ್ ಒಂದೇ ಒಂದು ಸಲ ನನ್ನ ಮಗನ ನೋಡಿಕೊಂಡು ಬರುತ್ತೇನೆ. ಒಪ್ಪಿಗೆ ಕೊಡಿ ಪ್ಲೀಸ್ ಎಂದು ಕೇಳುತ್ತಾಳೆ. ಇದನ್ನೆಲ್ಲ ನೋಡಿದ ಅರುಂಧತಿ ಪರವಾಗಿ ಇಲ್ಲ ಇಷ್ಟು ಬೇಗ ಪ್ರಜ್ಞೆ ಬಂತಾ ಅಣ್ಣ ಎಂದು ರಾಣಾ ಬಳಿ ಹೇಳುತ್ತಾಳೆ. ಇನ್ನು ಅರುಂಧತಿಗೆ ಮಗನನ್ನು ನೋಡಲು ಅವಕಾಶ ಸಿಗುತ್ತದೆ. ಈ ವೇಳೆ ಡಾಕ್ಟರ್ ಚೆಕ್ ಮಾಡುತ್ತಾ ಇರುತ್ತಾರೆ. ಇದನ್ನು ನೋಡಿದ ಪ್ರೀತು ಕಣ್ಣೀರು ಸುರಿಸುತ್ತಾನೆ ನನ್ನಿಂದಾಗಿ ಅಣ್ಣ ಅಮ್ಮ ಎಷ್ಟು ಕಷ್ಟ ಪಡುವಂತಾಯಿತು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.


Click it and Unblock the Notifications











