ಅರುಂಧತಿ ಹೆಡೆಮುರಿ ಕಟ್ಟುತ್ತಾನ ವೀರಯ್ಯ ದೇವ? ಪ್ರೀತುಗೆ ಬಿಡುಗಡೆ ಎಂದು?

By ಪೂರ್ವ

'ಪಾರು' ಧಾರವಾಹಿ ನೋಡುಗರ ಗಮನ ಸೆಳೆಯುತ್ತಿದೆ. ಬೀದೀಲಿ ಹೋಗುತ್ತಿದ್ದ ಮಾರಿಯನ್ನು ಮನೆಗೆ ಕರೆದುಕೊಂಡು ಬರುವ ರೀತಿ ಅರಸನ ಕೋಟೆಯ ಒಳಗೆ ಅರುಂಧತಿ ಎಂಬ ಕ್ರಿಮಿ ಹೊಕ್ಕಿದೆ. ಆಕೆಯನ್ನು ಕರೆತಂದು ಆದಿ ತಪ್ಪು ಮಾಡಿ ಬಿಟ್ಟನೆ ಎನ್ನುವುದು ಧಾರವಾಹಿ ಪ್ರೇಮಿಗಳ ಅನುಮಾನ.

ಅರುಂಧತಿ ಮನೆಗೆ ಎಂಟ್ರಿ ಆಗಿ ಆಯ್ತು ಅಖಿಲಾಂಡೆಶ್ವರಿ ಮನಸ್ಸು ಗಲಿಬಿಲಿಗೊಂಡಿದ್ದು ಆಯ್ತು. ಇದೆಲ್ಲದಕ್ಕೂ ಕಾರಣ ರಾಣಾ ಹಾಗೂ ಅರುಂಧತಿ. ಪ್ರೀತುವನ್ನು ಮೋಸದ ಜಾಲದಲ್ಲಿ ಸಿಲುಕಿಸಿ ಸಿಕ್ಕಿ ಹಾಕಿಸಿದ್ದಾರೆ. ಆದರೆ ಈ ವಿಚಾರವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ತೊಳಲಾಡುತ್ತ ಇದ್ದಾನೆ ಪ್ರೀತು. ಆದರೆ ಇದೀಗ ಅರುಂಧತಿ ಮೋಸದ ಆಟಕ್ಕೆ ವೀರಯ್ಯ ದೇವ ತೆರೆ ಎಳೆಯುವುದಂತು ಪಕ್ಕಾ ಆಗಿದೆ.

ಪ್ರೀತುವನ್ನು ವೀರಯ್ಯ ದೇವ ಪ್ರೀತೂ ಇರುವ ದೇಗುಲಕ್ಕೆ ಬರುತ್ತಾನೆ. ಇದನ್ನು ನೋಡಿದ ಪ್ರೀತುಗೆ ಮೊದಲು ಭಯವಾಗಿ ಇದ್ದರೂ ಇದೀಗ ಅದನ್ನೆಲ್ಲವನ್ನು ತೊಡೆದು ವೀರಯ್ಯನ ಜೊತೆ ಮನೆಗೆ ಮರಳುತ್ತಾನೆ. ಅಖಿಲಾಂಡೆಶ್ವರಿ ಮನೆಯಲ್ಲಿ ಪೂಜೆಗೆ ತಯಾರಿ ಜೋರಾಗಿ ನಡೆದಿತ್ತು. ಸತ್ಯ ನಾರಾಯಣ ಸ್ವಾಮಿಯ ಪೂಜೆ ನಡೆಯುತ್ತಿತ್ತು.

ವೀರಯ್ಯ ದೇವನ ಆಗಮನದಿಂದ ಅಖಿಲಂಡೇಶ್ವರಿ ನಿರಾಳ

ವೀರಯ್ಯ ದೇವನ ಆಗಮನದಿಂದ ಅಖಿಲಂಡೇಶ್ವರಿ ನಿರಾಳ

ಆದರೆ ಪೂಜೆಗೆ ಎಲ್ಲರೂ ಮನೆಯಲ್ಲಿ ಇರಬೇಕು ಎಂದು ಅಖಿಲಾಂಡೆಶ್ವರಿ ಈ ಮೊದಲೇ ಎಲ್ಲರಿಗೂ ತಾಕೀತು ಮಾಡಿರುತ್ತಾರೆ. ಆ ಪ್ರಕಾರವಾಗಿ ಎಲ್ಲರೂ ಪೂಜೆ ಸಮಯಕ್ಕೆ ಒಗ್ಗೂಡಿ ಬರುತ್ತಾರೆ ಆದರೆ ಪ್ರೀತೂ ಒಬ್ಬನನ್ನು ಬಿಟ್ಟು. ನನ್ನ ಕಿರಿ ಮಗ ಪೂಜೆಗೆ ಬರಲೇ ಇಲ್ಲ ಎಂದಾಗ ಭಯ ಗೊಂಡ ಅಖಿಲಾಂಡೆಶ್ವರಿ ಹೇಳುತ್ತಾಳೆ ಇದರಲ್ಲಿ ನಿನ್ನ ಕೈವಾಡ ಇದೆ ಎಂದು ಅನ್ನಿಸುತ್ತಿದೆ ಎಂದಾಗ ಅರುಂಧತಿಯ ಆ ಕುಹಕ ನಗು ಅಖಿಲಾಂಡೆಶ್ವರಿಗೆ ಪ್ರೀತೂ ಕಾಣಿಸಿ ಕೊಳ್ಳದೆ ಇರುವುದಕ್ಕೆ ಅರುಂಧತಿ ಕಾರಣ ಅನ್ನೋ ವಿಚಾರ ಮನದಟ್ಟು ಆಗುತ್ತದೆ.

ಅರಸನ ಕೋಟೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಭರವಸೆ

ಅರಸನ ಕೋಟೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಭರವಸೆ

ವೀರಯ್ಯ ದೇವನನ್ನು ನೋಡಿದ ಪ್ರೀತೂ ಆತನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಹುಡುಗಿಯನ್ನು ಬಿಟ್ಟು ಏನೇ ಆಗಲಿ ಎಂದು ತನ್ನ ಮಾವನ ಬಳಿ ಬರುತ್ತಾನೆ. ಆತನ ಜೊತೆ ಮನೆಗೆ ಪ್ರಯಾಣ ಬೆಳೆಸುತ್ತಾನೆ. ಅಲ್ಲಿಗೆ ರಾಣಾ ಪ್ಲಾನ್ ವರ್ಕ್ ಆಗುವುದಿಲ್ಲ. ಇತ್ತ ಸತ್ಯ ನಾರಾಯಣ ಪೂಜೆ ನಡೆಯುತ್ತಾ ಇರುತ್ತದೆ. ಆದಿ ಹಾಗೂ ಪಾರುವಿನ ಪೂಜೆ ಮುಗಿಯುತ್ತದೆ ಬಳಿಕ ಪೂಜಾರಿ ಹೇಳುತ್ತಾರೆ ನಿಮ್ಮ ಚಿಕ್ಕ ಮಗನನ್ನು ಕರೆಯಿಸಿ ಅಂದಾಗ ಅಖಿಲಾಂಡೆಶ್ವರಿಗೆ ಏನು ಮಾಡಬೇಕು ಎಂದು ತಿಳಿಯದಾಗಿದೆ ಹೋಗುತ್ತದೆ. ಆ ವೇಳೆ ಪ್ರೀತೂ ಮನೆಯ ಬಾಗಿಲ ಬಳಿ ನಿಂತಿರುವುದನ್ನು ಕಂಡು ಅಖಿಲಾಂಡೆಶ್ವರಿಗೆ ಖುಷಿ ಆಗುತ್ತದೆ ಇದನ್ನು ನೋಡಿದ ಅರುಂಧತಿ ಶಾಕ್ ಆಗುತ್ತದೆ. ವೀರಯ್ಯ ದೇವ ಅಖಿಲಾಂಡೆಶ್ವರಿ ಮನೆಗೆ ಬರುತ್ತಾನೆ.

ಇನ್ನಾದರೂ ಪ್ರೀತೂ ಸಮಸ್ಯೆ ಆಲಿಸುತ್ತಾಳ ಅಖಿಲಂಡೇಶ್ವರಿ

ಇನ್ನಾದರೂ ಪ್ರೀತೂ ಸಮಸ್ಯೆ ಆಲಿಸುತ್ತಾಳ ಅಖಿಲಂಡೇಶ್ವರಿ

ಪ್ರೀತೂ ಬಳಿ ಕೇಳುತ್ತಾಳೆ ಅಖಿಲಾಂಡೆಶ್ವರಿ, ಎಲ್ಲಿ ಹೋಗಿದ್ದೆ ಪ್ರೀತೂ? ಪೂಜೆ ವೇಳೆ ಎಲ್ಲರೂ ಇರಬೇಕು ಎಂದು ಹೇಳಿದ್ದೆ ಅಲ್ವಾ ಎಂದು ಹೇಳುತ್ತಾಳೆ. ಆ ವೇಳೆ ಅಣ್ಣಾ ವೀರಯ್ಯ ದೇವ ಬಂದಾಗ ಸ್ವಲ್ಪ ಸುಮ್ಮನಾಗುತ್ತಾರೆ. ವೀರಯ್ಯ ದೇವ ಅರುಂಧತಿಯನ್ನೂ ನೋಡಿ ಪೂಜೆಗೆ ನೀನು ಅತಿಥಿಯಾಗಿದ್ದಿಯಾ ಎಂದೆಲ್ಲಾ ಅರುಂಧತಿಯನ್ನೂ ಪ್ರಶ್ನೆ ಮಾಡುತ್ತಾನೆ. ಆದರೆ ಅರುಂಧತಿ ಇದಕ್ಕೆ ಸುಮ್ಮನೆ ಇರುತ್ತಾಳೆ. ವೀರಯ್ಯ ದೇವ ಅರುಂಧತಿ ಮುಂಚೆ ಇರುವ ಹಾಗೆ ಈಗ ಇಲ್ಲ. ಬದಲಾಗಿ ಇದ್ದಾಳೆ ಎಂದೆಲ್ಲ ಅಂದುಕೊಂಡಿರುತ್ತಾರೆ ಆದರೆ ಅಖಿಲಾಂಡೆಶ್ವರಿ ಹೇಳಿದ ಮೇಲೆಯೇ ವೀರಯ್ಯ ದೇವನಿಗೆ ತಿಳಿಯುತ್ತದೆ. ಆಕೆ ಬದಲಾಗಿಲ್ಲ, ಅಖಿಲಾಂಡೆಶ್ವರಿ ಮನೆಯ ಒಗ್ಗಟ್ಟು ನೋಡಲು ಬಂದಿದ್ದಾಳೆ ಎಂದು. ವೀರಯ್ಯ ದೇವ ಪ್ರೀತೂವನ್ನು ಜೊತೆಗೆ ಕರೆದುಕೊಂಡು ಬಂದಿರುವುದನ್ನು ನೋಡಿದ ಅಖಿಲಾಂಡೆಶ್ವರಿ ಧನ್ಯವಾದ ತಿಳಿಸುತ್ತಾನೆ. ಅರುಂಧತಿ ಹೆಡೆ ಮುರೀ ಕಟ್ಟಲು ವೀರಯ್ಯ ದೇವ ಸಜ್ಜಾಗಿದ್ದಾರೆ. ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Paaru written updated on 19th August. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X