Paaru: ಅರಸನ ಕೋಟೆಗೆ ಹೋಗಲು ಹಿಂದೇಟು ಹಾಕುತ್ತಿರುವ ಪಾರು.. ಅಖಿಲಾಂಡೇಶ್ವರಿ ನಡೆಯೇನು?
'ಪಾರು' ಧಾರಾವಾಹಿ ಇಂಟ್ರೆಸ್ಟಿಂಗ್ ಘಟ್ಟದಲ್ಲಿದೆ. ಇದೀಗ ಪಾರು ಹಾಗೂ ಆದಿಯನ್ನು ಹೇಗೆ ಮನೆಗೆ ಕರೆದುಕೊಂಡು ಬರುವುದು ಎಂದು ಅಖಿಲಾಂಡೇಶ್ವರಿ ಯೋಚನೆ ಮಾಡಿದ್ದಾಗಿದೆ. ಯೋಚನೆ ಮಾಡದೆ ಆಡಿದ ಮಾತಿಗೆ ತನ್ನ ಮಗ ಸೊಸೆ ಬಹಳ ಬೇಸರ ಮಾಡಿಕೊಂಡಿದ್ದಾರೆ ಎಂದು ಬಹಳ ನೋವು ಮಾಡಿಕೊಂಡಿದ್ದಾರೆ. ರಘು ಬಳಿ ಇದೆಲ್ಲವನ್ನೂ ಹೇಳಿ ಬೇಸರ ವ್ಯಕ್ತಪಡಿಸುತ್ತಾರೆ. ಇದೆಲ್ಲವನ್ನೂ ನೋಡಿದ ರತ್ನವೇಣಿಗೆ ಮಾತ್ರ ಬಹಳ ಖುಷಿ ಆಗುತ್ತದೆ.
ತನ್ನ ಅಕ್ಕನ ಮಗಳಿಗೆ ಮಾತ್ರ ಸೀಮಂತ ನಡೆಯಬೇಕು ಪಾರ್ವತಿಗೆ ನಡೆಯಬಾರದು ಎಂಬ ಅವರ ಮನಸ್ಥಿತಿಗೆ ತಕ್ಕ ಹಾಗೆ ಎಲ್ಲರೂ ನಡೆದುಕೊಂಡಿದ್ದಾರೆ. ಇನ್ನು ಅಖಿಲ, ರಘು ಬಳಿ "ಹೇಗಾದರೂ ಮಾಡಿ ಪಾರುವನ್ನು ಮನೆಗೆ ಕರೆದುಕೊಂಡು ಬರಬೇಕು. ಪಾರು ಮನೆಗೆ ಬಂದರೆ ಆದಿ ಕೂಡ ಮನೆಗೆ ಬಂದ ಹಾಗೆಯೇ" ಎಂದು ಹೇಳಿದಾಗ ರಘುಗೆ ಬಹಳ ಖುಷಿ ಆಗುತ್ತೆ.

ಅಖಿಲ ಪ್ಲ್ಯಾನ್ ಧಾಮಿನಿಗೆ ಗೊತ್ತಾಯ್ತಾ?
ಅಖಿಲಗೆ ಬಂದ ಐಡಿಯಾವನ್ನು ಮೆತ್ತಗೆ ರಘು ಬಳಿ ಹೇಳುತ್ತಿರಬೇಕಾದರೆ ಅದೆಲ್ಲವನ್ನೂ ದಾಮಿನಿ ಕೇಳಿಸಿಕೊಂಡಿದ್ದಾಳೆ. ಧಾಮಿನಿಗೆ ಪಾರು ಮನೆಗೆ ಬರುವುದು ಇಷ್ಟ ಇರುವುದಿಲ್ಲ. ಕಾರಣ ಇಷ್ಟೇ, ಆಕೆ ಮನೆಯ ಕೆಲಸದವಳು. ಮನೆಯ ಕೆಲಸದವರು ಅರಸನ ಕೋಟೆಯ ಒಡತಿ ಆಗುವುದು ದಾಮಿನಿಗೆ ಇಷ್ಟೇನೆ ಆಗುವುದಿಲ್ಲ. ಅಖಿಲ ರಘು ಪ್ಲ್ಯಾನ್ ಮಾಡಿರುವುದನ್ನು ರತ್ನವೇಣಿ ಬಳಿ ಹೇಳಲು ಓಡಿ ಹೋಗುತ್ತಾಳೆ.
ಪಾರು-ಆದಿಗೆ ಕಿವಿ ಮಾತು ಹೇಳಿದ ಅಖಿಲ
ಇನ್ನು ಪಾರು, ಹನುಮಂತು, ಆದಿ ಮಾತನಾಡುತ್ತಾ ಇರುತ್ತಾರೆ. ಹನುಮಂತು ಪಾರು ಹಾಗೂ ಆದಿಗೆ ಕಿವಿ ಮಾತು ಹೇಳುತ್ತಿರುತ್ತಾನೆ. ಇನ್ನೊಮ್ಮೆ ಅಖಿಲಮ್ಮ ಕರೆದರೆ ನೇರವಾಗಿ ಅರಸನ ಕೋಟೆಗೆ ಹೋಗಿ.. ಅಖಿಲಮ್ಮನ ಮನೆಯಲ್ಲಿ ಹುಟ್ಟಿದ ಮಗುವನ್ನು ಬಂಗಾರದ ಹಾಗೆ ನೋಡಿಕೊಂಡು ಇರುತ್ತಾರೆ ಎಂದಾಗ ಪಾರು ಮೆತ್ತಗೆ ತಂದೆಯ ಬಳಿ ಹೇಳುತ್ತಾಳೆ.
ಹನುಮಂತು ಆಸೆಗೆ ತಣ್ಣೀರು
"ಅಪ್ಪ ನೀನು ಇಷ್ಟೆಲ್ಲ ಆಸೆ ಇಟ್ಟುಕೊಂಡು ಇರಬೇಡ .. ನೀನು ಪಟ್ಟ ಆಸೆ ನೆರವೇರದೆ ಇದ್ದರೆ ನಿನಗೆ ಬಹಳ ನೋವು ಆಗುತ್ತದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಹನುಮಂತು ಸುಮ್ಮನೆ ಆಗುತ್ತಾನೆ. ಆದಿ ಮಾತ್ರ ಹನುಮಂತು ಬಳಿ ಹೇಳುತ್ತಾನೆ. "ಮಾವ ನೀವೇ ಜನನಿ ಸೀಮಂತ ಮಾಡುವ ಹಾಗೆ ಪಾರು ಸೀಮಂತ ಮಾಡಿ" ಎಂದು ಕೇಳಿಕೊಂಡಾಗ ಹನುಮಂತುಗೆ ಬಹಳ ಖುಷಿ ಆಗುತ್ತದೆ.

ಸೀಮಂತ ಮಾಡಿಸಿಕೊಳ್ಳಲು ಒಪ್ಪದ ಪಾರು
"ಹನುಮಂತು ಅದೆಲ್ಲವನ್ನೂ ಕೇಳುವ ಅಗತ್ಯ ಇಲ್ಲ. ನನ್ನ ಮಗಳಿಗೆ ನಾನು ಸೀಮಂತ ಮಾಡುತ್ತೇನೆ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಆದಿಗೆ ಖುಷಿ. ಆದರೆ, ಪಾರುಗೆ ಮಾತ್ರ ನಾನು ಇಲ್ಲಿ ಸೀಮಂತ ಶಾಸ್ತ್ರ ಮಾಡಿಕೊಂಡು ಇದ್ದರೆ, ಮನೆಯ ಕೆಲಸಕ್ಕೆ ಹೋಗಲು ಸಾಧ್ಯ ಆಗುವುದಿಲ್ಲ. ಈಗ ಏನು ಮಾಡುವುದು ಎಂದು ಯೋಚನೆ ಮಾಡಿ ಸೀಮಂತ ಶಾಸ್ತ್ರವನ್ನು ಈಗ ನಾನು ಮಾಡಿಕೊಳ್ಳುವುದು ಇಲ್ಲ ಎಂದು ನೇರವಾಗಿ ಹೇಳಿದಾಗ ಆದಿ ಹಾಗೂ ಹನುಮಂತುಗೆ ಶಾಕ್ ಆಗುತ್ತದೆ. "ಐದು ತಿಂಗಳಿಗೆ ಸೀಮಂತ ಶಾಸ್ತ್ರ ಮಾಡಬೇಕು ಅಂತೇನೂ ಇಲ್ಲ. ಏಳನೇ ತಿಂಗಳಲ್ಲಿ ಮಾಡಬಹುದು" ಎಂದು ಹೇಳುತ್ತಾಳೆ. ಆದರೆ, "ಆದಿ ಮಾತ್ರ ಯಾಕೆ ಪಾರು ಹೀಗೆ ಮಾತನಾಡುತ್ತಿದ್ದಾಳೆ. ನಾಳೆ ಜನನಿಗೆ ಸೀಮಂತ ಶಾಸ್ತ್ರ ಇದೆ ಅಲ್ವಾ.. ಅದನ್ನು ನೋಡಲು ಪಾರು ಹೀಗೆಲ್ಲ ಮಾತನಾಡುತ್ತಾ ಇರಬಹುದು" ಎಂದು ಹೇಳುತ್ತಿರುತ್ತಾರೆ.


Click it and Unblock the Notifications











