ಪೊಲೀಸ್ ಸ್ಟೇಶನ್‌ನಲ್ಲಿ ಅಖಿಲಾಂಡೇಶ್ವರಿ ಪರದಾಟ!

By ಪೂರ್ವ

ಪ್ರೀತು ಚಲನವಲನ ಗಮನಿಸುತ್ತಿದ್ದ ಪಾರು ಇದೀಗ ಆಕೆಯ ತಲೆಯ ಮೇಲೆ ಪ್ರೀತು ಕೈ ಇರಿಸಿ ಅತ್ತೆಯಮ್ಮನ ಬಗ್ಗೆ ನೀವು ಬರೆದುಕೊಟ್ಟಿರುವುದು ಸತ್ಯನಾ? ಅತ್ತೆಯಾಮ್ಮ ಯಜಮಾನರ ಮೇಲೆ ಗುಂಡು ಹಾರಿಸಿದ್ದಾರಾ? ಎಂದು ಪ್ರಶ್ನೆ ಕೇಳುತ್ತಾಳೆ ಈ ಪ್ರಶ್ನೆ ಕೇಳುತ್ತಿದ್ದ ಹಾಗೆಯೇ ಪ್ರೀತು ಇಲ್ಲ ಎಂದು ಹೇಳಿ ಬಿಡುತ್ತಾನೆ. ಇದನ್ನು ಕೇಳಿದ ರಘು ಪ್ರೀತು ಬಳಿ ಕೇಳುತ್ತಾರೆ ಮತ್ಯಾಕೆ ಕಂಪ್ಲೇಂಟ್ ಕೊಟ್ಟೆ ಎಂದು ಕೋಪದಿಂದ ಕೇಳುತ್ತಾರೆ. ನನಗೆ ನಿನ್ನ ಮುಖ ನೋಡಲು ಅಸಹ್ಯ ಆಗುತ್ತಿದೆ. ಹೋಗೋ ಆ ಕಡೆ ಎಂದು ಜೋರಾಗಿ ಹೇಳುತ್ತಾರೆ.

ಇದನ್ನು ಕೇಳಿದ ಪ್ರೀತುಗೆ ಬಹಳ ದುಃಖ ಆಗುತ್ತದೆ. ಬಳಿಕ ಪಾರು, ಒಳಗಡೆ ನಿಮ್ಮ ಅಣ್ಣನ ಬಳಿ ಹೋಗಿ ಎಂದು ಹೇಳುತ್ತಾಳೆ. ರಘು ಇನ್ನೂ ಬೇಸರದಲ್ಲಿ ಇರುತ್ತಾನೆ ಪಾರು ರಘು ಬಳಿ ಬಂದು ಅತ್ತೆಯನ್ನು ಬಿಡಿಸಲು ಬೇರೆ ದಾರಿ ಇದೆಯಾ ಮಾವ ಎಂದು ಕೇಳಿದಾಗ ರಘು ಹೇಳುತ್ತಾರೆ, 'ಒಂದು ಮಾರ್ಗ ಇದೆ. ಈಗ ಎಲ್ಲಾ ಆದಿತ್ಯನ ಹೇಳಿಕೆ ಮೇಲೆ ನಿಂತಿದೆ ಎಂದು ಲಾಯರ್ ಫೋನ್ ಮಾಡಿದಾಗ ಹೇಳಿದರು. ಆದರೆ ಆದಿ ಪರಿಸ್ಥಿತಿ ಸರಿ ಇಲ್ಲ. ಅವನು ಚೇತರಸಿಕೊಳ್ಳುತ್ತಿದ್ದಾನೆ, ಎದ್ದು ಕುಳಿತುಕೊಳ್ಳುವಷ್ಟು ಶಕ್ತಿ ಇಲ್ಲ ಎನ್ನುತ್ತಾನೆ ರಘು.

ಅಲ್ಲದೆ ವೈದ್ಯರು ಸಹ, ಆಘಾತ ಕೊಡುವ ಯಾವ ವಿಚಾರ ಆದಿಗೆ ಹೇಳಬಾರದು ಎಂದು. ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎಂದು ಜೋರಾಗಿ ಅಳುತ್ತಾನೆ ರಘು. ಆ ವೇಳೆ ಅಲ್ಲಿಗೆ ಬಂದ ಜನನಿ, ಮಾವ ಬಾವನ ಸ್ಟೇಟ್ಮೆಂಟ್ ತೆಗೆದುಕೊಳ್ಳಲು ಪೊಲೀಸ್ ಬಂದಿದ್ದಾರೆ. ಅಖಿಲಾ ಪೊಲೀಸ್ ಕಸ್ಟಡಿಯಲ್ಲಿ ಇರುವುದು ಆದಿಗೆ ಗೊತ್ತಾದರೆ ಕಷ್ಟ ಎಂದು ಹೇಳುತ್ತ ಪೊಲೀಸರ ಬಳಿ ಹೇಳಲು ವೇಗವಾಗಿ ಹೋಗುತ್ತಾರೆ.

ಆದಿ ಸ್ಟೇಟ್‌ಮೆಂಟ್ ಕೇಳಿ ಪ್ರೀತು ಶಾಕ್

ಆದಿ ಸ್ಟೇಟ್‌ಮೆಂಟ್ ಕೇಳಿ ಪ್ರೀತು ಶಾಕ್

ಆ ವೇಳೆ ಪೊಲೀಸರು ಆದಿ ಬಳಿ ಇಲ್ಲಸಲ್ಲದ ಪ್ರಶ್ನೆ ಕೇಳುತ್ತಾ ಸ್ಟೇಟ್ ಮೇಂಟ್ ತೆಗೆದುಕೊಳ್ಳುತ್ತಾ ಇರುತ್ತಾರೆ. ಆದರೆ ಆದಿ ಮಾತ್ರ ತನ್ನ ತಮ್ಮನಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು ಕುಟುಂಬದವರು ಕ್ಷೇಮವಾಗಿ ಇರಬೇಕು ಎನ್ನುವ ದೃಷ್ಟಿಯಿಂದ ಯಾವುದೇ ರೀತಿಯ ಬೇರೆ ಹೇಳಿಕೆ ನೀಡದೆ ಇರುವುದನ್ನು ನೋಡಿದ ಪ್ರೀತು ಬಹಳ ಬೇಸರ ವ್ಯಕ್ತ ಪಡಿಸುತ್ತಾನೆ. ಆ ವೇಳೆ ಜನನಿ ಬಾಯಿ ತಪ್ಪಿ ಯಾರು ಶೂಟ್ ಮಾಡಿದ್ದು ಎಂಬ ಪ್ರಶ್ನೆಗೆ ಬಾವ ನೋಡಿಲ್ಲ ಎನ್ನುತ್ತಾನೆ. ಹಾಗಿದ್ದರೆ ಇನ್ನಾದರೂ ಅತ್ತೆಯನ್ನು ರಿಲೀಸ್ ಮಾಡುತ್ತಾರೆ ಅಲ್ವಾ ಬಾವ ಎಂದು ಕೇಳಿದಾಗ ಆದಿಗೆ ಶಾಕ್ ಆಗುತ್ತದೆ. ಏನು ಹೇಳುತ್ತಿದ್ದಿಯಾ ಜನನಿ. ಅಮ್ಮನ ರಿಲೀಸ್ ಮಾಡುತ್ತಾರೋ ಇಲ್ವಾ ಎಂದರೆ ಎನು ಅರ್ಥ. ಅಮ್ಮ ಅರೆಸ್ಟ್ ಆಗಿದ್ದಾರಾ? ಎಂದು ಕೇಳಿದಾಗ ಎಲ್ಲರಿಗೂ ಶಾಕ್ ಆಗುತ್ತದೆ ಏನು ಹೇಳಬೇಕು ಎಂದು ತಿಳಿಯದೇ ಒದ್ದಾಡುತ್ತಾ ಇದ್ದಾರೆ. ಆಗ ಪಾರು ಯಜಮಾನರೇ ಎಂದು ಹೇಳಿ ನಡೆದ ವಿಚಾರವನ್ನು ಹೇಳುತ್ತಾಳೆ.

ನಡೆದ ವಿಚಾರ ಆದಿಗೆ ವಿವರಿಸಿದ ಪಾರು

ನಡೆದ ವಿಚಾರ ಆದಿಗೆ ವಿವರಿಸಿದ ಪಾರು

ಆಗ ಆದಿ ಅಮ್ಮನ ಯಾಕೆ ಅರೆಸ್ಟ್ ಮಾಡಿದ್ದಾರೆ. ಅಪ್ಪ ಅಮ್ಮನ ಈಗಲೇ ನೋಡಬೇಕು ಎಂದು ಹೇಳುತ್ತ ಎದ್ದೇಳೆಲು ನೋಡುತ್ತಾನೆ. ಅಪ್ಪ ನನಗೆ ಅಮ್ಮನನ್ನು ನೋಡುವವರೆಗೆ ಸಮಾಧಾನ ಇಲ್ಲ. ನಾನು ಅಮ್ಮನ ನೋಡಬೇಕು ಅಮ್ಮನ ನೋಡಬೇಕು ಎಂದು ದೀರ್ಘ ವಾದ ಉಸಿರು ತೆಗೆದುಕೊಳ್ಳುತ್ತಿದ್ದಂತೆ ಪ್ರೀತುಗೆ ಸಿಕ್ಕಾ ಪಟ್ಟೆ ಭಯ ಆಗುತ್ತದೆ.

ಅಣ್ಣನ ಸ್ಥಿತಿ ಕಂಡು ಪ್ರೀತುಗೆ ಶಾಕ್

ಅಣ್ಣನ ಸ್ಥಿತಿ ಕಂಡು ಪ್ರೀತುಗೆ ಶಾಕ್

ಇದನ್ನು ನೋಡಿದ ಪ್ರೀತು, ಡಾಕ್ಟರ್ ಅನ್ನು ಕರೆಯಲು ಹೋಗುತ್ತಾನೆ. ಆದಿಯನ್ನು ಎಷ್ಟು ಸಮಾಧಾನ ಮಾಡಲು ಹೋದರು ಆದಿ ಮಾತ್ರ ಅಮ್ಮನ ನೋಡಬೇಕು ಎಂದು ಹೇಳುತ್ತಿರುತ್ತಾನೆ. ಇನ್ನು ಅಖಿಲಾಗೆ ಏನೋ ಮಗ ಅಪಾಯದಲ್ಲಿ ಇದ್ದಾನೆ ಎಂಬ ಕನಸು ಬೀಳುತ್ತದೆ ಇದರಿಂದ ಕೊಂಚ ಭಯ ಭೀತಿ ಗೊಂಡ ಅಖಿಲ ಜೋರಾಗಿ ಕಿರುಚುತ್ತಾ ಇರುತ್ತಾಳೆ. ಇದನ್ನು ಕೇಳಿದ ಪೊಲೀಸ್ ಓಡಿ ಬಂದು ಏನಮ್ಮ ಕುಡಿಯಲು ನೀರು ಬೇಕಾ ಎಂದು ಕೇಳುತ್ತಾನೆ.

ಪೊಲೀಸರ ಬಳಿ ಅಳಲು ತೋಡಿಕೊಂಡ ಅಖಿಲಾ

ಪೊಲೀಸರ ಬಳಿ ಅಳಲು ತೋಡಿಕೊಂಡ ಅಖಿಲಾ

ಆಗ ಅಖಿಲಾ, ಪೊಲೀಸರ ಬಳಿ, 'ನನ್ನ ಮಗ ಹೇಗಿದ್ದಾನೆ ಚೆನ್ನಾಗಿ ಇದ್ದಾನೆಯೇ ನನಗೆ ಒಮ್ಮೆ ಫೋನ್ ಮಾಡಲು ಅವಕಾಶ ಕೊಡಿ ದಯಮಾಡಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪೊಲೀಸರು ಫೋನ್ ಮಾಡಲು ಅವಕಾಶ ನೀಡುತ್ತಾರೆ. ರಘುಗೆ ಕರೆ ಮಾಡಿದ ವೇಳೆ ಹೇಳುತ್ತಾರೆ. ಅಖಿಲಾ, ಆದಿ ಚೆನ್ನಾಗಿದ್ದಾನೆ ನೀನು ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳಿ ಫೋನ್ ಇಡುತ್ತಾನೆ ಇನ್ನು ಅಲ್ಲಿಗೆ ಬಂದ ಡಾಕ್ಟರ್ ಹೇಳುತ್ತಾರೆ ನಾನು ಮೊದಲೇ ಹೇಳಿದೆ ಅಲ್ವಾ ಶಾಕ್ ಆಗುವ ವಿಚಾರ ಆತನಿಗೆ ಹೇಳಬೇಡಿ ಎಂದು. ಆದರೂ ನೀವು ಹೇಳಿದಿರಿ ಎಂದು ಜೋರಾಗಿ ಹೇಳುತ್ತಾರೆ. ಮುಂದೆ ಎನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Paaru written updated on 19th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X