Don't Miss!
- Sports
Ind vs NZ 3rd T20: ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾ: ಪಿಚ್ ವರದಿ ನೋಡಿ ತಂಡದಲ್ಲಿ ಬದಲಾವಣೆ
- News
ತ್ರಿಪುರಾ ಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫಲಿಸುತ್ತಾ ಪಾರು ಉಪಾಯ? ದೂರಾಗುತ್ತಾ ಪ್ರೀತಮ್ ಜನನಿ ಮುನಿಸು?
ಪಾರು ಆದಿ ಉಪಾಯ ಫಲಿಸಿದಂತಿದೆ. ಪ್ರೀತಮ್ ಹಾಗೂ ಜನನಿ ಎದುರು ನನಗೆ ಕೈ ತುತ್ತು ನೀಡಬೇಕು ಹಾಗೆಯೇ ಹಿಂದಿನಿಂದ ಬಂದು ಗಟ್ಟಿಯಾಗಿ ತಬ್ಬಿಕೊಂಡು ಮುತ್ತಿಡಬೇಕು ಎಂದೆಲ್ಲ ಪಾರು, ಆದಿಗೆ ಹೇಳುತ್ತಾಳೆ. ಇದನ್ನು ಕೇಳಿದ ಆದಿ ಮಾತ್ರ ಫುಲ್ ರೊಮ್ಯಾಂಟಿಕ್ ಆಗಿದ್ದಾನೆ. ಇನ್ನು ಪ್ರೀತಮ್ ಹಾಗೂ ಜನನಿ ಎದುರು ಬದುರು ಇರುವಾಗ ಊಟದ ಟೇಬಲ್ ಬಳಿ ಬಂದು ಪಾರುವನ್ನು ಹಿಂದಿನಿಂದ ಬಂದು ತಬ್ಬಿಕೊಳ್ಳುತ್ತಾನೆ. ಇದನ್ನು ನೋಡಿದ ಪ್ರೀತಮ್ ಹಾಗೂ ಜನನಿ ಕೂಡ ಹತ್ತಿರ ಆಗುವ ಹಾಗೆ ಮಾಡುತ್ತಾರೆ.
ಮೋನಿಕಾ ವಿಚಾರದಲ್ಲಿ ಜನನಿ ಹಾಗೂ ಪ್ರೀತಮ್ ಬಹಳ ಅಂತರ ಕಾಯ್ದು ಕೊಳ್ಳುತ್ತಾ ಇದ್ದರು. ಆದರೆ ಪಾರು ಆದಿಯನ್ನೂ ನೋಡಿ ಮುನಿಸು ದೂರ ಮಾಡಿಕೊಂಡು ಒಂದಾಗಲು ನೋಡುತ್ತಾ ಇದ್ದಾರೆ. ಇನ್ನು ಪಾರುವನ್ನು ಬಾಚಿ ತಬ್ಬಿಕೊಂಡ ಆದಿಯನ್ನು ನೋಡಿ ಪಾರು ನಾಚಿ ನೀರಾಗಿದ್ದಳು. ಬಳಿಕ ಆಕೆಯನ್ನು ಕರೆದುಕೊಂಡು ಬಂದು ಊಟ ಮಾಡಿಸುತ್ತಾನೆ ಈ ವೇಳೆ ಮೆತ್ತಗೆ ಪಾರು ಹತ್ತಿರ ಬಂದು ಮುತ್ತಿಕ್ಕುತ್ತಾನೆ.
ಇದನ್ನು ನೋಡಿದ ಪಾರು ಮಾತ್ರ ಕೊಂಚ ಕೋಪಗೊಳ್ಳುತ್ತಾಳೆ. ನಾನು ಕೋಪಗೊಂಡರೆ ಸರಿ ಆಗುವುದಿಲ್ಲ ಎಂದು ಹೇಳಿ ಸುಮ್ಮನಾಗುತ್ತಾರೆ. ಇದನ್ನೆಲ್ಲ ನೋಡಿದ ಅಖಿಲಾಗೆ ಬಹಳ ಖುಷಿ ಆಗುತ್ತದೆ. ಪ್ರೀತಮ್ ವರ್ತನೆಯಿಂದ ಜನನಿ ಪ್ರೀತಮ್ ನಿಂದಾ ದೂರ ದೂರ ಆಗುತ್ತಾ ಇದ್ದಳು ಆದರೆ ಪಾರು ಹಾಗೂ ಆದಿ ಮೂಲಕ ಮತ್ತೆ ಒಂದಾಗುವ ಎಲ್ಲಾ ಸೂಚನೆಗಳು ಕಾಣುತ್ತಿದೆ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಇರುತ್ತಾಳೆ.

ಜನನಿ ಪ್ರೀತೂ ಮಧ್ಯೆ ಮತ್ತೆ ಚಿಗುರಿದ ಪ್ರೀತಿ
ಇನ್ನು ಅಖಿಲಾ ಮನೆಯ ಹಾಲ್‌ನಲ್ಲಿ ಬಹಳ ಸಂತೋಷದಿಂದ ಕುಳಿತಿರುವ ವೇಳೆ ರಘು-ದಾಮಿನಿ ಬರುತ್ತಾರೆ. ಅಖಿಲಾ ಬಹಳ ಖುಷಿಯಲ್ಲಿ ಇರುವುದನ್ನು ಕಂಡ ರಘು ಮಾತ್ರ ಅಖಿಲಾ ಖುಷಿಗೆ ಏನು ಕಾರಣ ಆಗಿರಬಹುದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ದಾಮಿನಿ ತನ್ನ ಅಕ್ಕನ ಬಳಿ ಈ ಖುಷಿಗೆ ಕಾರಣ ಏನು ಎಂದು ಕೇಳುತ್ತಾಳೆ. ಈ ವೇಳೆ ಅಖಿಲಾ ಖುಷಿಯಿಂದ ಹೇಳುತ್ತಾರೆ. ಪ್ರೀತಮ್ ಹಾಗೂ ಜನನಿ ಎದುರೇ ಪಾರು ಹಾಗೂ ಆದಿ ತಬ್ಬಿಕೊಂಡರು. ಎಂದು ಹೇಳಿ ಜೋರಾಗಿ ನಗುತ್ತಾರೆ.

ಪಾರು ಬುದ್ಧಿವಂತಿಕೆ ಮೆಚ್ಚಿದ ಅಖಿಲಾ
ಇದನ್ನು ಕೇಳಿ ದಾಮಿನಿ ಮಾತ್ರ ಫುಲ್ ಶಾಕ್ ಆಗಿದ್ದಾಳೆ. ಆ ವೇಳೆ ರಘು ಕೂಡ ಅವರು ರೊಮ್ಯಾಂಟಿಕ್ ಜೋಡಿ ಆಗಿದ್ದಾರೆ ಎಂದು ಹೇಳಿ ನಗುತ್ತಾರೆ. ಆದಿತ್ಯ-ಪಾರು, ಪ್ರೀತಮ್ ಹಾಗೂ ಜನನಿ ಎದುರು ತಬ್ಬಿಕೊಂಡು ಇದ್ದಿದ್ದು. ನನಗೆ ಗೊತ್ತು. ಇದೆಲ್ಲ ಪಾರುವಿನದ್ದೆ ಕಿತಾಪತಿ. ಅವಳಿಗೆ ಚೂರೇ ಚೂರು ಜವಾಬ್ದಾರಿ ಇಲ್ಲ. ಇದೆಲ್ಲ ನೀವು ಕೊಟ್ಟಿರುವ ಸದರ ಅಕ್ಕ ಎಂದು ಹೇಳುತ್ತಾಳೆ.

ದಾಮಿನಿ ಮಾತಿಗೆ ತಲೆ ಕೆಡಿಸಿಕೊಳ್ಳದ ಅಖಿಲಾ
ಇದನ್ನು ಕೇಳಿದ ಅಖಿಲಾ ನಿನೇನಾದರು ನನ್ನ ಜಾಗದಲ್ಲಿ ಇರುತ್ತಿದ್ದರೆ ಇಬ್ಬರು ಸೊಸೆಯರು ಇಷ್ಟು ಹೊತ್ತಿಗೆ ಓಡಿ ಹೋಗುತ್ತಾ ಇದ್ದರೂ ಎಂದು ಹೇಳುತ್ತಾಳೆ. ಇದನ್ನು ಕೇಳಿ ಮನೆ ಮಂದಿ ಎಲ್ಲಾ ನಗುತ್ತಾರೆ. ಬಳಿಕ ಅಖಿಲಾಂಡೇಶ್ವರಿ, ದಾಮಿನಿ ನೀನು ಕಿರಿಕಿರಿ ಮಾಡುತ್ತೀಯಾ ಮತ್ತೇನಿಲ್ಲ ಎಂದು ಹೇಳಿದರು ದಾಮಿನಿ ಮಾತ್ರ ಪಾರುವನ್ನು ದೂರುವುದರಲ್ಲೆ ಇರುತ್ತಾಳೆ.

ಪಾರು ಬಗ್ಗೆ ಕೀಳಾಗಿ ಮಾತನಾಡುತ್ತಾ ಇರುವ ದಾಮಿನಿ
ಪಾರುವಿಗೆ ಅರಸನ ಕೋಟೆಯ ಸೊಸೆಯಾಗಿ ಹೇಗೆ ಇರಬೇಕು ಅದೆಲ್ಲ ಗೊತ್ತೇ ಇಲ್ಲ. ಇದೆಲ್ಲ ತಪ್ಪು ಅಲ್ವಾ ಅಕ್ಕ. ಎಂದಾಗ ಅಖಿಲಾ, ದಾಮಿನಿ ನಿನ್ನ ದೃಷ್ಟಿ ಅಲ್ಲಿ ತಪ್ಪೇ. ಆದರೆ ಅದರ ಹಿಂದಿನ ಉದ್ದೇಶ ಗೊತ್ತಾದರೆ ನೀನು ಅವಳನ್ನು ತಪ್ಪು ತಿಳಿದುಕೊಳ್ಳಲ್ಲ. ದಾಮಿನಿ ಅಕ್ಕನನ್ನು ಕರೆದು ಅಕ್ಕ ಇದು ತಪ್ಪು ಅಲ್ಲವೇ ಎಂದೆಲ್ಲ ಹೇಳುತ್ತಾಳೆ. ಇತ್ತ ಆದಿ ಬಹಳ ಖುಷಿಯಿಂದ ರೂಮ್‌ಗೆ ಬರುತ್ತಾನೆ ಇದನ್ನು ಕಂಡ ಪಾರು ನಿಮಗೆ ಯಾಕೋ ಇದೆಲ್ಲ ಅತಿ ಎಂದು ಅನ್ನಿಸುತ್ತಾ ಇಲ್ವಾ. ನಾನು ಹೇಳಿದ್ದೇನು ನೀವು ಮಾಡಿದ್ದೇನು ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ಆಕ್ಟಿಂಗ್ ಮಾಡುವಾಗ ಇದೆಲ್ಲ ಅಡ್ಜೆಸ್ಟ್ ಮಾಡಿಕೊಳ್ಳಬೇಕು. ನಿನ್ನನು ನೋಡಬೇಕಾದರೆ ಒಂದು ಮುತ್ತು ಕೊಡಬೇಕು ಅನ್ನಿಸುತ್ತೆ ಕೊಟ್ಟೆ. ನೀನು ನನ್ನ ಹೆಂಡತಿ ಪಾರು, ಅದಕ್ಕೆ ಮುತ್ತು ಕೊಟ್ಟೆ ಎಂದು ಹೇಳುತ್ತಾನೆ.