ಆದಿಗೆ ಪ್ರೀತುಗೆ ಜವಾಬ್ದಾರಿ ವಹಿಸಿದ ಅಖಿಲಾ!

By ಪೂರ್ವ

ಅಖಿಲಾಂಡೇಶ್ವರಿಗೆ ಇದೀಗ ಪ್ರೀತುವಿನದ್ದೇ ತಲೆ ಬಿಸಿ ಶುರು ಆಗಿದೆ. ಆದಿ ಪಾರುವಿನ ಸಮಸ್ಯೆ ಮುಗಿಯಿತು ಅನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಇದೀಗ ಶುರು ಆದ ಹಾಗೆ ಕಾಣುತ್ತದೆ. ಅಖಿಲಾಂಡೇಶ್ವರಿ ಮತ್ತು ರಘು ಮೊದಲೆಲ್ಲ ಹೇಳಿದ ಹಾಗೆ ಪ್ರೀತುವನ್ನು ಆತನ ಪಾಡಿಗೆ ಬಿಟ್ಟು ಬಿಡೋಣ ಇಲ್ಲವಾದರೆ ಆತ ನಮ್ಮ ಕೈಗೆ ಸಿಗದಷ್ಟು ದೂರ ಹೋಗಿ ಬಿಡುತ್ತಾನೆ. ಆತನನ್ನು ಫ್ರೀ ಬಿಟ್ಟರೆ ಆತ ತನ್ನ ಪಾಡಾಯಿತು. ತಾನಾಯಿತು ಎಂದು ಇರುತ್ತಾರೆ ಎಂದು ಹೇಳಿಕೊಳ್ಳುತ್ತಾ ಸಮಾಧಾನ ಪಟ್ಟುಕೊಳ್ಳುತ್ತಾರೆ ಆದರೆ ಯಾವಾಗ ಅಖಿಲಾ ರೂಮ್ ಅಲ್ಲಿ ಬೀರುವಿನಲ್ಲಿ ಇದ್ದ ಲೈಸೆನ್ಸ್ ಗನ್ ಅಖಿಲಾ ಕಣ್ಣಿಗೆ ಬಿಳಲಿಲ್ಲವೋ ಆ ವೇಳೆ ಇನ್ನಷ್ಟು ಟೆನ್ಶನ್ ಹೆಚ್ಚಾಗುತ್ತದೆ.

ಮನೆ ಮಂದಿಯವರನ್ನು ಎಲ್ಲರನ್ನೂ ಕರೆಯಿಸಿ ನನ್ನ ಗನ್ ಕಾಣಿಸುತ್ತಿಲ್ಲ ಎಲ್ಲಿ ಹೋಗಿದೆ ಎಂದೇ ಗೊತ್ತಾಗುತ್ತಿಲ್ಲ ಎಂದು ಜೋರಾಗಿ ಹೇಳುತ್ತಾ ಇರುತ್ತಾಳೆ. ಆ ವೇಳೆ ಅಲ್ಲಿಗೆ ಓಡಿಕೊಂಡು ಬಂದ ಮನೆ ಮಂದಿ ಎಲ್ಲಾ ಅಖಿಲಾ ಬೀರುವನ್ನು ಚೆಕ್ ಮಾಡುತ್ತಾರೆ. ಎಲ್ಲಿ ಇದೆ ಗನ್ ಎಂದೆಲ್ಲ ಹೇಳಿದಾಗ ಅಖಿಲ ಗೆ ಮತ್ತಷ್ಟು ಗಾಬರಿ ಹೆಚ್ಚಾಗುತ್ತದೆ. ಮನೆಯವರೆಲ್ಲ ಏನೋ ಹುಡುಕುತ್ತಾ ಇರುವ ವೇಳೆ ಅಲ್ಲಿಗೆ ಬಂದ ಪ್ರೀತು ಏನಾಯಿತು ಎಂದು ಕೇಳಿದಾಗ ಭಯಗೊಂಡ ಅಖಿಲಾ ಹೇಳುತ್ತಾಳೆ ಇಲ್ಲಿ ಡ್ರಾವರ್‌ನಲ್ಲಿ ಇಟ್ಟಿದ್ದ ಗನ್ ಕಾಣಿಸುತ್ತಿಲ್ಲ ಎಂದಾಗ ಪ್ರೀತು ಏನು ಗನ್ ಕಾಣಿಸುತ್ತಿಲ್ವಾ ಎಂದು ಆಕ್ಟಿಂಗ್ ಮಾಡುತ್ತಾನೆ.

ಅಖಿಲಾಳ ಗನ್ ಪ್ರೀತು ಬೆನ್ನ ಹಿಂದೆ ಇರುತ್ತದೆ. ಆದರೆ ಈ ವಿಚಾರ ಮಾತ್ರ ಯಾರಿಗೂ ತಿಳಿದಿಲ್ಲ. ಅಮ್ಮನ ಎದುರು ಪ್ರೀತು ಗನ್ ಹುಡುಕುವ ಹಾಗೆ ಆಕ್ಟಿಂಗ್ ಮಾಡುತ್ತಾನೆ. ಆ ವೇಳೆ ಅಖಿಲ ಹೇಳುತ್ತಾರೆ ರೂಮ್ ನಲ್ಲಿ ಇಟ್ಟಿದ್ದ ಗನ್ ಇಲ್ಲ ಅಂದರೆ ಹೇಗೆ ಎಂದೆಲ್ಲ ಹೇಳುವಾಗ ರಘು ಹೇಳುತ್ತಾರೆ ಯಾಕೆ ಅಖಿಲಾ ಇಷ್ಟೆಲ್ಲ ಭಯ ಪಟ್ಟುಕೊಳ್ಳುತ್ತಿಯಾ ಎಂದು ಹೇಳಿದಾಗ ಅಖಿಲ ಹೇಳುತ್ತಾರೆ ಅಯ್ಯೋ ನೀವು ಆ ಗನ್ ಎಂದು ಅದನ್ನು ಚಿಕ್ಕದಾಗಿ ಪರಿಗಣಿಸಬೇಡಿ ಅದು ಲೋಡೆಡ್ ಗನ್ ಹಾಗೆಯೇ ಅದು ನನ್ನ ರಕ್ಷಣೆಗೆ ನಾನು ಲೈಸೆನ್ಸ್ ಮಾಡಿಸಿಕೊಂಡ ಗನ್ ಆದೇ ಇಲ್ಲ ಅಂದರೆ ಏನು ಅರ್ಥ ಎಂದು ಕಿರುಚುತ್ತಾಳೆ.

ಗನ್ ಕಳೆದುಕೊಂಡ ಟೆನ್ಶನ್‌ನಲ್ಲಿ ಅಖಿಲಾ

ಗನ್ ಕಳೆದುಕೊಂಡ ಟೆನ್ಶನ್‌ನಲ್ಲಿ ಅಖಿಲಾ

ಆ ವೇಳೆ ಗನ್ ಇಲ್ಲ ಎಂದು ತಿಳಿದ ಅಖಿಲಾ ಈ ಕೆಲಸ ಯಾರು ಮಾಡಿರಬಹುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಬಳಿಕ ಅಖಿಲ ಎಲ್ಲರ ಬಳಿ ಹೇಳುತ್ತಾಳೆ ಜನನಿಗೆ ಗೊತ್ತಿಲ್ಲದ ಹಾಗೆ ಚಾಕೆಟ್ ಕಾನೆ ಆಗಿತ್ತು ಹಾಗೆಯೇ ಪಾರು ಮುಖಕ್ಕೆ ಆಸಿಡ್ ಎರಚುವ ತಂತ್ರ ನಡೆಯುತ್ತಿತ್ತು. ಅದೇ ರೀತಿ ಯಾರಾದರೂ ಕೆಟ್ಟ ಉದ್ದೇಶ ಇಟ್ಟುಕೊಂಡು ಗನ್ ಅನ್ನು ಕದ್ದಿರಬಹುದಾ ಎಂದು ಹೇಳಿದಾಗ ಎಲ್ಲರಿಗೂ ಭಯ ಆಗುತ್ತದೆ. ಇದನ್ನು ಕೇಳಿದ ಆದಿ ಹೇಳುತ್ತಾನೆ ಟೆನ್ಶನ್ ಆಗಬೇಡಿ ಕೂಲ್ ಆಗಿರಿ, ಎಂದು ಹೇಳಿದಾಗ ಅದು ಹೇಗೆ ಅಪ್ಪ ನಾನು ಕೂಲ್ ಆಗಿರಿ ಎಂದು ಹೇಳಿದಾಗ ಅಖಿಲಾ ಹೇಳುತ್ತಾಳೆ ಇಷ್ಟು ವರ್ಷದಿಂದ ಕಾಪಾಡಿಕೊಂಡು ಬಂದ ಗನ್ ಇಲ್ಲ ಎಂದರೆ ನಾನು ಹೇಗೆ ಕೂಲ್ ಆಗಿರಲಿ ನನಗೆ ಟೆನ್ಶನ್ ಆಗದೆ ಇರುತ್ತಾ ಎಂದಾಗ ಆದಿ ಹೇಳುತ್ತಾನೆ ಅಮ್ಮ ಗನ್ ಕಾಣಿಸುತ್ತಿಲ್ಲ ಎಂದು ಹೇಳಿ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಡೋಣ ಎನ್ನುತ್ತಾನೆ.

ಪೊಲೀಸ್ ಕಂಪ್ಲೇಂಟ್ ನೀಡಲು ಸಲಹೆ ನೀಡಿದ ಆದಿ

ಪೊಲೀಸ್ ಕಂಪ್ಲೇಂಟ್ ನೀಡಲು ಸಲಹೆ ನೀಡಿದ ಆದಿ

ಇದನ್ನು ಕೇಳಿದ ಪ್ರೀತುಗೆ ಏನು ಮಾಡಬೇಕು ಎಂದು ತಿಳಿಯದೇ ಶಾಕ್ ಆಗುತ್ತಾನೆ ಬಳಿಕ ಆದಿ ಅಖಿಲ ಕೆಳಗೆ ಹೋಗುತ್ತಾರೆ ಅವರನ್ನು ಹಿಂಬಾಲಿಸುತ್ತಾ ಮನೆ ಮಂದಿ ಹೋಗುತ್ತಾರೆ ಇದನ್ನು ನೋಡಿದ ಪ್ರೀತು ಗನ್ ಅಲ್ಲಿ ಇಟ್ಟು ಜೋರಾಗಿ ಕರೆಯುತ್ತಾನೆ ಅಮ್ಮ ಗನ್ ಇಲ್ಲಿದೆ ಎಂದು ಹೇಳುತ್ತಾನೆ. ಪ್ರೀತು ಧ್ವನಿ ಕೇಳಿದ ಅಖಿಲಾ ಓಡೋಡಿ ಬರುತ್ತಾರೆ.

ಪ್ರೀತು ಬಳಿ ಗನ್ ನೋಡಿ ಶಾಕ್ ಆದ ಮನೆ ಮಂದಿ

ಪ್ರೀತು ಬಳಿ ಗನ್ ನೋಡಿ ಶಾಕ್ ಆದ ಮನೆ ಮಂದಿ

ಬಳಿಕ ಗನ್ ನೋಡಿ ಶಾಕ್ ಆಗುತ್ತಾರೆ. ಇಷ್ಟು ಹುಡುಕಿದರೂ ಗನ್ ಸಿಗಲಿಲ್ಲ ಆದರೆ ಈಗ ಹೇಗೆ ಸಿಕ್ಕಿತು ಎಂದೆಲ್ಲ ಅನುಮಾನ ಮೂಡುತ್ತದೆ ಹಾಗೆಯೇ ಅಖಿಲಾಗೆ ಪ್ರೀತು ಬಳಿ ಗನ್ ನೋಡಿ ಕೊಂಚ ಭಯ ಪಟ್ಟುಕೊಳ್ಳುತ್ತಾರೆ. ಇನ್ನು ಅಖಿಲ ಅದರ ಬಗ್ಗೆಯೇ ಯೋಚನೆ ಮಾಡುತ್ತಾ ಇರುತ್ತಾಳೆ. ಆ ವೇಳೆ ಅಲ್ಲಿಗೆ ಬಂದ ರಘು, ಅಖಿಲಾ ಏನು ಯೋಚನೆ ಮಾಡುತ್ತಿದ್ದೀಯಾ ಎಂದು ಕೇಳಿದಾಗ ಅಖಿಲಾ ಹೇಳುತ್ತಾಳೆ ನಾನು ಯೋಚನೆ ಮಾಡುತ್ತಿರುವುದು ಗನ್ ಬಗ್ಗೆ ಅಲ್ಲ, ಪ್ರೀತು ಬಗ್ಗೆ. ಪ್ರೀತು ಕುಡಿದು ತಲೆ ನೋವಾಗುತ್ತದೆ ಎಂದು ಹೇಳಿ ಜಂಡು ಬಾಂಬ್ ಕೇಳಲು ಬಂದಿದ್ದ ಅವನು ತುಂಬಾ ವಿಚಿತ್ರವಾಗಿ ಆಡುತ್ತಾನೆ.

ಪ್ರೀತುವಿನ ಜವಾಬ್ದಾರಿ ಆದಿ-ಪಾರುಗೆ

ಪ್ರೀತುವಿನ ಜವಾಬ್ದಾರಿ ಆದಿ-ಪಾರುಗೆ

ಇದನ್ನು ಅವನನ್ನು ಸಿ ಇ ಒ ಸ್ಥಾನದಿಂದ ಇಳಿಸಿದರು ಎಫೆಕ್ಟ್ ಎಂದು ನನಗೆ ಅನಿಸುತ್ತಿಲ್ಲ. ಹಾಗೇನಾದರೂ ಆಗಿದ್ದರೆ ಆದಿ ಮೇಲೆ ನನ್ನ ಮೇಲೆ ಕೋಪ ತಿರಿಸಿಕೊಳ್ಳಬಹುದಿತ್ತು. ಜನನಿ ಹತ್ರಾನು ಏಷ್ಟು ಚೆನ್ನಾಗಿ ಇಲ್ಲ. ಪಾರ್ವತಿಗೆ ಬೇಲೇನೆ ಕೊಡುತ್ತಿಲ್ಲ. ನಿಮ್ಮ ಬಳಿಯೂ ಸರಿ ಮಾತನಾಡುತ್ತಿಲ್ಲ. ಎಂದೆಲ್ಲ ಹೇಳುತ್ತ ಇರುತ್ತಾಳೆ ಬಳಿಕ ಇನ್ನೂ ನನ್ನ ಕೈಯಿಂದ ಆತನನ್ನು ಬದಲಾಯಿಸಲು ಸಾಧ್ಯ ಇಲ್ಲ. ಇನ್ನೂ ಆತನ ಜವಾಬ್ದಾರಿಯನ್ನು ಆದಿಹಾಗೂ ಪಾರುಗೆ ವಹಿಸುತ್ತಾರೆ ಅಖಿಲ. ಮುಂದೆ ಏನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Paaru written updated on 12th October Episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X