ಪಾರುವನ್ನು ಸೊಸೆ ಎಂದು ಒಪ್ಪಿಕೊಂಡ ಅಖಿಲಾಂಡೆಶ್ವರಿ
'ಪಾರು' ಧಾರವಾಹಿ ಸೊಗಸಾಗಿ ಮೂಡಿ ಬರುತ್ತಿದ್ದು. ನೋಡುಗರಿಗೆ ವಿಭಿನ್ನ ಅನುಭವ ನೀಡುತ್ತಿದೆ. ಇದೀಗ ಧಾರವಾಹಿ ಪ್ರೇಮಿಗಳಿಗೆ ಒಂದು ಖುಷಿ ಸುದ್ದಿ ಸಿಕ್ಕಿದೆ ಅದೇನೆಂದರೆ ಅಖಿಲಾಂಡೇಶ್ವರಿ ಪಾರುವನ್ನು ಸೊಸೆ ಎಂದು ಒಪ್ಪಿಕೊಳ್ಳುವ ಕಾಲ ಸನ್ನಿಹಿತ ಆಗಿದೆ. ಅಖಿಲಾಂಡೇಶ್ವರಿ ಪಾರುವನ್ನು ಸೊಸೆ ಎಂದು ಒಪ್ಪಿಕೊಳ್ಳಲು ರೆಡಿಯಾಗಿದ್ದಾರೆ.
ಮನೆಯಲ್ಲಿ ಯಾವ ರೀತಿಯ ಕಲಹಗಳು ಬರಬಾರದು ಯಾವುದೇ ಕೆಟ್ಟ ಘಟನೆಗಳು ಘಟಿಸದಂತೆ ಪಾರು ನೋಡಿಕೊಳ್ಳುತ್ತಿದ್ದಾಳೆ. ಇದನ್ನೆ ಯೋಚಿಸುತ್ತಾ ಕುಳಿತಿದ್ದ ಅಖಿಲಾಂಡೇಶ್ವರಿಗೆ ನಾನು ಮಾಡುತ್ತಿರುವುದು ತಪ್ಪು. ಇನ್ನಾದರೂ ನನ್ನ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದೆಲ್ಲ ಯೋಚನೆ ಮಾಡುತ್ತಿರುತ್ತಾಳೆ. ಬಳಿಕ ಅಡುಗೆ ಮನೆಯ ಹೆಡ್ ಸಾವಿತ್ರಿಯನ್ನು ಕರೆಯುತ್ತಾರೆ.
ಸಾವಿತ್ರಿ ನನ್ನನ್ನು ನೀನು ಸಂಪೂರ್ಣವಾಗಿ ಅರಿತುಕೊಂಡಿದ್ದಿಯಾ. ನಾನು ಏನು, ನನ್ನ ಕನಸೇನು ಎಂಬುವುದೆಲ್ಲ ನಿನಗೆ ಗೊತ್ತಿದೆ. ಆದಿ ವಿಚಾರಕ್ಕೆ ಬಂದಾಗ ನಾನು ಅಂದುಕೊಂಡ ಪ್ರಕಾರ ಏನು ಆಗಿರಲಿಲ್ಲ ಅದಕ್ಕೆ ಪಾರ್ವತಿಯನ್ನು ಈ ಮನೆ ಸೊಸೆ ಎಂದು ಒಪ್ಪಿಕೊಳ್ಳಲು ಆಗುತ್ತಿಲ್ಲ. ಆದರೆ ಈಗ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಪಾರುವನ್ನು ನಾನು ನನ್ನ ಸೊಸೆ, ಅರಸನಕೋಟೆಯ ಹಿರಿ ಸೊಸೆ ಎಂದು ಒಪ್ಪಿಕೊಳ್ಳಲು ರೆಡಿಯಾಗಿದ್ದೇನೆ ಎಂದು ಹೇಳುತ್ತಾಳೆ. ಅದನ್ನು ಕೇಳಿ ಸಾವಿತ್ರಿಗೆ ಬಹಳ ಖುಷಿ ಆಗುತ್ತದೆ.
ನನ್ನ ನಿರ್ಧಾರ ಈಗ ಎಲ್ಲರಿಗೂ ಖುಷಿ ಕೊಡುತ್ತದೆ ಎಂದು ಹೇಳಿದಾಗ ಸಾವಿತ್ರಿ ಖುಷಿ ಪಡುತ್ತಾ ಅಮ್ಮ ಇದನ್ನು ಪಾರ್ವತಿಗೆ ಹೇಳಿದರೆ ಕುಣಿದಾಡುತ್ತಾಳೆ ಎಂದು ಹೇಳಲು ಮುಂದಾದಾಗ ಸಾವಿತ್ರಿ ನಾನು ಈ ವಿಚಾರ ಹೇಳುವವರೆಗೂ ನೀನು ಯಾರ ಬಳಿಯೂ ಹೇಳಬಾರದು. ನಾನು ಆಕೆಯನ್ನು ಸೊಸೆ ಎಂದು ಒಪ್ಪಿಕೊಂಡಾಗ ಆಕೆಯ ಮುಖದ ಮೇಲಿರುವ ಖುಷಿಯನ್ನು ನೋಡಬೇಕು ಗಣೇಶನ ಹಬ್ಬ ಮಾಡುವ ವೇಳೆ ಎಲ್ಲರ ಮುಂದೆ ನಾನು ಹೇಳುತ್ತೇನೆ ಎಂದು ಹೇಳಿ ಸಾವಿತ್ರಿ ಬಾಯಿ ಮುಚ್ಚಿಸುತ್ತಾಳೆ.

ಪಾರುವನ್ನು ಸರಿಯಾಗಿ ನೋಡಿಕೊಳ್ಳುವಂತೆ ತಾಕೀತು
ಪಾರು ಆಕೆಯ ಗಂಡನ ಬಳಿ ಮಾತನಾಡುತ್ತಾ ಇರುತ್ತಾಳೆ. ಆದಿ ಬಳಿ ಮಾತನಾಡಿದರೆ ಅವಳ ನೋವೆಲ್ಲಾ ಕೊಂಚ ಮಾಯ ಆದ ಹಾಗೆ ಕಾಣುತ್ತಿತ್ತು. ಇತ್ತ ಪ್ರೀತು ಅತ್ತಿಗೆಯ ಸ್ಥಿತಿ ಕಂಡು ಅಳುತ್ತಾ ಇರುತ್ತಾನೆ. ನಾನು ಎಷ್ಟೇ ಹಿಂಸೆ ಮಾಡಿದರು, ಎಷ್ಟೇ ಬೈದರು ಅತ್ತಿಗೆ ಮಾತ್ರ ಯಾವುದನ್ನು ಮನದಲ್ಲಿ ಇಟ್ಟು ಕೊಳ್ಳುತ್ತಿಲ್ಲ. ಅಮ್ಮನನ್ನು ಉಳಿಸಲು ಹೋಗಿ ತನ್ನ ಪ್ರಾಣವನ್ನು ನೀಡಲು ಹೋದ ಮಹಾತಾಯಿ ಈಕೆ. ಆಕೆಯ ಮೇಲೆ ಕೈ ಮಾಡಲು ಹೋದೆನಲ್ಲ ಎಂದು ಬಹಳ ಬೇಸರ ಮಾಡಿಕೊಳ್ಳುತ್ತಾನೆ.

ಇನ್ನಾದರೂ ಪಾರುಗೆ ಒಳ್ಳೆ ದಿನಗಳು ಬರುತ್ತದಾ?
ಇನ್ನು ಆದಿ ಪಾರು ಮಲಗಿರುವುದನ್ನು ಕಂಡು ಫೋನ್ ನಲ್ಲಿ ಮಾತನಾಡಲು ತೆರಳುತ್ತಾನೆ. ಆತ ಆ ಕಡೆ ಹೋದ ಬಳಿಕ ಪಾರ್ವತಿಗೆ ಜೋರಾಗಿ ಕೆಮ್ಮು ಬರುತ್ತದೆ. ಹೊಟ್ಟೆ ಬಳಿ ನೋವಿರುವ ಕಾರಣ ಪಾರುಗೆ ಕೆಮ್ಮಲು ಸಾದ್ಯವಾಗುತ್ತಾ ಇರಲಿಲ್ಲ. ಇದರಿಂದ ನೀರು ಸ್ವಲ್ಪ ದೂರದಲ್ಲಿ ಇರುತ್ತದೆ ಅದನ್ನು ತೆಗೆದುಕೊಳ್ಳಲು ಹರ ಸಾಹಸ ಪಡುತ್ತಿದ್ದಳು ಅದನ್ನು ಕಂಡ ಅಖಿಲಾಂಡೇಶ್ವರಿ ಓಡಿ ಬಂದು ಆಕೆಗೆ ನೀರನ್ನು ಕೊಡುತ್ತಾಳೆ ಬಳಿಕ ಸ್ವಲ್ಪ ಸುಧಾರಿಸಿಕೊಂಡ ಪಾರು ಅತ್ತೆಯ ಮುಖ ನೋಡುತ್ತಾಳೆ ಯಾಕಮ್ಮ ಈ ಥರ ಮಾಡಿದೆ ಏನಾದರೂ ಬೇಕಾದರೆ ನಮ್ಮನ್ನು ಕೇಳು ನಾವು ಬರುತ್ತೇವೆ ಎನ್ನುತ್ತಾಳೆ.

ಯಾವ ಕೆಲಸವೂ ಮಾಡದಂತೆ ಪಾರುಗೆ ಆಜ್ಞಾಪಿಸಿದ ಅಖಿಲ
ಈ ರೀತಿ ಮಾಡಲು ಹೋಗಬೇಡ ಎಂದಾಗ ಆದಿ ಬರುತ್ತಾನೆ. ಏನಪ್ಪ ಆದಿ ಎಲ್ಲಿ ಹೋಗಿದ್ದೆ ಈ ಥರ ಮಾಡಿದರೆ ಸರಿಯಾ. ಪಾರು ನೀರು ಕುಡಿಯಲು ಹರ ಸಾಹಸ ಪಡುತ್ತಿದ್ದಳು ಎಲ್ಲಾದರೂ ಬಿದ್ದಿದ್ದರೆ ಏನು ಮಾಡುವುದು, ಇನ್ನು ಮುಂದೆ ಎಲ್ಲಿಗೂ ಆಕೆಯನ್ನು ಬಿಟ್ಟು ಹೋಗಬೇಡ ಎಂದು ತಾಕೀತು ಮಾಡುತ್ತಾರೆ. ಬಳಿಕ ಅಲ್ಲಿಂದ ಹೊರ ಹೋಗುತ್ತಾರೆ ಇದನ್ನು ಕಂಡ ಜನನಿ. ಪಾರು ಅಕ್ಕ ಯಾರಿಗೆ ಸಿಗುತ್ತೆ ಇಂತಹ ಭಾಗ್ಯ. ಒಳ್ಳೆ ಸುದ್ದಿ ಮಾತ್ರ ಸದ್ಯ ಹತ್ತಿರದಲ್ಲಿಯೇ ಇದೆ ಎಂದು ನನಗೆ ಭಾಸವಾಗುತ್ತಿದೆ ಎಂದು ಹೇಳುತ್ತಾಳೆ ಬಳಿಕ ಅಲ್ಲಿಂದ ಹೊರ ನಡೆಯುತ್ತಾಳೆ.

ಹೆಂಡತಿ ಬಳಿ ಕ್ಷಮೆ ಕೇಳಿದ ಆದಿ
ಇನ್ನೂ ಪಾರು ತಲೆ ನೇವರಿಸುತ್ತಾ ಪಾರು ನಿನ್ನನ್ನು ಅಮ್ಮ ಸೊಸೆ ಎಂದು ಒಪ್ಪಿಕೊಳ್ಳುವ ಕಾಲ ಮಾತ್ರ ಹತ್ತಿರದಲ್ಲಿಯೆ ಇದೆ ಅಮ್ಮ ಅಷ್ಟು ಪ್ರೀತಿಯಿಂದ ಕಂಡದ್ದನ್ನು ನೀನು ಎಂದಾದರೂ ನೋಡಿದ್ದೀಯಾ. ಅಮ್ಮನ ಮನಸ್ಸು ಇದೀಗ ಬಹಳ ಪ್ರಶಾಂತವಾಗಿದೆ. ಒಂದಲ್ಲಾ ಒಂದು ದಿನ ನಿನ್ನ ಸೊಸೆ ಎಂದು ಒಪ್ಪಿಯೆ ಒಪ್ಪುತ್ತಾರೆ ಎಂಬ ನಂಬಿಕೆ ಇದೆ ನನಗೆ ಎಂದು ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಪಾರುಗೆ ಬಹಳ ಖುಷಿ ಆಗುತ್ತದೆ. ಮಾರನೇ ದಿನ ಎದ್ದ ಪಾರು ಇವತ್ತು ರಂಗೋಲಿ ಹಾಕಬೇಕು ಎಷ್ಟೆಲ್ಲಾ ಕೆಲಸ ಇದೆ ಎಂದೆಲ್ಲಾ ಹೇಳುತ್ತಾ ಕೆಳಗೆ ಬಂದು ನೋಡಿದಾಗ ಎಲ್ಲಾ ರೆಡಿ ಮಾಡಿದ್ದರು. ಅಖಿಲಾಂಡೇಶ್ವರಿ, ಜನನಿ, ಯಾಮಿನಿ ಎಲ್ಲರೂ ಕೂಡಿ ಕೆಲಸ ಮಾಡುತ್ತಿದ್ದರು. ಇದನ್ನು ನೋಡಿದ ಪಾರ್ವತಿಗೆ ಆಶ್ಚರ್ಯ ಆಗುತ್ತದೆ. ಜನನಿ ಹೇಳುತ್ತಾಳೆ ನೀವು ಕೆಲಸ ಮಾಡಲು ಬರುತ್ತೀರಾ ಎಂದು ಅತ್ತೆ ಹೇಳಿದರು ಆ ಕಾರಣ ನಾವು ಮಧ್ಯ ರಾತ್ರಿ ಎರಡು ಗಂಟೆಗೆ ಎದ್ದು ಮಡಿಯುಟ್ಟು ಕೆಲಸ ಮಾಡುತ್ತಿದ್ದೇವೆ ಇದೀಗ ಕೆಲಸ ಎಲ್ಲಾ ಸಂಪೂರ್ಣ ಆಯಿತು ಎಂದು ಹೇಳುತ್ತಾರೆ. ಇನ್ನೂ ಪೂಜೆ ಶುರು ಆಗುವ ವೇಳೆ ಅರುಂಧತಿ ಆಗಮನವು ಆಗುತ್ತದೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ


Click it and Unblock the Notifications