Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Paaru Serial: ಅಖಿಲ ಕಾಲಿಗೆ ಬಿದ್ದ ಅರುಂಧತಿ!
ಅರುಂಧತಿ ಇದೀಗ ಅಖಿಲಾಂಡೇಶ್ವರಿ ಕಾಲಿಗೆ ಬಿದ್ದಿದ್ದಾಳೆ. ಅರುಂಧತಿ ಹೀಗೆ ನೇರವಾಗಿ ಬಂದು ಕಾಲಿಗೆ ಬೀಳುವುದನ್ನು ನೋಡಿದ ಅಖಿಲ ಶಾಕ್ ಆಗುತ್ತಾಳೆ. ತನ್ನ ಮೇಲೆ ಅಷ್ಟೊಂದು ದ್ವೇಷ ಇಟ್ಟುಕೊಂಡಿರುವ ಅರುಂಧತಿಗೆ ಈಗ ಜ್ಞೋನೋದಯ ಆಯಿತಾ ಇದನ್ನು ನಾನು ನಂಬಬೇಕಾ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ನನ್ನ ಮಗಳ ಹುಟ್ಟು ಹಬ್ಬ ಇಂದು ನನ್ನ ದೊಡ್ಡ ಮಗಳು ಸತ್ತು ಹೋದಳು ಈಗ ಸಣ್ಣ ಮಗಳು ಜೈಲು ಸೇರಿದ್ದಾಳೆ ಎಂದು ಅರುಂಧತಿ ಚಿಂತಿಸುತ್ತಾಳೆ.
ಅವಳನ್ನು ಹೇಗಾದರೂ ಬಿಡುಗಡೆ ಮಾಡಿ ಎಂದು ಅರುಂಧತಿ ಕೇಳಿಕೊಂಡಾಗ ಅಖಿಲಗೆ ಅಯ್ಯೋ ಎಂದು ಅನ್ನಿಸುತ್ತದೆ. ಬಳಿಕ ಆಯಿತು ಎಂದು ಹೇಳಲು ಹೊರಟಾಗ ಪಾರ್ವತಿ ಅಖಿಲಳನ್ನು ತಡೆಯುತ್ತಾರೆ. ಅತ್ತೆಯಮ್ಮ ಈ ಹೆಂಗಸಿನ ಮಾತಿಗೆ ಕರಗಿ ದಯಮಾಡಿ ಒಪ್ಪಿಗೆಯನ್ನು ನೀಡಬೇಡಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅಖಿಲ ಯಾಕಮ್ಮ ಪಾರ್ವತಿ ಕ್ಷಮಿಸೋ ದೊಡ್ಡ ಗುಣ ಇರುವ ನೀನೇ ಬೇಡ ಎಂದು ಹೇಳುತ್ತ ಇದ್ದೀಯಾ ಎಂದಾಗ ಪಾರ್ವತಿ ತಪ್ಪು ಮಾಡಿದರೆ ಕ್ಷಮಿಸಬಹುದು ಆದರೆ ಇವರು ಮಾಡಿರುವ ದ್ರೋಹವನ್ನು ನೋಡಿದರೆ ತಲೆ ಸಿಡಿದು ಹೋಗುತ್ತದೆ ಎನ್ನುತ್ತಾಳೆ.

ಅರುಂಧತಿ ಮಾತಿಗೆ ಚಕಾರ ಎತ್ತಿದ ಪಾರು
ಈಗಲೂ ನನ್ನ ಮೇಲೆ ದ್ವೇಷ ಸಾಧಿಸುತ್ತಾ ಇರುತ್ತಾರೆ, ಆ ದ್ವೇಷನ ಮರೆತು ನನ್ನ ಮಗಳನ್ನು ಬಿಡುಗಡೆ ಮಾಡಿ ಎಂದು ಕೇಳಿಕೊಳ್ಳುತ್ತ ಇದ್ದಾರೆ, ಇವರ ಮಾತಿನಲ್ಲಿ ನನಗೆ ಚೂರು ನಂಬಿಕೆ ಬರುತ್ತಿಲ್ಲ ಅತ್ತೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅರುಂಧತಿಗೆ ಕೊಂಚ ಶಾಕ್ ಆದರೆ ಪ್ರೀತಮ್ ಗೆ ನಗು ಬರುತ್ತದೆ. ಅರುಂಧತಿ ಮಾತಿನಲ್ಲಿ ಸತ್ಯ ಇಲ್ಲ ಎಂದು ಪಾರು ಹೇಳಿದಾಗ ಅಖಿಲಗೆ ಶಾಕ್ ಆಗುತ್ತದೆ.

ಅರುಂಧತಿಯನ್ನು ಮನೆ ಹೊರಗೆ ಕಳುಹಿಸಿದ ಅಖಿಲ
ಅಖಿಲ ಬಳಿ ಇವತ್ತು ಅನನ್ಯ ಹುಟ್ಟಿದ ದಿನ ಅಲ್ಲ, ಅನನ್ಯ ನಮ್ಮ ಜೊತೆ ಇರುವಾಗ ನಾನೇ ಹುಟ್ಟಿದ ಹಬ್ಬ ಆಚರಣೆ ಮಾಡಿದೆವು, ಇವರು ಸುಳ್ಳು ಹೇಳುತ್ತಿದ್ದಾರೆ ಎಂದು ಪಾರು ಹೇಳುತ್ತಾಳೆ. ಇದನ್ನು ಕೇಳಿದ ಅಖಿಲಾಂಡೇಶ್ವರಿ ಅರುಂಧತಿ ಬಳಿ ನಿಜ ಹೇಳು ಅನನ್ಯನ ಬರ್ತ್ ಡೇ ಇವತ್ತ ಎಂದು ಕೇಳುತ್ತಾಳೆ. ಅರುಂಧತಿ ಸಾರಿ ಅಖಿಲ ಇವತ್ತಲ್ಲ ಎಂದಾಗ ಅಖಿಲ ಕೋಪಿತಳಾಗ್ತಾಳೆ.

ಪಾರು ಮಾತಿಗೆ ಬೆಲೆ ಕೊಟ್ಟ ಅಖಿಲ
ಇಷ್ಟೆಲ್ಲಾ ಕೇಳಿದ ಅಖಿಲ ಅರುಂಧರಿಗೆ ನೀನು ಇನ್ನು ಹೊರಡಬಹುದು ಎಂದಾಗ ಪಾರು ಒಂದು ನಿಮಿಷ ಎಂದು ಹೇಳಿ ಒಂದು ಚೆಂಬು ನೀರು ತೆಗೆದುಕೊಂಡು ಬರುತ್ತಾಳೆ. ಇವತ್ತು ಒಂದು ಕೆಟ್ಟ ಶಕ್ತಿ ನಿಮ್ಮ ಅದ್ಯಾವ ಕೆಟ್ಟ ಉದ್ದೇಶ ಇಟ್ಟುಕೊಂಡು ನಿಮ್ಮ ಪಾದ ಮುಟ್ಟಿದೆಯೋ ಗೊತ್ತಿಲ್ಲ ಆತ್ತೆಯಮ್ಮ ಅದಕ್ಕೆ ನಿಮ್ಮ ಕಾಲು ತೊಳೆದು ಸ್ವಚ್ಚ ಮಾಡುತ್ತೇನೆ ಕುಳಿತುಕೊಳ್ಳಿ ಎಂದು ಹೇಳಿ ಕಾಲು ತೊಳೆಯುತ್ತಾಳೆ. ಇದನ್ನು ನೋಡಿದ ಅರುಂಧತಿ ಅಲ್ಲಿಂದ ಹೊರಟು ಹೋಗುತ್ತಾಳೆ. ಅವಳ ಹಿಂದೆ ಪ್ರೀತಮ್ ಕೂಡ ಹೋಗುತ್ತಾನೆ. ಇನ್ನು ಅಖಿಲ ಪಾರು ಹಾಗೂ ಆದಿ ಬಳಿ ಇವತ್ತು ನನಗೆ ಬಹಳ ಖುಷಿ ಆಗಿದೆ ಹಾಗೆ ನಿಮಗೆ ಇಬ್ಬರಿಗೂ ಧನ್ಯವಾದ ನೀವು ಅನನ್ಯ ಹುಟ್ಟಿದ ದಿನವನ್ನು ನೆನಪು ಇಟ್ಟುಕೊಳ್ಳದೆ ಹೋಗಿದ್ದರೆ ಇವತ್ತು ಮೋಸ ಹೋಗುತ್ತಿದ್ದೆ, ನಮ್ಮ ಅರಸನಕೋಟೆಗೆ ಕೆಟ್ಟದು ಮಾಡುವ ಮತ್ಯಾವ ಸಂಚು ಅವಳ ತಲೆಯಲ್ಲಿ ಓಡುತ್ತಿದೆಯೋ ಅಂತ ಆತಂಕ ಆಗುತ್ತಿದೆ ಎನ್ನುತ್ತಾಳೆ.

ಅಖಿಲ ಕಾಲು ತೊಳೆದ ಪಾರು
ಇನ್ನು ಆದಿ ಅಖಿಲಗೆ ಸಮಾಧಾನ ಮಾಡುತ್ತಾನೆ. ಇನ್ನು ಪ್ರೀತಮ್ ಅರುಂಧತಿ ಬಳಿ ಬಂದು ಏನ್ ಸಮಾಚಾರ ಎಂದು ಕೇಳುತ್ತಾನೆ. ಅರುಂಧತಿ ನೀನು ಹೇಳಿದ ಕೆಲಸ ಮಾಡಿ ಮುಗಿಸಿದ್ದೇನೆ, ಮೋನಿಕಾ ಹೇಳಿರುವುದನ್ನು ರೆಕಾರ್ಡ್ ಮಾಡಿಕೊಂಡು ಇದ್ದೀಯಾ ಅಲ್ವಾ, ಆ ವಿಡಿಯೋ ನನಗೆ ಬೇಕು ಅದನ್ನು ಕೊಡು ಎಂದಾಗ ಪ್ರೀತಮ್ ಮಾತ್ರ ಆರುಂಧತಿಯನ್ನು ಆಟ ಆಡಿಸುತ್ತಾ ಇರುತ್ತಾನೆ. ಮೋನಿಕಾ ನಿಮ್ಮ ಬಗ್ಗೆ ಎನು ಹೇಳಿದ್ದಾಳೆ ಅಂತ ಮರೆತು ಹೋಗಿ ಬಿಟ್ಟಿದ್ದಿನಿ, ನಿಮ್ಮ ಬಾಯರೆ ಅದನ್ನ ಕೇಳಬೇಕು ಅನ್ನಿಸುತ್ತಾ ಇದೆ, ಇದನ್ನು ಹೇಳ್ತೀರಾ ಎಂದು ಹೇಳಿದಾಗ ಮೋನಿಕಾ ಅರುಂಧತಿ ಇರುವ ಜಾಗ ಹುಡುಕಿಕೊಂಡು ಓಡಿಕೊಂಡು ಬರುತ್ತಾಳೆ. ಮುಂದೇನು ಕಾದು ನೋಡಬೇಕಿದೆ..