ಪ್ರೀತು ವರ್ತನೆಯಿಂದ ಕಂಗೆಟ್ಟ ಅಖಿಲ: ಆದಿಗೆ ಶಾಕ್

By ಪೂರ್ವ

ಆದಿ ಮನಸ್ಸಿನಲ್ಲಿ ಇದೀಗ ಅಮ್ಮ ವಿಲನ್ ಆಗಿದ್ದಾರೆ ನನ್ನ ಹಾಗೂ ಪಾರುವನ್ನು ದೂರ ಮಾಡಲು ಕಾಯುತ್ತಿದ್ದಾರೆ ಎಂಬ ಅನುಮಾನ ಆದಿ ಮನಸ್ಸಿಗೆ ಈಗಾಗಲೇ ಬಂದು ಬಿಟ್ಟಿದೆ. ಆದರೆ ಈ ಬಗ್ಗೆ ಅಮ್ಮನ ಬಳಿ ಕೇಳದೆ ಇದ್ದರೂ ಅಮ್ಮನಿಗೆ ಟಾಂಗ್ ಕೊಟ್ಟು ಮಾತನಾಡುವಷ್ಟು ಅನುಮಾನ ಗಾಢವಾಗಿ ಬೆಳೆದುಬಿಟ್ಟಿದೆ.

ಆದಿ ಆಫೀಸಿಗೆ ಹೋಗುವ ವೇಳೆ ಅಖಿಲಾಂಡೇಶ್ವರಿ ಪೇಪರ್ ಹಿಡಿದು ಕಾಫಿ ಹೀರುತ್ತಾ ಇರುತ್ತಿರುತ್ತಾರೆ. ಈ ವೇಳೆ ಆದಿ ಒಂದು ಪೊರಕೆಯನ್ನು ತರುತ್ತಾನೆ. ಬಳಿಕ ಯಾಮಿನಿ ಬಳಿಗೆ ಬಂದು ಚಿಕ್ಕಮ್ಮ ಎಂದು ಕೂಗುತ್ತಾನೆ ಯಾಮಿನಿ ಇದೇನಪ್ಪಾ ಆದಿ ತನ್ನ ಬಳಿ ಪೊರಕೆ ಹಿಡಿದು ಬಂದೀದ್ದಾನಲ್ಲ ಯಾಕೆ ಎಂದು ಅರ್ಥ ಆಗದೆ ನೋಡುತ್ತಾಳೆ. ಬಳಿಕ ಹೇಳುತ್ತಾಳೆ ಏನಪ್ಪ ಬೆಳಗ್ಗೆ ಬೆಳಗ್ಗೆ ಪೊರಕೆ ಹಿಡಿದು ಬಂದಿದ್ದೀಯಾ ಮನೆ ಎಲ್ಲಾ ಗುಡಿಸಬೇಕಾ. ಕೆಲಸದವರು ಇದ್ದಾರಲ್ಲ ಅವರು ಗುಡಿಸುತ್ತಾರೆ ಎಂದು ಹೇಳುತ್ತಾಳೆ ಇದನ್ನು ಅಖಿಲಾಂಡೇಶ್ವರಿ ಕೂಡ ನೋಡುತ್ತಾ ಇರುತ್ತಾಳೆ. ಅದಕ್ಕೆ ಅಯ್ಯೋ ಚಿಕ್ಕಮ್ಮ ಇದು ನೀವು ಗುಡಿಸಲು ಅಲ್ಲ ನಮಗೆ ದೃಷ್ಟಿ ತೆಗೆಯಲು ಈ ಪೊರಕೆ ತಂದಿದ್ದೀನಿ. ನಮಗೆ ದೃಷ್ಟಿ ತೆಗೆಯುತ್ತಿರಾ ಎಂದು ಕೇಳುತ್ತಾನೆ. ಅದಕ್ಕೆ ಯಾಮಿನಿ ಮೂಗು ಮುರಿಯುತ್ತಾರೆ ಅಷ್ಟೇ ತಾನೆ ತೆಗೆಯುತ್ತೇನೆ ಎಂದು ಹೇಳುತ್ತಾಳೆ.

ಆದಿ ಪಾರುವನ್ನು ಕರೆದುಕೊಂಡು ಬರುತ್ತಾನೆ. ಬಳಿಕ ಹೇಳುತ್ತಾನೆ ಚಿಕ್ಕಮ್ಮ ನಮ್ಮಿಬ್ಬರ ಅನ್ಯೋನ್ಯತೆ ನೋಡಿ ತುಂಬಾ ಜನ ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ. ನಾವಿಬ್ಬರೂ ಅನ್ಯೋನ್ಯವಾಗಿ ಇರುವ ಹಾಗೆ ಆಗಬೇಕು. ನೂರು ಕಾಲ ಸುಖವಾಗುರಬೇಕು ಎಂದು ಹೇಳುತ್ತಾಳೆ. ನಮಗೆ ದೃಷ್ಟಿ ತೆಗೆಯಿರಿ. ನಮ್ಮಿಬ್ಬರ ಜೋಡಿಗೆ ಇದೀಗ ತುಂಬಾ ದೃಷ್ಟಿ ಬಿದ್ದಿದೆ ಎಂದಾಗ ಪಾರು, ಏನಿದೆಲ್ಲ, ಎಂದು ಆಕೆಗೆ ಗೊತ್ತಾಗದ ರೀತಿ ನೋಡುತ್ತಾಳೆ. ಬಳಿಕ ಯಾಮಿನಿ ಅವರಿಬ್ಬರ ದೃಷ್ಟಿ ತೆಗೆಯುತ್ತಿರುವ ವೇಳೆ ಆದಿ ಅಮ್ಮನ ಮುಖವನ್ನು ನೋಡುತ್ತಾನೆ.

ಮಗನ ಮುಖ ನೋಡಿ ನಕ್ಕ ಅಖಿಲ

ಮಗನ ಮುಖ ನೋಡಿ ನಕ್ಕ ಅಖಿಲ

ಬಳಿಕ ಅಮ್ಮನಿಗೆ ಕೊಂಕು ಮಾತುಗಳಿಂದ ನಿಂದಿಸುತ್ತಾನೆ. ಇದನ್ನೆಲ್ಲ ನೋಡಿದ ಅಖಿಲಾಂಡೇಶ್ವರಿಗೆ ಮನದಲ್ಲಿ ನಗು ಮೂಡುತ್ತದೆ ಬಳಿಕ ನಗುವನ್ನು ತಡೆದುಕೊಂಡು ಆದಿ-ಪಾರು ಖುಷಿ ಆಗಿರುವುದನ್ನು ನೋಡಿ ಖುಷಿ ಪಡುತ್ತಾಳೆ. ಇದನ್ನೆಲ್ಲ ಕ್ಯಾಮೆರಾದ ಮೂಲಕ ನೋಡುತ್ತಿರುವ ಅರುಂಧತಿಗೆ ಎನೆಂಬುವುದೆ ಅರ್ಥ ಆಗುವುದಿಲ್ಲ. ಆದರೆ ಯಾಮಿನಿಗೆ ಮಾತ್ರ ಕೋಪ ಬರುತ್ತದೆ. ಮನೆಯ ಕೆಲಸದಾಕೆಯನ್ನು ಯಜಮಾನಿ ಎಂದು ಹೇಳಲಾಗುತ್ತಾ, ಆದಿ ಗೆ ಎರಡನೇ ಮದುವೆ ಬೇರೆ ಯೋಗ ಇದೆ, ಆದಷ್ಟು ಬೇಗ ಬೇರೆ ಮದುವೆ ಆಗಿ ಈ ಕೆಲಸದಾಕೆಯನ್ನು ಬಿಟ್ಟು ಬಿಡಲಿ ಎಂದೆಲ್ಲ ಯೋಚನೆ ಮಾಡುತ್ತಾಳೆ.

ಮನಸಲ್ಲೇ ಹಲ್ಲು ಮಸೆದ ಯಾಮಿನಿ

ಮನಸಲ್ಲೇ ಹಲ್ಲು ಮಸೆದ ಯಾಮಿನಿ

ಬಳಿಕ ಪೊರಕೆಯನ್ನು ಮನೆಯಿಂದ ಹೊರಗೆ ಬಿಸಾಡಲು ಹೋಗುತ್ತಾಳೆ. ಅಲ್ಲಿಂದ ಪಾರು ಹಾಗೂ ಆದಿ ತೆರಳಿದ ಮೇಲೆ ಅಖಿಲಾಂಡೇಶ್ವರಿಗೆ ನಗು ಬರುತ್ತದೆ ಆದರೆ ರಘುಗೆ ಬೇಸರ ಆಗುತ್ತದೆ. ಅಮ್ಮನನ್ನೆ ತಪ್ಪಾಗಿ ತಿಳಿದುಕೊಂಡಂತೆ ಕಾಣುತ್ತಿದೆ ಎಂದೆಲ್ಲ ಯೋಚನೆ ಮಾಡುತ್ತಾನೆ. ಬಳಿಕ ಅಖಿಲಾಂಡೇಶ್ವರಿ ಬಳಿ ಮಾತನಾಡಲು ರೂಮಿನತ್ತ ತೆರಳುತ್ತಾನೆ. ಅಲ್ಲಿ ಅಖಿಲಾಂಡೇಶ್ವರಿ ಒಬ್ಬಾಕೆ ಕುಳಿತಿರುತ್ತಾಳೆ ಆಕೆಯನ್ನು ನೋಡಿದ ರಘು ಹೇಳುತ್ತಾನೆ ಅಖಿಲಾಂಡೇಶ್ವರಿ, ಆದಿಗೆ ಅನುಮಾನ ಬಂದಿರುವ ಹಾಗೆ ಕಾಣುತ್ತಿದೆ ನಿನಗೆ ನೋವು ಆಗುವ ರೀತಿಯಲ್ಲಿ ಮಾತನಾಡುತ್ತಿದ್ದಾನೆ ಇದೆಲ್ಲ ನಿನಗೆ ಅರ್ಥ ಆಗುತ್ತಿದೆಯ ಎಂದು ಕೇಳುತ್ತಾನೆ.

ರಘು ಬಳಿ ಸಂತಸ ಹಂಚಿಕೊಂಡ ಅಖಿಲ

ರಘು ಬಳಿ ಸಂತಸ ಹಂಚಿಕೊಂಡ ಅಖಿಲ

ಅದಕ್ಕೆ ಅಖಿಲ, ನನಗೆ ಎಲ್ಲ ಅರ್ಥ ಆಗುತ್ತಿದೆ. ನನಗೆ ಗೊತ್ತು ಆದಿಗೆ ಅನುಮಾನ ಬಂದಿದೆ ಎಂದು. ಆದರೆ ಇದರಿಂದ ಆದಿಗೆ ತನ್ನ ಹೆಂಡತಿಯನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇನೆ ಎಂಬ ಭಯ ಶುರು ಆಗಿದೆ. ಎಲ್ಲಿ ನನ್ನಿಂದ ಹೆಂಡತಿಯನ್ನು ದೂರ ಮಾಡುತ್ತಾರೋ ಅನ್ನುವ ಭಯ ಕೂಡ ಹೆಚ್ಚಾಗಿದೆ. ಇದರಿಂದ ಪಾರುವನ್ನು ಹೆಚ್ಚು ಪ್ರೀತಿ ಮಾಡುತ್ತಿದ್ದಾನೆ ಅವರಿಬ್ಬರನ್ನು ದೂರ ಮಾಡಲು ಯಾರಿಂದ ಕೂಡ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ರಘುಗೆ ಸಂತಸವಾಗುತ್ತದೆ.

ಅಖಿಲ ಕನಸು ಭಗ್ನ

ಅಖಿಲ ಕನಸು ಭಗ್ನ

ಇತ್ತ ಕಡೆ ಅನೇಕ ಕನಸುಗಳನ್ನು ಇಟ್ಟು ಕೊಂಡಿದ್ದ ಟೆಂಡರ್ ಬೇರೆಯವರ ಪಾಲಾಗಿದೆ. ಅಖಿಲಾಂಡೇಶ್ವರಿ ಇದರಿಂದ ಬಹಳ ಬೇಸರ ಗೊಳ್ಳುತ್ತರೆ ಹಾಗೆಯೇ ಕುಪಿತಗೊಳ್ಳುತ್ತಾರೆ. ಬಳಿಕ ಪ್ರೀತು ಎಂದು ಜೋರಾಗಿ ಕರೆಯುತ್ತಾ ಬರುತ್ತಾರೆ. ಇದನ್ನು ಕೇಳಿಸಿಕೊಂಡ ಪ್ರೀತು ಕೇಳಿಸಿಕೊಳ್ಳದ ಹಾಗೆ ಇರುತ್ತಾನೆ. ಅಮ್ಮನ ಅರಚಾಟ ಕಂಡು ಎಲ್ಲರೂ ಓಡಿ ಬರುತ್ತಾರೆ. ಬಳಿಕ ಪ್ರೀತು ಏನಾಯ್ತು ಎಂದು ಕೇಳುತ್ತಾನೆ ಟೆಂಡರ್ ಯಾಕೆ ಮಿಸ್ ಆಯ್ತು ಎಂದು ಕೇಳಿದರೆ ಲಾಭ ಮಾಡದೇ ಹೇಗೆ ಬಿಸಿನೆಸ್ ಮಾಡಲು ಸಾದ್ಯ ಎಂದು ಹೇಳಿದಾಗ ಅಖಿಲಾಂಡೇಶ್ವರಿ ಶಾಕ್ ಆಗುತ್ತದೆ.

English summary
Kannada serial Paaru written updated on 20th September. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X