For Quick Alerts
  ALLOW NOTIFICATIONS  
  For Daily Alerts

  ಪಾರು ಕೈ ಗೆ ಸಿಕ್ಕಿ ಬಿದ್ದ ಮೋನಿಕಾ: ಪ್ರೀತೂವನ್ನು ಕಾಪಾಡುವವರು ಯಾರು?

  By ಪೂರ್ವ
  |

  'ಪಾರು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ಪ್ರೀತೂ, ಪಾರು ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ದಾಮಿನಿಯನ್ನು ಯಾಮಾರಿಸಿದ ಹಾಗೆ ಪಾರುವನ್ನು ಯಾಮರಿಸಲು ಆಗುತ್ತಿಲ್ಲ. ''ಪ್ರೀತೂ ನನಗೆ ಏನಾದರು ತಿನ್ನಬೇಕು ಅನ್ನಿಸುತ್ತಿದೆ ಏನಾದರು ಕೊಡಿಸು ಎಂದು ಮೋನಿಕಾ ಕೇಳುತ್ತಾಳೆ, ಆದರೆ ಪ್ರೀತೂ ಮಾತ್ರ ಇದಕ್ಕೆ ಕಿವಿ ಕೊಡದೇ ಹೋಗಿ ಮಲಗಿಕೊ ನನಗೆ ತೊಂದರೆ ಕೊಡಬೇಡ ದಯಮಾಡಿ ಎಂದು ಹೇಳುತ್ತಿದ್ದ ಇದನ್ನು ಕೇಳಿದ ಮೋನಿಕಾ ರೂಮ್ ಬಿಟ್ಟು ಮನೆಯ ಒಳಗೆ ಹೋಗಿ ಪ್ರಿಡ್ಜ್ ಗೆ ಕೈ ಹಾಕಿ ಐಸ್ ಕ್ರೀಮ್ ತಿನ್ನಲು ಹೋಗುತ್ತಾಳೆ.

  ಇದನ್ನು ನೋಡಿದ ದಾಮಿನಿಗೆ ಭಯ ಆಗುತ್ತದೆ. ಯಾರಪ್ಪ ಇಷ್ಟು ಹೊತ್ತಲ್ಲಿ ಇಲ್ಲಿ ನಿಂತಿರುವುದು. ದೆವ್ವ ಆಗಿರಬಹುದಾ ಎಂದು ಯೋಚನೆ ಮಾಡುತ್ತಾಳೆ. ಹಲೋ, ಯಾರು ನೀವು ಎಂದು ಎಷ್ಟು ಬಾರಿ ಕೇಳಿದರೂ ಆ ಕಡೆಯಿಂದ ಮಾತ್ರ ಉತ್ತರ ಬರುವುದೇ ಇಲ್ಲ. ಇತ್ತ ದಾಮಿನಿ ನನ್ನ ನೋಡೆ ಬಿಟ್ಟಳು ಎಂದು ಮೋನಿಕಾಗೆ ಭಯ ಶುರು ಆಗುತ್ತದೆ. ಬಳಿಕ ದೆವ್ವದ ಹಾಗೆ ಆಕ್ಟ್ ಮಾಡುತ್ತಾಳೆ ಐಸ್ ಕ್ರೀಮ್ ಎಲ್ಲ ಮುಖಕ್ಕೆ ಹಚ್ಚಿಕೊಂಡು ದೆವ್ವ ಬಂದವರ ಹಾಗೆ ನಟನೆ ಮಾಡುತ್ತಾಳೆ ಇದನ್ನು ನೋಡಿದ ಯಾಮಿನಿ ಒಮ್ಮೆಗೇ ಹೌ ಹಾರುತ್ತಾಳೆ.

  ರೂಂನಲ್ಲಿ ಮೋನಿಕಾ ಇಲ್ಲದ್ದನ್ನು ನೋಡಿದ ಪ್ರೀತೂ ಓಡಿಕೊಂಡು ಬರುತ್ತಾನೆ. ಮೋನಿಕಾಳನ್ನು ಚಿಕ್ಕಮ್ಮ ನೋಡಿ ಬಿಟ್ಟರಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇದನ್ನು ನೋಡಿದ ಪ್ರೀತೂ ಚಿಕ್ಕಮ್ಮ ಒಬ್ಬರೇ ನಿಂತು ಬಿಟ್ಟಿದ್ದಿರಲ್ಲ ಏನಾಯಿತು ಎಂದು ಕೇಳುತ್ತಾನೆ. ಆದಕ್ಕೆ ಯಾಮಿನಿ ಮೋನಿಕಾಳತ್ತ ಬೆರಳು ತೋರಿಸಿ ನೋಡು ಯಾರೋ ನಿಂತಿದ್ದಾರೆ ಎಂದು ಹೇಳಿದಾಗ ಪ್ರೀತೂ ಮಾತ್ರ ಅತ್ತ ಕಡೆ ಯಾರು ನಿಂತಿಲ್ಲ ಯಾಕೆ ಇಷ್ಟು ಭಯ ಪಡುತ್ತಾ ಇದ್ದೀರಾ ಎಂದು ಕೇಳುತ್ತಾನೆ. ಇದನ್ನು ಕೇಳಿ ದಾಮಿನಿಗೆ ಇನ್ನೂ ಭಯವಾಗುತ್ತದೆ.

  ಮೋನಿಕಾಳ ನೋಡಿ ದಾಮಿನಿಗೆ ಭಯ!

  ಮೋನಿಕಾಳ ನೋಡಿ ದಾಮಿನಿಗೆ ಭಯ!

  ಮೋನಿಕಾನನ್ನು ನೋಡಿದ ಪ್ರೀತೂ ಕಣ್ಣಿನಲ್ಲಿ ಸನ್ನೆ ಮಾಡಿ ಇಲ್ಲಿಂದ ಹೋಗಿ ಎಂದು ಹೇಳುತ್ತಾನೆ. ಇದನ್ನು ನೋಡಿದ ಮೋನಿಕಾ ಅಲ್ಲಿಂದ ಹೊರಟು ಹೋಗುತ್ತಾಳೆ. ಆ ವೇಳೆ ಅಲ್ಲಿಗೆ ಬಂದ ಪಾರು ಬಳಿ ದೆವ್ವದ ಕಥೆ ಹೇಳುತ್ತಾಳೆ ದಾಮಿನಿ, ಇದನ್ನು ಕೇಳಿದ ಪ್ರೀತೂ ಮಾತ್ರ ಅತ್ತಿಗೆ ಚಿಕ್ಕಮ್ಮನಿಗೆ ಏನೋ ಆಗಿದೆ, ಇಗೀಗ ಒಂದೊಂದು ಸಲ ವಿಚಿತ್ರವಾಗಿ ಆಡುತ್ತಾರೆ ಎಂದು ಹೇಳುತ್ತಾನೆ.

  ಭಯಗೊಂಡ ದಾಮಿನಿ ಮಾತು ಯಾರೂ ನಂಬುತ್ತಿಲ್ಲ!

  ಭಯಗೊಂಡ ದಾಮಿನಿ ಮಾತು ಯಾರೂ ನಂಬುತ್ತಿಲ್ಲ!

  ಇನ್ನು ಮರುದಿನ ದಾಮಿನಿ, ಭಯ ಹೋಗಲಾಡಿಸಲು ದೇವರ ಪುರಾಣ ಎಲ್ಲಾ ಹೇಳುತ್ತಿರುತ್ತಾಳೆ ಇದನ್ನು ನೋಡಿದ ಆಕೆಯ ಗಂಡ, ದಾಮು ಏನಾಗಿದೆ ನಿನಗೆ ಎಂದೆಲ್ಲ ಕೇಳಿದಾಗ ದಾಮಿನಿ ಏನೇನೋ ಬಡಬಡಾಯಿಸುತ್ತಾಳೆ. ಆ ವೇಳೆ ದಾಮಿನಿ, ದೆವ್ವ ಇದೆ ಈ ಮನೆಯಲ್ಲಿ ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ಆಕೆಯ ಗಂಡ ಏನೇ ದಾಮಿನಿ ಹೆದರಿಸುತ್ತ ಇದ್ದೀಯಾ ಎಂದಾಗ ನಿನ್ನೆ ನಡೆದ ಘಟನೆಯನ್ನು ವಿವರವಾಗಿ ಹೇಳುತ್ತಾಳೆ. ಈ ವೇಳೆ ಅಲ್ಲಿಗೆ ಬಂದ ವಾಚ್ ಮೆನ್ ದಾಮಿನಿ ಅವತಾರ ಕಂಡು ಬೆಚ್ಚಿ ಬೀಳುತ್ತಾನೆ.

  ಅಣ್ಣನ ಬಳಿ ಮನದ ಮಾತು ಬಿಚ್ಚಿಟ್ಟ ಅರುಂಧತಿ

  ಅಣ್ಣನ ಬಳಿ ಮನದ ಮಾತು ಬಿಚ್ಚಿಟ್ಟ ಅರುಂಧತಿ

  ಇನ್ನು ಅರುಂಧತಿ, ರಾಣಾನ ಬಳಿ ಚರ್ಚೆ ಮಾಡುತ್ತಿರುತ್ತಾಳೆ ನನ್ನ ಹಾಗೂ ಮೋನಿಕಾಳನ್ನು ಆದಿ ಟ್ರಾಪ್ ಮಾಡುತ್ತಾನೆ ಎಂದು ತಿಳಿದು ಮೊಬೈಲ್ ಸಿಮ್ ಅನ್ನೂ ಬದಲಾಯಿಸಿಬಿಟ್ಟೆ ಅಲ್ವಾ ಎಂದು ಖುಷಿ ಯಿಂದ ಹೇಳುತ್ತಾಳೆ. ಇದನ್ನು ಕೇಳಿದ ರಾಣಾ, ಇಲ್ಲ ಆದರೆ ನಾನು ಜೈಲ್‌ಗೆ ಹೋಗಿ ಮುದ್ದೆ ಮುರಿಬೇಕಾಗಿತ್ತು. ಇದೆಲ್ಲ ಗೇಮ್, ಪ್ರೀತೂ ಚಾಪ್ಟರ್‌ನ ಮೋನಿಕಾ ಕ್ಲಿಯರ್ ಮಾಡಿದರೆ ಉಳಿದ ಮೂವರ ಚಾಪ್ಟರ್ ನಾನು ಕ್ಲಿಯರ್ ಮಾಡುತ್ತೇನೆ ಅಖಿಲಾನ ಬಿಟ್ಟು, ಏಕೆಂದರೆ ಅಖಿಲ ಯಾವತ್ತಿದ್ದರೂ ನಿನ್ನ ಭೇಟೆ ಎಂದು ಹೇಳುತ್ತಾನೆ.

  ಅಖಿಲಾ ಮೇಲೆ ದ್ವೇಷ ಸಾಧಿಸುತ್ತಿರುವ ಅರುಂಧತಿ

  ಅಖಿಲಾ ಮೇಲೆ ದ್ವೇಷ ಸಾಧಿಸುತ್ತಿರುವ ಅರುಂಧತಿ

  ಇದನ್ನು ಕೇಳಿದ ಅರುಂಧತಿ, ಆಕೆಯನ್ನು ಮಾತ್ರ ಸುಮ್ಮನೆ ಬಿಡುವುದಿಲ್ಲ. ನನ್ನ ಮಗಳನ್ನೇ ಸಾಯಿಸಿಬಿಟ್ಟಳು ಎಂದು ಸೇಡಿನಿಂದ ಹೇಳುತ್ತಾಳೆ. ಇದನ್ನು ಕೇಳಿದ ರಾಣಾ ಅದಕ್ಕೆ ಸಮಯ ಕೂಡಿ ಬರುತ್ತದೆ ಎಂದು ಹೇಳುತ್ತಾನೆ. ಇನ್ನು ಪ್ರೀತಮ್ ರೂಮಿಗೆ ಪಾರು ಬಟ್ಟೆ ಹಿಡಿದುಕೊಂಡು ಬರುತ್ತಾಳೆ ಈ ವೇಳೆ ಮೋನಿಕಾಳನ್ನು ನೋಡಿ ಪಾರು ಯಾರು ಎಂದು ತಿಳಿಯದೇ ನೀನು ಯಾರು ಎಂದು ಕೇಳುತ್ತಾಳೆ ಇನ್ನೂ ಪಾರುವನ್ನು ನೋಡಿದ ಮೋನಿಕಾ ಅಂತೂ ಗಾಬರಿಗೊಂಡು ಏನೂ ಮಾತನಾಡದೆ ಸುಮ್ಮನೆ ನಿಂತಿರುತ್ತಾರೆ ಇದನ್ನು ನೋಡಿದ ಪಾರು ಮೋನಿಕಾಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಅದೇ ವೇಳೆಗೆ ಪ್ರೀತು ರೂಮ್ ಪ್ರವೇಶಿಸುತ್ತಾನೆ. ಅಲ್ಲಿಗೆ, ಮೋನಿಕಾ-ಪ್ರೀತೂ ಪರಿಚಯಸ್ಥರು ಎಂಬುದು ಪಾರುಗೆ ತಿಳಿದುಬಿಡುತ್ತದೆ ಮುಂದೇನು ಕಾದು ನೋಡಬೇಕಿದೆ.

  English summary
  Kannada serial Paaru written updated on 21th November Episode. Know more about it.
  Tuesday, November 22, 2022, 21:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X