Paaru: ಮನೆ ಕೆಲಸಕ್ಕೆ ಹೋದ ಪಾರು ಮೇಲೆ ಸಂಗೀತಾಗೆ ಅನುಮಾನ

ಪಾರ್ವತಿ ಎಲ್ಲರ ಕಣ್ಣು ತಪ್ಪಿಸಿ ಮನೆಗೆಲಸಕ್ಕೆ ಹೋಗುತ್ತಿರುತ್ತಾಳೆ. ಆದರೆ ಈ ಬಗ್ಗೆ ಆದಿಗೆ ಅನುಮಾನ ಮೂಡಿದೆ. ಅಖಿಲಾಂಡೇಶ್ವರಿ ಮನೆಯಲ್ಲಿ ಇದೀಗ ಹಬ್ಬದ ವಾತಾವರಣ ಇದೆ. ಸೊಸೆಯಂದಿರು ಗರ್ಭಿಣಿಯರು. ಹಾಗೆಯೇ ಇಬ್ಬರಿಗೂ ಒಮ್ಮೆಲೆ ಸೀಮಂತ ಶಾಸ್ತ್ರ ಮಾಡಬೇಕು ಎಂಬುವುದು ಅಖಿಲಾಂಡೇಶ್ವರಿ ಆಸೆ ಕೂಡ ಆಗಿದೆ. ಅವರ ಆಸೆಯ ಪ್ರಕಾರವಾಗಿ ನಡೆಯುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

ಪಾರ್ವತಿ ಮಾತ್ರ ಅರಸನ ಕೋಟೆಗೆ ಹೋಗಲು ಹಿಂದೇಟು ಹಾಕುತ್ತ ಇರುತ್ತಾಳೆ. ಹಾಗೆಯೇ ಜನನಿ ಸೀಮಂತ ಶಾಸ್ತ್ರವನ್ನು ನೋಡಬೇಕು ಎಂದು ಮನದಲ್ಲಿ ಅಂದುಕೊಂಡು ಇರುತ್ತಾಳೆ. ಈ ವಿಚಾರವನ್ನು ಸಂಗೀತಾ ಬಳಿ ಹೇಳಲು ಯಾರು ಇಲ್ಲದ ವೇಳೆ ಮನೆಯಿಂದ ಹೊರಗೆ ಬರುತ್ತಾಳೆ. ಆ ಬಳಿಕ ಸಂಗೀತಾಗೆ ಕರೆ ಮಾಡುತ್ತಾಳೆ. ಸಂಗೀತಾ ಆಗಲೇ ಊಟ ಮಾಡುತ್ತ ಇರುತ್ತಾಳೆ. ಪಾರು ಹೇಳುತ್ತಾಳೆ ಅಕ್ಕ ನಾಳೆ ನನ್ನ ತಂಗಿಯ ಸೀಮಂತ ಇದೆ ಆದ ಕಾರಣ ನಾನು ಬೇಗ ಬಂದು ಅಡುಗೆ ಮಾಡಿ ಕೊಟ್ಟು ಹೋಗಲೇ ಎಂದು ಹೇಳುತ್ತಾಳೆ.

Kannada serial paaru written updated on 22nd may

ಪಾರ್ವತಿ ಮಾತಿಗೆ ಖುಷಿ ಪಟ್ಟ ಸಂಗೀತಾ

ಸಂಗೀತಾ ಕೂಡ ಪಾರು ಮಾತಿಗೆ ಒಪ್ಪುತ್ತಾಳೆ. ನಾಳೆ ನೀವು ರಜೆ ತೆಗೆದುಕೊಳ್ಳಿ ಪಾರ್ವತಿಯವರೇ ನಾಡಿದ್ದು ಬನ್ನಿ, ನಾನು ಊಟಕ್ಕೆ ಹೊರಗಿಂದ ತರಿಸಿ ತಿನ್ನುತ್ತೇನೆ ಎನ್ನುತ್ತಾಳೆ. ಪಾರ್ವತಿ ಮಾತ್ರ ಬೇಡ ಅಮ್ಮ ಈ ಸಮಯದಲ್ಲಿ ಹೊರಗಡೆಯ ಆಹಾರ ತಿನ್ನಬೇಡಿ, ನಾನು ಮಾಡಿಕೊಡುತ್ತೇನೆ ನಾಳೆ ಬರುತ್ತೇನೆ ಎಂದು ಹೇಳಿದಾಗ ಸಂಗೀತಾಗೆ ಬಹಳ ಖುಷಿ ಆಗುತ್ತದೆ.

ಆದಿಯನ್ನ ನೋಡಿ ಪಾರು ಶಾಕ್

ಈಗಿನ ಕಾಲದಲ್ಲಿ ರಜೆ ಹಾಕಿ ತಪ್ಪಿಸಿಕೊಳ್ಳಲು ನೋಡುತ್ತಾರೆ. ಆದರೆ ಪಾರ್ವತಿ ಹಾಗೆ ಮಾಡುತ್ತಿಲ್ಲ ಎಂದೆಲ್ಲ ಯೋಚನೆ ಮಾಡಿ ಒಳ್ಳೆಯ ಕೆಲಸದಾಕೆ ಸಿಕ್ಕಿದ್ದಾಳೆ ಎಂದು ಸಂಗೀತಾ ಮನದಲ್ಲಿ ಅಂದುಕೊಂಡು ಇರುತ್ತಾಳೆ. ಇನ್ನುನು ಪಾರು ಫೋನ್ ಇಟ್ಟು ಹಿಂದೆ ತಿರುಗಿ ನೋಡಿದ ವೇಳೆ ಆದಿ ನಿಂತಿರುವುದನ್ನು ನೋಡಿ ಬಹಳ ಶಾಕ್ ಆಗುತ್ತದೆ. ನಾನು ಫೋನ್‌ನಲ್ಲಿ ಮಾತನಾಡುತ್ತಾ ಇರುವುದನ್ನು ಕೇಳಿಸಿಕೊಂಡು ಬಿಟ್ರಾ ಎಂದು ಯೋಚನೆ ಮಾಡುತ್ತಾ ಇರುತ್ತಾರೆ.

ಅರಸನಕೋಟೆಯಲ್ಲಿ ಹಬ್ಬದ ವಾತಾವರಣ

ಇನ್ನು ಅರಸನ ಕೋಟೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬೆಳಗ್ಗೆ ಬೇಗನೆ ಎದ್ದ ಅಖಿಲಾ ದೇವರ ಬಳಿ ಬಂದು ಇವತ್ತಿನ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಲಿ, ಹಾಗೆಯೇ ನನ್ನ ಮಗ ಹಾಗೂ ಸೊಸೆ ಈ ಮನೆಯಲ್ಲಿ ಇರಲಿ ಅನ್ನೋದೇ ಅಖಿಲಾಳ ಬಹು ದೊಡ್ಡ ಆಸೆ. ತನ್ನ ಇಬ್ಬರು ಸೊಸೆಯಂದಿರು ಇಬ್ಬರು ಒಟ್ಟಿಗೆ ಸೀಮಂತ ಶಾಸ್ತ್ರ ಮಾಡಬೇಕು ಎಂಬುವುದು ಆಕೆಯ ಬಯಕೆ ಕೂಡ.

Kannada serial paaru written updated on 22nd may

ಸೀಮಂತ ಶಾಸ್ತ್ರಕ್ಕೆ ಭರದ ಸಿದ್ಧತೆ

ಇನ್ನು ಸೀಮಂತ ಶಾಸ್ತ್ರಕ್ಕಾಗಿ ಭರದ ಸಿದ್ಧತೆ ಮಾಡಿಕೊಂಡು ಇರುತ್ತಾರೆ. ರತ್ನವೇಣಿ ಮಾತ್ರ ಪಾರು ಯಾವತ್ತೂ ಈ ಮನೆಗೆ ಬಾರಬಾರದು ದೇವರೇ ಆಕೆಯಿಂದ ಎಲ್ಲವೂ ಹಾಳಾಗಿ ಹೋಗುತ್ತಿದೆ. ಆಕೆ ಯಾವತ್ತಿದ್ದರೂ ಮನೆಯ ಹೊರಗೆ ಇರಬೇಕು ಎಂದು ಮನದಲ್ಲಿ ದೇವರ ಬಳಿ ಪಾರ್ಥನೆ ಮಾಡಿಕೊಂಡು ಇರುತ್ತಾಳೆ. ಮತ್ತೊಂದು ಕಡೆ ಅಖಿಲ ಮಾತ್ರ ಎಲ್ಲಾ ಸಿದ್ಧತೆ ಮಾಡುತ್ತಾ ಇರುವಾಗ ಆಕೆಗೆ ರತ್ನವೇಣಿ ಸಹಾಯ ಮಾಡುತ್ತಾ ಇರುತ್ತಾಳೆ.

ಪಾರುಗೆ ಮನದಲ್ಲೇ ಶಾಪ ಹಾಕುತ್ತಿರುವ ರತ್ನ

ಬೆಳಗ್ಗೆ ಬೇಗನೆ ಎದ್ದ ಪಾರು ಮನೆಯಲ್ಲಿ ದೇವಾಲಯಕ್ಕೆ ಹೋಗಿ ಬರುತ್ತೇನೆ, ಎಂದು ಸುಳ್ಳು ಹೇಳಿ ಸಂಗೀತಾ ಮನೆಗೆ ಬಂದು ಅಡುಗೆ ಮಾಡಿ ಆಕೆಗೆ ಬಡಿಸುತ್ತಾಳೆ. ಆಗ ಸಂಗೀತಾ ಆಕೆಗೂ ಕೂಡ ಊಟ ಮಾಡಲು ಹೇಳುತ್ತಾಳೆ. ಪಾರು ನಿಂತುಕೊಂಡೇ ಊಟ ಮಾಡಿ ಎಲ್ಲಾ ಕೆಲಸ ಮುಗಿಸುತ್ತಾಳೆ.

More from Filmibeat

English summary
Kannada serial paaruwritten updated on 22nd may. here is detials about Janani and Paaru baby shower ceremony preparation. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X