ಅರುಂಧತಿ ಮುಂದೆ ಒಗ್ಗಟ್ಟು ಪ್ರದರ್ಶಿಸಿದ ಅಖಿಲ
ಪಾರು ಧಾರಾವಾಹಿ ವೀಕ್ಷಕರ ಮೆಚ್ಚುಗೆ ಗಳಿಸಿದೆ. ವಿನಯ ಪ್ರಸಾದ್, ಎಸ್ ನಾರಾಯಣ್ ಅಭಿನಯ ಧಾರಾವಾಹಿಯ ಜೀವ. ಇದೀಗ ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿಗೆ ಪರೀಕ್ಷೆಯ ಸಮಯ.
ಇದೀಗ ಅರುಂಧತಿ ಹುಟ್ಟು ಅಡಗಿಸಲು ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿನಂತೆ ಮನೆಯವರೆಲ್ಲರೂ ಒಂದಾಗಿದ್ದಾರೆ. ಇದೀಗ ಅರುಂಧತಿ ಕುಹಕದ ಮಾತಿಗೆ ಪಾರು ಹಾಗೂ ಅಖಿಲಂಡೆಶ್ವರಿ ಒಂದಾಗಿದ್ದಾರೆ. ಅತ್ತೆಮ್ಮ ಎಂದು ಕರೆಯುವ ಮೂಲಕ ಅರುಂಧತಿಗೆ ಪಾರು ಎದಿರೇಟು ನೀಡಿದ್ದಾಳೆ. ಅಖಿಲಾಂಡೇಶ್ವರಿಗೆ ಬಹಳ ಖುಷಿ ಆಗುತ್ತದೆ. ಮನೆಯವರೆಲ್ಲ ಸೇರಿ ಸತ್ಯನಾರಾಯಣ ಪೂಜೆಯನ್ನು ಮಾಡುತ್ತಾರೆ. ಅಖಿಲಾಂಡೇಶ್ವರಿ, ಪಾರು, ಜನನಿ ದೇವರಿಗೆ ಆರತಿಯನ್ನು ಬೆಳಗಿಸಿ ಎಲ್ಲರಿಗೂ ಆರತಿ ನೀಡುತ್ತಾಳೆ.
ಆದರೆ ಅರುಂಧತಿ ಮಾತ್ರ ಕೋಪದಿಂದ ಆರತಿ ಸ್ವೀಕರಿಸದೆ ಎಲ್ಲರನ್ನೂ ಸರಿಸಿ ಮನೆಯಿಂದ ಹೊರ ನಡೆಯುತ್ತಾಳೆ. ಇದನ್ನು ಕಂಡ ಅಖಿಲಂಡೆಶ್ವರಿಗೆ ನಗು ಒತ್ತರಿಸಿ ಬರುತ್ತದೆ. ಇತ್ತ ವೀರಣ್ಣ ಎಲ್ಲರಿಗೂ ಒಗ್ಗಟ್ಟಿನ ಪಾಠ ಮಾಡುತ್ತಾರೆ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದರೆ ಯಾರಿಂದಲೂ ಎನು ಮಾಡಲಾಗದು ಎಂಬುವುದನ್ನು ಹೇಳುತ್ತಾರೆ. ಎಲ್ಲರನ್ನೂ ಕರೆದು ಒಂದಾಗಿ ನಿಲ್ಲಿಸಿ ಒಗ್ಗಟ್ಟು ಎಂದರೆ ಅದಕ್ಕೆ ಹೆಸರು ಅರಸನ ಕೋಟೆ ಎಂದು ಹೇಳುತ್ತಾರೆ. ವೀರಣ್ಣ ಹಾಗೂ ಅಖಿಲಂಡೆಶ್ವರಿ ಇಬ್ಬರು ಮಾತನಾಡುತ್ತಾ ಇರುತ್ತಾರೆ. ಪಾರುವನ್ನು ಮನೆಯ ಸೊಸೆ ಎಂದು ಗಣನೆಗೆ ತೆಗೆದುಕೊಳ್ಳುವಂತೆ ಹೇಳುತ್ತಾನೆ.

ಇನ್ನಾದರೂ ಸರಿಯಾಗುತ್ತ ಪಾರು ಕುಟುಂಬ
ಯಾವತ್ತೂ ಯಾರಲ್ಲೂ ಭೇದ ಭಾವ ಮಾಡಬೇಡ, ನೀನು ಮುಂಚೆ ಆ ರೀತಿಯ ಕಷ್ಟ ಪತ್ತಿದ್ದಿಯಾ ಇದೀಗ ಸುಖ ಸಂಸಾರ ಮಾಡುತ್ತಿದ್ದಿಯಾ ಆದರೆ ಮುಂದೆ ನೀನು ಅಜ್ಜಿ ಆಗಲಿದ್ದಿಯಾ ಆಗ ನಿನ್ನ ಸೊಸೆಯಂದಿರು ಅಜ್ಜಿ ಬಗ್ಗೆ ಉತ್ತಮ ಮಾತುಗಳನ್ನು ಹೇಳಬೇಕು ಅಲ್ವಾ. ಅದರಲ್ಲಿ ಒಂದು ಕಳಂಕಿತ ಮಾತು ಇರಬಾರದು ಎಂದೆಲ್ಲ ಹೇಳುತ್ತಾನೆ ಇದನ್ನೆಲ್ಲ ತಾಳ್ಮೆಯಿಂದ ಕೇಳಿಸಿಕೊಂಡ ಅಖಿಲ, ಅಣ್ಣ ನ ಮಾತಿಗೆ ಸಮ್ಮತಿ ಸೂಚಿಸುತ್ತಾಳೆ. ಬಳಿಕ ವೀರಣ್ಣ ಅಲ್ಲಿಂದ ತೆರಳುತ್ತಾರೆ.

ರಾಣಾನ ಕುತಂತ್ರಕ್ಕೆ ಬಲಿಯಾಗುತ್ತಾನ?
ಇತ್ತ ಪ್ರೀತೂಗೆ ಪ್ರಪೋಸ್ ಡೇ ಅನ್ನೋದೇ ಮರೆತು ಹೋಗಿದೆ. ಬೆಳಗ್ಗೆದ್ದ ಜನನಿಗೆ ಇವತ್ತು ಪ್ರೀತೂ ಮುಂಚಿನ ರೀತಿ ನನಗೆ ಪ್ರಪೋಸ್ ಮಾಡುತ್ತಾನೆ ಇವತ್ತಿನ ಸ್ಪೆಷಲ್ ಡೇ ಅವನಿಗೆ ತಿಳಿದಿದೆ ಎಂದೆಲ್ಲ ಯೋಚಿಸುತ್ತಾ ಇರುತ್ತಾಳೆ. ಆದರೆ ಬೆಳಗ್ಗೆ ಎದ್ದ ಪ್ರೀತೂ ಮಾತ್ರ ಈ ಬಗ್ಗೆ ಯೋಚನೆಯೂ ಅವನಿಗೆ ಬಂದಿರಲಿಲ್ಲ. ಆತ ಎಂದಿನಂತೆ ಆಫೀಸ್ ಗೆ ತೆರಳುತ್ತಾನೆ. ಜನನಿ ಮುಖ ಸಪ್ಪಗೆ ಆಗುತ್ತದೆ. ಪಾರು ಕೇಳುತ್ತಾಳೆ ಜನನಿ ಅವರೇ ಏನಾಯ್ತು ಯಾಕೆ ಇಷ್ಟು ಸಪ್ಪಗೆ ಇದ್ದೀರಾ ಎಂದು ಕೇಳಿದಾಗ ನಡೆದ ವಿಚಾರವಲ್ಲ ಹೇಳುತ್ತಾಳೆ. ಬೇಸರ ಮಾಡಿಕೊಂಡು ಇರುತ್ತಾಳೆ. ಇನ್ನೂ ಪ್ರೀತೂಗೆ ಕರೆ ಮಾಡಿದ ಪಾರು ಆದಿ ಮನೆಗೆ ಬೇಗ ಬರುವಂತೆ ಹೇಳುತ್ತಾರೆ ಬಳಿಕ ಕೇಕ್ ಹಾಗೂ ಸಾರಿಯನ್ನು ಕೊಟ್ಟು ಹೇಳುತ್ತಾರೆ ಇದನ್ನು ನಾವು ಕೊಟ್ಟೆವು ಎಂದು ಹೇಳಬೇಡಿ ಎಂದು ಹೇಳಿ ಕೊಡುತ್ತಾರೆ.

ಪ್ರೀತೂ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರ ಮನೆ ಮಂದಿ
ನೇರವಾಗಿ ಪ್ರೀತೂ ಜನನಿ ಬಳಿ ಹೋಗಿ ಕೇಕ್ ಕಟ್ ಮಾಡಿಸುತ್ತಾನೆ. ಬಳಿಕ ಸೀರೆಯನ್ನು ಗಿಫ್ಟ್ ಆಗಿ ನೀಡುತ್ತಾನೆ. ಇದನ್ನು ಕಂಡ ಜನನಿಗೆ ಫುಲ್ ಖುಷಿ. ಪ್ರಪೋಸ್ ಡೇ ನ ಮರೆತಿಲ್ಲ ಎಂದು ಖುಷಿ ಪಡುತ್ತಾಳೆ. ಇದನ್ನೆಲ್ಲ ಸಿಸಿ ಕ್ಯಾಮರಾ ಮೂಲಕ ಗಮನಿಸಿದ ರಾಣಾ, ಬ್ಲಾಕ್ ಮೇಲ್ ಮಾಡಲು ಪ್ರೀತೂ ಗೆಳತಿಗೆ ಹೇಳುತ್ತಾನೆ. ಆಕೆ ಬಳಿ ಇರುವ ಸೀರೆಯನ್ನೂ ಪ್ರೀತೂ ಬಳಿ ಕೇಳು ಎಂದೆಲ್ಲ ಹೇಳುತ್ತಾನೆ ಆಕೆ ಪ್ರೀತೂಗೆ ಕರೆ ಮಾಡಿ ಜನನಿಗೆ ಕೊಟ್ಟ ಸಾರಿ ನನಗೆ ಕೊಡು ಇಲ್ಲವಾದರೆ ಈಗಲೇ ಸಾಯುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಾಳೆ ಮುಂದೇನಾಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications