Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನೆತ್ತಿಗೇರಿದೆ ಅರುಂಧತಿಯ ಕೋಪ! ಆಸ್ತಿಯಲ್ಲಿ ಭಾಗ ಕೇಳುತ್ತಾನ ಪ್ರೀತಮ್?
'ಪಾರು' ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುತ್ತಿದೆ ಇದೀಗ ಅರುಂಧತಿ ಬಾಯಿ ಬಿಡಿಸಲು ಪ್ರೀತಮ್ ಬಹಳ ಸರ್ಕಸ್ ಮಾಡುತ್ತಿರುತ್ತಾನೆ. ಈ ಹೊತ್ತಿಗೆ ಮೋನಿಕಾ ರೂಮಿನ ಬಳಿಗೆ ಬಂದ ಧಾಮಿನಿಗೆ ಮೋನಿಕಾ ಕೂಗುತ್ತಾ ಇರುವುದು ಕೇಳಿಸುತ್ತದೆ. ರೂಮಿನ ಹೊರಗಿನಿಂದಲೇ ಏನು ಮೋನಿಕಾ ಎಂದು ಕೇಳುತ್ತಾಳೆ ಇದನ್ನು ಕೇಳಿದ ಕೂಡಲೇ ಮೋನಿಕಾ, ನನ್ನ ರೂಮ್ ಡೋರ್ ಲಾಕ್ ಮಾದಿದ್ದಾರೇ ಎಂದಾಗ ಆ ರೂಮ್ ಲಾಕ್ ತೆಗೆಯುತ್ತಾರೆ.
ದಾಮಿನಿ ಆ ಕೂಡಲೇ ಹೊರ ಬಂದ ಮೋನಿಕಾ ಅರುಂಧತಿ ಮೇಡಂ ಎಂದು ಹೇಳಿ ಹೊರಗೆ ಓಡುತ್ತಾರೆ. ಈ ವೇಳೆ ಅರುಂಧತಿ ಹಾಗೂ ಪ್ರೀತಮ್ ಮಾತನಾಡುತ್ತಾ ಇರುವ ವೇಳೆ ಅಲ್ಲಿಗೆ ಓಡಿ ಬರುತ್ತಾಳೆ ಮೋನಿಕಾ ಅರುಂಧತಿ ಮೇಡಂ ಎಂದು ಕರೆಯುತ್ತಾಳೆ. ಮೋನಿಕಾ ನೋಡಿ ಪ್ರೀತಮ್‌ಗೆ ಶಾಕ್ ಆಗುತ್ತದೆ. ಇನ್ನು ಮೋನಿಕಾ ಅರುಂಧತಿಯಲ್ಲಿಗೆ ಬಂದು ಎಲ್ಲಾ ವಿಚಾರ ಹೇಳುತ್ತಾಳೆ. ಆ ವೇಳೆ ಅರುಂಧತಿ ಗೆ ತಿಳಿಯುತ್ತದೆ, ಪ್ರೀತಮ್‌ಗೆ ಏನೂ ತಿಳಿದಿಲ್ಲ ಆದರೂ ಆತ ನಮ್ಮನ್ನೆಲ್ಲ ಮೋಸ ಮಾಡಲು ಈ ರೀತಿ ಮಾತುಗಳನ್ನು ಆಗಿದ್ದಾನೆ ಎಂದು ಕೊಂಡು ಮಾತನಾಡುವ ವೇಳೆ ಅಲ್ಲಿಗೆ ಬಂದ ಆದಿ, ಪ್ರೀತಮ್ ನನ್ನು ಕರೆದುಕೊಂಡು ಹೋಗುತ್ತಾನೆ.
ಪಾರು
ಕೈಯಿಂದ
ತಪ್ಪಿಸಿಕೊಂಡ
ಮೋನಿಕಾ!
ಶಾಕ್
ಆದ
ಪಾರು?
ಇನ್ನು ದಾಮಿನಿ, ಮೋನಿಕಾ ಅರುಂಧತಿ ಮೇಡಂ ಎಂದು ಕಿರುಚಿದ ಕಾರಣ ಆಕೆ ಯಾಕೆ ಈ ಅರುಂಧತಿ ಕಡೆಯವಳು ಆಗಿರಬಾರದು ಎಂದು ಯೋಚನೆ ಮಾಡುತ್ತಾಳೆ. ಇದನ್ನು ಆಕೆಯ ಗಂಡ ಮೋಹನ್ ಬಳಿ ಹೇಳುತ್ತಾಳೆ. ಆದರೆ ಮೋಹನ್ ಮಾತ್ರ ಅದರ ಬಗ್ಗೆ ಯೋಚನೆ ಮಾಡಲು ಹೋಗುವುದು ಇಲ್ಲ. ಆಕೆ ಎಲ್ಲಾ ವಿಚಾರವನ್ನು ಮೋಹನ್‌ನಲ್ಲಿ ಹೇಳಿದಾಗ ಮೋಹನ್, ಈ ವಿಚಾರವನ್ನು ಅತ್ತಿಗೆಗೆ ಹೇಳಿದ್ದೀಯ ಎಂದು ಕೇಳಿದಾಗ ಮೋನಿಕಾ, ಅವರು ಯಾರು ನನ್ನ ಮಾತನ್ನು ಕೇಳುವುದಿಲ್ಲ ಮತ್ಯಾಕೆ ನಾನು ಹೇಳುವುದು ಎಂದು ಹೇಳುತ್ತಾಳೆ.

ಅನುಮಾನ ಬಲಗೊಳ್ಳುತ್ತದೆ ಪಾರುಗೆ
ಇದಕ್ಕೆ ಮೋಹನ್ ಒಳ್ಳೆಯ ಕೆಲ್ಸ ಮಾಡಿದೆ ಇಲ್ಲದಿದ್ದರೆ ಮೋನಿಕಾಳನ್ನು ಮನೆಯ ಹೊರಗೆ ಕಳುಹಿಸುವ ಬದಲು ನಿನ್ನನ್ನೂ ಮನೆಯ ಹೊರಗೆ ಕಳುಹಿಸುವುದು ಖಂಡಿತ ಎಂದು ಹೇಳುತ್ತಾರೆ. ಬಳಿಕ ಮೋಹನ್ ಸರಿಯಾಗಿ ಬಯ್ಯುತ್ತಾನೆ. ಇದನ್ನು ಕೇಳಿದ ದಾಮಿನಿ ಮಾತ್ರ ಸುಮ್ಮನೆ ಇರುತ್ತಾಳೆ. ಇನ್ನು ದಾಮಿನಿ ಹೇಳುತ್ತಾ ಇರುವುದನ್ನು ಪಾರು ಕೇಳಿಸಿಕೊಂಡ ಮೋನಿಕಾ ಬಳಿ ಹೋದಾಗ ಮೋನಿಕಾ ಅರುಂಧತಿ ಬಳಿ ಮಾತನಾಡುತ್ತಾ ಇರುತ್ತಾಳೆ. ಇದನ್ನು ನೋಡಿದ ಪಾರುಗೆ ಅನುಮಾನ ಬಲಗೊಳ್ಳುತ್ತದೆ. ಇನ್ನು ಅರುಂಧತಿ ಹಾಗೂ ಮೋನಿಕಾ ಪಾರುವತ್ತ ನೋಡಿದಾಗ ಶಾಕ್ ಆಗುತ್ತದೆ.

ಕೈತೊಳೆದುಕೊಂಡ ಅರುಂಧತಿ
ಪಾರು, ಮೋನಿಕಾ ಬಳಿ ಬಂದು ನೀನು ಈ ಅರುಂಧತಿ ಕಡೆಯವಳ? ಎಂದಾಗ ಇಲ್ಲಪ್ಪ ನಾನು ಇವರು ಯಾರೂ ಎಂದು ಕೇಳುತ್ತ ಇದ್ದೆ ಎಂದಾಗ ಪಾರು, ದಾಮಿನಿ ಹೇಳಿದ ವಿಚಾರವನ್ನು ಅಲ್ಲಿ ಪ್ರಸ್ತಾಪ ಮಾಡುತ್ತಾಳೆ. ಇದನ್ನು ಕೇಳಿದ ಮೋನಿಕಾ ಮಾತ್ರ ಸುಮ್ಮನೆ ಇರದೆ, ಇಲ್ಲ ಪಾರ್ವತಿ ಅವರೇ ಅವರು ಯಾಕೆ ನನ್ನ ಮೇಲೆ ಹೇಳುತ್ತಾ ಇದ್ದಾರೆ ಬನ್ನಿ ಅವರನ್ನು ಕೇಳೋಣ ಎಂದು ಹೇಳುತ್ತಾಳೆ. ಈ ಸಂದರ್ಭ ಪಾರು, ಆರುಂಧತಿಯನ್ನು ಕಂಡು ಇನ್ನೂ ಹೊರಟಿಲ್ಲ ಯಾಕೆ? ಹೋಗಿ ಎಂದು ಜೋರಾಗಿ ಹೇಳುತ್ತಾಳೆ. ಅರುಂಧತಿ ತನ್ನ ಕಾರ್ ಬಳಿ ಹೋಗಿ ಅಖಿಲಾ ಕಾಲು ಮುಟ್ಟಿದ ನೆನಪಾಗಿ ಕೈಯನ್ನು ತೊಳೆದುಕೊಳ್ಳುತ್ತಾಳೆ.

ಆಕೆ ನಮ್ಮ ಶತ್ರು ಎಂದ ಪಾರು
ಇನ್ನು ಇದನ್ನೆಲ್ಲ ನೋಡಿದ ಮೋನಿಕಾ, ಪಾರು ಬಳಿ ಸುಮ್ಮನೆ ಆಕೆ ಯಾರು ಕೇಳುತ್ತಾಳೆ, ಪಾರು ಕೋಪದಲ್ಲಿ ಆಕೆ ನಮ್ಮ ಶತ್ರು. ನೀನು ಅವರ ಬಗ್ಗೆ ಯೋಚನೆ ಮಾಡಬೇಡ ಎಂದು ಕಡ್ಡಿ ಮುರಿದ ಹಾಗೆ ಹೇಳಿ ಮೋನಿಕಾಳನ್ನು ಮನೆಯ ಒಳಗೆ ಕರೆದುಕೊಂಡು ಬರುತ್ತಾಳೆ. ಇನ್ನು ಆದಿ-ಪಾರು ಇಬ್ಬರು ಯೋಚನೆ ಮಾಡುತ್ತಾ ಇರುತ್ತಾರೆ. ಪ್ರೀತಮ್‌ನನ್ನು ಕರೆದುಕೊಂಡು ಬರುವ ವೇಳೆ ಅಲ್ಲಿ ಮೋನಿಕಾ ಇದ್ದಳು ನೀನು ನೋಡಿದಾಗಲೂ ಮೋನಿಕಾ ಅರುಂಧತಿ ಜೊತೆ ಇದ್ದಳು. ಅವಳು ಯಾಕೆ ಅರುಂಧತಿ ಕಡೆಯವಳು ಆಗಲಿಕ್ಕೆ ಇಲ್ಲ ಎಂದು ಯೋಚನೆ ಮಾಡುತ್ತಾರೆ.

ಆಸ್ತಿಯಲ್ಲಿ ಪಾಲು ಕೇಳ್ತಾನಾ ಪ್ರೀತಮ್
ಇನ್ನು ಅರುಂಧತಿ ಪ್ರೀತಮ್‌ಗೆ ಕರೆ ಮಾಡಿ ಮೀಟ್ ಮಾಡಬೇಕು ಎಂದು ಹೇಳಿ ಮನೆಗೆ ಕರೆಸುತ್ತಾರೆ. ಇನ್ನೂ ಪ್ರೀತಮ್ ಮಾಡಿದ ತಪ್ಪಿಗೆ ಶಿಕ್ಷೆ ಕೊಡುತ್ತಾಳೆ. ಆಸ್ತಿಯಲ್ಲಿ ಭಾಗ ಕೇಳಬೇಕು ಇಲ್ಲದಿದ್ದರೆ ನಿನ್ನ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಾಳೆ ಮುಂದೇನು ಕಾದು ನೋಡಬೇಕಿದೆ.