For Quick Alerts
  ALLOW NOTIFICATIONS  
  For Daily Alerts

  ಪಾರು ಮೇಲೆ ಕೈಮಾಡಿದ ಪ್ರೀತು, ಕತೆಗೆ ಸಿಗಲಿದೆ ಭರ್ಜರಿ ಟ್ವಿಸ್ಟ್

  By ಪೂರ್ವ
  |

  'ಪಾರು' ಧಾರವಾಹಿಯಲ್ಲಿ ಟ್ವಿಸ್ಟ್ ಒಂದು ಎದುರಾಗಿದೆ. ಪಾರ್ವತಿಯ ವರ್ತನೆಗೆ ಇದೀಗ ಅಖಿಲಂಡೆಶ್ವರಿ ಮಾರು ಹೋಗಿದ್ದಾರೆ. ಜನನಿಯನ್ನು ಸಮಾಧಾನ ಪಡಿಸಿದ ರೀತಿ ಹಾಗೂ ಪ್ರೀತೂಗೆ ಪ್ರಪೋಸ್ ಡೇಯನ್ನು ನೆನಪಿಸಿದ ರೀತಿ ಇದೆಲ್ಲವೂ ಬಹಳ ಖುಷಿ ಕೊಟ್ಟಿದೆ. ಜನನಿ ಬಳಿ ಬಂದ ಪ್ರೀತು ಹ್ಯಾಪಿ ಪ್ರಪೋಸ್ ಡೇ ಎಂದು ಹೇಳುತ್ತಾನೆ ಇದರಿಂದ ಜನನಿಗೆ ಖುಷಿಯಾಗುತ್ತದೆ.

  ಬಳಿಕ ಕೇಕ್ ಕಟ್ ಮಾಡಿ ಜನನಿಗೆ ಸೀರೆ ಕೊಡಬೇಕು ಅನ್ನುವಷ್ಟರಲ್ಲಿ ಪ್ರೀತುವಿನ ಬ್ಲಾಕ್‌ಮೇಲ್ ಗೆಳತಿ ಕರೆ ಮಾಡುತ್ತಾಳೆ. ನೀನು ಕೈಯಲ್ಲಿ ಹಿಡಿದುಕೊಂಡಿರುವ ಸೀರೆ ನನಗೆ ಕೊಡಬೇಕು ಇಲ್ಲವಾದರೆ ಮೇಲಿನಿಂದ ಬಿದ್ದು ಸತ್ತು ಹೋಗುತ್ತೇನೆ ಎಂದೆಲ್ಲ ಬ್ಲಾಕ್ ಮೇಲ್ ಮಾಡುತ್ತಾಳೆ. ಇದನ್ನು ಕಂಡ ಪ್ರೀತು ಶಾಕ್ ಆಗುತ್ತಾನೆ. ಇವತ್ತು ಬರಕಾಗಲ್ಲ ನಾಳೆ ಬರುತ್ತೇನೆ ಎಂದರು ಬಿಡದೆ ಹಠ ಮಾಡುತ್ತಾಳೆ. ಬಳಿಕ ಜನನಿಗೆ ತಿಳಿಯದ ಹಾಗೆ ಅಲ್ಲಿಂದ ತೆರಳುತ್ತಾನೆ.

  ಪಾರು: ವೀರಯ್ಯದೇವ ಇರುವ ತನಕ ಅರಸನಕೋಟೆ ಭದ್ರಪಾರು: ವೀರಯ್ಯದೇವ ಇರುವ ತನಕ ಅರಸನಕೋಟೆ ಭದ್ರ

  ಇನ್ನೂ ಪ್ರೀತೂ ಗೆಳತಿ ರಾಣಾಗೆ ಕರೆ ಮಾಡುತ್ತಾಳೆ. ಪ್ರೀತೂ ತನ್ನ ಬಳಿಗೆ ಬರುತ್ತಿರುವ ವಿಚಾರವನ್ನು ತಿಳಿಸುತ್ತಾಳೆ. ಇದರಿಂದ ಸಂತಸಗೊಂಡ ಅರುಂಧತಿ ರಾಣಾ ಫೋನ್ ಕಟ್ ಮಾಡಿ ನಗುತ್ತಾರೆ. ಕೇಕ್ ಕತ್ತರಿಸಿದ ಬಳಿಕ ಪ್ರೀತೂ ಕಾಣದೆ ಜನನಿ ಬೇಸರ ಗೊಳ್ಳುತ್ತಾಳೆ. ಪ್ರೀತು ಆತನ ಗೆಳತಿಯ ಬಳಿಗೆ ಜನನಿಗೆ ಕೊಡಬೇಕಾದ ಸೀರೆ ತೆಗೆದುಕೊಂಡು ಬರುತ್ತಾನೆ. ಇತ್ತ ಈ ಮಾಯಂಗನೆಯ ಕಾಟ ಪ್ರೀತುಗೆ ಸಹಿಸಲು ಅಸಾಧ್ಯವಾಗುತ್ತದೆ.

  ಅತ್ತಿಗೆ ತಂದಿದ್ದ ಸೀರೆಗೆ ಬಿಟ್ಟು ಕತ್ತರಿ

  ಅತ್ತಿಗೆ ತಂದಿದ್ದ ಸೀರೆಗೆ ಬಿಟ್ಟು ಕತ್ತರಿ

  ಬಳಿಕ ಪ್ರೀತು ಗೆಳತಿ ಕೇಕ್ ಕತ್ತರಿಸಿ ಪ್ರೀತುಗೆ ತಿನ್ನಿಸುತ್ತಾಳೆ. ಸೀರೆಯೊಂದನ್ನು ಕತ್ತರಿ ಹಿಡಿದು ಕಟ್ ಮಾಡುತ್ತಾಳೆ. ಬಳಿಕ ಅರ್ಧ ಸೀರೆಯನ್ನು ಆಕೆ ಇಟ್ಟುಕೊಂಡು ಇನ್ನೂ ಅರ್ಧ ಸೀರೆಯನ್ನು ಜನನಿಗೆ ನೀಡಲು ಹೇಳುತ್ತಾಳೆ. ಬಳಿಕ ಅಲ್ಲಿಂದ ಪ್ರೀತು ಹೊರಡುತ್ತಾನೆ. ಪ್ರೀತು ಹೋಗುತ್ತಾ ಇರುವುದನ್ನು ನೋಡಿದ ಆಕೆ ಜೋರಾಗಿ ನಗುತ್ತಾಳೆ.

  ಆದಿ-ಪಾರು ಮಾತುಕತೆ

  ಆದಿ-ಪಾರು ಮಾತುಕತೆ

  ಮನೆಗೆ ಬಂದ ಪ್ರೀತು ರೂಮಿನತ್ತ ಮುಖ ಮಾಡುತ್ತಾನೆ. ರೂಮಿನಲ್ಲಿ ಜನನಿ ಬೇಸರದಿಂದ ಕುಳಿತು ಯೋಚನೆಯಲ್ಲಿ ತೊಡಗಿರುತ್ತಾಳೆ. ಇದನ್ನು ನೋಡಿದ ಪ್ರೀತು ಗೆ ರೂಮಿಗೆ ಹೋಗಲು ಮನಸಗದೆ ಹೊರಗಡೆಯೇ ತಿರುಗಾಡುತ್ತಾ ಇರುತ್ತಾನೆ. ಪಾರು ಆದಿ ಕೊಟ್ಟಿರುವ ಸೀರೆಯನ್ನು ತೊಟ್ಟು ಬರುತ್ತಾಳೆ. ಇದನ್ನು ಕಂಡ ಆದಿಗೆ ಖುಷಿಯಾಗುತ್ತದೆ. ಆಕೆಯನ್ನು ನೋಡಿ ಮುದ್ದಾಡಿ ಬಿಡುವ ಅನ್ನಿಸಿದರೂ ಪಾರ್ವತಿ ಮಾತ್ರ ಇದೇಕೊ ಅತಿಯಾಯಿತು ಎನ್ನುತ್ತಾಳೆ. ಜನನಿಗೆ ಪ್ರೀತು ಸೀರೆ ಕೊಡುವುದರಲ್ಲಿ ಅರ್ಥವಿದೆ. ನನಗೆ ನೀವು ಸೀರೆ ತೆಗೆದುಕೊಂಡು ಬಂದಿರುವುದು ಯಾಕೆ ಇದೆಲ್ಲ ಬೇಕಿತ್ತಾ ಎಂದು ಕೇಳುತ್ತಾಳೆ.

  ಪಾರ್ವತಿಯನ್ನು ಹೊಗಳಿದ ಅಖಿಲ

  ಪಾರ್ವತಿಯನ್ನು ಹೊಗಳಿದ ಅಖಿಲ

  ಇತ್ತ ಅಖಿಲಾಂಡೇಶ್ವರಿ ಖುಷಿಯಲ್ಲಿ ಇದ್ದಾಳೆ. ಇವರನ್ನು ನೋಡಿದ ಯಾಮಿನಿ ಗಂಡ ಏನು ಅತ್ತಿಗೆ ತುಂಬಾ ಖುಷಿಯಲ್ಲಿ ಇದ್ದೀರಾ ಏನಾದರು ವಿಚಾರ ಇದ್ದರೆ ನನಗೂ ತಿಳಿಸಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಅಖಿಲಂಡೆಶ್ವರಿ ನಗುತ್ತಾರೆ ಬಳಿಕ ಹೇಳುತ್ತಾರೆ ಹೌದು ಇವತ್ತು ಪಾರ್ವತಿ ನಡೆದುಕೊಂಡ ರೀತಿ ನನಗೆ ಬಹಳ ಮೆಚ್ಚುಗೆ ಆಯಿತು, ನಾನು ಯಾವತ್ತೂ ಈ ರೀತಿ ಗುಣಗಳು ಆಕೆಯ ಬಳಿ ನೋಡಿಲ್ಲ ಎಂದಾಗ ಯಾಮಿನಿ ಗಂಡ ಕೂಡ ಹೇಳುತ್ತಾರೆ. ಅರಸನ ಕೋಟೆಗೆ ಉತ್ತಮ ಸೊಸೆ ನಮ್ಮ ಪಾರ್ವತಿ ಎಂದು ಹೀಗೆ ಮಾತನಾಡುತ್ತಾ ಇರಬೇಕಾದರೆ ಪಾರು ಮತ್ತು ಪ್ರೀತೂ ಮಾತನಾಡುತ್ತಿರುವುದು ಕೇಳಿಸಿಕೊಂಡ ಅಖಿಲಂಡೆಶ್ವರಿ ಕದ್ದು ನೋಡುತ್ತಾರೆ.

  ಜನನಿಗೆ ಬೇಸರ ಮೂಡಿಸುವುದು ಏಕೆ ಎಂದು ಪ್ರಶ್ನೆ

  ಜನನಿಗೆ ಬೇಸರ ಮೂಡಿಸುವುದು ಏಕೆ ಎಂದು ಪ್ರಶ್ನೆ

  ಪಾರು, ಪ್ರೀತೂವನ್ನು ಮನೆಯಿಂದ ಎಲ್ಲೂ ಹೋಗಲು ಬಿಡುತ್ತಿಲ್ಲ. ಜನನಿಗೆ ಬೇಸರ ಮಾಡಿರುವುದರ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾಳೆ ಆದರೆ ಪ್ರೀತೂ ಇದೀಗ ಅರುಂಧತಿ ಹೇಳಿದ ಹಾಗೆ ನಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಪಾರ್ವತಿ ಗೆ ಜೋರಾಗಿ ಮಾತನಾಡಿ, ಹೊಡಿಬೇಕು ಎಂದು ಹೇಳುತ್ತಾಳೆ. ಆದರೆ ಪ್ರೀತೂಗೆ ಇದು ಚೂರು ಇಷ್ಟವಿಲ್ಲ. ಆದರೂ ಪಾರ್ವತಿ ಬಳಿ ಜೋರಾಗಿ ಮಾತನಾಡಿ ಆಕೆಯನ್ನು ದೂಡಿ ಅಲ್ಲಿಂದ ಪ್ರೀತೂ ತೆರಳುತ್ತಾನೆ. ಈ ದೃಶ್ಯ ನೋಡಿದ ಅಖಿಲ ಶಾಕ್ ಆಗುತ್ತಾರೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

  English summary
  Kannada serial Paaru written updated on 23th August. Know more.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X