ಮೋನಿಕಾ ಬಂಡವಾಳ ಬಯಲು ಮಾಡುತ್ತಾಳ ಪಾರು?
'ಪಾರು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಅಖಿಲಾಂಡೇಶ್ವರಿಗೆ ತನ್ನ ಸೊಸೆ ಮೇಲೆ ಬಹಳ ನಂಬಿಕೆ. ಆಕೆ ಏನೇ ಮಾಡಿದರು ನಮ್ಮ ಒಳಿತಿಗಾಗಿ ಮಾಡುತ್ತಾಳೆ. ಎಂದೆಲ್ಲ ಅಖಿಲಾ ನಂಬಿಕೊಂಡಿದ್ದಾಳೆ. 'ಪಾರು' ಕೂಡ ಅದನ್ನೇ ಪ್ರತಿ ಬಾರಿ ಸಾಬೀತು ಮಾಡಿಕೊಂಡೆ ಬಂದಿದ್ದಾಳೆ. ಅತ್ತೆಯ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಈ ನಡುವೆ ಜನನಿ ಹಾಗೂ ಪ್ರೀತೂ ಗೆಸ್ಟ್ ರೂಮ್ ಗೆ ಶಿಫ್ಟ್ ಆಗಿದ್ದಾರೆ.
ಇದೆಲ್ಲ ಯಾಕೆ ನಡೆಯುತ್ತಿದೆ? ಮೋನಿಕಾ ಯಾಕೆ ಈ ರೀತಿ ನನ್ನ ಬಳಿ ನಡೆದುಕೊಳ್ಳುತ್ತಾ ಇದ್ದಾಳೆ ಎಂದೆಲ್ಲ ವಿಚಾರ ಆಕೆಯಲ್ಲಿ ಮೂಡುತ್ತದೆ. ಹಾಗೆಯೇ ಪ್ರೀತೂ ಏನು ತಪ್ಪು ಮಾಡಲು ಸಾಧ್ಯ ಇಲ್ಲ. ಇಲ್ಲಿ ಬೇರೆ ಏನೋ ನಡೆಯುತ್ತಿದೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಈ ವಿಚಾರವಾಗಿ ಬೇಸರದಲ್ಲಿದ್ದ ಜನನಿಯನ್ನು ನೋಡಿ ಪಾರು ಜನನಿ ಬಳಿ ಏನಾಯಿತು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದಾಗ ಪಾರು ನಿಜ ವಿಚಾರ ಹೇಳಲು ಹಿಂದೇಟು ಹಾಕುತ್ತಾಳೆ ಇದನ್ನು ನೋಡಿದ ಜನನಿಗೆ ಎಲ್ಲವೂ ಅರ್ಥ ಆಗುತ್ತದೆ.
ಇದೀಗ ಆದಿ ಕೂಡ ಪಾರು ಬಳಿ ಅದೇ ಪ್ರಶ್ನೆ ಮಾಡುತ್ತಿದ್ದಾನೆ. ಇದನ್ನು ನೋಡಿದ ಪಾರು ಮಾತ್ರ ಆದಿ ಬಳಿ ನಡೆದ ವಿಚಾರವನ್ನು ಹೇಳುತ್ತಾಳೆ. ಇದನ್ನು ಕೇಳಿದ ಆದಿ ತಮ್ಮನ ಬಗ್ಗೆ ಸಂಶಯ ವ್ಯಕ್ತ ಪಡಿಸಿದರು, ಪಾರು ಮಾತ್ರ ನಿಮಗೆ ನಿಮ್ಮ ತಮ್ಮನ ಬಗ್ಗೆ ನಂಬಿಕೆ ಇಲ್ವಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಆದಿ ಹೇಳುತ್ತಾನೆ ಕಾಲೇಜಿನಲ್ಲಿ ಪ್ರೀತೂ ಬಹಳ ಮಂದಿ ಹುಡುಗಿಯರು ಫ್ರೆಂಡ್ ಇದ್ದರೂ ಆದ ಕಾರಣ ಆವತ್ತು ಏನಾದರು ಪ್ರೀತೂ ಲವ್ ಮಾಡಿ ಇದ್ದನಾ ಅದಕ್ಕಾಗಿ ಆಕೆ ಇದೀಗ ಮತ್ತೆ ಬಂದಿದ್ದಾಳೆಯೆ ಎಂಬೆಲ್ಲ ಪ್ರಶ್ನೆ ಮೂಡುತ್ತದೆ ಎಂದು ಪಾರು ಬಳಿ ಹೇಳುತ್ತಾನೆ.

ಪ್ರೀತೂಗೆ ಗರ್ಲ್‌ಫ್ರೆಂಡ್ಸ್ ಇದ್ದರು ಎಂದ ಆದಿ
ಇದನ್ನು ಕೇಳಿದ ಪಾರು ಮಾತ್ರ ಆ ಮಾತು ಒಪ್ಪುವುದಿಲ್ಲ. ಎಲ್ಲಾದರೂ ಪ್ರೀತೂ ಪ್ರೀತಿ ಮಾಡಿದ್ದರೆ ಅದನ್ನು ನನ್ನ ಬಳಿ ಹೇಳಿಕೊಳ್ಳಬಹುದಿತ್ತಲ್ವಾ ಎಂದು ಹೇಳುತ್ತಾಳೆ ಇದನ್ನು ಕೇಳಿದ ಆದಿ ಏನು ಮಾತನಾಡದೆ ಇರುತ್ತಾಳೆ. ಬಳಿಕ 'ಪಾರು' ಹೇಳುತ್ತಾಳೆ ಆಕೆಯ ಕಣ್ಣುಗಳಲ್ಲಿ ನನಗೆ ಆಕೆ ಹೇಳುತ್ತ ಇರುವುದು ನಿಜ ಎಂಬುವುದು ತಿಳಿಯುತ್ತಿಲ್ಲ. ನಿಮ್ಮ ತಮ್ಮನ ನೋವಿನ ಹಿಂದೆ ಆ ಹುಡುಗಿ ಯಾಕೆ ಇರಬಾರದು ಎಂದು ನನಗೆ ಅನ್ನಿಸುತ್ತಾ ಇದೆ. ಆದರೆ ಆದಿ ಮಾತ್ರ ಈ ಮಾತನ್ನು ಒಪ್ಪಲಿಲ್ಲ.

ಪ್ರೀತೂ ಪರ ಬ್ಯಾಟ್ ಬೀಸಿದ ಪಾರು
ಆದರೆ ಪಾರು, ನೀವು ಒಪ್ಪದೇ ಇದ್ದರೂ ಸರಿ ನೀವು ಹೇಳಿದ ಹಾಗೆಯೇ ನಿಮ್ಮ ಹುಡುಗ ಮುಂಚೆ ಹುಡುಗಿಯರನ್ನು ಗಾಡಿಯಲ್ಲಿ ಸುತ್ತಿಸುತ್ತಿದ್ದರು ಆದರೆ ಮನೆಗೆ ಕರೆದುಕೊಂಡು ಬರುತ್ತಿದ್ದರಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಆದಿಗೆ ಪಾರು ಹೇಳುತ್ತಿರುವುದು ನಿಜ ಎಂದು ಅರಿವಾಗುತ್ತದೆ. ಆದರೆ ಈಗ ಆಕೆಯನ್ನು ಪ್ರೀತಮ್ ಕರೆದುಕೊಂಡು ಬಂದಿಲ್ಲ. ಬದಲಾಗಿ ಆಕೆಯೇ ಬಂದಿದ್ದಾಳೆ ಎಂದಾಗ ಆದಿ ಮನದಲ್ಲಿ ಅನುಮಾನ ಮೂಡುತ್ತದೆ ಈ ವೇಳೆ ರಘು ಕೂಡ ಆತಂಕ ವ್ಯಕ್ತ ಪಡಿಸುತ್ತಾ ಇರುತ್ತಾನೆ. ಇದನ್ನು ಕೇಳಿದ ಅಖಿಲಾಂಡೇಶ್ವರಿ ಮಾತ್ರ ಆತಂಕಕ್ಕೆ ಒಳಗಾಗದೆ ಪಾರು ಮಾತಿನ ಬಗ್ಗೆ ನಂಬಿಕೆ ಇಡುತ್ತಾಳೆ.

ಪಾರು ಮೇಲೆ ನಂಬಿಕೆ ಇಟ್ಟ ಅಖಿಲ
ಆದರೆ ರಘು ಮಾತ್ರ ಅದಾವುದನ್ನು ಕಿವಿಗೆ ಹಾಕಿಕೊಳ್ಳದೆ ರಘು ಮಾತ್ರ ಅಸಮಾಧಾನ ಹೊರ ಹಾಕುತ್ತಾನೆ ಏನೇ ಕೆಲಸ ಮಾಡಿದರೂ ಹಿಂದೆ ಅದೆಷ್ಟೋ ಜನ ನಮ್ಮ ಮನೆಗೆ ಬಂದಿದ್ದಾರೆ ಆದರೆ ಇದೀಗ ಹಾಗೆ ಮಾಡಿದರೆ ಎಂದು ಕೇಳುತ್ತಾರೆ. ಇದನ್ನು ಕೇಳಿದ ಅಖಿಲ, ರಘು ನಮ್ಮ ಜೊತೆ ಇದೀಗ ಪಾರ್ವತಿ ಇದ್ದಾಳೆ ಅವಳೆ ಎಲ್ಲಾ ನಿಭಾಯಿಸುತ್ತಾಳೆ. ಅರಸನ ಕೋಟೆಯ ಜನರಿಗೆ ಯಾವುದೇ ರೀತಿ ಆಪತ್ತು ಬಾರದೆ ಇರುವ ಥರ ನಮ್ಮ ಪಾರ್ವತಿ ನೋಡಿಕೊಳ್ಳುತ್ತಾಳೆ. ಅವಳ ಬಗ್ಗೆ ನನಗೆ ಅಪಾರವಾದ ನಂಬಿಕೆ ಇದೆ ಎಂದಾಗ ರಘು ಗೆ ಏನು ಹೇಳಬೇಕೋ ತೋಚದೇ ಆಗುತ್ತದೆ. ಆದರೆ ಪಾರು ಮಾತ್ರ ಅರಸನ ಕೋಟೆಯ ಸುದ್ದಿಗೆ ಬಂದೊರಿಗೆ ಸರಿಯಾದ ಪಾಠ ಮಾತ್ರ ಕಲಿಸಿಯೆ ಕಳಿಸುತ್ತೇನೆ ಎಂದು ಶಪಥ ಮಾಡುತ್ತಾಳೆ.


Click it and Unblock the Notifications