ಮಗನ ಸಂಸಾರ ಸರಿ ಪಡಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಅಖಿಲಾಂಡೇಶ್ವರಿ

By ಪೂರ್ವ

ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಮಗನ ವಿಚಾರದಲ್ಲಿ ಕುಗ್ಗಿ ಹೋಗಿದ್ದಾರೆ. ನನ್ನ ಮಗ ಸೊಸೆ ದೂರ ಆಗಬಾರದು, ಅವರು ಖುಷಿಯಿಂದ ಇರಬೇಕು ಎಂದೆಲ್ಲ ಮನದಲ್ಲೇ ಚಿಂತಿಸುತ್ತಿದ್ದಾರೆ. ಆದಿ ಕಂಪನಿಯ ಸಿಇಓ ಆಗಿ ಮುಂದುವರಿಯಬೇಕು ಎಂದು ಆದಿ ಬಳಿ ಕೇಳಿಕೊಳ್ಳಲು ಅಖಿಲಾಂಡೇಶ್ವರಿ ಹೋದಾಗ ಸಿಇಓ ಆಗಿ ನಾನು ಮುಂದುವರಿಯುವುದಿಲ್ಲ. ನೀವು ನನ್ನ ಹಾಗೂ ಪಾರು ಸಂಬಂಧ ಹಾಳು ಮಾಡಲು ನೋಡುತ್ತಿದ್ದೀರಿ ನೀವು ನನಗೆ ಎರಡನೇ ಮದುವೆ ಮಾಡುವ ಯತ್ನ ಮಾಡುತ್ತಿದ್ದೀರಿ ಆದರೆ ನಾನು ಪಾರುನ ಯಾವತ್ತೂ ಬಿಟ್ಟು ಕೊಡಲ್ಲ ಆಕೆ ನನ್ನ ಹೆಂಡತಿ ಪ್ರತಿ ಜನ್ಮಕ್ಕು ಆಕೆಯೇ ನನ್ನ ಹೆಂಡತಿ ಇದನ್ನ ಯಾರಿಂದಲೂ ತಪ್ಪಿಸಲು ಸಾಧ್ಯ ಇಲ್ಲ ಎಂದಾಗ ಅಖಿಲಾಂಡೇಶ್ವರಿಗೆ ಶಾಕ್ ಆಗುತ್ತದೆ.

''ಇದೆಲ್ಲ ಯಾರು ಹೇಳಿದ್ದು ನಿನಗೆ. ನಾನು ನಿನಗೆ ಎರಡನೇ ಮದುವೆ ಮಾಡಿಸುತ್ತೇನೆ ಎಂದು ಯಾರು ಹೇಳಿರುವುದು ಹೇಳು ಎಂದಾಗ ಯಾಮಿನಿ ಚಿಕ್ಕಮ್ಮ ನನಗೆ ಎಲ್ಲಾ ಹೇಳಿದ್ದಾರೆ. ನೀವು ನನಗೆ ಬೇರೆ ಮದುವೆ ಮಾಡಿಸಲು ಯತ್ನಿಸುತ್ತಿದ್ದೀರಿ. ನಿಮ್ಮ ನಾಟಕ ನನಗೆ ಗೊತ್ತಾಗಿದೆ ಎಂದಾಗ ಅಖಿಲಾಂಡೇಶ್ವರಿ ಗೆ ಬಹಳ ಬೇಸರವಾಗುತ್ತದೆ. ತನ್ನ ಮನಸನ್ನು ಮಗ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಕೊಂಚ ಬೇಸರ ಆದರೂ ಪಾರುವನ್ನೂ ಎಂದಿಗೂ ಬಿಡುವುದಿಲ್ಲ ಎಂದು ಹೇಳಿರುವುದು ಸಮಾಧಾನ ತರುತ್ತದೆ.

ಆದರೂ ಸಾವರಿಸಿಕೊಂಡು ಅಖಿಲಾಂಡೇಶ್ವರಿ ಹೇಳುತ್ತಾಳೆ 'ಹೌದು, ನಿನಗೆ ಎರಡನೇ ಮದುವೆ ಮಾಡಿಸುವ ಪ್ರಯತ್ನ ಮಾಡಿರುವುದು ನಿಜ ಪಾರ್ವತಿ ನಮ್ಮ ಘನತೆಗೆ ತಕ್ಕ ಸೊಸೆ ಅಲ್ಲ. ಆರಸನ ಕೋಟೆಯ ಸೊಸೆಗೆ ಇರಬೇಕಾದ ಯಾವ ಕ್ವಾಲಿಟಿ ಅವಳಲ್ಲಿ ಇಲ್ಲ ಎಂದಾಗ ಆದಿಗೆ ಇನ್ನೂ ಕೋಪ ಹೆಚ್ಚಾಗುತ್ತದೆ. ಆಗ ಆದಿ, 'ನಿನಗೆ ಹೇಗಾದರೂ ಮನಸು ಬರುತ್ತದೆ ಹಾಗೆಲ್ಲ ಮಾತನಾಡಲು. ಆಕೆ ಅದೆಷ್ಟು ತ್ಯಾಗ ಮಾಡಿದ್ದಾಳೆ. ಅವಳು ಅರಸನ ಕೋಟೆಯ ಸೊಸೆ ಅಲ್ಲ. ಆದಿತ್ಯನ ಹೆಂಡತಿ ಇದನ್ನು ಮರೆಯ ಬೇಡಿ. ಪಾರು ಬಳಿ ಒಳ್ಳೆಯ ದಾಗಿ ಮಾತನಾಡಿದ್ದೇನು ಆಕೆಯನ್ನು ತ್ತಬ್ಬಿಕೊಂಡಿದ್ದೇನು. ಊಟ ಮಾಡುವ ಹೊತ್ತಿಗೆ ಆಕೆಯನ್ನು ಬಳಿಯಲ್ಲಿ ಕೂರಿಸಿಕೊಂಡು ಊಟ ಮಾಡಿದ್ದೇನು. ಇದೆಲ್ಲ ನನಗೆ ಗೊತ್ತಿಲ್ಲ ಎಂದು ಕಂಡಿದ್ದೀರಾ ಎಲ್ಲಾ ನನಗೆ ಗೊತ್ತಿದೆ. ನಿಮ್ಮ ನಾಟಕ ಬಯಲಾಗಿದೆ ಎಂದು ಅಮ್ಮನ ವಿರುದ್ಧ ಮಾತನಾಡುತ್ತಾರೆ ಆದಿ.

ಅಮ್ಮನ ಪ್ರೀತಿಯನ್ನು ನಾಟಕ ಎಂದ ಆದಿ

ಅಮ್ಮನ ಪ್ರೀತಿಯನ್ನು ನಾಟಕ ಎಂದ ಆದಿ

ಆದಿಯ ಮಾತು ಕೇಳಿ ಅಖಿಲಾಂಡೇಶ್ವರಿ ಬೆಂಕಿಯಾಗುತ್ತಾಳೆ. ಆಗ ಆದಿಗೆ ಇನ್ನೂ ಕೋಪ ಹೆಚ್ಚಾಗುತ್ತದೆ. ಇದನ್ನೇ ಉಪಯೋಗ ಮಾಡಿಕೊಂಡ ಅಖಿಲ ಹೇಳುತ್ತಾರೆ, 'ಏನಪ್ಪ ಯಾಕೆ ಭಯನ ನಿನಗೆ ಸಿಇಓ ಪಟ್ಟಕ್ಕೆ ಬಂದರೆ ಹೆಂಡತಿಯನ್ನು ಕಳೆದುಕೊಳ್ಳುತ್ತೇವೆ ಎಂದು ಎಂದೆಲ್ಲ ಹೇಳಿದಾಗ ಸರಿ ನಾನು ಸಿಇಓ ಆಗುತ್ತೇನೆ ನನ್ನ ಪಾರು ಮದ್ಯೆ ಯಾರನ್ನು ಬರಲು ಬಿಡುವುದಿಲ್ಲ ಎಂದೆಲ್ಲ ಹೇಳುತ್ತಾನೆ. ಬಳಿಕ ನೋಡೋಣ ಎಂದಾಗ ಅಮ್ಮನಿಗೆ ಆವಾಜ್ ಹಾಕುತ್ತಾನೆ ಆದಿ.

ಆದಿ ಮಾತಿಗೆ ರಘು ಬೇಸರ

ಆದಿ ಮಾತಿಗೆ ರಘು ಬೇಸರ

ಇದನ್ನು ಕಂಡ ರಘುಗೆ ಬಹಳ ಬೇಸರ ಆಗುತ್ತದೆ. 'ಏನು ಇದೆಲ್ಲ ಆದಿ ಅಮ್ಮನ ಮಾತು ವೇದ ವಾಕ್ಯ ಎಂದು ಕೊಂಡಿದ್ದೆ ಆದರೆ ಇದೀಗ ಆಗಿರುವುದು ಏನು' ಎಂದೆಲ್ಲ ಬೆಸರಿಸಿಕೊಳ್ಳತ್ತಾನೆ. ಈ ವೇಳೆ ಆದಿ ಮೊಬೈಲ್‌ಗೆ ಕರೆ ಬರುತ್ತದೆ ಕರೆಯನ್ನು ಸ್ವೀಕರಿಸಿದ ಪಾರು, ಆದಿಯಿಂದ ಇಂದ ಕರೆ ಮಾಡಿಸುವುದಾಗಿ ಹೇಳಿ ಕರೆ ಕಟ್ ಮಾಡುತ್ತಾಳೆ. ಆದಿ ಇಲ್ಲದನ್ನು ನೋಡಿ ಆದಿಯನ್ನು ಹುಡುಕುತ್ತಾ ಕೋಣೆಯಿಂದ ಹೊರಗೆ ಬರುತ್ತಾಳೆ. ಬಳಿಕ ಪಾರು ರೂಮಿನತ್ತ ಬರುವಾಗ ಅಮ್ಮನ ಬಳಿ ಮಾತನಾಡಿ ಆದಿ ಹೊರ ಬರುತ್ತಾನೆ ಅಲ್ಲಿ ಪಾರುವನ್ನು ನೋಡಿ ಕೊಂಚ ಶಾಕ್ ಆಗುತ್ತಾನೆ. ಪಾರು ಎಂದು ಕರೆಯುತ್ತಾನೆ ಆಗ ಅಲ್ಲಿಗೆ ಅಖಿಲಾಂಡೇಶ್ವರಿಯು ಬರುತ್ತಾಳೆ.

ಖುಷಿ ಪಟ್ಟ ರಾಣಾ ಹಾಗೂ ಅರುಂಧತಿ

ಖುಷಿ ಪಟ್ಟ ರಾಣಾ ಹಾಗೂ ಅರುಂಧತಿ

ಬಳಿಕ ಪಾರು ನೀನೇನು ಮಾಡುತ್ತಿದ್ದೆ ಇಲ್ಲಿ? ಎಂದಾಗ ಕರೆ ಬಂದಿತ್ತು ಫೋನ್ ಕೊಟ್ಟು ಹೋಗೋಣ ಅಂತ ಬಂದೆ ಎಂದು ಹೇಳಿದಾಗ ಎಲ್ಲರಿಗೂ ಸಮಾಧಾನ ಆಗುತ್ತದೆ. ಬಳಿಕ ಆದಿ ಪಾರುವಿನ ಭುಜ ಹಿಡಿದು ಅಲ್ಲಿಂದ ಕರೆದುಕೊಂಡು ಹೋಗುತ್ತಾನೆ. ಇದನ್ನು ನೋಡಿದ ಅಖಿಲ ಖುಷಿ ಪಡುತ್ತಾಳೆ. ಬಳಿಕ ಒಬ್ಬಳೇ ಯೋಚನೆ ಮಾಡುತ್ತಾ ಕಣ್ಣೀರು ಹಾರಿಸುತ್ತಾಳೆ. ನನ್ನನ್ನೇ ತಪ್ಪಾಗಿ ಅರ್ಥ ಮಾಡಿಕೊಂಡ ಎಂದೆಲ್ಲ ಬೇಸರ ಪಟ್ಟುಕೊಳ್ಳುತ್ತಾರೆ. ಆದರೆ ಇದನ್ನೆಲ್ಲ ನೋಡಿದ ರಾಣಾ ಹಾಗೂ ಅರುಂಧತಿ ಖುಷಿ ಪಡುತ್ತಾರೆ ನಮಗೆ ಏನು ಬೇಕೊ ಆದೆ ಆಯಿತು ಎಂದುಕೊಳ್ಳುತ್ತಾರೆ.

ರಘು ಬಳಿ ಪ್ರಮಾಣ ಮಾಡಿಸಿಕೊಂಡ ಅಖಿಲ

ರಘು ಬಳಿ ಪ್ರಮಾಣ ಮಾಡಿಸಿಕೊಂಡ ಅಖಿಲ

ಬಳಿಕ ಅಖಿಲಾಂಡೇಶ್ವರಿ ಬಳಿ ಬಂದ ರಘು, ನನಗೆ ಬಹಳ ಬೇಸರ ಆಯಿತು ಅಖಿಲಾ, ನೀನು ಪಾರು ಹಾಗೂ ಆದಿ ಸದಾ ಕಾಲ ಒಟ್ಟಾಗಿ ಇರಲಿ ಎಂದು ಒದ್ದಾಡುತ್ತಿದ್ದಿಯಾ ಅವನ ಮುಂದೆ ಬೇರೆ ಮಾತನಾಡುತ್ತಿಯಾ, ಇನ್ನೂ ಮುಂದೆ ಅವನು ನಿನ್ನ ದ್ವೇಷ ಮಾಡುತ್ತಾನೆ ಎಂದೆಲ್ಲ ಹೇಳುತ್ತಾನೆ ಆದರೆ ಅಖಿಲ ರಘುವಿನ ಕೈಯಿಂದ ಮಾತು ತೆಗೆದುಕೊಳ್ಳುತ್ತಾಳೆ. ಯಾವತ್ತೂ ಈ ವಿಚಾರವನ್ನು ಆದಿಗೆ ಹೇಳಬಾರದು ಎಂದು ಇನ್ನೂ ಎರಡನೇ ಮದುವೆ ವಿಚಾರಕ್ಕಾಗಿ ತಾಯಿ ಮಗ ಬೇರೆ ಆಗುವುದಂತು ಖಚಿತ. ಮರುದಿನ ಆದಿ ಆಫೀಸಿಗೆ ತೆರಳಲು ರೆಡಿಯಾಗುತ್ತಾನೆ ಇದನ್ನು ನೋಡಿದ ಪ್ರೀತು ಖುಷಿ ಪಡುತ್ತಾನೆ. ಆದಿ ಅಪ್ಪ ಅಮ್ಮನ ಆಶಿರ್ವಾದ ಪಡೆದುಕೊಳ್ಳುತ್ತಾನೆ. ಇದನ್ನು ನೋಡಿದ ಅಖಿಲಾ ಖುಷಿ ಪಡುತ್ತಾಳೆ.

More from Filmibeat

English summary
Kannada serial Paaru written updated on 23th September. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X