ಅಮ್ಮನನ್ನು ನೋಡಲು ಜೈಲಿಗೆ ಹೊರಟ ಆದಿ! ಮಾಡದ ತಪ್ಪಿಗೆ ಅಖಿಲಾಗೆ ಶಿಕ್ಷೆ!
ಅಮ್ಮನನ್ನು ಜೈಲಿಗೆ ಹಾಕಲಾಗಿದೆ ಎಂದು ಗೊತ್ತಾದ ಬಳಿಕ ಆದಿ ಜೀವಕ್ಕೆ ಕುತ್ತು ಬಂದಿತ್ತು ಆದರೆ ಆತ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಜನನಿ ಹಾಗೂ ಪಾರು ಆದಿಯ ಆರೈಕೆ ಮಾಡುತ್ತಾ ಇರುತ್ತಾರೆ. ಈ ವೇಳೆಗೆ ಅಮ್ಮ ಅಖಿಲಾಂಡೇಶ್ವರಿಯದ್ದೆ ಚಿಂತೆ. ಜನನಿ ಬಳಿ ಆದಿ ಕೇಳುತ್ತಾನೆ ಅಮ್ಮ ಚೆನ್ನಾಗಿದ್ದಾರೆ ತಾನೆ ಎಂದಾಗ ಜನನಿ, ತನ್ನ ಬಾವನನ್ನು ಸಮಾಧಾನ ಮಾಡುತ್ತಾ ಆರಾಮವಾಗಿ ಇರಿ ಬಾವ. ಕಾನೂನು ಯಾವತ್ತೂ ನ್ಯಾಯದ ಪರವಾಗಿ ಇರುತ್ತದೆ. ಏನೂ ಟೆನ್ಶನ್ ತೆಗೆದುಕೊಳ್ಳಬೇಡಿ ಎಂದು ಹೇಳುತ್ತಾಳೆ.
ಈ ವೇಳೆ ಪ್ರೀತು, ಅಣ್ಣನ ಮುಂದೆ ತಲೆ ತಗ್ಗಿಸಿಕೊಂಡು ಇರುತ್ತಾನೆ. ಪ್ರೀತು ಮಾತ್ರ ನಾನು ಅಣ್ಣನ ಪ್ರಾಣ ತೆಗೆಯಲು ಹೋಗಿದ್ದೆ ಅಲ್ವಾ ಎಂದೆಲ್ಲ ಬೇಸರ ಮಾಡಿಕೊಳ್ಳುತ್ತಾನೆ. ಈ ವೇಳೆ ಆದಿ ಜನನಿ ಬಳಿ ಡಾಕ್ಟರ್ ಅನ್ನು ಕರೆಯಲು ಹೇಳುತ್ತಾನೆ. ಸ್ವಲ್ಪ ಅವರ ಬಳಿ ಮಾತನಾಡಬೇಕಿತ್ತು ಎಂದು ಹೇಳುತ್ತಾನೆ. ಇದನ್ನು ಕೇಳಿದ ಜನನಿ ಡಾಕ್ಟರ್ ಅನ್ನು ಕರೆತರಲು ಹೋಗುತ್ತಾಳೆ. ಈ ವೇಳೆ ಅಣ್ಣನ ಬಳಿ ಬಂದ ಪ್ರೀತುವನ್ನೂ ನೋಡಿದ ಆದಿ ಹೇಳುತ್ತಾನೆ ನನಗೆ ಶೂಟ್ ಮಾಡಿದ್ದು ನೀನು ಅನ್ನೋದು ನನಗೆ ಗೊತ್ತಿದೆ ಎನ್ನುತ್ತಾನೆ.

ಅಣ್ಣನ ಮಾತು ಕೇಳಿ ಪ್ರೀತಮ್‌ಗೆ ಆಘಾತ
ಇದನ್ನು ಕೇಳಿದ ಪ್ರೀತಮ್‌ಗೆ ಆಘಾತವಾಗುತ್ತದೆ. ಬಳಿಕ ಆದಿ ಹೇಳುತ್ತಾನೆ, ನನ್ನ ಶೂಟ್ ಮಾಡುವ ಉದ್ದೇಶ ನಿನಗೆ ಇರಲಿಲ್ಲ. ಇದು ಕೂಡ ನನಗೆ ಗೊತ್ತು. ನನಗೆ ನೀನು ಶೂಟ್ ಮಾಡಲು ಸಾಧ್ಯ ಇಲ್ಲ, ಆದರೆ ನನ್ನ ಎದುರಿಗೆ ಇರುವಾತನಿಗೆ ನೀನು ಶೂಟ್ ಮಾಡಿದೆ. ಆತ ಯಾರು? ಎಂದು ಕೇಳಿದಾಗ ಪ್ರೀತೂಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ಒಂದು ಕಡೆ ಬಹಳ ಬೇಸರ ಆದರೆ ಇನ್ನೊಂದು ಕಡೆಯಿಂದ ಪ್ರೀತಮ್‌ಗೆ ಭಯ ಆವರಿಸಿಕೊಂಡು ಬಿಟ್ಟಿದೆ.

ಅರುಂಧತಿ ಬಗ್ಗೆ ಪ್ರೀತುಗೆ ಹೆದರಿಕೆ
ತಾನು ಏನಾದರು ನಿಜ ಹೇಳಿದರೆ ಅರುಂಧತಿ ತನ್ನ ಅಣ್ಣನನ್ನು ಸುಮ್ಮನೆ ಬಿಡುವುದಿಲ್ಲ. ಈಗಾಗಲೇ ನನಗೆ ಬಹಳ ಎಚ್ಚರಿಕೆ ನೀಡಿದ್ದಾಳೆ ಏನಾದರು ಅಣ್ಣನಿಗೆ ನಿಜ ವಿಚಾರ ತಿಳಿಸಿದರೆ ಅರುಂಧತಿ ಅಣ್ಣನಿಗೆ ಏನಾದರು ಮಾಡಿಬಿಡುತ್ತಾಳೆ ಎಂದು ಭಯದಿಂದ ಸುಮ್ಮನಿರುತ್ತಾರೆ. ಡಾಕ್ಟರ್ ಬಳಿ ಮಾತನಾಡಿದ ಆದಿ ಅಮ್ಮನನ್ನು ನೋಡಲು ಸ್ಟೇಶನ್‌ಗೆ ತೆರಳುತ್ತಾನೆ. ಆದಿಯನ್ನೂ ನೋಡಿದ ಅಖಿಲಾ ಬಹಳ ಖುಷಿ ಪಡುತ್ತಾಳೆ ಜೊತೆಗೆ ಬೇಸರವೂ ವ್ಯಕ್ತಪಡಿಸುತ್ತಾಳೆ.

ಅಖಿಲಾಳನ್ನು ಭೇಟಿ ಮಾಡಿದ ಆದಿ
ಆದಿಗೆ ಶೂಟ್ ಮಾಡಿರುವ ಆರೋಪಕ್ಕೆ ನಾನು ಅರೆಸ್ಟ್ ಆಗಿದ್ದೇನೆ. ಇನ್ನು ಅದು ಗೊತ್ತಾದರೆ ಆದಿಗೆ ನನ್ನ ಮೇಲೆ ಎಷ್ಟು ತಿರಸ್ಕಾರ ಬರುತ್ತದೋ ಗೊತ್ತಿಲ್ಲ ಎಂದು ರಘು ಬಳಿ ಅಳುತ್ತಾ ಇರಬೇಕಾದರೆ ಆದಿ ಬರುತ್ತಾನೆ, ಆದಿಯನ್ನು ನೋಡಿದ ಅಖಿಲಾ ಖುಷಿಯಲ್ಲಿ ಮೈ ಮರೆಯುತ್ತಾರೆ. ಈ ವೇಳೆ ಅಮ್ಮನ ಕೈ ಹಿಡಿದು ಹೇಳುತ್ತಾನೆ ಅಮ್ಮ ನೀವು ತಪ್ಪು ಮಾಡಿಲ್ಲ ಅಂತ ನನಗೆ ಚೆನ್ನಾಗಿ ತಿಳಿದಿದೆ. ನಿಮ್ಮ ಮೇಲೆ ನನಗೆ ಯಾವ ಕೆಟ್ಟ ಅಭಿಪ್ರಾಯವೂ ಇಲ್ಲ. ನೀವು ಯಾರನ್ನೋ ಬಚಾವ್ ಮಾಡಲು ಈ ಆರೋಪವನ್ನು ನಿಮ್ಮ ಮೇಲೆ ಹಾಕಿಕೊಂಡು ಇದ್ದೀರಾ ಎಂಬುವುದು ಚೆನ್ನಾಗಿ ತಿಳಿದಿದೆ ಕೂಡ. ನನಗೆ ಶೂಟ್ ಮಾಡಿದವರನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದಾಗ ಅಖಿಲಾಗೆ ಶಾಕ್ ಆದರೂ ರಘು ಹಾಗೂ ಜನನಿ ಮುಖ ಮುಖ ನೋಡಿಕೊಳ್ಳುತ್ತಾರೆ.

ಪ್ರೀತುಗೆ ಗೊತ್ತಾಯ್ತು ಅರುಂಧತಿ ಆಟ
ಪ್ರೀತೂಗೆ ಒಂದು ವಿಷಯ ಮನದಟ್ಟಾಗುತ್ತದೆ. ತಾನು ಮನೆಯಲ್ಲಿ ಏನು ಮಾಡಿದರು ರಾಣಾಗೆ ತಿಳಿಯುತ್ತಿದೆ ಅದು ಹೇಗೆ. ನಾನು ಚಿಕ್ಕಪ್ಪ ಮಾತನಾಡುತ್ತಾ ಇರುವುದು ಹೇಗೆ ಗೊತ್ತಾಯಿತು. ಮನೆ ಸಿಸಿ ಕ್ಯಾಮೆರಾ ಹ್ಯಾಕ್ ಮಾಡಿದ್ದಾರಾ ಹಾಗೆ ಏನಾದರು ಆಗಿದ್ದಾರೆ ಅಮ್ಮನ ರೂಮ್‌ನಲ್ಲಿ ನಡೆಯುವ ಎಲ್ಲಾ ವಿಚಾರ ಅವರಿಗೆ ಗೊತ್ತಾಗಬೇಕಿತ್ತು. ಹಾಗಾದರೆ ಚಿಕ್ಕಮ್ಮನನ್ನು ದಾಳವಾಗಿ ಯೂಸ್ ಮಾಡಿಕೊಂಡು ರಾಣಾ ಕುತಂತ್ರ ನಡೆಸುತ್ತಿದ್ದಾನೆ ಎಂಬ ವಿಚಾರ ಪ್ರೀತುಗೆ ತಿಳಿಯುತ್ತದೆ. ಇದನ್ನು ಕೇಳಲು ಪ್ರೀತಮ್ ಚಿಕ್ಕಮ್ಮನ ಬಳಿ ಬರುತ್ತಾನೆ. ಇನ್ನು ಕ್ಯಾಮೆರಾದ ಬಗ್ಗೆ ಪ್ರೀತು ವಿಚಾರಣೆ ನಡೆಸುತ್ತಾನೆ. ಮುಂದೇನು ನಡೆಯುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











