Don't Miss!
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Automobiles
ಬಹುನೀರಿಕ್ಷಿತ 'ಅಲ್ಟ್ರಾವೈಲೆಟ್ F77' ಬೈಕ್ ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮನೆಯವರ ಎದುರು ಮೋನಿಕಾ ಮುಖವಾಡ ಕಳಚುತ್ತಾಳ ಪಾರು?
ದಾಮಿನಿ, ಮೋನಿಕಾ ಳನ್ನು ನೋಡಿ ದೆವ್ವ-ದೆವ್ವ ಎಂದು ಚೀರಿಕೊಳ್ಳುತ್ತಾಳೆ ಇದನ್ನು ನೋಡಿದ ಪಾರು ಓಡಿ ಬಂದು ಏನಾಯ್ತು ಮೇಡಂ ಎಲ್ಲಿ ದೆವ್ವ ಎಂದು ಕೇಳುತ್ತಾಳೆ. ಇನ್ನು ಮಹಡಿ ಮೇಲಿನಿಂದ ಇಳಿದು ಬಂದ ಅಖಿಲಾಂಡೇಶ್ವರಿ ಕೂಡ ಓಡಿ ಬರುತ್ತಾರೆ. ಇದನ್ನು ನೋಡಿದ ಮೋನಿಕಾಗೆ ಕೊಂಚ ಭಯ ಆಗುತ್ತದೆ. ಬಳಿಕ ದಾಮಿನಿ ಹೇಳುತ್ತಾಳೆ ಅಕ್ಕ ಬಿಳಿ ದೆವ್ವ ಅಕ್ಕ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅಖಿಲಾ, ದಾಮಿನಿ ಬಳಿ ಎಲ್ಲಿ ದೆವ್ವ ಎಂದಾಗ ಮೋನಿಕಾಳನ್ನು ತೋರಿಸಿ ಅಕ್ಕ ಬಿಳಿ ದೆವ್ವ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅಖಿಲಾ, ದಾಮಿನಿಗೆ ಬೈಯ್ಯುತ್ತಾಳೆ.
ಇದನ್ನೆಲ್ಲ ನೋಡಿದ ರಘು ಮಾತ್ರ ಅಖಿಲಾ ಬಳಿ, ಮೋನಿಕಾ ಇಲ್ಲಿ ಇರುವುದು ನನಗೆ ಯಾಕೋ ಸರಿ ಕಾಣುತ್ತಿಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅಖಿಲಾ, ಹಾಗಾದರೆ ನಮ್ಮ ಸೊಸೆ ಕರೆದುಕೊಂಡು ಬಂದಿದ್ದು ತಪ್ಪು ಎನ್ನುತ್ತೀರಾ ರಘು. ಪಾಪ ಪಾರ್ವತಿ ತನ್ನ ಚೇರ್ ಮೆನ್‌ರ ಮಗಳನ್ನು ಕರೆದುಕೊಂಡು ಬಂದಿದ್ದಾಳೆ ಆಕೆ ಕೂಡಾ ಒಂದೆರಡು ದಿನ ಇದ್ದು ಹೋಗುತ್ತಾಳೆ. ಇದನ್ನೇ ಯಾಕೆ ಎಳೆಯುತ್ತಿರಾ ಏನೂ ಚಿಂತಿಸಬೇಡಿ ನೀವು ಎಲ್ಲಾ ಸರಿಯಾಗುತ್ತದೆ ಎನ್ನುತ್ತಾಳೆ.
ಪ್ರೀತಮ್
ಹಿಂದಿರುವವರ
ಮುಖವಾಡ
ಕಳಚುತ್ತಾಳ
ಅಖಿಲಾಂಡೇಶ್ವರಿ?

ಅಖಿಲ ಬಳಿ ಆತಂಕ ವ್ಯಕ್ತ ಪಡಿಸಿದ ರಘು
ಸುಮ್ಮನೆ ಚಿಂತೆ ಮಾಡಿದರೆ ನಮ್ಮ ನೆಮ್ಮದಿ ಹಾಳಾಗಿ ಹೋಗುತ್ತದೆ ಎಂದಾಗ ಅಲ್ಲ ದಾಮಿನಿ ಮುಂಚೆ ಮೂವರು ಬಂದ ಹುಡುಗಿಯರು ಏನೇನೆಲ್ಲ ಮಾಡಿದ್ದಾರೆ ಎಂಬುವುದು ಪುನಃ ಹೇಳಬೇಕು ಎಂದೇನೂ ಇಲ್ಲ. ಹಾಗೆಯೇ ಈಕೇನೂ ಏನಾದರು ತೊಂದರೆ ಮಾಡಿದರೆ ಕಷ್ಟ ಯಾಕೆ ಎಂದರೆ ನನ್ನ ಘನತೆಗೆ ಅದು ಕಪ್ಪು ಚುಕ್ಕೆ ಆಗುತ್ತದೆ ಎಂದು ಹೇಳಿದಾಗ ಅಖಿಲಾ ಮಾತ್ರ ತನ್ನ ಸೊಸೆಯನ್ನು ಬಿಟ್ಟು ಕೊಡದೆ ಮುಂಚೆ ಇದ್ದ ಆ ಹುಡುಗಿಯರು ಅರುಂಧತಿ ಕಡೆಯವಳು ಆದರೆ ಈಗ ಈಕೆ ಅರುಂಧತಿ ಕಡೆಯವಳು ಅಲ್ಲ. ಪಾರು ಊರಿನವಳು. ಆ ಹುಡುಗಿಯರು ಮಾಡಿದ ತಂಟೆ ತಕರಾರನ್ನು ಪಾರುವೆ ಬಯಲಿಗೆ ಎಳೆದಿದ್ದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ರಘು ಕೊಂಚ ಸಮಾಧಾನ ಪಡುತ್ತಾ ಇರುತ್ತಾನೆ.

ಮೋನಿಕಾಗೆ ಪ್ರಶ್ನೆಗಳ ಬಾಣ ಎಸೆದ ಪಾರು
ಇತ್ತ ಮೋನಿಕಾ, ಅರಸನ ಕೋಟೆ ಬಿಟ್ಟು ಹೋಗಲು ಮೆತ್ತಗೆ ಬರುತ್ತಾಳೆ. ಯಾರು ಇಲ್ಲ ಎಂದುಕೊಂಡು ಬಾಗಿಲ ಬಳಿ ಬರುತ್ತಾಳೆ ಇದನ್ನು ನೋಡಿದ ಪಾರು ಮೋನಿಕಾಳನ್ನು ಎಲ್ಲಿಯೂ ಹೋಗದ ಹಾಗೆ ತಡೆಯುತ್ತಾಳೆ. ಬಳಿಕ ಮೋನಿಕಾ, ಆದಿ-ಪಾರು ಕೈಯಿಂದ ತಪ್ಪಿಸಿಕೊಳ್ಳಲು ಏನೇನೆಲ್ಲ ಸಬೂಬು ಹೇಳುತ್ತಾಳೆ. ತಾನು ಇಲ್ಲಿಯೇ ಇದ್ದರೆ ಜನನಿ ಅವರಿಗೂ ತೊಂದರೆ. ಅವರಾದರೂ ಚೆನ್ನಾಗಿ ಇರಲಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪಾರು ಆಕೆಯ ಊರು ತಂದೆ ತಾಯಿ ಬಗ್ಗೆ ಅರಿಯುವ ಪ್ರಯತ್ನ ಮಾಡುತ್ತಾರೆ ಆದರೆ ಮೋನಿಕಾ ಮಾತ್ರ ಏನೂ ಹೇಳದೆ ಸುಮ್ಮನಿರುತ್ತಾಳೆ.

ಮೋನಿಕಾಳನ್ನು ಮನೆಯಿಂದ ಹೊರ ಬಿಡದ ಪಾರು
ಇದನ್ನು ನೋಡಿದ ಪಾರು ನಿಮಗೆ ನ್ಯಾಯ ಸಿಗದೆ ಇಲ್ಲಿಂದ ಹೋಗಲು ನಾವು ಬಿಡಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮೋನಿಕಾಗೆ ಏನು ಮಾಡಬೇಕು ತೋಚುವುದಿಲ್ಲ. ಇನ್ನು ರೂಮ್‌ಗೆ ತೆರಳಿ ಅರುಂಧತಿಗೆ ಕರೆಮಾಡಿ ಮಾತನಾಡುತ್ತಾಳೆ. ಈ ಮನೆಯಿಂದ ಹೊರ ಹೋಗಲು ಬಿಡುತ್ತಿಲ್ಲ. ಪಾರು ಜೊತೆ ಏನೆಲ್ಲ ಮಾಗು ಕಟ್ ಆಯಿತು ಅದನ್ನೆಲ್ಲ ಅರುಂಧತಿ ಬಳಿ ಹೇಳಿಕೊಳ್ಳುತ್ತಾಳೆ. ಇದನ್ನು ಕೇಳಿದ ಅರುಂಧತಿ ಮಾತ್ರ ಆತಂಕದಲ್ಲಿ ಇರುತ್ತಾಳೆ. ರಾಣಾನಿಗೆ ಕೂಡ ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನಾಗುತ್ತಾನೆ.

ಅತ್ತಿಗೆಯ ಬಳಿ ನಿಜ ವಿಚಾರ ತಿಳಿಸಿದ ಪ್ರೀತೂ
ಮೋನಿಕಾ ಕಾಟ ತಡೆಯಲು ಆಗದೆ ಕೋಪದಿಂದ ಪ್ರೀತೂ, ಅಣ್ಣನ ರೂಮ್ ಬಳಿ ಬಂದು ಅತ್ತಿಗೆ ಯಾಕೆ ಮೋನಿಕಾಳನ್ನು ಹೋಗಲು ಬಿಡುತ್ತಿಲ್ಲ. ನನ್ನೆಲ್ಲ ಬದಲಾವಣೆಗೂ ಆಕೆಯೇ ಕಾರಣ ಎಂದು ಹೇಳುತ್ತಾನೆ. ಇದನ್ನು ಕೇಳಿದ ಪಾರುಗೆ ಶಾಕ್ ಆಗುತ್ತದೆ. ಇನ್ನು ಪಾರು ಆದಿ ಮಾತನಾಡಿಕೊಂಡು ಇರುವ ವೇಳೆ ಅಲ್ಲಿಗೆ ಬಂದ ಜನನಿ ಪಾರು ಬಳಿ, ಪಾರ್ವತಿ ಅವರೇ ನೀವು ಏನೋ ನನ್ನ ಬಳಿ ಮುಚ್ಚಿ ಇಡುತ್ತಿದ್ದಿರಾ ಏನದು ಎಂದು ಪದೇ ಪದೇ ಕೇಳುತ್ತಾಳೆ. ನಿಜ ವಿಚಾರ ಜನನಿ ಬಳಿ ಹೇಳುತ್ತಾಳ ಪಾರು? ಕಾದು ನೋಡಬೇಕಿದೆ.