Don't Miss!
- News
55 ಪ್ರಯಾಣಿಕರನ್ನು ಬೆಂಗಳೂರಿನಲ್ಲಿ ಬಿಟ್ಟು ಹೋಗಿದ್ದ ಗೋ ಫಸ್ಟ್ ಏರ್ವೇಸ್ಗೆ ವಿಧಿಸಿರುವ ದಂಡವೆಷ್ಟು ಗೊತ್ತೆ?
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Paaru Serial: ಆಸ್ತಿಯಲ್ಲಿ ಪಾಲು ಕೇಳುತ್ತಾರಾ ಪಾರು - ಆದಿ?
ಪ್ರೀತಮ್‌ನ ಗೋಳು ನೋಡಲು ಆಗದೆ ಇದೀಗ ಆದಿ ಪಾರು ಬಹಳ ದೊಡ್ಡ ತ್ಯಾಗಕ್ಕೆ ಮುಂದಾಗಿದ್ದಾರೆ. ಪ್ರೀತಮ್ ಏನಪ್ಪಾ ಮಾಡುವುದು ಅಮ್ಮನ ಬಳಿ ಆಸ್ತಿ ಪಾಲು ಮಾಡಿ ಕೊಡಿ ಎಂದು ಹೇಗೆ ಕೇಳುವುದು ಎಂದು ಬೇಸರ ಪಟ್ಟುಕೊಳ್ಳುತ್ತಾನೆ. ಇನ್ನು ಮೋನಿಕಾ ಮಾತ್ರ ಪ್ರೀತಮ್ ನನ್ನು ಸರಿಯಾಗಿ ಆಟ ಆಡಿಸುತ್ತಾ ಇರುತ್ತಾಳೆ. ಆದಿ ಪಾರು ಇಬ್ಬರು ಯೋಚನೆ ಮಾಡಿ ಮಾತನಾಡುತ್ತಾ ಇರುತ್ತಾರೆ.
ಪ್ರೀತಮ್ ನನ್ನು ಹೀಗೆ ಬಿಟ್ಟರೆ ಆತ ಮನೆಯವರ ಮುಂದೆ ಕೆಟ್ಟವನಾಗುತ್ತಾನೆ ಎಂದು ಆದಿಗೆ ಮೊದಲೇ ತಿಳಿದಿದೆ. ಹೀಗಾಗಿ ಆದಿ ಪಾರು ಬಳಿ ನಮಗೆ ಇನ್ನೂ ಒಂದು ವಾರ ಸಮಯವಿದೆ. ಪ್ರೀತಮ್ ಅಮ್ಮನ ಬಳಿ ಆಸ್ತಿ ಕೇಳುವುದನ್ನು ಹೇಗಾದರೂ ಮಾಡಿ ತಪ್ಪಿಸಬೇಕು. ಆದರೆ ಶತ್ರುಗಳು ನಮ್ಮ ಮನೆ ಒಡೆಯುವುದನ್ನು ತಪ್ಪಿಸಲು ಸಾಧ್ಯ ಇಲ್ಲ ಎಂದಾಗ ಪಾರುಗೆ ಏನು ಮಾಡುವುದು ಎಂದು ತಿಳಿಯದೇ ಮತ್ತೇನು ಮಾಡುವುದು ಯಜಮಾನರೆ ಎಂದು ಕೇಳುತ್ತಾರೆ.
ಆ ವೇಳೆ ಪಾರು ಪ್ರೀತಮ್ ಬದಲಿಗೆ ಅಮ್ಮನ ಬಳಿ ನಾವು ಆಸ್ತಿಯಲ್ಲಿ ಭಾಗ ಕೇಳೋಣ ಎಂದು ಹೇಳುತ್ತಾನೆ. ಇದನ್ನು ಕೇಳಿ ಪಾರು ಕಂಬನಿ ಮಿಡಿಯುತ್ತಾಳೆ. ಏನು ಮಾಡುವುದು ನನಗೆ ಯಾಕೋ ಧೈರ್ಯ ಸಾಕಾಗುತ್ತಿಲ್ಲ. ಅತ್ತೆಯ ಮನಸ್ಸಿಗೆ ಎಷ್ಟು ನೋವು ಕೊಡಲಿ ನಾನು ಎಂದಾಗ ಆದಿ ಮಾತ್ರ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಆದರೆ ಆದಿ ಪಾರ್ವತಿಗೆ ಅರ್ಥ ಮಾಡಿಸುವ ಎಲ್ಲಾ ಪ್ರಯತ್ನ ಮಾಡುತ್ತ ಇರುತ್ತಾನೆ. ಪ್ರೀತಮ್ ದೊಡ್ಡ ಗಂಡಾತರಾದಲ್ಲಿ ಸಿಲುಕಿದ್ದಾನೆ..

ದೇವರ ಬಳಿ ಬೇಡಿಕೊಂಡ ಪಾರು
ಇದೀಗ ಪ್ರೀತಮ್ ಅಮ್ಮನ ಬಳಿ ಭಾಗ ಕೇಳಿದರೆ ಇನ್ನೂ ನಿಷ್ಠುರ ಆಗುತ್ತಾನೆ ಅದಕ್ಕಾಗಿ ನಾವೇ ಪಾಲು ಕೇಳೋಣ ಎಂದು ಆದಿ ಹೇಳುತ್ತಾನೆ. ಇದನ್ನು ಕೇಳಿದ ಪಾರು ಮಾತ್ರ ಸುಮ್ಮನೆ ಆಗುತ್ತಾಳೆ. ಕೊನೆಗೆ ದೇವರ ಬಳಿ ಬೇಡಿಕೊಳ್ಳುತ್ತಾಳೆ. ದೇವರೇ ನಮಗೆ ಅತ್ತೆಯ ಮನಸ್ಸಿಗೆ ನೋವು ನೀಡಲು ಇಷ್ಟವಿಲ್ಲ.. ಆದರೆ ಇದೀಗ ಆಸ್ತಿಯಲ್ಲಿ ಪಾಲು ಕೇಳಲು ಧೈರ್ಯ ನೀನೇ ಕೊಡಬೇಕು ಎಂದು ಹೇಳುವಾಗ ಅತ್ತ ಕಡೆಯಿಂದ ಬಂದ ಅಖಿಲ ಜೋರಾಗಿ ನೀವು ಬೇಡಿಕೊಂಡು ಇರುವುದು ಖಂಡಿತ ನಿಮಗೆ ಸಿಕ್ಕೆ ಸಿಗುತ್ತದೆ ಎಂದು ಹೇಳುತ್ತಾಳೆ ಇದನ್ನು ಕೇಳಿದ ಪಾರು ಸುಮ್ಮನೆ ಆಗುತ್ತಾಳೆ.

ಪಾರು ವಿರುದ್ದ ಷಡ್ಯಂತ್ರ ಮಾಡುತ್ತಿರುವ ಮೋನಿಕಾ
ಇನ್ನು ಮೋನಿಕಾ ಮಾತ್ರ ಅರುಂಧತಿ ಹೇಳುತ್ತ ಇರುವುದನ್ನೆಲ್ಲ ಚಾಚೂ ತಪ್ಪದೆ ಪಾಲನೆ ಮಾಡುತ್ತಾಳೆ. ಅರುಂಧತಿ ಮೊದಲ ಮಾತೇ ಪಾರ್ವತಿ ಮೇಲಿರುವ ಅಖಿಲ ನಂಬಿಕೆಯನ್ನು ಹುಸಿ ಆಗಿಸಬೇಕು ಎಂಬುವುದು ಆದರೆ ಇದನ್ನೇ ನೆಪವಾಗಿ ಇಟ್ಟುಕೊಂಡು ಮೋನಿಕಾ ಅಖಿಲ ಬಳಿಗೆ ಬರುತ್ತಾಳೆ. ಅಖಿಲ ಪೇಪರ್ ಓದುತ್ತಾ ಇರುವಾಗ ಅಲ್ಲಿಗೆ ಬಂದ ಮೋನಿಕಾ ಅಖಿಲ ಎದುರೇ ಬಂದು ಕಾಲು ಮೇಲೆ ಕಾಲು ಹಾಕಿ ಪೇಪರ್ ಓದುತ್ತ ಇರುತ್ತಾಳೆ. ಇದನ್ನು ಕಂಡ ಅಖಿಲಗೆ ಕೊಂಚ ಕೋಪ ಬಂದರೂ ಸಹಿಸಿಕೊಳ್ಳುತ್ತಾಳೆ.

ಮೋನಿಕಾ ಮಾತಿಗೆ ಪ್ರೀತಮ್ ಗಲಿಬಿಲಿ
ಪ್ರೀತಮ್ ಆಸ್ತಿಯಲ್ಲಿ ಭಾಗ ಕೇಳಬೇಕು ಎಂದು ಮೆತ್ತಗೆ ಮೆಟ್ಟಿಲು ಇಳಿದು ಬರುತ್ತಾನೆ. ಮೋನಿಕಾ ಕಾಲ ಮೇಲೆ ಕಾಲು ಹಾಕಿ ಇರುವುದನ್ನು ನೋಡಿದ ಪ್ರೀತಮ್ ಜೋರಾಗಿ ಗದರುತ್ತಾನೆ. ಏಯ್ ಎನು ಮಾಡುತ್ತಾ ಇದ್ದೀರಾ ಎಂದು ಕೇಳಿದಾಗ ಮೋನಿಕಾ ಮೆತ್ತಗೆ ಪೇಪರ್ ಓದುತ್ತಾ ಇದ್ದೇನೆ ಎಂದು ಹೇಳುತ್ತಾಳೆ. ಅದಕ್ಕೆ ಪ್ರೀತಮ್ ನೀವು ಕೂರುವುದು ತಪ್ಪಲ್ಲ ಆದರೆ ಕಾಲ ಮೇಲೆ ಕಾಲು ಹಾಕಿ ಕೂರುವುದು ತಪ್ಪು ಎಂದು ಜೋರಾಗಿ ಹೇಳುತ್ತಾನೆ.

ಮೋನಿಕಾ ಮಾತಿಗೆ ಸೊಪ್ಪು ಹಾಕದ ಅಖಿಲ
ಆದರೆ ಇದನ್ನು ಕೇಳಿ ಮೋನಿಕಾ ಎದ್ದು ನಿಂತು ಸಾರಿ ನನಗೆ ಇದೆಲ್ಲ ಗೊತ್ತಿಲ್ಲ ಮತ್ತೆ ಪಾರ್ವತಿ ಯಾಕೆ ಇದನ್ನೆಲ್ಲ ಹೇಳಿದರು ನಿನಗೆ ಹೇಗೆ ಬೇಕು ಹಾಗೆ ಇರು ಎಂದು ಹೇಳಿದರು ಎಂದಾಗ ಪ್ರೀತಮ್ ತಾಯಿ ಬಳಿ ಹೇಳುತ್ತಾನೆ. ಅಮ್ಮ ಅತ್ತಿಗೆ ಬಗ್ಗೆ ಅನುಮಾನ ಪಡಬೇಡ ಆಕೆಯನ್ನು ಬೇಕಾದರೆ ಕರೆಸಿಕೊಳ್ಳುತ್ತೇನೆ ಎಂದು ಹೇಳಿದರು ಅಖಿಲ ತಡೆಯುತ್ತಾರೆ. ಬಳಿಕ ಅಖಿಲ ತಲೆ ಪಾರು ಬಗ್ಗೆ ಕೆಟ್ಟ ಯೋಚನೆ ಬರುವಂತೆ ಮಾಡಲು ಮೋನಿಕಾ ಸ್ಕೆಚ್ ಹಾಕಿದ್ದಾರೆ. ಆದರೆ ಅಖಿಲ ಮಾತ್ರ ಅದಾವುದನ್ನು ನಂಬದೆ ಸುಮ್ಮನಾಗುತ್ತಾಳೆ. ಬಳಿಕ ಅಖಿಲ..ಪಾರ್ವತಿ ಸತ್ಯವನ್ನು ಹೇಳಿದ್ದಾಳೆ ಆಕೆ ತಪ್ಪು ಮಾತನಾಡಲು ಸಾಧ್ಯ ಇಲ್ಲ ಎಂದು ಖಡಕ್ ಆಗಿ ಹೇಳುತ್ತಾಳೆ ಇದನ್ನು ಕೇಳಿದ ಮೋನಿಕಾ ಮಾತ್ರ ಇಲ್ಲ ಆಂಟಿ ನಿಮ್ಮ ಬಗ್ಗೆ ನನ್ನ ಜೊತೆ ಹೇಳುತ್ತ ಇರುತ್ತಾಳೆ ಎಂದೆಲ್ಲ ಹೇಳಿ ತಲೆಗೆ ಹುಳ ಬಿಡುತ್ತಾರೆ.