ಆತ್ಮಹತ್ಯೆಗೆ ಮುಂದಾದ ಪ್ರೀತು: ಮತ್ತೆ ರಕ್ಷಣೆಗೆ ಬಂದ ಆದಿ-ಪಾರು

By ಪೂರ್ವ

'ಪಾರು' ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ಪ್ರೀತು ಸಾಯುವ ನಿರ್ಧಾರ ತೆಗೆದುಕೊಂಡಿದ್ದಾನೆ. ನನ್ನಿಂದಲೇ ಇಷ್ಟೆಲ್ಲ ಸಮಸ್ಯೆ ಶುರು ಆಗಿರುವುದು ಇದಕ್ಕೆ ನಾನೇ ಪರಿಹಾರ ಕಂಡು ಹುಡುಕಬೇಕು ಎಂದುಕೊಳ್ಳುತ್ತಾನೆ ಪ್ರೀತೂ. ಬಳಿಕ ಸಾಯಲು ನಿರ್ಧಾರ ಮಾಡುತ್ತಾನೆ. ಮಹಡಿ ಮೇಲಿನಿಂದ ಇನ್ನೇನು ಕೆಳಗೆ ಹಾರಿ ಸಾಯಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಬಂದ ಪಾರು ಅವನನ್ನು ತಡೆಯುತ್ತಾಳೆ.

ಪಾರುವನ್ನು ನೋಡಿ ಪ್ರೀತೂಗೆ ಶಾಕ್ ಆಗುತ್ತದೆ. ಆ ವೇಳೆ ಕೋಪದಿಂದ ಪಾರು, ಏನು ಮಾಡಲು ಹೊರಟಿದ್ದೀರಿ ನೀವು. ನಿಮಗೆ ಏನಾಗಿದೆ? ಹೋದ ಜೀವ ವಾಪಸ್ ಮತ್ತೆ ಬರುತ್ತಾ? ನಿಮ್ಮನ್ನು ನಂಬಿಕೊಂಡು ಇಲ್ಲಿ ಎಷ್ಟು ಜೀವಗಳು ಇವೆ ಎಂದು ನಿಮಗೆ ಗೊತ್ತಿಲ್ವಾ ಎಂದಾಗ ಪ್ರೀತೂ ಹೇಳುತ್ತಾನೆ, ನನ್ನಿಂದ ತಪ್ಪಾಗಿದೆ ಅತ್ತಿಗೆ. ಇಷ್ಟೆಲ್ಲ ಆಗುತ್ತಿರುವುದು ಸಾಲದಾ ಅತ್ತಿಗೆ ಇನ್ನೆತಕ್ಕೆ ನಾನು ಬದುಕಬೇಕು. ಎಂದಾಗ ಪಾರು ಹೇಳುತ್ತಾಳೆ ಆಗಿರುವ ತಪ್ಪನ್ನು ಸರಿಪಡಿಸಲು ನೋಡಬೇಕು ಮತ್ತೆ ಮತ್ತೆ ಅದೇ ತಪ್ಪು ಮಾಡಬಾರದು. ಅಷ್ಟಕ್ಕೂ ನೀವು ಅಮ್ಮನ ಮೇಲೆ ಯಾಕೆ ಕಂಪ್ಲೇಂಟ್ ಕೊಟ್ಟಿದ್ದು ಎಂದಾಗ ಕಾರಣ ಹೇಳಲಾಗದೆ ಪ್ರೀತೂ ಸುಮ್ಮನಾಗುತ್ತಾನೆ.

ಬಳಿಕ ಪಾರು ಮಾತು ಮುಂದುವರಿಸಿ, ''ಯಜಮಾನರ ಬಳಿ ಮಾತನಾಡಿ ನಿಮ್ಮ ಕಷ್ಟವನ್ನು ಯಜಮಾನರು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ನೀವು ಬೈಕ್‌ನಲ್ಲಿ ಹೋಗಬೇಕಾದರೆ ನಾನು ಪ್ರೀತೂ ಹಿಂದೆ ಹೋಗುತ್ತೇನೆ ಎಂದು ಹೇಳುತ್ತಾ ಇದ್ದರೂ. ಅದಾದ ಮೇಲೆ ಅವರಿಗೆ ಗುಂಡೇಟು ಬಿದ್ದಿದೆ. ಆಮೇಲೆ ನೀವು ಮನೆಗೆ ಬಂದು ಬಿಟ್ಟೆ. ಹೀಗೆ ಎಲ್ಲ ವಿವರವಾಗಿ ಹೇಳುತ್ತಾಳೆ. ಬಳಿಕ ಕೈ ಮುಗಿದು ಯಾರು ಆದಿಗೆ ಗುಂಡು ಹೊಡೆದಿದ್ದು ಹೇಳಿ ಎಂದು ಕೇಳುತ್ತಾಳೆ ಪಾರು, ಆ ವೇಳೆ ಅಲ್ಲಿಗೆ ಬಂದ ಜನನಿಗೆ ಪ್ರೀತೂ ಮೇಲೆ ಇನ್ನೂ ಕೋಪ ಉಕ್ಕಿ ಬರುತ್ತದೆ.

ಪ್ರೀತೂ ಬಳಿ ಮನವಿ ಮಾಡುವ ಪಾರು

ಪ್ರೀತೂ ಬಳಿ ಮನವಿ ಮಾಡುವ ಪಾರು

ಬಳಿಕ ಪಾರು ಮಾತು ಮುಂದುವರೆಸಿ, ಈಗ ನೀವು ಹೇಳುವ ಸತ್ಯ ನಿಮ್ಮ ಅಮ್ಮನನ್ನು ರಕ್ಷಣೆ ಮಾಡುತ್ತದೆ. ಅರಸನ ಕೋಟೆ ಮರ್ಯಾದೆ ಕೂಡ ಉಳಿಯುತ್ತದೆ ಎಂದು ಪರಿ ಪರಿಯಾಗಿ ಹೇಳುತ್ತಾಳೆ. ಈ ವೇಳೆ ಪ್ರೀತೂ ಮನದಲ್ಲಿ ನಡೆದಿರುವ ಸತ್ಯವನ್ನು ಹೇಳಿಬಿಡಬೇಕು ಅಲ್ಲದೆ ಯಾಮಿನಿ ಚಿಕ್ಕಮ್ಮ ಇಲ್ಲಿ ಎಲ್ಲಿಯೂ ಇಲ್ಲ. ಹಾಗಾಗಿ ನಾನು ನಿಜ ವಿಚಾರ ಹೇಳಿದರೆ ರಾಣಾಗೂ ಗೊತ್ತಾಗಲ್ಲ. ಅತ್ತಿಗೆ ನನ್ನ ಅರ್ಥ ಮಾಡಿಕೊಂಡು ಎಲ್ಲದನ್ನೂ ನಿಭಾಯಿಸುತ್ತಾರೆ ಎಂದುಕೊಳ್ಳುತ್ತಾನೆ.

ಪ್ರೀತೂಗೆ ಪ್ರಶ್ನೆಗಳ ಮೇಲೆ ಪ್ರಶ್ನೆ

ಪ್ರೀತೂಗೆ ಪ್ರಶ್ನೆಗಳ ಮೇಲೆ ಪ್ರಶ್ನೆ

ಬಳಿಕ ಯೋಚನೆ ಮಾಡಿದ ಪ್ರೀತೂ ಇದೀಗ ಮೋನಿಕಾ ವಿಚಾರವನ್ನು ಪ್ರಸ್ತಾಪ ಮಾಡಿದರೆ ಅತ್ತಿಗೆ ಅರ್ಥ ಮಾಡಿಕೊಳ್ಳುತ್ತಾರೆ ಆದರೆ ಜನನಿ ಮಾತ್ರ ನನ್ನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಂದುಕೊಳ್ಳುತ್ತಾನೆ. ಈ ವೇಳೆ ಕೆರಳಿದ ಪಾರು, ಏನು ಯೋಚನೆ ಮಾಡುತ್ತಾ ಇದ್ದೀರಿ. ಏನು ನಡೆಯಿತು ಎಂಬುವುದನ್ನಾದರೂ ಹೇಳಿ ಎಂದು ಪದೇ-ಪದೇ ಹೇಳುತ್ತಾಳೆ. ಬಳಿಕ ಪ್ರೀತೂ ಎಲ್ಲಾ ವಿಚಾರ ಹೇಳಬೇಕು ಎಂದುಕೊಂಡಾಗ ಅಲ್ಲಿಗೆ ಬಂದ ಆದಿ ಅದನ್ನು ತಡೆಯುತ್ತಾನೆ. ಪಾರು ಎಂದು ಕರೆಯುತ್ತಾನೆ. ಬಳಿಕ ಪ್ರೀತೂ ಬಳಿ ಕಣ್ಣು ಸನ್ನೆ ಮಾಡುತ್ತಾನೆ.

ಪ್ರೀತೂವನ್ನು ರಕ್ಷಿಸಿದ ಆದಿ

ಪ್ರೀತೂವನ್ನು ರಕ್ಷಿಸಿದ ಆದಿ

ಬಳಿಕ ಪಾರುವನ್ನು ನೋಡಿದ ಆದಿ ಹೇಳುತ್ತಾನೆ ಏನು ಹೀಗೆಲ್ಲ ಪ್ರಶ್ನೆ ಮಾಡುತ್ತಾ ಇದ್ದೀಯಾ ನಿನಗೆ ಅಷ್ಟು ತಿಳಿಯುವುದಿಲ್ವಾ. ಪಾರು, ಪ್ಲೀಸ್ ಪ್ರೀತೂಗೆ ಬಲವಂತ ಮಾಡಬೇಡ ಎಂದಾಗ ಜನನಿ ಅಡ್ಡ ಬಾಯಿ ಹಾಕುತ್ತಾಳೆ. ಬಾವ ಅತ್ತೆ ಅರೆಸ್ಟ್ ಆಗೋದಕ್ಕೆ ಪ್ರೀತೂ ಕಾರಣ. ಯಾಕೆ ಕಂಪ್ಲೇಂಟ್ ಕೊಟ್ಟಿದ್ದು ಎಂದು ಕೇಳುತ್ತಾ ಇರುವುದು ಅಷ್ಟೆ. ನೀವೇ ಕೇಳಿ ಬಾವ ಬಾಯಿ ಬಿಡಲಿ. ಇವನು ಕೊಟ್ಟ ಕಂಪ್ಲೇಂಟ್ ವಾಪಸ್ ತೆಗೆದುಕೊಂಡರೆ ಅತ್ತೆ ರಿಲೀಸ್ ಆಗುತ್ತಾರೆ ಅಲ್ವಾ ಎಂದು ಹೇಳುತ್ತಾಳೆ. ಅದಕ್ಕೆ ಆದಿ ಆಯ್ತು ನಾನು ಮಾತನಾಡುತ್ತೇನೆ ಸ್ವಲ್ಪ ನೀವು ಸುಮ್ಮನಿರಿ ಎಂದು ಪ್ರೀತೂವನ್ನು ಕರೆದುಕೊಂಡು ಅಲ್ಲಿಂದ ಹೋಗುತ್ತಾನೆ.

ರಘು ಬಳಿ ನಿಜ ಹೇಳದ ಆದಿ

ರಘು ಬಳಿ ನಿಜ ಹೇಳದ ಆದಿ

ಇದನ್ನು ನೋಡಿದ ಪಾರು, ಜನನಿ ಮುಖ ಮುಖ ನೋಡುತ್ತಾರೆ. ಆದಿ ಬಳಿ ರಘು ಕೇಳುತ್ತಾರೆ, ನಿನ್ನ ಶೂಟ್ ಮಾಡಿದವರು ಯಾರು ಎಂದು ನಿನಗೆ ಗೊತ್ತಿದೆ ಅಲ್ವಾ ದಯಮಾಡಿ ಹೇಳಿಕೊ ಎಂದಾಗ ಆದಿ ಮಾತ್ರ ಏನೂ ಉತ್ತರಿಸದೆ ಕ್ಷಮಿಸಿ ದಯವಿಟ್ಟು ನನ್ನ ಅದರ ಬಗ್ಗೆ ಮಾತನಾಡುವುದು ಬೇಡ ಎಂದು ಹೇಳುತ್ತಾನೆ. ಆದರೆ ರಘು ಮಾತ್ರ ಅದನ್ನು ಬಿಡಲು ಸಾಧ್ಯನೇ ಇಲ್ಲ ಎಂದು ರಘು ಪಟ್ಟು ಹಿಡಿಯುತ್ತಾನೆ ಆದರೆ ಆದಿ ಮಾತ್ರ ಸುಮ್ಮನಿರುತ್ತಾರೆ ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Paaru written updated on 26th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X