ಮಗನ ಸಂತೋಷಕ್ಕಾಗಿ ಅಮ್ಮನ ತ್ಯಾಗ ಹೆಂಡತಿ ಬಗ್ಗೆ ಹೆಮ್ಮೆ ಪಟ್ಟ ರಘು
ಮಗನ ಸಂತಸಕ್ಕೋಸ್ಕರ ಎಂತಹ ತ್ಯಾಗಕ್ಕೂ ಸಿದ್ಧ ಅಖಿಲಾಂಡೇಶ್ವರಿ. ಇದೀಗ ಆದಿ ಜೊತೆ ಅಖಿಲಾಂಡೇಶ್ವರಿ ನಡೆದುಕೊಂಡ ರೀತಿಗೆ ರಘು ಬೇಸರಗೊಂಡಿದ್ದಾನೆ. ಈ ವಿಚಾರವನ್ನು ಆದಿ ಬಳಿ ಹೇಳಲೆ ಬೇಕು ಎಂದು ಅಂದುಕೊಳ್ಳುತ್ತಾರೆ ಆದರೆ ಅಖಿಲಾಂಡೇಶ್ವರಿ ಎಲ್ಲದಕ್ಕೂ ತಡೆಯುತ್ತಾಳೆ. ಆದಿ ಈಗ ತನ್ನ ಹೆಂಡತಿ ಪರವಾಗಿ ಮನದಾಳದಿಂದ ಮಾತನಾಡುತ್ತಿದ್ದಾನೆ. ಆದಿಯದ್ದು ಸಂಕೋಚದ ಮನಸು ಆದರೆ ಈಗ ಎಲ್ಲಾ ವಿಚಾರಗಳನ್ನು ನಿಸ್ಸಂಕೋಚವಾಗಿ ಹೇಳುತ್ತಿದ್ದಾನೆ ತನ್ನ ಹೆಂಡತಿಗಾಗಿ ಆದಿ ಹೋರಾಡುತ್ತಿರುವುದನ್ನು ನೋಡಿ ಖುಷಿ ಪಡುತ್ತಿದ್ದಾರೆ ಅಖಿಲಾಂಡೇಶ್ವರಿ.
ಯಾವುದೇ ವಿಚಾರವನ್ನು ಯಾರ ಬಳಿಯೂ ಹೇಳಬಾರದು ಎಂದು ಅಖಿಲಾಂಡೇಶ್ವರಿ ರಘು ಬಳಿ ಮಾತು ತೆಗೆದುಕೊಳ್ಳುತ್ತಾಳೆ. ''ಕಣ್ಣಿನ ಹುಡುಗಿಯನ್ನು ಅದೆಷ್ಟು ಪ್ರೀತಿ ಮಾಡುತ್ತಿದ್ದ ಆದಿ. ಆಕೆಯನ್ನು ಅದೆಷ್ಟು ಬಾರಿ ಹುಡುಕಿದ್ದಾನೆ. ಕೊನೆಗೂ ಆಕೆ ಸಿಕ್ಕಳು ಆಕೆ ಯಾರು ಅಲ್ಲ ಪಾರು ಎಂದು ಗೊತ್ತಾದಾಗ ಆದಿಗೆ ಖುಷಿ ಆದರೂ ಯಾರ ಬಳಿಯೂ ಪಾರುವೆ ನನ್ನ ಕಣ್ಣಿನ ಹುಡುಗಿ ಎಂದು ಹೇಳಲೇ ಇಲ್ಲ. ಕೊನೆಗೆ ಮದುವೆ ಗೊತ್ತಾದರೂ ಈ ವಿಚಾರ ಬಾಯಿ ಬಿಡಲಿಲ್ಲ ಎಂದು ಹಳೆಯ ನೆನಪುಗಳಿಗೆ ಜಾರುತ್ತಾಳೆ ಅಖಿಲಾ.

ಹಳೆಯ ನೆನಪುಗಳಿಗೆ ಜಾರಿದ ಅಖಿಲಾ
ಕೊನೆ ಘಳಿಗೆಯಲಿ ಶತ್ರುಗಳ ಪಾಲಾಗುತ್ತಿದ್ದಾನೆ ಆದಿ ಎಂದು ಗೊತ್ತಾದಾಗ ಪಾರು ಆದಿನೇ ನನ್ನ ಗಂಡ. ಆತ ತಾಳಿ ಕಟ್ಟಿದ್ದಾನೆ ಎಂದು ಹೇಳಿದಾಗ ಆ ಕ್ಷಣ ನನಗೆ ಅವಮಾನವಾಗುತ್ತದೆ. ಅದರಿಂದ ನಾನು ಅವರನ್ನು ದೂರ ಮಾಡುತ್ತಾ ಬಂದೆ. ಆದರೆ ಇದರಲ್ಲಿ ಪಾರುವದ್ದು ಏನು ತಪ್ಪೇ ಇರಲಿಲ್ಲ. ಆದರೆ ಆಕೆಗೆ ಬಹಳ ನೋವು ಕೊಟ್ಟೆ ಎಂದು ಬೇಸರ ಪಟ್ಟೂಕೊಳ್ಳುತ್ತಾರೆ ಅಖಿಲ. ಇನ್ನೂ ಹೆಂಡತಿ ಬಗ್ಗೆ ರಘು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ತಾಯಿ ಅಂದರೆ ಹಾಗೆಯೇ ತ್ಯಾಗ ಮಯಿ ಎಂದು ಹೇಳುತ್ತಾರೆ.

ಪ್ರೀತುವನ್ನು ತಬ್ಬಿಕೊಂಡ ಆದಿ
ಇನ್ನು ಆದಿ ಹಾಗೂ ಪ್ರೀತು ಎದುರು ಬದುರಾಗಿ ಸಿಕ್ಕಾಗ ಅಣ್ಣನನ್ನು ಕಂಡು ಪ್ರೀತು ತಬ್ಬಿಕೊಳ್ಳುತ್ತಾನೆ. ಬಳಿಕ ಹೇಳುತ್ತಾನೆ ನಿನಗೆ ಆಫೀಸಿನ ಕೆಲಸಗಳು ಬಹಳ ಕಿರಿಕಿರಿ ಆಗುತ್ತಿತ್ತು ಎಂದು ಅನ್ನಿಸುತ್ತದೆ. ಅದಕ್ಕಾಗಿ ಅಮ್ಮ ನನ್ನನ್ನು ಸಿಇಓ ಸ್ಥಾನದಲ್ಲಿ ಮುಂದುವರಿಯಲು ಹೇಳಿದ್ದಾರೆ ಎಂದು ಹೇಳುತ್ತಾನೆ ಬಳಿಕ ಪ್ರೀತು ಅಣ್ಣನಿಗೆ ಅಲ್ ದಿ ಬೆಸ್ಟ್ ಹೇಳಿ ತೆರಳುತ್ತಾನೆ. ಅಖಿಲಾಂಡೇಶ್ವರಿಗೆ ಯಾಮಿನಿ ಸಿಗುತ್ತಾಳೆ, ಅಖಿಲಾಂಡೇಶ್ವರಿಯನ್ನು ನೋಡಿದ ಯಾಮಿನಿ ಥರ ಥರ ನಡುಗುತ್ತಾಳೆ.

ಅಖಿಲಳನ್ನು ನೋಡಿ ನಡುಗಿದ ಯಾಮಿನಿ
ಯಾಮಿನಿಯನ್ನೂ ನೋಡಿದ ಕೂಡಲೇ ಅಖಿಲಾಂಡೇಶ್ವರಿ ಮೊಗದಲ್ಲಿ ನಗು ಮೂಡುತ್ತದೆ ಶಹಬ್ಬಾಸ್ ಯಾಮಿನಿ ಎಂದು ಹೇಳುತ್ತಾಳೆ. ಬಳಿಕ, ಯಾರು ಮಾಡದ ಒಳ್ಳೆಯ ಕೆಲಸವನ್ನು ನೀನು ಮಾಡಿದೆ. ಆದಿಗೆ ಈ ವಿಚಾರ ಹೇಳಿ, ಒಳ್ಳೆ ಕೆಲಸ ಮಾಡಿದೆ. ಇಲ್ಲವಾದರೆ ಇದೀಗ ಇಷ್ಟೆಲ್ಲ ನಡೆಯಲು ಸಾಧ್ಯ ಆಗುತ್ತಿರಲಿಲ್ಲ ಎಂದು ಹೇಳುತ್ತಾರೆ. ಖುಷಿಯಿಂದ ಮಾತನಾಡುತ್ತಾರೆ. ಇದನ್ನು ನೋಡಿದ ಅರುಂಧತಿ ಹಾಗೂ ರಾಣಾಗೆ ಗೊಂದಲವಾಗುತ್ತದೆ. ಯಾಕಾಗಿ ಅಖಿಲಾಂಡೇಶ್ವರಿ ಇಷ್ಟೊಂದು ಖುಷಿಯಲ್ಲಿ ಇದ್ದಾಳೆ ಏನಾಗಿದೆ ಅವಳಿಗೆ ಅವಳ ತಲೆಯಲ್ಲಿ ಬೇರೆ ಇನ್ನೇನಾದರೂ ಇರಬಹುದ ಹೀಗೆ ಹಲವಾರು ಬಾರಿ ಯೋಚನೆ ಮಾಡುತ್ತಾಳೆ.

ಅಪ್ಪ ಅಮ್ಮನ ಆಶಿರ್ವಾದ ಪಡೆದುಕೊಂಡ ಆದಿ
ಇನ್ನೂ ಆಫೀಸಿಗೆ ಹೋಗಲು ರೆಡಿ ಆಗುತ್ತಾನೆ ಆದಿ ಮಹಡಿ ಮೇಲಿಂದ ಇಳಿದು ಬಂದವನೇ ತನ್ನ ಮುದ್ದಿನ ಮಡದಿಯನ್ನು ಧ್ವನಿ ಏರಿಸಿ ಕರೆಯುತ್ತಾನೆ. ಬಳಿಕ ಇವತ್ತು ನಾನು ಆಫೀಸಿಗೆ ತೆರಳುತ್ತಿರುವುದರಿಂದ ಅಮ್ಮ ಅಪ್ಪನ ಆಶಿರ್ವಾದ ತೆಗೆದುಕೊಳ್ಳಬೇಕು ಎಂದೆಲ್ಲ ಹೇಳಿ ಇಬ್ಬರು ಆಶಿರ್ವಾದ ತೆಗೆದುಕೊಳ್ಳುತ್ತಾರೆ. ಇದನ್ನು ನೋಡಿದ ಪ್ರೀತು ಖುಷಿ ಪಡುತ್ತಾನೆ ಬಳಿಕ ಪಾರು ಬಳಿ ಹೇಳುತ್ತಾನೆ ಇವತ್ತು ಶ್ಯಾವಿಗೆ ಪಾಯಸ ಮಾಡಿ ಕಳುಹಿಸು ಮಧ್ಯಾಹ್ನ ಆಫೀಸಿಗೆ ಎಂದು ಹೇಳುತ್ತಾರೆ ಬಳಿಕ ಆಫೀಸಿಗೆ ತೆರಳುತ್ತಾನೆ. ಇದನ್ನೆಲ್ಲ ಕಂಡ ರಘುಗೆ ಬೇಸರ ಆದರೂ ಅಖಿಲಾಂಡೇಶ್ವರಿ ಮಾತ್ರ ಖುಷಿಯಿಂದ ಇರುತ್ತಾಳೆ.


Click it and Unblock the Notifications











