ಅಮ್ಮನ ಮೇಲೆ ಕೊಟ್ಟ ದೂರು ವಾಪಸ್ ಪಡೆಯುತ್ತಾನ ಪ್ರೀತೂ?
ಆದಿ, ಪ್ರೀತೂಗೆ ಊಟ ತಿನ್ನಿಸುತ್ತಿರುತ್ತಾನೆ. ಪ್ರೀತೂ, ಮನದಲ್ಲಿ ಅಂದುಕೊಳ್ಳುತ್ತಾನೆ ಶೂಟ್ ಮಾಡಿದ್ದು ನಾನೇ ಎಂದು ಗೊತ್ತಿದ್ದರೂ ಕೂಡ ಅಣ್ಣ ಎಷ್ಟು ಕಾಳಜಿ ಮಾಡುತ್ತಾನೆ ಎಂದು. ಆದರೆ ನಾನು ಅವರಿಗೆಲ್ಲ ಮೋಸ ಮಾಡಿ ಬಿಟ್ಟೆನಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತಾನೆ. ಬಳಿಕ ಆದಿ, ಪ್ರೀತೂ ಬಳಿ ಅಮ್ಮನ ಮೇಲೆ ಯಾಕೆ ಕಂಪ್ಲೇಂಟ್ ಕೊಟ್ಟೆ ಎಂದು ಕೇಳಿದಾಗ ಪ್ರೀತೂಗೆ ದುಃಖ ಉಮ್ಮಳಿಸಿ ಬರುತ್ತದೆ.
ಅಣ್ಣ, ನಾನು ಅಮ್ಮನ ಬಗ್ಗೆ ಕಂಪ್ಲೇಂಟ್ ಕೊಟ್ಟಿದ್ದಲ್ಲ. ನಾನು ನನ್ನ ಬಗ್ಗೆ ಕಂಪ್ಲೇಂಟ್ ಕೊಟ್ಟಿದ್ದು ಎಂದು ಹೇಳುತ್ತಾನೆ. ನಾನು ನಿನಗೆ ಶೂಟ್ ಮಾಡಿರುವ ವಿಚಾರ ಕೂಡ ಬರೆದಿದ್ದೆ ಆದರೆ ಮೋಸ ಮಾಡಿಬಿಟ್ಟರು ಎಂದು ನೊಂದುಕೊಳ್ಳುತ್ತಾನೆ. ಅದಕ್ಕೆ ಆದಿ, ಯಾರು ಮೋಸ ಮಾಡಿದ್ದು ನಿನಗೆ ಎಂದು ಕೇಳುತ್ತಾನೆ. ಆ ವೇಳೆ ಸೋಫಾದಲ್ಲಿ ಬಂದು ಯಾಮಿನಿ ಕುಳಿತುಕೊಳ್ಳುತ್ತಾರೆ. ಚಿಕ್ಕಮ್ಮನನ್ನು ನೋಡಿ ಪ್ರೀತೂ ನಿಜ ಹೇಳಲು ಆಗದೆ ತಲೆ ತಗ್ಗಿಸುತ್ತಾನೆ ಬಳಿಕ ಮನದಲ್ಲಿ ಅರುಂಧತಿ ಹೇಳಿದ ಮಾತನ್ನು ಯೋಚನೆ ಮಾಡುತ್ತಾನೆ.
ಯಾಮಿನಿ ನಮ್ಮ ಕ್ಯಾಮರಾ ಎಂದು ನಿಮಗೆ ಗೊತ್ತಾಯಿತು ಅಲ್ವಾ ಎಂದು ಅರುಂಧತಿ ಮಾತು ಪ್ರೀತೂ ಗಮನದಲ್ಲಿ ಇತ್ತು. ಇನ್ನು, ಪ್ರೀತೂವನ್ನು ನೋಡಿದ ಆದಿ ಯೋಚನೆ ಮಾಡುತ್ತಾನೆ, ನಿಜ ಹೇಳುತ್ತ ಇದ್ದ ಪ್ರೀತೂ ಒಮ್ಮಿಂದೊಮ್ಮೆಲೆ ಮೌನ ವಹಿಸಿ ಇರುವುದನ್ನು ನೋಡಿ ಹಿಂದೆ ತಿರುಗಿ ನೋಡುತ್ತಾನೆ. ಅಲ್ಲಿ ಯಾಮಿನಿಯನ್ನೂ ನೋಡಿ ಚಿಕ್ಕಮ್ಮ ಬಂದರೆ ನಿಜ ಹೇಳಲು ಯಾಕೆ ಹಿಂದೇಟು ಹಾಕುತ್ತಿದ್ದಾನೆ ಎಂದು ಯೋಚನೆ ಮಾಡುತ್ತಾನೆ.

ಪತ್ನಿಯನ್ನು ಬಿಡಿಸಿಕೊಂಡು ಪ್ರಯತ್ನದಲ್ಲಿ ರಘು
ಇನ್ನು ರಘು ಮಾತ್ರ ತನ್ನ ಹೆಂಡತಿಯನ್ನು ಹೇಗೆ ಬಿಡುಗಡೆ ಮಾಡುವುದು? ಎಲ್ಲ ಸಾಕ್ಷಿ ಆಕೆಯ ಪರವಾಗಿಯೇ ಇದೆ. ಏನು ಮಾಡುವುದು ಎಂದು ಯೋಚನೆ ಮಾಡುತ್ತಾನೆ. ಬಳಿಕ ಮನೆಯವರ ಬಳಿ ಬಂದು ಏನು ಮಾಡುವುದು ಎಲ್ಲಾ ಸಾಕ್ಷಿ ನಿಮ್ಮ ಅಮ್ಮನ ವಿರುದ್ಧವೇ ಇದೆ ಇದರಿಂದಾಗಿ ಯಾವ ವಕೀಲ ಕೂಡ ಕೇಸ್ ತೆಗೆದುಕೊಳ್ಳುತ್ತಿಲ್ಲ. ತುಂಬಾ ಬೇಸರ ಆಗುತ್ತಿದೆ. ಕೆಲವೊಮ್ಮೆ ಸಾಕ್ಷಿಗಳು ಸತ್ಯದ ಬೆಳಕನ್ನು ಮುಚ್ಚಿ ಹಾಕಿ ಬಿಡುತ್ತವೆ ಎಂದು ಹೇಳುತ್ತಾನೆ.

ಪ್ರೀತೂವನ್ನು ನೋಡಿ ಹಲ್ಲು ಮಸೆದ ರಘು
ಬಳಿಕ ಪ್ರೀತೂವನ್ನು ನೋಡಿದ ರಘು ಹೇಳುತ್ತಾರೆ, ಒಂದೇ ಒಂದು ಕಂಪ್ಲೇಂಟ್‌ನಿಂದಾಗಿ ಅರಸನ ಕೋಟೆಯ ನೆಮ್ಮದಿ ಹಾಳಾಗಿ ಹೋಯಿತು. ಅನ್ಯಾಯವಾಗಿ ಈ ಮನೆ ಒಡತಿ ಪೊಲೀಸರ ಅತಿಥಿ ಆಗೋ ಹಾಗೆ ಆಯಿತು. ಅಖಿಲಾ ಘನತೆಗೆ ಕಪ್ಪು ಚುಕ್ಕಿ ಬೀಳುವ ಹಾಗೆ ಆಯಿತು. ಎಲ್ಲಾ ಆಗಿದ್ದು ಆ ಒಂದು ಕಂಪ್ಲೇಂಟ್ ನಿಂದ ಎಂದು ಹೇಳಿದಾಗ ಪ್ರೀತೂಗೆ ಬೇಸರ ಆಗುತ್ತದೆ. ಪ್ರೀತೂ ಮನದಲ್ಲಿ, ನನ್ನಿಂದಲೇ ಎಲ್ಲಾ ಆಗಿದ್ದು ನಾನು ಹೋಗಿ ಕಂಪ್ಲೇಂಟ್ ವಾಪಸ್ ತೆಗೆದುಕೊಂಡರೆ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳುತ್ತ ಯಾಮಿನಿಯನ್ನು ಪ್ರೀತೂ ದುರುಗುಟ್ಟಿ ನೋಡುತ್ತಾನೆ.

ಪ್ರೀತೂ ಹಾದಿಗೆ ರಾಣಾ ಅಡ್ಡ
ಈ ವೇಳೆ ಪ್ರೀತೂ ವನ್ನು ನೋಡಿದ ಆದಿ ಈ ಪ್ರೀತೂ ಚಿಕ್ಕಮ್ಮನನ್ನು ಯಾಕೆ ದುರುಗುಟ್ಟಿ ನೋಡುತ್ತಾ ಇದ್ದಾನೆ. ಎಂದು ಯೋಚನೆ ಮಾಡುತ್ತಾನೆ. ಬಳಿಕ ಪ್ರೀತೂ ಮನೆಯಿಂದ ಹೊರ ಹೋಗುತ್ತಾನೆ. ಇನ್ನು ಪ್ರೀತೂ ಪೊಲೀಸ್ ಸ್ಟೇಶನ್‌ಗೆ ಹೋಗಲು ರೆಡಿ ಆಗುತ್ತಾನೆ. ಬೈಕ್ ಹತ್ತಿ ಬಹಳ ವೇಗವಾಗಿ ಹೋಗುತ್ತಾನೆ. ಆದರೆ ದಾರಿ ಮಧ್ಯೆ ರಾಣಾ ನಿಂತಿರುತ್ತಾನೆ. ರಾಣಾನನ್ನು ನೋಡಿ ಪ್ರೀತೂ ಬೈಕ್ ನಿಲ್ಲಿಸುತ್ತಾನೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











