Don't Miss!
- News
ಫಿಲೀಪ್ಸ್ನಿಂದ 6000 ಉದ್ಯೋಗಿಗಳ ವಜಾ
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೋನಿಕಾ-ಪ್ರೀತಮ್ ಅನ್ನು ಜಂಟಿಯಾಗಿ ನೋಡಿದ ಜನನಿ! ಮುಂದೆ ಏನು?
'ಪಾರು' ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಮೋನಿಕಾ ರೂಮಿಗೆ ಬಂದ ಅಖಿಲಾಂಡೇಶ್ವರಿ ಬಹಳ ಸಿಟ್ಟಿನಲ್ಲಿದ್ದಾಳೆ. 'ಮೋನಿಕಾ ನೀನು ಮಾಡುತ್ತಿರುವುದು ಸರಿ ಇಲ್ಲ. ನೀನು ಏನೋ ಕೆಲಸ ಮಾಡಲು ಬಂದಿದ್ದೀಯಾ ಅದ್ಯಾವುದೂ ಸರಿ ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮೋನಿಕಾಗೆ ಶಾಕ್ ಆಗುತ್ತದೆ. ಅಖಿಲಾಂಡೇಶ್ವರಿ ಮುಂದೇನೆ ಸಿಕ್ಕಿ ಬಿದ್ದೆನಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.
ಆದಿ ಹಾಗೂ ಪಾರು ಗುಟ್ಟಾಗಿ ಮಾತನಾಡುತ್ತಾ ಇರುವ ವೇಳೆ ಅಲ್ಲಿಗೆ ಬಂದ ಜನನಿಯನ್ನು ನೋಡಿ ಪಾರು ಕಕ್ಕಾ ಬಿಕ್ಕಿ ಆಗಿದ್ದಾಳೆ. ಇದೀಗ ಜನನಿಗೆ ಎಲ್ಲಾ ನಿಜ ವಿಚಾರ ಹೇಳಿದರೆ ಆಕೆ ಪ್ರೀತಮ್ ಅನ್ನು ತಪ್ಪಾಗಿ ತಿಳಿದುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಈ ವೇಳೆ ಪಾರು ಜನನಿಯ ಬಳಿ, 'ಜನನಿ ಅವರೇ ನೀವು ಎಷ್ಟು ಹೊತ್ತಿಗೆ ಬಂದಿದ್ದು ಎಂದಾಗ ಜನನಿ ಪಾರು ಹೇಳಿದ ವಿಚಾರವನ್ನೇ ಪ್ರಸ್ತಾಪ ಮಾಡುತ್ತಾಳೆ ಇದನ್ನು ಕೇಳಿದ ಪಾರು ಗಲಿಬಿಲಿಗೊಳ್ಳುತ್ತಾಳೆ. ಬಳಿಕ ಜನನಿ, 'ಪಾರ್ವತಿ ಅವರೇ ನೀವು ನನ್ನಿಂದ ಏನೋ ವಿಚಾರ ಮುಚ್ಚಿಡುತ್ತಾ ಇದ್ದೀರಾ ಎಂದು ಕೇಳಿದಾಗ ಆದಿಗೆ ಜನನಿ ಬಳಿ ನಿಜ ವಿಚಾರ ಹೇಳಿ ಬಿಡಬೇಕು ಅನ್ನಿಸಿದರೂ ಪಾರು ಮಾತ್ರ ಏನೂ ಹೇಳದೆ ಸುಮ್ಮನಾಗುತ್ತಾಳೆ.

ಮೋನಿಕಾಳನ್ನು ತಡೆದ ಪಾರು
ಇದನ್ನು ನೋಡಿದ ಆದಿ ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನಾಗುತ್ತಾನೆ. ಇನ್ನು ಪ್ರೀತಮ್ ತನ್ನ ರೂಮಿಗೆ ಬಂದಾಗ ಅಲ್ಲಿ ಮೋನಿಕಾಳನ್ನು ಕಂಡು ಶಾಕ್ ಆಗುತ್ತಾನೆ. ಏನು ಮೋನಿಕಾ ಎಂದು ಕೇಳಿದಾಗ ಆಕೆಯ ಧ್ವನಿಯಲ್ಲಿ ಏನೋ ಮೋಡಿ ಮಾಡುವವರ ಹಾಗೆ ಮಾತನಾಡುತ್ತಾಳೆ. ಕೊನೆಗೆ ಪ್ರೀತಮ್ ಏನೆಂದು ಖಡಕ್ ಆಗಿ ಕೇಳುತ್ತಾನೆ ಇದನ್ನು ಕೇಳಿದ ಮೋನಿಕಾ, 'ನಾನು ಇಂದು ನಿನ್ನ ಮನೆಯಿಂದ ಹೊರಡಬೇಕು ಎಂದು ಎಂದುಕೊಂಡಿದ್ದೆ ಆದರೆ ನಿನ್ನ ಅತ್ತಿಗೆ ನನ್ನನ್ನು ಹೋಗಲು ಬಿಡಲೇ ಇಲ್ಲ. ನನ್ನನ್ನು ತಡೆದು ಬಿಟ್ಟಳು ಪ್ಲೀಸ್ ನೀನು ಆದರೂ ನನ್ನನ್ನ ಹೋಗಲು ಬಿಡುವಂತೆ ಹೇಳು ಎಂದು ಹೇಳುತ್ತಾಳೆ.

ಮೋನಿಕಾಳನ್ನು ಕಳುಹಿಸಿಕೊಡುವಂತೆ ಒತ್ತಾಯಿಸಿದ ಪ್ರೀತಮ್
ಇದನ್ನು ಕೇಳಿದ ಪ್ರೀತಮ್ ನೇರವಾಗಿ ಆದಿ-ಪಾರು ಇರುವ ರೂಮ್ ಬಳಿ ಹೋಗುತ್ತಾನೆ. 'ಅತ್ತಿಗೆ-ಅಣ್ಣ ನೀವು ಏಕೆ ಮೋನಿಕಾಳನ್ನು ತದೆದಿದ್ದು ಆಕೆಯನ್ನು ಹೋಗಲು ಬಿಡಬೇಕಿತ್ತು ಯಾಕೆ ಬಿಡಲಿಲ್ಲ. ನನ್ನ ಈ ಬದಲಾವಣೆಗೆ ಆಕೆಯೇ ಕಾರಣ ಆಕೆಯನ್ನು ಮನೆಯಿಂದ ಕಳುಹಿಸುವುದು ಬಿಟ್ಟು ಬೇರೆ ಇನ್ನೇನಿದೆ ಎಂದು ಹೇಳುತ್ತಾನೆ. ಅದನ್ನು ಕೇಳಿದ ಆದಿ-ಪಾರುಗೆ ಶಾಕ್ ಆಗುತ್ತದೆ. ಇದನ್ನು ಕೇಳಿದ ಆದಿ, 'ಇಷ್ಟೆಲ್ಲ ಪ್ರಾಬ್ಲಂ ಇದ್ದರೂ ಈ ರೀತಿ ಬಿಟ್ಟು ಕಳುಹಿಸುವುದು ಒಳ್ಳೆಯದಲ್ಲ ನಾಳೆ ಇದಕ್ಕಿಂತ ದೊಡ್ಡ ಪ್ರಾಬ್ಲಂ ಆಗುತ್ತದೆ. ನಾನು ಇದನ್ನೆಲ್ಲ ಸರಿಪಡಿಸುತ್ತೇನೆ. ಎಂದಾಗ ಪ್ರೀತಮ್ ಮಾತ್ರ ಏನು ಮಾತನಾಡದೆ ಸುಮ್ಮನೆ ಇರುತ್ತಾನೆ.

ಮೋನಿಕಾ ಆಟಕ್ಕೆ ಅಂತ್ಯ ಹಾಡುತ್ತಾನ ರಘು
ಇನ್ನು ಮೋನಿಕಾಳ ಎಲ್ಲಾ ಆಟವನ್ನು ರಘು ನೋಡುತ್ತಾನೆ. ಪ್ರೀತೂ ಜೊತೆ ಸರಸ ಸಲ್ಲಾಪ ಮಾಡುತ್ತಾ ಇರುವುದು ನೋಡಿದ ರಘು, ಅಖಿಲಾ ಬಳಿ ಹೇಳುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇತ್ತ ಪ್ರೀತಮ್ ಬಳಿ ಆದಿ ಅದೆಷ್ಟೇ ನಿಜ ಹೇಳುವಂತೆ ಒತ್ತಾಯ ಮಾಡಿದರು ಅದ್ಯಾವುದನ್ನೂ ಹೇಳದೆ ಅಲ್ಲಿಂದ ಪ್ರೀತಮ್, ಹೊರಟು ಹೋಗುತ್ತಾನೆ.

ಪ್ರೀತಂ-ಮೋನಿಕಾಳನ್ನು ಒಟ್ಟಿಗೆ ಕಂಡ ಜನನಿ
ಇದನ್ನು ನೋಡಿದ ಪಾರು ಆದಿ ಪ್ರೀತಮ್ ಎಲ್ಲಿ ಹೋಗುತ್ತಾ ಇದ್ದಾನೆ ಎಂದು ಯೋಚನೆ ಮಾಡುತ್ತಾ ಇರುವಾಗ ಮೋನಿಕಾ ಕೈ ಹಿಡಿದುಕೊಂಡು ಬರುತ್ತಾಳೆ. ಇದನ್ನು ಜನನಿ ನೋಡುತ್ತಾಳೆ ಬಳಿಕ ಶಾಕ್‌ಗೆ ಒಳಗಾಗುತ್ತಾಳೆ. ಜನನಿಯನ್ನು ನೋಡಿ ಪಾರೂಗೆ ಶಾಕ್ ಆಗುತ್ತದೆ ಜನನಿ ಅವರೇ ನೀವೇನು ಇಲ್ಲಿ ಎಂದು ಕೇಳುತ್ತಾಳೆ. ಜನನಿ ಎಂದು ಕರೆದ ವೇಳೆ ಪ್ರೀತಮ್ ಹಿಂದಿರುಗಿ ನೋಡುತ್ತಾನೆ. ಜನನಿ ನೋಡುತ್ತಾ ಇರುವುದನ್ನು ನೋಡಿ ಪ್ರೀತಮ್ ಗೆ ಶಾಕ್ ಆಗುತ್ತದೆ ಮುಂದೇನು ಕಾದು ನೋಡಬೇಕಿದೆ.