ಯಾಮಿನಿ ಕೊರಳಲ್ಲಿ ಇದ್ದ ಕ್ಯಾಮರಾ ಆದಿಗೆ ಸಿಕ್ಕಿತು!

By ಪೂರ್ವ

ಅಕ್ಕ ಮನೆಯಲ್ಲಿ ಇಲ್ಲ ಎಲ್ಲಾ ಕೆಲಸ ನಾನೇ ನೋಡಿಕೊಳ್ಳಬೇಕು. ನಾನು ಕೆಲಸ ನೋಡಿಕೊಂಡರೆ ಮಾತ್ರ ಈ ಕೆಲಸದವರು ಕೆಲಸ ಮಾಡುವುದು. ಅಕ್ಕ ಇಲ್ಲದ ವೇಳೆ ಎಲ್ಲಾ ಜವಾಬ್ದಾರಿ ನನ್ನದೇ ತಾನೇ ಎಂದುಕೊಂಡು ಯಾಮಿನಿ ಮನೆಯೆಲ್ಲಾ ಓಡಾಡುತ್ತಾ ಇರಬೇಕಾದರೆ ಆಕೆಯ ಕುತ್ತಿಗೆಯಲ್ಲಿ ಇದ್ದ ತಾಯತ ಬಿದ್ದು ಹೋಗುತ್ತದೆ ಇದನ್ನು ನೋಡಿದ ಯಾಮಿನಿ ಅಯ್ಯೋ ಇನ್ನೇನು ಗಂಡಾಂತರ ಕಾದಿದೆಯೋ ಎಂದು ಭಯಗೊಂಡು ತಾಯತ ತೆಗೆದುಕೊಳ್ಳಲು ಹೋದಾಗ ಅಲ್ಲಿಗೆ ಬಂದ ಆದಿ ತಯಾತವನ್ನೂ ತೆಗೆದುಕೊಂಡು ನೋಡುತ್ತಾನೆ. ಆತನಿಗೆ ತಾಯತ ನೋಡಿ ಏನೋ ಡೌಟ್ ಬರುತ್ತದೆ.

ಆ ಬಳಿಕ ಆದಿ ಜೋರಾಗಿ ಯಾಮಿನಿಯಲ್ಲಿ ಕೇಳುತ್ತಾನೆ ಚಿಕ್ಕಮ್ಮ ಇದೇನಿದು ಎಂದು? ಅದಕ್ಕೆ ಯಾಮಿನಿ, ಅದು ನನ್ನ ತಾಯತ ಕಣಪ್ಪ ಎಂದಾಗ ಆದಿ ಕೋಪಿಸಿಕೊಂಡು ಸುಳ್ಳು ಹೇಳಬೇಡಿ ಚಿಕ್ಕಮ್ಮ ಎಂದಾಗ ಯಾಮಿನಿ ತಪ್ಪೇ ಮಾಡದವರ ಹಾಗೆ ನಡೆದುಕೊಂಡು ಅಯ್ಯೋ ನಾನು ಯಾಕೆ ನಿನ್ನ ಬಳಿ ಸುಳ್ಳು ಹೇಳಲಿ, ತಾಯಾತವನ್ನು ತಾಯತ ಅನ್ನದೆ ಇನ್ನೇನು ಹೇಳುತ್ತಾರೆ. ಬೇಕಾದರೆ ಮಾರುಕಟ್ಟೆಗೆ ಹೋಗಿ ಎಲ್ಲರಿಗೂ ತೋರಿಸಿಕೊಂಡು ಬರೋಣ. ಯಾರಾದರೂ ಒಬ್ಬರು ಇದು ತಾಯತ ಅಲ್ಲ ಎಂದು ಹೇಳಿದರೆ ತಿರುಪತಿಗೆ ಹೋಗಿ ಫುಲ್ ಬೊಳು ಮಾಡಿಕೊಂಡು ಬರುತ್ತೇನೆ ಎಂದು ಹೇಳುತ್ತಾಳೆ. ಆದಿ ಅದ್ಯಾವುದನ್ನೂ ಕೇಳದೆ ತನ್ನದೇ ಪ್ರಶ್ನೆ ಕೇಳುತ್ತಾನೆ ಚಿಕ್ಕಮ್ಮ ಇದನ್ನು ನಿಮಗೆ ಕೊಟ್ಟಿದ್ದು ಯಾರು? ಎಂದು ಕೇಳಿದಾಗ ಮಕ್ಕಳ ಹಾಗೆ ಮಾತನಾಡುತ್ತಿದ್ದ ಯಾಮಿನಿ ಮೇಲೆ ರೇಗಿ ಬಿಡುತ್ತಾನೆ.

ಆದಿ ತಾಳ್ಮೆ ಪರೀಕ್ಷೆ ಮಾಡಿದ ಯಾಮಿನಿ

ಆದಿ ತಾಳ್ಮೆ ಪರೀಕ್ಷೆ ಮಾಡಿದ ಯಾಮಿನಿ

ಚಿಕ್ಕಮ್ಮ ನನ್ನ ತಾಳ್ಮೆ ಪರೀಕ್ಷೆ ಮಾಡಬೇಡಿ ನೀವು ನಿಜ ಹೇಳಿ ಯಾರು ಇದನ್ನು ನಿಮಗೆ ಕೊಟ್ಟಿದ್ದು ಎಂದು ಕೇಳುತ್ತಾನೆ. ಇದನ್ನು ಕೇಳಿದ ಯಾಮಿನಿ ಹೇಳುತ್ತಾಳೆ ಯಾಕಪ್ಪ ಕೇವಲ ತಾಯತಕ್ಕೆ ಇಷ್ಟೊಂದು ಪ್ರಶ್ನೆ ಮಾಡುತ್ತಿದ್ದಿಯಾ. ಇಷ್ಟು ದಿನ ಇದನ್ನು ಹಾಕೊಂಡಿದ್ದೆ ಆದರೆ ಈಗ ಯಾಕೆ ಈ ಪ್ರಶ್ನೆ ಕೇಳುತ್ತಿದ್ದೀಯ ಎಂದಾಗ ಕೋಪದಿಂದ ಕೆಂಡವಾಗಿದ್ದ ಆದಿ ಯಾಮಿನಿ ಬಳಿ ಜೋರಾಗಿ ಹೇಳುತ್ತಾನೆ ಈ ತಾಯತದಲ್ಲಿ ಕ್ಯಾಮರಾ ಇದೆ ಅದಕ್ಕೆ ಎಂದು ಹೇಳುತ್ತಾನೆ ಇದನ್ನು ಕೇಳಿದ ಯಾಮಿನಿ ಗೆ ಶಾಕ್ ಆಗುತ್ತದೆ.

ರಾಣಾನ ಯೋಜನೆ ಫ್ಲಾಪ್

ರಾಣಾನ ಯೋಜನೆ ಫ್ಲಾಪ್

ರಾಣಾ ಮಾತ್ರ ತನ್ನ ಪ್ಲಾನ್ ಪ್ಲಾಫ್ ಆಯಿತಲ್ವ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನು ಜೈಲಿನಲ್ಲಿ ಬೇರೆ ಕಥೆ ನಡೆಯುತ್ತಿದೆ. ಅಖಿಲಾಂಡೇಶ್ವರಿ ಗೆ ಬೇಲ್ ಆಗಿದೆ ಎಂದು ಹೇಳಿ ಪೊಲೀಸ್ ಇನ್ಸ್ಪೆಕ್ಟರ್ ಜೈಲಿನಿಂದ ಅಖಿಲಾಂಡೇಶ್ವರಿಯವರನ್ನು ಬಿಡುತ್ತಾರೆ. ಯಾರು ಬೇಲ್ ಕೊಟ್ಟದ್ದು ಎಂದು ಕೇಳಿದರೆ ಅವರು ನಿಮಗಾಗಿ ಹೊರಗೆ ಕಾಯುತ್ತಾ ಇದ್ದಾರೆ ಎಂದು ಹೇಳುತ್ತಾರೆ. ಇನ್ನು ಪೊಲೀಸ್ ಇನ್ಸ್ಪೆಕ್ಟರ್‌ಗೆ ಕೈ ಮುಗಿದು ಧನ್ಯವಾದ ತಿಳಿಸಿಬಿಡುತ್ತಾರೆ. ನಾನು ಇಲ್ಲಿ ಇರುವ ವರೆಗೆ ನನ್ನನ್ನು ಬಹಳ ಚೆನ್ನಾಗಿ ನೋಡಿಕೊಂಡು ಇದ್ದೀರಿ ನನಗೆ ಬಹಳ ಖುಷಿ ಆಯಿತು ನಾನಿನ್ನೂ ಬರುತ್ತೇನೆ ಎಂದು ಹೇಳಿ ಹೊರಹೋಗಬೇಕು ಎನ್ನುವಷ್ಟರಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹೇಳುತ್ತಾರೆ.

ಜಾಮೀನು ಕೊಡ್ಸಿದ್ದು ಯಾರು?

ಜಾಮೀನು ಕೊಡ್ಸಿದ್ದು ಯಾರು?

ಬರುತ್ತೇನೆ ಎಂದು ಹೇಳಿ ಹೋಗುವುದು ಬೇಡ ಎಂದು ಹೇಳಿದರು ಬಳಿಕ ಅಖಿಲ ಹೋಗುತ್ತೇನೆ ಎಂದು ಹೇಳಿ ಅಲ್ಲಿಂದ ತೆರಳುತ್ತಾಳೆ. ಪೊಲೀಸ್ ಸ್ಟೇಶನ್ ಹೊರಗೆ ಬಂದು ನೋಡಬೇಕಾದರೆ ಅಲ್ಲಿ ಅರುಂಧತಿ ನಿಂತಿರುವುದನ್ನು ನೋಡಿ ಶಾಕ್ ಆಗುತ್ತದೆ. ಅರುಂಧತಿ ಆಕೆಯನ್ನು ನೋಡಿ ಜೋರಾಗಿ ನಗುತ್ತಾಳೆ. ಅಖಿಲ ಬಳಿ ಹೇಳುತ್ತಾಳೆ ಏನು ಅಖಿಲ ನೋಡುತ್ತಿದ್ದೀಯ ನಾನೇನು ಇಲ್ಲಿ ಅಂತ ನೋಡುತ್ತಾ ಇದ್ದೀಯಾ? ನಿನಗೆ ನಾನೇ ಜಾಮೀನು ಕೊಡ್ಸಿದ್ದು ಎಂದು ಹೇಳುತ್ತಾಳೆ. ಇದನ್ನು ನೋಡಿ ಅಖಿಲಾಗೆ ಶಾಕ್ ಆಗುತ್ತದೆ.

ತಾನಾಗೆ ಜೈಲು ಸೇರಿದ ಅಖಿಲಾ

ತಾನಾಗೆ ಜೈಲು ಸೇರಿದ ಅಖಿಲಾ

ಬಳಿಕ ಮಾತು ಮುಂದುವರಿಸಿದ ಅರುಂಧತಿ, ನಿನ್ನ ಗಂಡ ಮಕ್ಕಳು ಮಾಡದೇ ಇರುವ ಕೆಲಸಾನ ನಾನು ಮಾಡಿದ್ದೇನೆ. ಈಗಲೇ ಗೊತ್ತಾಯಿತು ಅವರ ಯೋಗ್ಯತೆ ಏನು ಅಂತ ಅಲ್ಲ ಅವರಿಗೆ ಒಂದು ಲಾಯರ್ ಅನ್ನು ಹಿಡಿಯಲು ಆಗಲಿಲ್ಲ. ನಾನು ನಿನಗೆ ಬೇಲ್ ಕೊಡಿಸುವ ಮೂಲಕ ಭಿಕ್ಷೆ ಕೊಡುತ್ತಾ ಇದ್ದೇನೆ. ಹೋಗು ಹೋಗಿ ಬದುಕಿಕೊ. ನಿನ್ನ ಚಿಕ್ಕ ಮಗ ನಿನ್ನ ವಿರುದ್ದ ಕಂಪ್ಲೇಂಟ್ ಕೊಟ್ಟಿದ್ದಾನೆ ಎಂದು ತಿಳಿದು ಅಮೃತ ಕುಡಿದಷ್ಟು ಖುಷಿ ಆಯಿತು ಎಂದು ಜೋರಾಗಿ ನಗುತ್ತಾಳೆ. ಇದನ್ನೆಲ್ಲ ಕೇಳಿ ಅರುಂಧತಿ ಕೆನ್ನೆಗೆ ಬಲವಾಗಿ ಹೊಡೆಯುತ್ತಾಳೆ ಅಖಿಲ. ಬಳಿಕ ಪುನಃ ಸ್ಟೇಶನ್ ಗೆ ತೆರಳಿ ಪೊಲೀಸ್ ಬಳಿ ನಡೆದ ವಿಚಾರ ಹೇಳಿ ಜೈಲಿನ ಒಳಗೆ ಹೋಗುತ್ತಾಳೆ ಅಖಿಲಾ. ನನ್ನ ಬಿಡುಗಡೆ ಮಾಡಲು ಗಂಡ ಮಕ್ಕಳು ಬರುತ್ತಾರೆ ಎಂದು ಹೇಳುತ್ತಾಳೆ ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Paaru written updated on 28th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X