For Quick Alerts
  ALLOW NOTIFICATIONS  
  For Daily Alerts

  ಪಾರುಗೆ ಏಕ ವಚನದಲ್ಲಿ ಬೈದ ಪ್ರೀತು , ಪ್ರೀತುಗೆ ಆಟಕ್ಕೆ ಕಡಿವಾಣ ಎಂದು?

  By ಪೂರ್ವ
  |

  ಪಾರುಗೆ ಮೈದುನನ ನಡವಳಿಕೆ ಶಾಕ್ ನೀಡಿದರೆ ಇನ್ನೊಂದು ಕಡೆ ಮೈದುನ ಪ್ರೀತು ಆ ರೀತಿ ಎಲ್ಲರ ಎದುರು ಮಾತನಾಡಿರುವುದು ಪಾರುಗೆ ನೋವಾಗುತ್ತದೆ. ಮನದಲ್ಲಿ ಎಷ್ಟೇ ದುಃಖ ಅದುಮಿ ಇಟ್ಟುಕೊಂಡರು ಪಾರುಗೆ ಗೊತ್ತಿಲ್ಲದ ರೀತಿ ಕಣ್ಣೀರಿನಲ್ಲಿ ಮಿಂದು ಹೋಗಿದ್ದಾಳೆ. ಪಾರು, ಪ್ರೀತುಗೆ ಕಾಫಿ ನೀಡಿದ್ದೆ ತಪ್ಪಾಯಿತಾ ಎನ್ನುವಷ್ಟರ ಮಟ್ಟಿಗೆ ಯೋಚಿಸತೊಡಗುತ್ತಾಳೆ. ಪ್ರೀತು ನಡವಳಿಕೆ ಇತ್ತೀಚಿನ ದಿನಗಳಲ್ಲಿ ಬಹಳ ವಿಚಿತ್ರವಾಗಿದೆ. ಮುಂಚೆ ಇದ್ದ ಪ್ರೀತು ಈಗ ಅಲ್ಲ ಎಂದು ಎಲ್ಲರಿಗೂ ಅನ್ನಿಸುತ್ತಿದೆ. ಅದಕ್ಕಾಗಿ ಆತನನ್ನು ಸಿಇಒ ಪೋಸ್ಟ್ ನಿಂದಾ ಕೆಳಗಿಳಿಸಿ ಆದಿಯನ್ನು ಕೂರಿಸುತ್ತಾರೆ ಅಖಿಲ. ಇದನ್ನೆಲ್ಲ ನೋಡಿ ಪ್ರೀತು ಮನದಲ್ಲಿ ಖುಷಿ ಪಡುತ್ತಾನೆ.

  ಇನ್ನು ಅರುಂಧತಿ ಹಾಗೂ ರಾಣಾ ಹೆಣೆದ ಬಲೆಯಲ್ಲಿ ಸಿಲುಕಿ ಪ್ರೀತು ಒದ್ದಾಡುತ್ತಿದ್ದಾನೆ. ಈ ವಿಚಾರ ಮನೆಯವರಿಗೆ ಯಾರಿಗೂ ಗೊತ್ತಾಗಬಾರದು ಎಂದು ಆತಂಕದಲ್ಲಿದ್ದಾನೆ. ಹಾಗೆಯೆ ಅರುಂಧತಿ-ರಾಣಾ ಇದೀಗ ಪ್ರೀತುವನ್ನು ಚೆನ್ನಾಗಿ ಆಟ ಆಡಿಸುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ನಾವು ಹೇಳಿದ್ದೆ ಆಗಬೇಕು ಎಂದುಕೊಳ್ಳುತ್ತಾ ಆ ಮನೆಯಿಂದ ಪ್ರೀತುವನ್ನು ಎಷ್ಟು ದೂರ ಮಾಡಬೇಕೋ ಅಷ್ಟು ದೂರ ಮಾಡಲು ಯತ್ನಿಸುತ್ತಿದ್ದಾರೆ. ಈ ವಿಚಾರ ಪ್ರೀತುಗೆ ತಿಳಿದರು ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದಾನೆ.

  ಇತ್ತ ಪಾರು ಹಾಗೂ ಜನನಿ ಖುಷಿ ಖುಷಿಯಿಂದ ಕಾಫಿ ಮಾಡುತ್ತಾ ಇರುತ್ತಾರೆ. ಎಲ್ಲರಿಗೂ ಕಾಫಿಯನ್ನು ಕೊಡುತ್ತಾ ಇರುವ ವೇಳೆ ಯಾಮಿನಿ ಹಾಗೂ ಪ್ರೀತು ಕುಳಿತಿರುತ್ತಾರೆ ಇರುತ್ತಾರೆ ಸೆಕ್ಯುರಿಟಿ ಗಾರ್ಡ್ ಆವರ ಪಕ್ಕದಲ್ಲೇ ನಿಂತಿರುತ್ತಾನೆ. ಈ ವೇಳೆ ರಾಣಾ, ಪ್ರೀತು ಗೆ ಕರೆ ಮಾಡಿ ನಿನ್ನ ಅತ್ತಿಗೆ ಪಾರುಗೆ ಬಾಯಿಗೆ ಬಂದ ಹಾಗೆ ಬೈಯಬೇಕು ಎಂದು ಹೇಳುತ್ತಾನೆ. ಆ ವೇಳೆ ಯಾಮಿನಿ ಬಳಿ ಪ್ರೀತು ಹೇಳುತ್ತಾನೆ. ಚಿಕ್ಕಮ್ಮ ಮನೆಯ ಕೆಲಸದವರನ್ನೂ ನಾವು ಏನೆಂದು ಕರೆಯಬೇಕು ಹೆಸರು ಹಿಡಿದೆ ಕರೆಯ ಬೇಕು ಆಲ್ವಾ ಎಂದು ಹೇಳುತ್ತಾನೆ ಆಗ ಹೌದು ಪ್ರೀತು ಎಂದು ಯಾಮಿನಿ ಹೇಳುತ್ತಾಳೆ. ಇನ್ನೂ ಪ್ರೀತು ಕಾಫಿ ಕೊಡಲು ಪಾರು ಅಲ್ಲಿಗೆ ಬರುತ್ತಾಳೆ.

  ಗಂಡನ ವರ್ತನೆಗೆ ಬೇಸರ ಪಟ್ಟುಕೊಂಡ ಜನನಿ

  ಗಂಡನ ವರ್ತನೆಗೆ ಬೇಸರ ಪಟ್ಟುಕೊಂಡ ಜನನಿ

  ಅತ್ತಿಗೆಯನ್ನು ಕಂಡ ಪ್ರೀತು ಜೋರಾಗಿ ಪಾರ್ವತಿ ಎಂದು ಕರೆಯುತ್ತಾನೆ. ಇದನ್ನು ಕೇಳಿದ ಅಲ್ಲಿರುವ ಎಲ್ಲರೂ ಶಾಕ್ ಆಗುತ್ತಾರೆ. ಯಾಮಿನಿ ಕುಳಿತಲ್ಲಿಂದ ಎದ್ದು ನಿಲ್ಲುತ್ತಾಳೆ ಪ್ರೀತು ಇದಕ್ಕೆನಾ ನನ್ನ ಬಳಿ ಕೇಳಿದ್ದು ಎಂದು ಮನದಲ್ಲೇ ಹೇಳುತ್ತಿರುತ್ತಾರೆ. ಈ ವೇಳೆ ಪ್ರೀತು, ಕಾಫಿ ಲೋಟವನ್ನು ಜೋರಾಗಿ ನೆಲಕ್ಕೆ ಎಸೆಯುತ್ತಾನೆ. ಅದು ಬಿದ್ದ ರಭಸಕ್ಕೆ ಪುಡಿ ಪುಡಿ ಆಗಿ ಹೋಗುತ್ತದೆ ಇದನ್ನು ನೋಡಿದ ಚನ್ನಪ್ಪ, ಚಿಕ್ಕ ಯಜಮಾನರೆ ನೀವು ಪಾರು ನ ಆ ರೀತಿ ಕರಿಯುವ ಹಾಗಿಲ್ಲ ಎಂದು ಪ್ರತಿಭಟಿಸುತ್ತಾನೆ.

  ಯಾರ ಬುದ್ದಿ ಮಾತು ಕೇಳದ ಪ್ರೀತು

  ಯಾರ ಬುದ್ದಿ ಮಾತು ಕೇಳದ ಪ್ರೀತು

  ಪ್ರೀತು ಸಿಟ್ಟಿನಿಂದ ನೀವು ಕರೆಯಬಹುದು ನಾವು ಕರೆಯ ಬಾರದ ಎಂದು ಹೇಳುತ್ತಾನೆ. ಬಳಿಕ ಪಾರುವನ್ನು ನೋಡಿ ಪ್ರೀತು ಹೇಳುತ್ತಾನೆ ಏನಿದು ಕಾಫಿ ಈ ರೀತಿ ಕಾಫಿ ಇರುತ್ತಾ ಪಾರ್ವತಿ. ಅಣ್ಣನ ಹೆಂಡತಿ ಆದ ಕೂಡಲೇ ಕೆಲಸ ಮರೆತು ಹೋಯಿತಾ, ಅಮ್ಮ ಪ್ರೀತಿಯಿಂದ ಬಂಗಾರ ಇದನ್ನೆಲ್ಲ ಕೊಟ್ಟರು ಎಂದು ಭೀಗುತ್ತಿದ್ದಿಯಾ ಎಂದಾಗ ಪಾರು ಬೇಸರದಿಂದ ಹೇಳುತ್ತಾಳೆ ತಪ್ಪಾಯಿತು ಚಿಕ್ಕ ಯಜಮಾನರೆ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ.

  ಮೈದುನನ ವರ್ತನೆಗೆ ಬೇಸರಗೊಂಡ ಪಾರು

  ಮೈದುನನ ವರ್ತನೆಗೆ ಬೇಸರಗೊಂಡ ಪಾರು

  ಜನನಿ ಯಾಕೆ ಈ ರೀತಿ ನಡೆದುಕೊಳ್ಳುತ್ತಿದ್ದಿಯಾ ಪಾರು ನಿನ್ನ ಅತ್ತಿಗೆ ಮರಿ ಬೇಡ ಎಂದು ಹೇಳಿದಾಗ ಜನನಿ ಮೇಲೆ ಪ್ರೀತು ರೇಗಾಡುತ್ತಾನೆ. ಪಾರು ಇದನ್ನೆಲ್ಲ ಮನದಲ್ಲಿ ಯೋಚಿಸುತ್ತಾ ಕುಳಿತಿರಬೇಕಾದರೆ ಜನನಿ ಪಾರು ಬಳಿ ಬರುತ್ತಾಳೆ. ಜನನಿ ಹೇಳುತ್ತಾಳೆ ಪ್ರೀತು ಇತ್ತೀಚೆಗೆ ಅತಿಯಾಗಿ ಆಡುತ್ತಿದ್ದಾರೆ ಇದನ್ನು ಬಾವನ ಬಳಿ ಹೇಳುವುದೇ ಒಳ್ಳೆಯದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪಾರು ಬೇಡ ಎಂದು ಹೇಳಿದರು ಜನನಿ ಹೇಳುತ್ತಾಳೆ ಈ ವಿಚಾರ ಹೇಳಲೇ ಬೇಕು ಎಂದು ಹೇಳುತ್ತಾಳೆ ಬಳಿಕ ಅಲ್ಲಿಂದ ಹೊರಟು ಹೋಗುತ್ತಾಳೆ. ಆ ವೇಳೆ ಆದಿ, ಪಾರುಗೆ ಕರೆ ಮಾಡುತ್ತಾನೆ ಈ ವೇಳೆ ಪಾರು ಏನು ಮಾಡಬೇಕೆಂದು ತೋಚದೇ ಕೊನೆಗೂ ಕಾಲ್ ರಿಸೀವ್ ಮಾಡಿ ಮಾತನಾಡುತ್ತಾಳೆ.

  ಆದೀಗೆ ವಿಚಾರ ತಿಳಿಸುತ್ತಾಳ ಪಾರು

  ಆದೀಗೆ ವಿಚಾರ ತಿಳಿಸುತ್ತಾಳ ಪಾರು

  ಬಳಿಕ ಸ್ವಲ್ಪ ಬ್ಯುಸಿ ಆಗಿದ್ದಿನಿ ಅಂದಾಗ ಹೌದಾ ನಾನು ನಿನಗೆ ಡಿಸ್ಟರ್ಬ್ ಮಾಡಿದೆ ಅನ್ನಿಸುತ್ತದೆ ಎಂದು ಹೇಳುತ್ತಾರೆ ಆ ವೇಳೆ ಪಾರು ಛೇ ಛೇ ಆತರ ಏನು ಇಲ್ಲ, ಎಂದೆಲ್ಲ ಹೇಳಿ ಸ್ವಲ್ಪ ಹೊತ್ತು ಮಾತನಾಡಿ ಕರೆ ಕಟ್ ಮಾಡುತ್ತಾರೆ. ಇನ್ನೂ ಹಾಲ್‌ನಲ್ಲಿ ನಡೆದ ವಿಚಾರವನ್ನು ಚನ್ನಪ್ಪ ಅಖಿಲಾಂಡೇಶ್ವರಿ ಗಮನಕ್ಕೆ ತರುತ್ತಾನೆ ಇದರಿಂದ ಕುಪಿತಗೊಂಡ ಅಖಿಲ ಮುಂದೇನು ಮಾಡುತ್ತಾಳೆ ಕಾದುನೋಡಬೇಕಿದೆ

  English summary
  Kannada serial Paaru written updated on 28th September episode. Know more about it.
  Thursday, September 29, 2022, 18:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X