ರಾಣಾನ ತಂತ್ರಕ್ಕೆ ತಿರು ಮಂತ್ರ ಹೂಡುತ್ತಾನ ಆದಿ?

By ಪೂರ್ವ

ವಿಭಿನ್ನ ಕಥಾ ಹಂದರವನ್ನು ಹೊಂದಿ ಜನರ ಮನಸೂರೆಗೊಳ್ಳುತ್ತಿರುವ ಧಾರವಾಹಿ ಪಾರು. ಈ ಧಾರವಾಹಿಯ ಕೌಟುಂಬಿಕ ಕತೆ ವೀಕ್ಷಕರ ಮೆಚ್ಚುಗೆ ಗಳಿಸಿದೆ. ತುಂಬು ಸಂಸಾರ ಅಂದ ಮೇಲೆ ಭಿನ್ನಾಭಿಪ್ರಾಯಗಳು ಸಹಜ ಹಾಗೆಯೇ ಮನೆ ಹೊರಗಿನವರ ಮಸಲತ್ತಿನಿಂದಾಗಿ ಅಖಿಲಾಂಡೇಶ್ವರಿ ಸಂಸಾರ ಒಡೆದು ಹೋಗುತ್ತಿದೆ. ಇದರಿಂದಾಗಿ ಅಖಿಲಾಂಡೇಶ್ವರಿ ಸ್ವಾಮೀಜಿಯ ಮೊರೆ ಹೋಗಿದ್ದಾರೆ.

ತಮ್ಮ ಮನೆಯಲ್ಲಿ ನಡೆಯುತ್ತಿರುವ ಆಗು ಹೋಗುಗಳ ಬಗ್ಗೆ ಸ್ವಾಮೀಜಿ ಬಳಿ ಹೇಳಿಕೊಂಡಿದ್ದಾರೆ. ಅದಕ್ಕೆ ಸ್ವಾಮೀಜಿ ನಿಮ್ಮ ಮನೆಗೆ ದುಷ್ಟರ ಕಣ್ಣು ಬಿದ್ದಿರಬಹುದು ಆ ಕಾರಣಕ್ಕಾಗಿ ಈ ರೀತಿ ಆಗಿದೆ ಅದಕ್ಕಾಗಿ ಒಂದು ವ್ರತವನ್ನು ಮಾಡಲು ಹೇಳುತ್ತಾರೆ. ಇದರಿಂದ ನಿಮ್ಮ ಮನೆಗೆ ಒಳಿತಾಗುವುದು ನಿಶ್ಚಿತ ಎಂದು ಹೇಳುತ್ತಾರೆ.

ಇದರಿಂದ ಮನೆಯವರ ಮುಂದೆ ಸ್ವಾಮೀಜಿಗೆ ಕರೆ ಮಾಡಿರುವ ವಿಚಾರವನ್ನು ಅಖಿಲಾಂಡೇಶ್ವರಿ ಹೇಳುತ್ತಾರೆ. ಇನ್ನು ಸ್ವಾಮೀಜಿ ಹೇಳಿರುವ ವೃತದ ಬಗ್ಗೆಯೂ ಹೇಳುತ್ತಾರೆ. ಪ್ರೀತೂ, ಅಣ್ಣ ನಿಗೆ ಬೈದಿರುವುದು ಅತ್ತಿಗೆಗೆಯನ್ನು ದೂಡಿದ ಕಾರಣ ಅತ್ತಿಗೆ ಮೆಟ್ಟಿಲ ಬಳಿ ಬೀಳುತ್ತಾರೆ. ಇದನ್ನೆಲ್ಲ ಜ್ಞಾಪಿಸಿಕೊಳ್ಳುತ್ತಾ ಬೇಸರಿಸಿಕೊಳ್ಳುತ್ತಾನೆ. ತನ್ನ ಮೇಲೆ ತನಗೆ ಅಸಹ್ಯ ಬಂದು ಅಲ್ಲಿಯೇ ಇದ್ದ ಗಾಜಿನ ಬಾಟಲಿಗೆ ಜೋರಾಗಿ ಬದಿಯುತ್ತಾನೆ ಅದರ ಶಬ್ದಕ್ಕೆ ಆದಿ ಓಡೋಡಿ ಬರುತ್ತಾನೆ. ಅಲ್ಲಿ ಬಂದ ಆದಿಗೆ ಶಾಕ್ ಆಗುತ್ತದೆ.

ಗಾಜಿನ ಬಾಟಲ್ ಒಡೆದು ಹೋಗಿತ್ತು. ಪ್ರೀತೂ ಕೈಯಲ್ಲಿ ಗಾಯವಾಗಿ ರಕ್ತ ಸೋರುತ್ತಿದೆ. ಇದನ್ನೆಲ್ಲ ನೋಡಿ ಆದಿ ಏನೋ ಇದೆಲ್ಲ ಏನು ಮಾಡಿಕೊಂಡೆ ಎಂದು ಆತಂಕದಿಂದ ಕೇಳುತ್ತಾನೆ. ಇದಕ್ಕೆ ಉತ್ತರಿಸದೆ ಏನಿಲ್ಲ ಬ್ರೋ ಎಂದು ಹೇಳಿ ಅಲ್ಲಿಂದ ತೆರಳುತ್ತಾನೆ. ಬಳಿಕ ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ಅವರ ಪಾಡಿಗೆ ಟೀ ಕುಡಿಯುತ್ತಾ ಇರುತ್ತಾರೆ.

ಮನೆಯವರ ಬಳಿ ಮಾತನಾಡದಂತೆ ತಾಕೀತು ಮಾಡಿದ ರಾಣಾ

ಮನೆಯವರ ಬಳಿ ಮಾತನಾಡದಂತೆ ತಾಕೀತು ಮಾಡಿದ ರಾಣಾ

ಆ ವೇಳೆ ಪಾರ್ವತಿಯನ್ನು ನೋಡಿದ ಪ್ರೀತೂಗೆ ಮರುಕವಾಗುತ್ತದೆ. ಛೇ ನಾನು ಈ ಥರ ಮಾಡಬಾರದಿತ್ತು ಎಂದು ಮನದಲ್ಲೇ ಕೊರಗುತ್ತಿದ್ದಾನೆ. ಪ್ರೀತೂವನ್ನು ನೋಡಿದ ಚಿಕ್ಕಪ್ಪ ಟೀ ಕುಡಿಯುವಂತೆ ಹೇಳುತ್ತಾನೆ. ಇದನ್ನು ಕಾಯುತ್ತಿದ್ದ ರಾಣಾ ಆಗಲೇ ಪ್ರೀತೂಗೆ ಕರೆ ಮಾಡುತ್ತಾನೆ. ಪ್ರೀತೂ ಬಳಿ ಮನೆ ಮಂದಿ ಬಳಿ ಮಾತನಾಡದಂತೆ ತಾಕೀತು ಮಾಡುತ್ತಾನೆ.

ತಮ್ಮನನ್ನು ಹಿಂಬಾಲಿಸಿದ ಅಣ್ಣ

ತಮ್ಮನನ್ನು ಹಿಂಬಾಲಿಸಿದ ಅಣ್ಣ

ಇತ್ತ ಆದಿ ಚಿಕ್ಕಪ್ಪ ಹಾಗೂ ಆದಿ ಮಾತನಾಡಿಕೊಂಡು ಇರುತ್ತಾರೆ. ಪ್ರೀತು ಹೀಗೆ ಆಡಲು ಅರುಂಧತಿ ಕಾರಣ ಎಂದು ಹೇಳುತ್ತಾನೆ ಇದಕ್ಕೆ ಶಾಕ್ ಆದ ಆದಿ ಇದೆಲ್ಲಾ ಆಕೆಯ ಪ್ಲಾನ್, ಪ್ರೀತು ಯಾಕೆ ಅವರನ್ನು ನಂಬುತ್ತಾನೆ ಎಂದೆಲ್ಲ ಚಿಕ್ಕಪ್ಪನಿಗೆ ಪ್ರಶ್ನೆಯ ಮೇಲೆ ಪ್ರಶ್ನೆ ಇಡುತ್ತಾನೆ. ಇದಕ್ಕೆಲ್ಲ ಕಾರಣ ಅರುಂಧತಿ ಎಂಬ ಅನುಮಾನ ಶುರು ಆಗುತ್ತದೆ ಆದಿಗೆ. ನಮ್ಮ ಮನೆಯಲ್ಲಿ ಇರುವ ಒಗ್ಗಟ್ಟನ್ನು ಮುರಿಯಬೇಕು ಎಂದು ಕಾಯುತ್ತಾ ಹೊಂಚು ಹಾಕುತ್ತಿರುವವರು ಅರುಂಧತಿ ಹಾಗೂ ರಾಣಾ ಇವರಿಬ್ಬರೇ ಇದಕ್ಕೆ ಕಾರಣ ಯಾಕೆ ಆಗಿರಬಹುದು ಎಂದೆಲ್ಲ ಅನುಮಾನಗಳು ಆದೀ ತಲೆಯಲ್ಲಿ ಓಡಾಡುತ್ತಾ ಇರುತ್ತದೆ.

ಅಮ್ಮನ ಮಾತು ಕೇಳದ ಪ್ರೀತು

ಅಮ್ಮನ ಮಾತು ಕೇಳದ ಪ್ರೀತು

ಇತ್ತ ಅಖಿಲಂಡೆಶ್ವರಿ ಪ್ರೀತು ಬಳಿ ಎಲ್ಲಿ ಹೋಗುತ್ತಿದ್ದೀಯಾ ಎಂದೆಲ್ಲ ವಿಚಾರ ಮಾಡುತ್ತಾರೆ. ಆಫೀಸ್ ಗೆ ಹೋಗುವುದು ಬೇಡ ಎಂದು ಖಡಕ್ ಆಗಿ ಹೇಳಿ ಬಿಡುತ್ತಾರೆ. ಇದನ್ನು ಕೇಳಿದ ಪ್ರೀತು ಸುಮ್ಮನಿರುತ್ತಾರೆ. ಆದರೆ ರಾಣಾ ಆಫೀಸ್‌ಗೆ ಹೋಗುವಂತೆ ಪೀಡಿಸುತ್ತಾರೆ. ಬಳಿಕ ಪ್ರೀತು ಅಮ್ಮನ ಮಾತು ಧಿಕ್ಕರಿಸಿ ಆಫೀಸ್ ಗೆ ಹೋಗುತ್ತಾನೆ. ಇದನ್ನು ಕಂಡ ಆದಿ, ಅಮ್ಮನಿಗೆ ಸಮಾಧಾನ ಮಾಡುತ್ತಾನೆ. ಆಫೀಸಲ್ಲಿ ಏನೋ ಕೆಲಸ ಇರಬೇಕು ಅದಕ್ಕೆ ಹೋಗಿದ್ದಾನೆ ಬೇಸರ ಮಾಡಿಕೊಳ್ಳದಿರಿ ಎಂದು ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಅಖಿಲ ಕೊಂಚ ಸಮಾಧಾನವಾಗುತ್ತದೆ.

ಅಮ್ಮನಿಗೆ ಸಮಾಧಾನ ಹೇಳಿದ ಆದಿ

ಅಮ್ಮನಿಗೆ ಸಮಾಧಾನ ಹೇಳಿದ ಆದಿ

ಇತ್ತ ಪ್ರೀತು ಬಳಿ ಆದಿ ಕಾರಿನಲ್ಲಿ ನಾನು ಬರುತ್ತೇನೆ ಎಂದು ಹೇಳುತ್ತಾನೆ ಅದಕ್ಕೆ ಪ್ರೀತು ನನಗೆ ಕೊಂಚ ಕೆಲಸ ಇದೆ ನೀನು ಬೇರೆ ಕಾರಲ್ಲಿ ಹೋಗು ಎಂದು ಹೇಳಿ ಅಲ್ಲಿಂದ ತೆರಳುತ್ತಾನೆ. ಆದಿಗೆ ಅಂದು ರಾಣಾ ಆಟ ಆಡಿಸಿದ ನೆನಪು ಮರುಕಳಿಸಿತು. ತನಗೂ ಈ ರೀತಿ ಆಗಿತ್ತು ಎಂಬ ವಿಚಾರ ಆತನ ಮನಸ್ಸಿಗೆ ಬರುತ್ತದೆ. ಪ್ರೀತುಗೆ ಹೀಗೆ ಯಾಕೆ ಆಟ ಆಡಿಸಿ ಇರಬಹುದು ಎಂದೆಲ್ಲ ಯೋಚನೆ ಮಾಡುತ್ತಾನೆ. ಬಳಿಕ ಪ್ರೀತುವನ್ನು ಆದಿ ಹಿಂಬಾಲಿಸಿಕೊಂಡು ಹೋಗುತ್ತಾನೆ. ಇತ್ತ ಪ್ರೀತು ಆಳುತ್ತಾ ಅಣ್ಣ ನನ್ನ ಕ್ಷಮಿಸಿಬಿಡು ಎಂದು ಹೇಳುತ್ತಾನೆ ಬಳಿಕ ರಾಣಾನಿಗೆ ಕರೆ ಮಾಡಿ ನಾನು ಬರುತ್ತಿದ್ದೇನೆ ಇವತ್ತು ಒಂದಾ ನಾನು ಒಂದಾ ನೀನು ಬದುಕಬೇಕು ಎಂದು ಹೇಳುತ್ತಾನೆ. ಮುಂದೆ ಏನು ಆಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

English summary
Kannada serial Paaru written updated on 29th August. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X