ಮೋನಿಕಾ ಮೊಬೈಲ್ ಎಗರಿಸಿದ ಆದಿ-ಪಾರು? ಪಾರು ಕೈಗೆ ಸಿಕ್ಕಿಬಿದ್ದಳ ಮೋನಿಕಾ?

By ಪೂರ್ವ

'ಪಾರು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸೆಳೆಯುತ್ತಿದೆ. ಗಂಡ ಪ್ರೀತಮ್‌ನನ್ನು ಮೋನಿಕಾ ಜೊತೆ ನೋಡಿದ ಜನನಿ ಬಹಳ ಬೇಸರ ಮಾಡಿಕೊಳ್ಳುತ್ತಿದ್ದಾಳೆ. ಪಾರು ಸಹ ಕೂಡ ಬಹಳ ಬೇಸರ ಮಾಡಿಕೊಂಡಿದ್ದಾಳೆ. ಮೋನಿಕಾ ಕೈ ಹಿಡಿದು ನಿಂತಿರುವ ಪ್ರೀತಮ್ ನನ್ನ ಕಂಡ ಜನನಿಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತದೆ. ತನ್ನ ಗಂಡನೇನಾ ಇದು. ನಾನು ಪ್ರೀತಿ ಮಾಡಿದ ಹುಡುಗ ಇನ್ನೊಬ್ಬಳನ್ನು ಊಟಕ್ಕೆ ಕರೆಯುವ ಮಟ್ಟಕ್ಕೆ ತಲುಪಿ ಬಿಟ್ಟನ ಎಂದೆಲ್ಲ ಮನದಲ್ಲಿ ಅಂದು ಕೊಳ್ಳುತ್ತಾಳೆ.

ಜನನಿ ಇವರಿಬ್ಬರನ್ನು ನೋಡಿ ಅಲ್ಲಿಂದ ಅಳುತ್ತಾ ಹೋಗುತ್ತಾಳೆ. ಇದನ್ನು ನೋಡಿದ ಪ್ರೀತಮ್, ಜನನಿ ಬಳಿ ಹೋಗುತ್ತಾನೆ. ಆ ವೇಳೆ ಜನನಿ, 'ನನ್ನ ಗಂಡ ಊಟಕ್ಕೆ ಕರೆದರು ಎಂದು ಬಹಳ ಖುಷಿ ಪಟ್ಟೆ ಆದರೆ ಈ ರೀತಿ ಬೇರೆಯವಳನ್ನು ಊಟಕ್ಕೆ ಕರೆಯುತ್ತಾನೆ ಎಂದುಕೊಂಡು ಇರಲಿಲ್ಲ. ಇವತ್ತು ಆಕೆಯನ್ನು ಊಟಕ್ಕೆ ಕರೆದೆ ಮುಂದೆ ಇನ್ನೇನೋ ಮಾಡುವುದಿಲ್ಲ ಎಂಬುವುದಕ್ಕೆ ಯಾವ ಗ್ಯಾರಂಟಿ' ಎಂದು ಪ್ರಶ್ನಿಸುತ್ತಾಳೆ. ಇದನ್ನು ಕೇಳಿದ ಪ್ರೀತಮ್‌ಗೆ ಬಹಳ ನೋವಾಗುತ್ತದೆ.

ಮೋನಿಕಾ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ ಪಾರು

ಮೋನಿಕಾ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ ಪಾರು

ಇತ್ತ ಆದಿ ಹಾಗೂ ಪಾರು ಇಬ್ಬರು ಮಾತನಾಡುತ್ತಾ ಇರುತ್ತಾರೆ. ಪಾರು ಹೇಳುತ್ತಾಳೆ 'ನನಗೆ ಯಾಕೋ ಮೋನಿಕಾ ಒಳ್ಳೆಯವಳು ಎಂದು ಅನ್ನಿಸುತ್ತಾ ಇಲ್ಲ. ನನ್ನ ಮೈದುನನಿಗೆ ಅವಳಿಂದ ಅಂತರ ಕಾಪಾಡಿಕೊಳ್ಳಲು ಹೇಳಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆದಿ, ಅವನು ಅವಳಿಂದ ದೂರ ಇದ್ದರೂ ಅವಳಿಂದ ಅಂತರ ಕಾಯ್ದುಕೊಳ್ಳುತ್ತ ಇದ್ದರೂ ಆಕೆ ಅವನು ಊಟಕ್ಕೆ ಕುಳಿತಿರುವ ವೇಳೆ ಫೋನ್ ಮಾಡಿ ಕರೆದುಕೊಂಡು ಜೊತೆಗೆ ಬಂದಳು ಎಂದಾಗ ಪಾರು ಹೇಳುತ್ತಾಳೆ ಹಾಗಾದರೆ ಮೊದಲು ಆಕೆಯ ಕೈ ಯಿಂದ ಫೋನ್ ಕಿತ್ತುಕೊಳ್ಳಬೇಕು. ಈ ವೇಳೆ ಆದಿ ಅದಕ್ಕೆ ಒಪ್ಪದೇ ಸುಮ್ಮನೆ ಇರುವಂತೆ ಹೇಳುತ್ತಾನೆ .

ಮೋನಿಕಾಗೆ ಪಾಠ ಕಲಿಸಲು ಪಾರು ಮಾಸ್ಟರ್ ಪ್ಲಾನ್

ಮೋನಿಕಾಗೆ ಪಾಠ ಕಲಿಸಲು ಪಾರು ಮಾಸ್ಟರ್ ಪ್ಲಾನ್

ಬಳಿಕ, ಅವಳೇನೂ ಚಿಕ್ಕ ಮಗೂನ ಫೋನ್ ತೆಗೆದುಕೊಂಡಾಗ ಗೊತ್ತಾಗದೆ ಇರೋಕೆ ಎನ್ನುತ್ತಾನೆ. ಇದಕ್ಕೆ ಪಾರು ಹೇಳುತ್ತಾಳೆ ಆಕೆಗೆ ಗೊತ್ತಾಗದ ಹಾಗೆ ಫೋನ್ ತೆಗೆದುಕೊಂಡು ಬರಬೇಕು ಇಲ್ಲವಾದರೆ ಕಷ್ಟ. ಮೋನಿಕಾ, ಜನನಿ ರೂಮ್‌ನಲ್ಲಿ ಇರುವುದರಿಂದ ಜನನಿಗೆ ನೋವಾಗಿದೆ ಇದೀಗ ಮಾವನಿಗೆ ಕೂಡ ಡೌಟ್ ಬಂದಿದೆ ಆಕೆಯನ್ನು ಇನ್ನೂ ಹೆಚ್ಚಾಗಿ ಈ ಮನೆಯಲ್ಲಿ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಹೇಳುತ್ತಾರೆ.

ರಾಣನಿಗೆ ಕರೆ ಮಾಡಿದ ಮೋನಿಕಾ

ರಾಣನಿಗೆ ಕರೆ ಮಾಡಿದ ಮೋನಿಕಾ

ಇನ್ನು ಇತ್ತ ಕಡೆ ಮೋನಿಕಾ ಫೋನ್ ನಲ್ಲಿ ಮಗ್ನ ಆಗಿರುತ್ತಾಳೆ. ರಾಣಾನಿಗೆ ಕರೆ ಮಾಡುತ್ತಾಳೆ. ಆ ವೇಳೆ ಪಾರು ಆದಿ ಜೋರಾಗಿ ಒಳಗೆ ಬರಬಹುದಾ ಎಂದು ಕೇಳುತ್ತಾಳೆ. ಇವರಿಬ್ಬರ ಧ್ವನಿ ಕೇಳಿ ಮೋನಿಕಾಗೆ ಶಾಕ್ ಆಗುತ್ತದೆ. ಬಳಿಕ ಕರೆ ಕಟ್ ಮಾಡುತ್ತಾಳೆ. ಈ ವೇಳೆ ಮೋನಿಕಾ, ಪಾರು ಹಾಗೂ ಆದಿಯನ್ನು ಒಳಗೆ ಕರೆಯುತ್ತಾಳೆ. ಪಾರು ಹಾಗೂ ಆದಿ ಬಟ್ಟೆ ಹಿಡಿದುಕೊಂಡು ಮೋನಿಕಾ ಬಳಿ ಬರುತ್ತಾರೆ ಪಾರು ಮೋನಿಕಾಗೆ ಬಟ್ಟೆಗಳನ್ನು ಕೊಟ್ಟು ತಗೋ ಮೋನಿಕಾ ನಮಗೆ ನಮ್ಮ ಬಟ್ಟೆ ಇದ್ದರೆ ಚೆನ್ನ ನೀನು ಬೇರೆಯವರ ಬಟ್ಟೆಯನ್ನು ಹಾಕಿಕೊಂಡೆ ಇದ್ದೆ ಅದಕ್ಕೆ ತಂದೆ ಈ ಬಟ್ಟೆನ ಎಂದು ಹೇಳುತ್ತಾಳೆ ಇದನ್ನು ನೋಡಿದ ಮೋನಿಕಾ ಗೆ ಖುಷಿ ಆಗುತ್ತದೆ.

ಮೋನಿಕಾಳ ಮೊಬೈಲ್ ಎಗರಿಸಿದ ಆದಿ

ಮೋನಿಕಾಳ ಮೊಬೈಲ್ ಎಗರಿಸಿದ ಆದಿ

ಇತ್ತ ಆದಿ ಮೋನಿಕಾ ಫೋನ್ ಅನ್ನು ಕಳ್ಳತನ ಮಾಡುತ್ತಾನೆ. ಪಾರು-ಆದಿ ಮುಖ ನೋಡಿ ಆಯಿತಾ ನಿಮ್ಮ ಕೆಲಸ ಎಂದು ನೋಡುತ್ತಾ ಇದ್ದಳು ಬಳಿಕ ಇದನ್ನು ನೋಡಿದ ಆದಿ ಆಯಿತು ಎಂದು ಸನ್ನೆ ಮಾಡುತ್ತಾನೆ. ಪಾರು, ಮೋನಿಕಾ ಬಳಿ ಹೇಳುತ್ತಾಳೆ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಹಾಕಿಕೊಳ್ಳಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮೋನಿಕಾ ಸರಿ ಎನ್ನುತ್ತಾಳೆ. ಬಳಿಕ ಅಲ್ಲಿಂದ ಇಬ್ಬರು ತೆರಳುತ್ತಾರೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

More from Filmibeat

English summary
Kannada serial Paaru written updated on 29th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X