Paaru: ತಾಯಿ ಆಗುತ್ತಿರುವ ವಿಚಾರವನ್ನು ಆದಿ ಬಳಿ ಹೇಳಿಯೇ ಬಿಡುತ್ತಾಳಾ ಪಾರು?

By Poorva

ಪಾರು ಎಷ್ಟೇ ಅವಮಾನವಾದರೂ ಸಹಿಸಿಕೊಳ್ಳುವ ಗುಣ ಆಕೆಯಲ್ಲಿದೆ. ಅರಸನ ಕೋಟೆಯ ಒಳಿತಿಗಾಗಿ ದುಷ್ಟರ ಸಂಹಾರ ಮಾಡುವುದಕ್ಕಾಗಿ ಆದಿ ಪಾರು ಪಣ ತೊಟ್ಟಿದ್ದಾರೆ. ಆದರೆ ಇದೆಲ್ಲ ಅಖಿಲಾಂಡೇಶ್ವರಿ ಗಮನಕ್ಕೆ ಬರುವುದೇ ಇಲ್ಲ. ಎಷ್ಟೇ ಬೇಸರ ಆದರೂ ಅದನ್ನು ತೋರ್ಪಡಿಸಿಕೊಳ್ಳದೆ ಸುಮ್ಮನೆ ನಿಂತಿರುತ್ತಾರೆ. ಪಾರು ಅರಸನ ಕೋಟೆಯ ಮಗುವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಇಷ್ಟೆಲ್ಲ ಅವಮಾನ ಅನುಭವಿಸಬೇಕು ಎಂದು ಆಕೆಗೆ ನೋವು ಆಗುತ್ತಿದೆ.

ಜನನಿಗೆ ಸನ್ಮಾನ ನನಗೆ ಅವಮಾನ ಎಂದು ಮನದಲ್ಲಿ ಅನ್ನಿಸಿದರೂ ಪಾರು ಮಾತ್ರ ಅದನ್ನು ಮನದಲ್ಲಿ ಇಟ್ಟುಕೊಳ್ಳದೆ ಎಲ್ಲರ ಜೊತೆಯೂ ಬಹಳ ಖುಷಿಯಿಂದ ಇರುತ್ತಾಳೆ. ಇನ್ನು ಜನನಿ ಬಹಳ ಖುಷಿಯಲ್ಲಿ ಇರಬೇಕಾದರೆ ಪಾರುವನ್ನು ನೋಡಿದ ಅಖಿಲ ಕೆಲವರು ನಮಗೆ ನೋವು ಕೇಡನ್ನು ಬಯಸಿದರೆ ಇನ್ನೂ ಕೆಲವರು ನಮ್ಮ ಸಂತಸವನ್ನು ಬಯಸುವವರು ಇಲ್ಲಿ ಇದ್ದಾರೆ ಎನ್ನುತ್ತಾಳೆ.

ಜನನಿಯನ್ನೂ ನೋಡಿದ ಅಖಿಲ ಎಂತಹ ಗುಡ್ ನ್ಯೂಸ್ ಕೊಟ್ಟೆಯಮ್ಮ, ಇನ್ನು ಕೆಲವು ಬಾರಿ ಈ ಸಂಭ್ರಮವನ್ನ ಬೇರೆಯವರಿಂದ ನಿರೀಕ್ಷೆ ಮಾಡಿ ಇರುತ್ತೇವೆ, ಆದರೆ ಅಂಥವರಿಂದ ಸಿಗುವುದು ಬರೀ ನೋವು ಎಂದಾಗ ಪಾರೂಗೆ ಅಘಾದವಾದ ನೋವು ಆಗುತ್ತದೆ.

ಪಾರು ಸಮಾಧಾನ ಮಾಡಿದ ಸಾವಿತ್ರಮ್ಮ

ಪಾರು ಸಮಾಧಾನ ಮಾಡಿದ ಸಾವಿತ್ರಮ್ಮ

ಸಾವಿತ್ರಮ್ಮ ಪಾರು ಮೈ ಸವರುತ್ತಾಳೆ. ಆ ವೇಳೆ ಪಾರುಗೆ ಕಣ್ಣೀರು ಉಕ್ಕಿ ಹರಿಯುತ್ತದೆ.. ಇನ್ನೂ ಮಾತು ಮುಂದುವರೆಸಿದ ಅಖಿಲ ಅರಸನ ಕೋಟೆಗೆ ತಕ್ಕ ಸೊಸೆ ಅಂದರೆ ಅದು ನೀನೇ ಎಂದು ಹೇಳುತ್ತಾಳೆ. ಇದನ್ನು ಕೇಳಿದರೂ ಪಾರು ಕಣ್ಣುಗಳು ಒದ್ದೆ ಆದರೂ ಅದೆಲ್ಲವನ್ನೂ ತಡೆದುಕೊಂಡು ನಿಲ್ಲುತ್ತಾಳೆ. ಆ ವೇಳೆ ಅಲ್ಲಿಗೆ ಬಂದ ದಾಮಿನಿ ಎಲ್ಲರಿಗೂ ಸಿಹಿ ಹಂಚುತ್ತ ಇರುತ್ತಾಳೆ .

ಜನನಿಗೆ ಸಿಹಿ ತಿನ್ನಿಸಿದ ಅಖಿಲ

ಜನನಿಗೆ ಸಿಹಿ ತಿನ್ನಿಸಿದ ಅಖಿಲ

ಜನನಿಗೆ ಸಿಹಿ ತಿನ್ನಿಸುತ್ತ ಇರುವ ಅತ್ತೆಯನ್ನು ಕಂಡ ಪಾರು ತಾನು ಹೊಟ್ಟೆಯನ್ನು ಹಿಡಿದುಕೊಳ್ಳಲು ಸಾವಿತ್ರಿಗೆ ಬಹಳ ದುಃಖ ಆಗುತ್ತದೆ. ಅಖಿಲ ಡಾಕ್ಟರ್ ಬಳಿ ಇನ್ನು ಜನನಿ ಸಂಪೂರ್ಣ ಜವಾಬ್ದಾರಿ ನಿಮ್ಮದು ಅವಳಿಗೆ ಏನೇ ಮೆಡಿಸಿನ್ ಬೇಕು ಎಲ್ಲವನ್ನೂ ಅವಳಿಗೆ ನೀವೇ ಖುದ್ದಾಗಿ ಕೊಡಬೇಕು ಟ್ರೀಟ್ ಮೇಂಟ್ ಮಾಡಬೇಕು ಎಂದು ಹೇಳುತ್ತಾಳೆ.

ಅತ್ತೆ ಮನೆಯ ಖುಷಿ ನೋಡಿ ಪುಳಕಗೊಂಡ ಪಾರು

ಅತ್ತೆ ಮನೆಯ ಖುಷಿ ನೋಡಿ ಪುಳಕಗೊಂಡ ಪಾರು

ಅತ್ತೆ ಮನೆಯವರ ಖುಷಿಯನ್ನು ನೋಡಿದ ಪಾರು ಅಲ್ಲಿಂದ ಹೋಗುತ್ತಾಳೆ . ಮನೆಗೆ ಬಂದ ಪಾರುವನ್ನ ನೋಡಿದ ಆದಿ ಪಾರು ಅರಸನ ಕೋಟೆಗೆ ಹೋಗಿದ್ದೆಯಂತೆ ಯಾಕೆ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಪಾರು ಮನೆಗೆ ಹೋಗೋಣ ಅಲ್ಲಿ ಹೇಳುತ್ತೇನೆ ದಾರಿಯಲ್ಲಿ ಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆದಿ ಏನಾಯಿತು ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾನೆ. ಆ ವೇಳೆ ಪಾರು ಜನನಿ ತಾಯಿ ಆಗುತ್ತಿರುವ ವಿಚಾರವನ್ನು ಹೇಳುತ್ತಾಳೆ.

ಪಾರು ಮಾತಿಗೆ ಖುಷಿ ಪಟ್ಟ ಆದಿ

ಪಾರು ಮಾತಿಗೆ ಖುಷಿ ಪಟ್ಟ ಆದಿ

ನಾನು ದೂರದಿಂದಲೇ ನೋಡಿ ಖುಷಿ ಪಟ್ಟೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆದಿಗೆ ಬಹಳ ಖುಷಿ ಆಗುತ್ತದೆ. ಆದಿ ಜನನಿ ಗರ್ಭಿಣಿ ಎಂದು ತಿಳಿದು ತನ್ನ ಮನದ ಇಂಗಿತವನ್ನು ಪಾರು ಬಳಿ ಹೇಳುತ್ತ ಇರುತ್ತಾನೆ.. ತಾನು ತಂದೆಯಾಗುವುದರ ಆದಿಯ ಹೃದಯ ತುಂಬಿದ ಮಾತುಗಳನ್ನು ಕೇಳಿದ ಪಾರು ಬಹಳ ಖುಷಿ ಆಗಿದ್ದಾಳೆ, ಮಕ್ಕಳನ್ನು ದೇವರ ಹಾಗೆ ಕಾಣುವ ಇವರಿಗೆ ತಾನೇ ತಂದೆ ಆಗುತ್ತಾ ಇದ್ದೇನೆ ಎಂದು ತಿಳಿದರೆ ಎಷ್ಟೆಲ್ಲ ಖುಷಿ ಆಗಬಹುದು ಎಂದೆಲ್ಲ ಮನದಲ್ಲಿ ಯೋಚನೆ ಮಾಡುತ್ತಾಳೆ. ಬಳಿಕ ಇದುವೇ ಸರಿಯಾದ ಸಮಯ ತಾನು ತಾಯಿ ಆಗುತ್ತಾ ಇದ್ದೇನೆ ಎಂದು ಆದಿ ಬಳಿ ಹೇಳಿಬಿಡುತ್ತೇನೆ ಯಾಕೆಂದರೆ ಜನನಿ ತಾಯಿ ಆಗುತ್ತಾ ಇದ್ದಾಳೆ ಎಂದು ತಿಳಿದೇ ತನ್ನ ಕಷ್ಟವನ್ನ ಮರೆತು ಆದಿ ಖುಷಿಯಿಂದ ಹೋಗುವುದನ್ನು ನೋಡಿದ ಪಾರುಗೆ ಖುಷಿ ಆಗುತ್ತದೆ. ಆದಿ ಮಾತುಗಳು ಪಾರು ಮನಸ್ಸಿಗೆ ತಾಕುತ್ತದೆ.

More from Filmibeat

English summary
Kannada serial Paaru written updated on 2nd February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X